ಹಿಂದೂಗಳು ಈಗ ವಿಚಾರ ಮಾಡಬೇಕಾದ ಸಮಯ ಬಂದಿದೆ !

‘ಮತಾಂತರಗೊಂಡ ಮುಸಲ್ಮಾನರು ಹೆಚ್ಚು ಅಪಾಯಕಾರಿ,’ ಎಂಬ ಸ್ವಾತಂತ್ರ್ಯವೀರ ಸಾವರಕರ ಅವರ ಹೇಳಿಕೆಯನ್ನು ಸುಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನಿಜವೆಂದು ಸಾಬೀತುಪಡಿಸಿದ್ದಾರೆ. ಎ.ಆರ್. ರೆಹಮಾನ್ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು, ‘ಅವರು ಮುಸಲ್ಮಾನ ಎಂಬ ಕಾರಣಕ್ಕೆ ಬಾಲಿವುಡ್ (ಹಿಂದಿ ಚಿತ್ರರಂಗ)ನಿಂದ ಅವರನ್ನು ದೂರ ಇಡಲಾಗುತ್ತಿದೆ ಮತ್ತು ಅವರಿಗೆ ಅವಕಾಶಗಳು ಸಿಗುತ್ತಿಲ್ಲ.’ ಭಾರತದ ಹಿಂದೂಗಳ ಪ್ರೀತಿ ಮತ್ತು ಬೆಂಬಲವನ್ನು ಪಡೆದು ಪ್ರಸಿದ್ಧಿ ಹಾಗೂ ಹಣ ಗಳಿಸುವ ಮುಸಲ್ಮಾನರು ಈ ರೀತಿ ಮಾತನಾಡುವುದು ಈಗ ನಿರಂತರವಾಗಿದೆ. ನಟರಾದ ಅಮೀರ್ ಖಾನ್, ಶಾರುಖ್ ಖಾನ್, ನಸಿರುದ್ದೀನ್ ಶಾ ಅವರಂತಹವರು ಈ ಹಿಂದೆ ಇಂತಹದ್ದೇ ಹೇಳಿಕೆಗಳನ್ನು ನೀಡಿದ್ದರು. ಈಗ ರೆಹಮಾನ್ ಕೂಡ ಇದೇ ಸಾಲಿಗೆ ಸೇರಿದ್ದಾರೆ, ಇದರಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ. ಆದ್ದರಿಂದ ಹಿಂದೂಗಳು ಈಗ ಆಲೋಚನೆ ಮಾಡಬೇಕಾದ ಸಮಯ ಬಂದಿದೆ.

ಶ್ರೀಮತಿ ಅಶ್ವಿನಿ ಪ್ರಭು

ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಲಂಕರಿಸಿದ್ದಾಗ, ಎಲ್ಲಾ ಹಿಂದೂಗಳು ಅದನ್ನು ಸ್ವಾಗತಿಸಿದ್ದರು ಮತ್ತು ಅವರನ್ನು ಗೌರವಿಸಿದ್ದರು. ಮೊಹಮ್ಮದ್ ಅಜರುದ್ದೀನ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾದಾಗಲೂ ಎಲ್ಲಾ ಭಾರತೀಯರು ಅವರಿಗೆ ಬೆಂಬಲ ನೀಡಿದ್ದರು. ಹಿಂದೂಗಳ ಸಹಿಷ್ಣುತೆಗೆ ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು; ಆದರೆ ಇಷ್ಟು ವರ್ಷಗಳ ಕಾಲ ಹಿಂದೂಗಳ ಸಹಾಯದಿಂದಲೇ ಉತ್ತುಂಗಕ್ಕೇರಿದ ದಿಗ್ಗಜ ಮತ್ತು ಮತಾಂತರಗೊಂಡ ಸಂಗೀತ ನಿರ್ದೇಶಕರ ಹೇಳಿಕೆಗಳಿಂದ ಮುಸಲ್ಮಾನರ ಮಾನಸಿಕತೆ ಹೆಚ್ಚು ಸ್ಪಷ್ಟವಾಗುತ್ತದೆ.

‘ಮುಸಲ್ಮಾನ ಆಗಿರುವುದರಿಂದ ಅವಕಾಶ ಸಿಗುತ್ತಿಲ್ಲ’ ಎಂದು ಹೇಳುವವರಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಏಕೇನೂ ಅನ್ನಿಸುವುದಿಲ್ಲ ? ಮುಂಬೈ ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗುತ್ತಲೇ ‘ಮಹಾರಾಷ್ಟ್ರವನ್ನು ಹಸಿರುಕರಣ (ಇಸ್ಲಾಮೀಕರಣ)’ ಮಾಡುವ ಭಾಷೆ ಬಳಸುವ ಮುಸಲ್ಮಾನ ನಗರಸೇವಕಿಯ ವಿರುದ್ಧ ಯಾರೂ ಧ್ವನಿ ಎತ್ತುವುದಿಲ್ಲವೇಕೆ ? ರೆಹಮಾನ್ ಅವರಿಗೆ ಸಿಕ್ಕಿರುವ ಪ್ರಸಿದ್ಧಿ ಮತ್ತು ಅವಕಾಶಗಳು ಕೇವಲ ಮತ್ತು ಕೇವಲ ಹಿಂದೂಗಳಿಂದಲೇ ಸಿಕ್ಕಿವೆ ಎಂಬುದು ಮತಾಂತರಗೊಂಡ ರೆಹಮಾನ್ ಅವರಿಗೆ ಯಾವಾಗ ಅರ್ಥವಾಗುತ್ತದೆಯೋ, ಅದೇ ನಿಜವಾದ ಶುಭದಿನ ! ರೆಹಮಾನ್ ಅವರ ಹೇಳಿಕೆಗೆ ಜಾಗೃತ ಹಿಂದೂಗಳು ನೀಡಿದ ಪ್ರತಿಕ್ರಿಯೆಯಿಂದ ಎಚ್ಚೆತ್ತ ಅವರು ಈಗ ಮೃದು ಧೋರಣೆ ತಳೆದಿದ್ದಾರೆ. ಆದರೂ ‘ಅವರು ತಮ್ಮನ್ನು ಮುಸಲ್ಮಾನ ಎಂದು ನೆನಪಿಸಿಕೊಳ್ಳುತ್ತಾರೆ’ ಎಂಬುದನ್ನು ಈಗ ಹಿಂದೂಗಳು ನೆನಪಿಟ್ಟು ಕೊಳ್ಳುವ ಸಮಯ ಬಂದಿದೆ.

– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು. (೨೩.೧.೨೦೨೬)