
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ :
ಮನುಷ್ಯನು ಪುನಃ ಈಶ್ವರನೊಂದಿಗೆ ಏಕರೂಪವಾಗಬೇಕು; ಎಂದು ಧರ್ಮವನ್ನು ನೀಡಿದ್ದಾನೆಯೇ ? (೨೧.೨.೨೦೨೫)
ಶ್ರೀ. ರಾಮ ಹೊನಪ :
೧. ಆದಿಶಕ್ತಿಯ ನಿರ್ಮಿತಿ
ಆದಿಶಕ್ತಿಯು ಮೊದಲು ತ್ರಿಗುಣಗಳನ್ನು ನಿರ್ಮಿಸಿದಳು ಮತ್ತು ಅವುಗಳಿಂದ ಪಂಚತತ್ತ್ವಗಳನ್ನು ನಿರ್ಮಿಸಿದಳು. ಈ ಎರಡರ ಮೂಲಕ ಪೃಥ್ವಿ ನಿರ್ಮಾಣವಾಯಿತು.
೨. ತ್ರಿಗುಣಗಳ ಗುಣಧರ್ಮಗಳ ಮನುಷ್ಯರ ಮೇಲಿನ ಪರಿಣಾಮ
ಸತ್ತ್ವಗುಣದಿಂದ ವ್ಯಕ್ತಿಗೆ ಯೋಗ್ಯ ಮತ್ತು ಅಯೋಗ್ಯದ ಬಗೆಗಿನ ಜ್ಞಾನ ಆಗುತ್ತದೆ. ರಜೋಗುಣದಿಂದ ವ್ಯಕ್ತಿಯು ಉತ್ತಮ ರೀತಿಯಲ್ಲಿ ಕಾರ್ಯವನ್ನು ಮಾಡಬಹುದು ಮತ್ತು ತಮೋಗುಣದಿಂದ ವ್ಯಕ್ತಿಗೆ ನಿದ್ರೆ ಬರುತ್ತದೆ. ಈ ಮೂರು ಗುಣಗಳ ಸಮತೋಲನ ಸಾಧಿಸಿದರೆ ವ್ಯಕ್ತಿಯ ಜೀವನವು ಉತ್ತಮ ರೀತಿಯಲ್ಲಿ ನಡೆಯುತ್ತದೆ.
೩. ಸತ್ಯಯುಗದಲ್ಲಿನ ಜೀವಗಳ ಆಚರಣೆಯು ಧರ್ಮದ ಪ್ರತೀಕವಾಗಿತ್ತು
ಪೃಥ್ವಿಯನ್ನು ಸೃಷ್ಟಿಸುವ ಸಮಯದಲ್ಲಿ ನಿರ್ಮಾಣವಾದ ಸ್ತ್ರೀಯರು ಮತ್ತು ಪುರುಷರು ತಮ್ಮ ಜೀವನದಲ್ಲಿ ಸತತವಾಗಿ ಆನಂದ ಮತ್ತು ಶಾಂತಿಯನ್ನು ಅನುಭವಿಸುತ್ತಿದ್ದರು. ಆ ಕಾಲದಲ್ಲಿನ ಜೀವಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಸ್ವರೂಪಗಳಲ್ಲಿನ ಯಾವುದೇ ತೊಂದರೆಗಳು (ಪೀಡೆಗಳು) ಇರಲಿಲ್ಲ. ಅವರ ಆಚರಣೆಯು ಈಶ್ವರನ ಪ್ರೇರಣೆಗನುಸಾರ ಮತ್ತು ಧರ್ಮಕ್ಕನುಸಾರ ನಡೆಯುತ್ತಿತ್ತು. ಅವರ ಆಚರಣೆಯೇ ಧರ್ಮದ ಪ್ರತೀಕವಾಗಿತ್ತು.

೪. ಈಶ್ವರನು ಸತ್ಯಯುಗದಲ್ಲಿ ‘ಧರ್ಮ’ವನ್ನು ಗ್ರಂಥದ ರೂಪದಲ್ಲಿ ಪ್ರಕಟಿಸಿದನು
ಈಶ್ವರನು ಪ್ರೀತಿಸ್ವರೂಪ ಮತ್ತು ಕೃಪಾಸ್ವರೂಪನಾಗಿರುವುದರಿಂದ ಅವನು ಆ ಕಾಲದಲ್ಲಿರುವ ಋಷಿಗಳಿಗೆ ಧರ್ಮವನ್ನು ಗ್ರಂಥದ ರೂಪದಲ್ಲಿ ಪ್ರಕಟಿಸುವ ಪ್ರೇರಣೆಯನ್ನು ನೀಡಿದನು. ಅದಕ್ಕನುಸಾರ ಋಷಿಗಳು ‘ಧರ್ಮ ಎಂದರೆ ಏನು ? ಧರ್ಮದಿಂದ ಹೇಗೆ ಬದುಕಬೇಕು ? ಅದರ ಮಹತ್ವವೇನು ?’, ಎಂಬ ವಿಷಯದಲ್ಲಿನ ಈಶ್ವರೀ ಜ್ಞಾನವನ್ನು ಗ್ರಂಥದ ರೂಪದಲ್ಲಿ ಬರೆದಿಟ್ಟಿದ್ದಾರೆ.
‘ಮುಂದೆ ಕಾಲಾಂತರದಿಂದ ವ್ಯಕ್ತಿಯಲ್ಲಿನ ಸತ್ತ್ವಗುಣವು ಕಡಿಮೆಯಾಗಿ ಅವನಲ್ಲಿ ರಜ-ತಮ ಹೆಚ್ಚಾಗಿರುವುದರಿಂದ ವ್ಯಕ್ತಿಯು ಅಶಾಂತಿ, ರೋಗಿ ಮತ್ತು ದಿಶಾಹೀನ ಆಗಿದ್ದರಿಂದ ಇಂತಹ ಜೀವಗಳಿಗೆ ಮತ್ತೇ ಆನಂದದ ಜೀವನ ದೊರಕಿ ಅವರಿಗೆ ಈಶ್ವರನ ಬಳಿ ಹೋಗುವ ಮಾರ್ಗ ಸಿಗಬೇಕು’, ಎಂಬ ಉದ್ದೇಶದಿಂದ ಈಶ್ವರನು ಋಷಿಗಳ ಮೂಲಕ ಪೃಥ್ವಿಯ ಮೇಲೆ ಧರ್ಮಕ್ಕೆ ಸಂಬಂಧಿಸಿದ ಜ್ಞಾನವನ್ನು ಪ್ರಕಟಿಸಿದನು.
೫. ಸತ್ಯಯುಗದ ಮಧ್ಯದ ನಂತರ ತ್ರಿಗುಣಗಳ ಸಮತೋಲನ ಕುಸಿಯುವುದು
ಕಾಲಗತಿಗನುಸಾರ ವ್ಯಕ್ತಿಯ ಮನಸ್ಸಿನ ಮೇಲೆ ರಜ-ತಮದ ಪ್ರಾಬಲ್ಯವು ತ್ರೇತಾ, ದ್ವಾಪರ ಮತ್ತು ಕಲಿಯುಗದಲ್ಲಿ ಇನ್ನೂ ಹೆಚ್ಚಾಗತೊಡಗಿತು. ತ್ರಿಗುಣಗಳ ಸಮತೋಲನ ಕುಸಿದಿರುವುದರಿಂದ, ಅಂದರೆ ಸತ್ತ್ವಗುಣವು ಕಡಿಮೆಯಾಗಿ ರಜ-ತಮದ ಪ್ರಾಬಲ್ಯವು ಹೆಚ್ಚಾಗುವುದರಿಂದ ಮೊದಲು ವ್ಯಕ್ತಿಯ ಮನೋಬಲ ಮತ್ತು ನಂತರ ಆತ್ಮಬಲ ಕಡಿಮೆಯಾಗುತ್ತ ಹೋಯಿತು. ಆದ್ದರಿಂದ ವ್ಯಕ್ತಿಯಲ್ಲಿ ಅಸ್ವಸ್ಥತೆ, ಅಶಾಂತಿ ಮತ್ತು ದುಃಖ ಹೆಚ್ಚುತ್ತ ಹೋಯಿತು, ಹಾಗೆಯೇ ವ್ಯಕ್ತಿಯಿಂದ ಆದ ತಪ್ಪು ಕರ್ಮಗಳಿಂದ ಅಧರ್ಮವು ಬೆಳೆಯಿತು. ಪರಿಣಾಮ ವ್ಯಕ್ತಿಯ ಸರ್ವಾಂಗೀಣ ಅವನತಿಯಾಗಿ ಅವನು ದಿಶಾಹೀನನಾದನು.
೬. ಜ್ಞಾನಿ ಜೀವಗಳು ಸನಾತನ ಧರ್ಮದ ಪ್ರಸಾರ ಮಾಡುವುದು
ಸತ್ಯಯುಗದ ಮಧ್ಯದ ನಂತರ ಸತ್ತ್ವಗುಣವು ಕಡಿಮೆಯಾಗಿ ಕ್ರಮೇಣ ರಜ-ತಮದ ಪ್ರಾಬಲ್ಯ ಹೆಚ್ಚಾಗತೊಡಗಿತು. ಕಾಲಾಂತರದಿಂದ ರಜ-ತಮ ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ಧರ್ಮಗ್ರಂಥಗಳ ಜ್ಞಾನವು ತಿಳಿಯಲು ಮತ್ತು ಅದನ್ನು ಆಚರಣೆಯಲ್ಲಿ ತರಲು ಕಠಿಣವಾಗತೊಡಗಿತು. ಆಗ ಜ್ಞಾನಿ ಜೀವಗಳು ಋಷಿಗಳು ಬರೆದಿಟ್ಟಿರುವ ಧರ್ಮಗ್ರಂಥಗಳನ್ನು ಪ್ರಸಾರ ಮಾಡಲು ಮತ್ತು ಅದನ್ನು ಸಾಮಾನ್ಯ ಜೀವಗಳಿಗೆ ತಿಳಿಯುವ ಭಾಷೆಯಲ್ಲಿ ಹೇಳಲು ಆರಂಭಿಸಿದರು.
೭. ಜೀವನದಲ್ಲಿ ಗುರುಗಳ ಮಹತ್ವ !
ತ್ರೇತಾಯುಗದಲ್ಲಿನ ಕೆಲವು ಜೀವಗಳು ಧರ್ಮಾನುಸಾರ ಆಚರಣೆಯನ್ನು ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಂಡವು. ಆ ಜೀವಗಳಿಗೆ ಧರ್ಮದ ಸಂಪೂರ್ಣ ಜ್ಞಾನ ಇತ್ತು. ಅವರು ಗುರುರೂಪದಲ್ಲಿ ಧರ್ಮಗ್ರಂಥಗಳಲ್ಲಿನ ಜ್ಞಾನದ ಅರ್ಥ ಮತ್ತು ವಿಶ್ಲೇಷಣೆಯನ್ನು ಸಮಾಜಕ್ಕೆ ಹೇಳಲು ಆರಂಭಿಸಿದರು.
ಗುರುಗಳ ಈ ಕಾರ್ಯದಿಂದ ಸಾಮಾನ್ಯ ಜನರಿಗೆ ‘ತಮ್ಮ ಆಚರಣೆಯು ಧರ್ಮಕ್ಕೆ ಅನುಸರಿಸಿ ಹೇಗೆ ಇರಬೇಕು ? ತಮ್ಮಲ್ಲಿನ ಸತ್ತ್ವಗುಣವನ್ನು ಉಳಿಸಿ ರಜ-ತಮ ಗುಣಗಳನ್ನು ಹೇಗೆ ತ್ಯಜಿಸಬೇಕು ? ದೇವರ ಆರಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದು ತಿಳಿಯತೊಡಗಿತು.
೮. ಈಶ್ವರನು ‘ಧರ್ಮಗ್ರಂಥ ಮತ್ತು ಗುರು’ಗಳ ರೂಪದಲ್ಲಿ ಕಾರ್ಯವನ್ನು ಮಾಡುವುದು
ವ್ಯಕ್ತಿಯಲ್ಲಿ ತ್ರಿಗುಣಗಳ ಪ್ರಮಾಣವು ಸತತವಾಗಿ ಬದಲಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ವ್ಯಕ್ತಿಯು ಧರ್ಮ ಕ್ಕನುಸಾರ ಬದುಕಲು ಮರೆಯುತ್ತಾನೆ ಮತ್ತು ಅವನ ಅವನತಿ ಆಗತೊಡಗುತ್ತದೆ.
ಸಾಧಕರು ರಜ-ತಮದ ಚಕ್ರವ್ಯೂಹದಲ್ಲಿ ಸಿಲುಕಬಾರದೆಂದು ಈಶ್ವರನು ಋಷಿಗಳ ರೂಪದಲ್ಲಿ ಧರ್ಮಗ್ರಂಥಗಳ ಮೂಲಕ ಜ್ಞಾನವನ್ನು ಪ್ರಕಟಿಸಿದನು ಮತ್ತು ಗುರುರೂಪದಲ್ಲಿ ಬಂದು ಆ ಸಾಧಕರಿಗೆ ತಿಳಿಸಿ ಹೇಳಿದನು. ಆದ್ದರಿಂದ ಸಾಧಕರಿಗೆ ಜೀವಿಸಲು ಮಾರ್ಗ ಸಿಕ್ಕಿತು. ಅದರ ಪರಿಣಾಮದಿಂದ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಿ ಅವರಿಗೆ ಆನಂದ ಜೀವನವು ಪ್ರಾಪ್ತವಾಯಿತು ಮತ್ತು ಕೊನೆಗೆ ಅವರಿಗೆ ಈಶ್ವರನ ಪ್ರಾಪ್ತಿಯಾಯಿತು.
೯. ಈಶ್ವರನು ಆದಿಶಕ್ತಿಯ ಕಾರ್ಯದಲ್ಲಿ ಯಾವಾಗ ಹಸ್ತಕ್ಷೇಪ ಮಾಡುತ್ತಾನೆ ?
ಆದಿಶಕ್ತಿಯು ಸತ್ತ್ವ, ರಜ ಮತ್ತು ತಮ ಈ ಗುಣಗಳಿಂದ ಪೃಥ್ವಿಯ ಕಾರ್ಯವನ್ನು ನಡೆಸುತ್ತಾಳೆ. ಈ ಗುಣಗಳಿಗನುಸಾರ ಪೃಥ್ವಿಯ ಉತ್ಪತ್ತಿ ಮತ್ತು ಲಯವಾಗುತ್ತಿರುತ್ತದೆ, ಹಾಗೆಯೇ ಯುಗಪರಿವರ್ತನೆಯೂ ಆಗುತ್ತಿರುತ್ತದೆ. ಆದಿಶಕ್ತಿಯ ಈ ಕಾರ್ಯವು ನಿರಂತರ ನಡೆದಿರುತ್ತದೆ. ಈ ಪ್ರಕ್ರಿಯೆಯನ್ನು ಈಶ್ವರನು ಸಾಕ್ಷಿರೂಪದಲ್ಲಿ ನೋಡುತ್ತಿರುತ್ತಾನೆ.
ಈಶ್ವರನು ಭಕ್ತವತ್ಸಲ, ಪ್ರೀತಿಮಯ ಮತ್ತು ಕೃಪಾಸ್ವರೂಪನಾಗಿದ್ದಾನೆ. ಅವನು ಸಾಧಕರ ಅಥವಾ ಭಕ್ತರ ಕಲ್ಯಾಣಕ್ಕಾಗಿ ಆದಿಶಕ್ತಿಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಾನೆ. ಈಶ್ವರನು ‘ಅವತಾರ, ಋಷಿಗಳ, ಗುರುಗಳ ಮತ್ತು ಧರ್ಮಶಾಸ್ತ್ರ’ದ ರೂಪದಲ್ಲಿ ಕಾರ್ಯವನ್ನು ಮಾಡುತ್ತಾನೆ ಮತ್ತು ಭಕ್ತರ ಕಲ್ಯಾಣ ಮಾಡುತ್ತಾನೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ದಿನಾಂಕ, ಸಮಯ ಮತ್ತು ಒಟ್ಟು ಅವಧಿ : ೧೯.೯.೨೦೨೫, ಬೆಳಗ್ಗೆ ೧೦.೩೫, ೧೦ ಸೆಕೆಂಡ್)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !