
ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಮತ್ತು ಬಾಂಗ್ಲಾದೇಶಗಳು ಪರಸ್ಪರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕವು ಬಾಂಗ್ಲಾದೇಶದ ರಫ್ತಿನ ಮೇಲಿನ ಪರಸ್ಪರ ಸುಂಕವನ್ನು ಶೇಕಡಾ ೨೦ ರಿಂದ ಶೇಕಡಾ ೧೯ ಕ್ಕೆ ಇಳಿಸಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರು ಹೇಳಿಕೆಯೊಂದರಲ್ಲಿ, ‘ಅಮೆರಿಕದ ಹತ್ತಿ ಮತ್ತು ಮಾನವ ನಿರ್ಮಿತ ನೂಲುಗಳನ್ನು ಬಳಸುವ ಬಾಂಗ್ಲಾದೇಶದ ಜವಳಿ ಉದ್ಯಮಗಳಿಗೆ ಅಮೆರಿಕವು ಒಂದು ವ್ಯವಸ್ಥೆಯನ್ನು ಸ್ಥಾಪಿಸುತ್ತದೆ’ ಎಂಬ ಬದ್ಧತೆಯನ್ನು ತೋರಿಸಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಮೇಲೆ ಶೂನ್ಯ ಸುಂಕ ಅನ್ವಯವಾಗಲಿದೆ ಎಂದಿದ್ದಾರೆ.
ಮತ್ತೊಂದೆಡೆ ‘ವೈಟ್ ಹೌಸ್’ ಪ್ರಕಾರ, ಬಾಂಗ್ಲಾದೇಶವು ಅಮೆರಿಕದ ರಫ್ತುಗಳಿಗೆ, ವಿಶೇಷವಾಗಿ ಸೋಯಾಬೀನ್, ಮೆಕ್ಕೆಜೋಳ, ನಾಗರಿಕ ವಿಮಾನಗಳು ಮತ್ತು ವಾಹನಗಳಿಗಾಗಿ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಸಹಕರಿಸಲಿದೆ. ಬಾಂಗ್ಲಾದೇಶದೊಂದಿಗೆ ಪರಸ್ಪರ ಪೂರಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು, ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಉದಾಹರಣೆಯಾಗಿದೆ ಎಂದು ಅಮೆರಿಕದ ರಾಯಭಾರಿ ಜೇಮಿಸನ್ ಗ್ರೀರ್ ಹೇಳಿದ್ದಾರೆ.
ಸಂಪಾದಕೀಯ ನಿಲುವುಪರಸ್ಪರ ವ್ಯಾಪಾರ ಒಪ್ಪಂದ ಎಂದರೆ ವ್ಯಾಪಾರದಲ್ಲಿ ಭಾಗವಹಿಸುವ ಎರಡೂ ದೇಶಗಳಿಗೆ ಪರಸ್ಪರ ಪೂರಕ ಮತ್ತು ಲಾಭದಾಯಕವಾದ ವ್ಯಾಪಾರ ಒಪ್ಪಂದ. ಇದರ ಅಡಿಯಲ್ಲಿ ಎರಡೂ ದೇಶಗಳು ಪರಸ್ಪರರ ಆಮದು ಸುಂಕವನ್ನು ಕಡಿಮೆ ಮಾಡುತ್ತವೆ. |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !