
ಶಿವಶಂಕರನನ್ನು ದೇವಾಧಿದೇವ ಮಹಾದೇವನೆಂದು ಗುರುತಿಸಲಾಗುತ್ತದೆ. ಶಂಕರನಿಗೆ ಬಿಲ್ವಪತ್ರೆ, ದತ್ತೂರಿ, ಬಿಳಿ ಹೂಗಳು ಹಾಗೂ ಹಾಲು ಅಥವಾ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಭಗವಾನ ಶಿವನನ್ನು ಪ್ರಸನ್ನಗೊಳಿಸಲು ಮತ್ತೊಂದು ಸಂಗತಿಯೆಂದರೆ, ಭಗವಾನ ಶಿವನಿಗೆ ಶ್ರೀಗಂಧದ ತಿಲಕವನ್ನು ಹಚ್ಚುವುದು. ಈ ತಿಲಕವು ಬಿಳಿ ಬಣ್ಣದ್ದಾಗಿದ್ದು, ಇದಕ್ಕಾಗಿ ಬಿಳಿ ಶ್ರೀಗಂಧ ಅಥವಾ ಭಸ್ಮವನ್ನು ಬಳಸಲಾಗುತ್ತದೆ. ಮೂರು ಅಡ್ಡಗೆರೆಗಳನ್ನು ಎಳೆದು ಈ ತಿಲಕವನ್ನು ಹಚ್ಚುತ್ತಾರೆ, ಅದನ್ನು ‘ತ್ರಿಪುಂಡ್ರ’ ಎಂದು ಕರೆಯುತ್ತಾರೆ. ಶಿವನಿಗೆ ತ್ರಿಪುಂಡ್ರವು ಏಕೆ ಪ್ರಿಯವಾಗಿದೆ, ಹಾಗೂ ತ್ರಿಪುಂಡ್ರದ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.
ತ್ರಿಪುಂಡ್ರವು ಭಗವಾನ ಶಿವನ ಅಲಂಕಾರದಲ್ಲಿನ ಒಂದು ಪ್ರಮುಖ ಭಾಗವಾಗಿದೆ. ಶೈವ ಸಂಪ್ರದಾಯದಲ್ಲಿ ತ್ರಿಪುಂಡ್ರವನ್ನು ಹಚ್ಚಿಕೊಳ್ಳುವ ಪದ್ಧತಿ ಇದೆ. ಶಿವಲಿಂಗದ ಮೇಲೆ ತ್ರಿಪುಂಡ್ರವನ್ನು ಹಚ್ಚಿರುತ್ತಾರೆ, ಹಾಗೆಯೇ ಶಿವಪೂಜೆಯನ್ನು ಮಾಡುವಾಗಲೂ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ. ಭಕ್ತರು ತಮ್ಮ ಹಣೆಯ ಮೇಲೆ ತಪ್ಪದೇ ತ್ರಿಪುಂಡ್ರವನ್ನು ಹಚ್ಚುತ್ತಾರೆ. ಈ ತ್ರಿಪುಂಡ್ರದ ಮಹತ್ವ ಹಾಗೆಯೇ ಅದರ ಗೂಢ ಅರ್ಥವನ್ನು ತಿಳಿದುಕೊಳ್ಳೋಣ.

೧. ತ್ರಿಪುಂಡ್ರದ ಅರ್ಥ
ಶಿವಶಂಕರನ ಪೂಜೆಯಲ್ಲಿ ಭಕ್ತರು ತಪ್ಪದೇ ತ್ರಿಪುಂಡ್ರವನ್ನು ಹಚ್ಚುತ್ತಾರೆ. ಶಿವಲಿಂಗದ ಮೇಲೆ ಯಾವಾಗಲೂ ತ್ರಿಪುಂಡ್ರವನ್ನು ನೋಡಬಹುದು. ತ್ರಿಪುಂಡ್ರದಲ್ಲಿನ ಪ್ರತಿಯೊಂದು ಗೆರೆಗೂ ಒಂದು ಅರ್ಥವಿದೆ :
ಮೊದಲನೇ ಗೆರೆ – ಅಹಂಕಾರದಿಂದ ದೂರವಿರಿ.
ಎರಡನೇ ಗೆರೆ – ಅಜ್ಞಾನವನ್ನು ದೂರ ಮಾಡಿ.
ಮೂರನೇ ಗೆರೆ – ಕೆಟ್ಟ ಕರ್ಮಗಳಿಂದ ನಿಮ್ಮನ್ನು ನೀವು ದೂರವಿರಿಸಿ.
ತ್ರಿಪುಂಡ್ರವನ್ನು ಹಚ್ಚುವುದರಿಂದ ಭಕ್ತರಿಗೆ ಮಹಾದೇವನ ಜೊತೆಗೆ ೨೭ ದೇವಿ-ದೇವತೆಗಳು ಮತ್ತು ನವಗ್ರಹಗಳ ಕೃಪಾದೃಷ್ಟಿ ಮತ್ತು ಆಶೀರ್ವಾದ ದೊರೆಯುತ್ತದೆ. ತ್ರಿಪುಂಡ್ರದ ೩ ಗೆರೆಗಳಲ್ಲಿ ದೇವತೆಗಳ ವಾಸವಿದ್ದು, ಅವರು ನಮ್ಮ ಶರೀರದ ಎಲ್ಲ ಅಂಗಗಳಲ್ಲಿ ಸ್ಥಿತರಾಗಿದ್ದಾರೆ. ತ್ರಿಪುಂಡ್ರದ ಮೊದಲನೇ ಗೆರೆಯಲ್ಲಿ ಅಕಾರ, ರಜೋಗುಣ, ಪೃಥ್ವಿ, ಧರ್ಮ, ಕ್ರಿಯಾಶಕ್ತಿ, ಋಗ್ವೇದ, ಗಾರ್ಹಪತ್ಯ ಅಗ್ನಿ, ಪ್ರಣವದ ಮೊದಲ ಅಕ್ಷರ, ಪ್ರಾತಃಹವನ ಮತ್ತು ಮಹಾದೇವನ ವಾಸವಿರುತ್ತದೆ.
ತ್ರಿಪುಂಡ್ರದ ಎರಡನೇ ಗೆರೆಯಲ್ಲಿ ಉಕಾರ, ಸತ್ತ್ವಗುಣ, ಆಕಾಶ, ಅಂತರಾತ್ಮ, ಇಚ್ಛಾಶಕ್ತಿ, ಯಜುರ್ವೇದ, ದಕ್ಷಿಣಾಗ್ನಿ, ಪ್ರಣವದ ಎರಡನೇ ಅಕ್ಷರ, ಮಧ್ಯಾಹ್ನ ಹವನ ಮತ್ತು ಮಹೇಶ್ವರ ಈ ದೇವತೆಯ ವಾಸವಿರುತ್ತದೆ. ತ್ರಿಪುಂಡ್ರದ ಮೂರನೇ ಗೆರೆಯಲ್ಲಿ ಸಾಮವೇದ, ಮೂರನೇ ಹವನ, ಪ್ರಣವ, ಮಕರ, ತಮೋಗುಣ, ಸ್ವರ್ಗ, ದೇವ, ಜ್ಞಾನಶಕ್ತಿ ಮತ್ತು ಶಿವನ ಮೂರನೇ ಅಕ್ಷರ, ಅಗ್ನಿಯನ್ನು ಆವಾಹನ ಮಾಡುವುದು ಇವುಗಳ ವಾಸವಿರುತ್ತದೆ.
೨. ತ್ರಿಪುಂಡ್ರದ ಮಹತ್ವ
ಧಾರ್ಮಿಕ ಪ್ರಸಂಗಗಳಲ್ಲಿ ಮತ್ತು ಉಪಾಸನೆಯಲ್ಲಿ ತ್ರಿಪುಂಡ್ರಕ್ಕೆ ವಿಶೇಷ ಮಹತ್ವವಿದೆ. ಹಣೆ ಮತ್ತು ತೋಳುಗಳ ಮೇಲೆ ತ್ರಿಪುಂಡ್ರವನ್ನು ಹಚ್ಚಿಕೊಳ್ಳುವ ಪದ್ಧತಿ ಇದೆ. ಹಣೆಯ ಮಧ್ಯದಲ್ಲಿರುವ ಆಜ್ಞಾಚಕ್ರದ ಜಾಗದಲ್ಲಿ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ, ವಿಭೂತಿಯನ್ನು ಹಚ್ಚಲಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು ಬರುವುದಿಲ್ಲ. ಇದರ ಜೊತೆಗೆ ವ್ಯಕ್ತಿಯ ನಕಾರಾತ್ಮಕತೆಯು ಸಹ ದೂರವಾಗುತ್ತದೆ. ಮನಸ್ಸಿನಲ್ಲಿ ಸಾತ್ವಿಕತೆ ಉಳಿಯುತ್ತದೆ. ವಿಭೂತಿಯು ನಮ್ಮಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ, ಹಾಗೆಯೇ ನಮ್ಮ ಶರೀರದಲ್ಲಿರುವ ೭ ಚಕ್ರಗಳನ್ನು ನಿಯಂತ್ರಿಸುತ್ತದೆ.
೩. ತ್ರಿಪುಂಡ್ರವನ್ನು ಹೇಗೆ ಹಚ್ಚಬೇಕು ?
ತ್ರಿಪುಂಡ್ರವನ್ನು ಶರೀರದ ಮೇಲೆ ೩೨, ೧೬, ೮ ಅಥವಾ ೫ ಸ್ಥಳಗಳಲ್ಲಿ ಹಚ್ಚಲಾಗುತ್ತದೆ. ಇಂದಿನ ಕಾಲದಲ್ಲಿ ಶರೀರದ ಮೇಲೆ ೫ ಸ್ಥಳಗಳಲ್ಲಿ ಅಂದರೆ ಹಣೆ, ಎರಡೂ ಕೈಗಳು, ಹೃದಯ ಮತ್ತು ನಾಭಿಯ ಮೇಲೆ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ. ಶಿವಪುರಾಣದ ಕಥೆಯ ಪ್ರಕಾರ, ಭಗವಾನ ಶಿವನಿಗೆ ಶ್ರೀಗಂಧ, ಕೆಂಪು ಶ್ರೀಗಂಧ ಮತ್ತು ಅಷ್ಟಗಂಧದಿಂದ ತ್ರಿಪುಂಡ್ರವನ್ನು ಹಚ್ಚಬೇಕು. ತ್ರಿಪುಂಡ್ರವನ್ನು ಯಾವಾಗಲೂ ಎಡಗಣ್ಣಿನಿಂದ ಆರಂಭಿಸಿ ಬಲಗಣ್ಣಿನ ವರೆಗೆ ಹಚ್ಚಬೇಕು ಇದನ್ನು ಗಮನದಲ್ಲಿಡಿ. ತ್ರಿಪುಂಡ್ರವನ್ನು ಹಚ್ಚುವಾಗ ಎಡಭಾಗದಿಂದ ಆರಂಭಿಸಿ ಬಲಭಾಗಕ್ಕೆ ಬಂದು ನಿಲ್ಲಿಸಬೇಕು.
– ಶ್ರೀ. ಯಶವಂತ ನಾಯಿಕ್, ಮಲೇಷ್ಯಾ.
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !