ತ್ರಿಶೂಲದ ಉತ್ಪತ್ತಿ ಹೇಗೆ ಆಯಿತು ?

ಅನೇಕ ದೇವತೆಗಳ ಕೈಯಲ್ಲಿ ನೀವು ತ್ರಿಶೂಲವನ್ನು ನೋಡಿರಬಹುದು; ಆದರೆ ಅದು ಶಂಕರನ ಕೈಯಲ್ಲಿದ್ದಾಗ ಅದರ ದಿವ್ಯ ಶಕ್ತಿ ದ್ವಿಗುಣಿತವಾಗುತ್ತದೆ. ತ್ರಿಶೂಲದ ಕಡೆಗೆ ನೋಡಿದಾಗ ೩ ತೀಕ್ಷ್ಣವಾದ ಮೊನೆಗಳು ಕಾಣಿಸುತ್ತವೆ. ಹಾಗೆ ನೋಡಿದರೆ, ಈ ಅಸ್ತ್ರವು ಸಂಹಾರದ ಪ್ರತೀಕವಾಗಿದೆ; ಆದರೆ ವಾಸ್ತವದಲ್ಲಿ ತ್ರಿಶೂಲದ ಹಿಂದೆ ದೊಡ್ಡ ಗೂಢ ಅರ್ಥ ಅಡಗಿದೆ. ನಿಮಗೆ ಆ ಅರ್ಥವು ಗೊತ್ತಿದೆಯೇ ?ಇಲ್ಲ, ಹಾಗಾದರೆ ಬನ್ನಿ ತಿಳಿದುಕೊಳ್ಳೋಣ !

ತ್ರಿಶೂಲದ ಉತ್ಪತ್ತಿ ಹೇಗೆ ಆಯಿತು ?

ಭಗವಾನ ಶಂಕರನನ್ನು ನಾವು ಭೋಲೆನಾಥ ಎಂದು ಕರೆಯುತ್ತೇವೆ; ಏಕೆಂದರೆ ಅವನು ಭಕ್ತರ ಮೇಲೆ ಬೇಗ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ಭಗವಾನ ಶಿವನ ಪೂಜೆಯನ್ನು ಮಾಡಿದರೆ, ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ, ಎಂದು ಹೇಳುತ್ತಾರೆ; ಆದರೆ ಭಗವಾನ ಶಂಕರನು ತನ್ನ ಹತ್ತಿರ ತ್ರಿಶೂಲವನ್ನು ಏಕೆ ಇಡುತ್ತಾನೆ ? ತ್ರಿಶೂಲವು ಭಗವಾನ ಶಿವನ ಶಕ್ತಿಯ ಪ್ರತೀಕವಾಗಿದೆ. ಕೆಟ್ಟ ಶಕ್ತಿಗಳ ನಾಶ ಮಾಡುವ ಶಸ್ತ್ರವೆಂದು ಶಿವಶಂಕರನು ಯಾವಾಗಲೂ ತನ್ನ ಬಳಿ ತ್ರಿಶೂಲವನ್ನು ಇಡುತ್ತಾನೆ.

ಸಮುದ್ರಮಂಥನದ ಸಮಯದಲ್ಲಿ ಭಗವಾನ ಶಿವನಿಗೆ ಭಗವಾನ ವಿಷ್ಣುವಿನಿಂದ ತ್ರಿಶೂಲವು ಉಡುಗೊರೆಯಾಗಿ ಸಿಕ್ಕಿತು. ಅದೇ ಸಮಯದಲ್ಲಿ ಕೆಲವು ಪೌರಾಣಿಕ ಕಥೆಗಳಲ್ಲಿ, ಭಗವಾನ ಶಿವನಿಗೆ ದುರ್ಗಾದೇವಿಯಿಂದ ತ್ರಿಶೂಲವು ಲಭಿಸಿತ್ತು. ಮಹಿಷಾಸುರನ ವಿರುದ್ಧದ ಹೋರಾಟದಲ್ಲಿ ಅವಳು  ತ್ರಿಶೂಲವನ್ನು ಉಪಯೋಗಿಸಿದ್ದಳು, ಎಂದೂ ಹೇಳಲಾಗಿದೆ.

ತ್ರಿಕಾಲಜ್ಞಾನಿ ಶಂಭೋಶಂಕರ !

ತ್ರಿನೇತ್ರ, ತ್ರಿಪುಂಡ್ರ, ೩ ಎಲೆಗಳ ಬಿಲ್ವಪತ್ರೆ ಅದೇ ರೀತಿ ತ್ರಿಶೂಲದ ೩ ಮೊನೆಗಳು ಇರುವ ಈ ಶಂಭೋಶಂಕರನಿಗೆ ‘ತ್ರಿಕಾಲಜ್ಞಾನಿ’, ಎಂದು ಕರೆಯುತ್ತಾರೆ. ತ್ರಿಶೂಲವೆಂದರೆ ಕೇವಲ ೩ ಮೊನೆಗಳಲ್ಲ, ಅದೊಂದು ಶಿವಶಕ್ತಿಯ ಊರ್ಜೆಯ ಪ್ರತೀಕವಾಗಿದೆ. ಶಿವನ ಶಕ್ತಿ ಮತ್ತು ಅದಕ್ಕೆ ಗತಿ ನೀಡುವ ಮತ್ತು ಅದನ್ನು ನಿಯಂತ್ರಿಸುವ ಶಕ್ತಿ ಇವು ಪರಸ್ಪರ ಹೆಣೆದುಕೊಂಡಿವೆ, ಇದಕ್ಕೆ ತ್ರಿಶೂಲವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ !

ತ್ರಿಶೂಲದ ಬಗ್ಗೆ ವಿಷ್ಣುಪುರಾಣದಲ್ಲಿ ಏನು ಹೇಳಲಾಗಿದೆ ?

‘ವಿಷ್ಣುಪುರಾಣಕ್ಕನುಸಾರ ವಿಶ್ವಕರ್ಮನು ತ್ರಿಶೂಲವನ್ನು ನಿರ್ಮಿಸಿದನು’, ಎಂದು ಹೇಳಲಾಗುತ್ತದೆ. ಅದರ ಬಗ್ಗೆ ಒಂದು ಪೌರಾಣಿಕ ಕಥೆ ಇದೆ. ದೇವತೆಗಳ ಶಿಲ್ಪಕಾರನಾದ ವಿಶ್ವಕರ್ಮನ ಮಗಳು ಸಂಜನಾಳ ವಿವಾಹವು ಸೂರ್ಯದೇವನ ಜೊತೆಗೆ ಆಗಿತ್ತು; ಆದರೆ ಸೂರ್ಯದೇವನ ಅಸಾಧ್ಯವಾದ ತೇಜದಿಂದಾಗಿ ಸಂಜನಾಳಿಗೆ ಅವನ ಜೊತೆಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ; ಆದ್ದರಿಂದ ಕೆಲವು ದಿನಗಳ ನಂತರ ಅವಳು ತನ್ನ ಛಾಯೆಯನ್ನು (ನೆರಳನ್ನು) ಸೂರ್ಯದೇವನ ಮತ್ತು ಪುತ್ರರ ಬಳಿ ಬಿಟ್ಟು ಅವಳು ಹೊರಟು ಹೋದಳು.

ಯಾವಾಗ ಇದು ಸೂರ್ಯದೇವನಿಗೆ ಮತ್ತು ವಿಶ್ವಕರ್ಮನಿಗೆ ತಿಳಿಯಿತೋ, ಆಗ ಇಬ್ಬರೂ ಸೇರಿ ಪರಿಹಾರವನ್ನು ಹುಡುಕಲು ನಿರ್ಧರಿಸಿದರು. ವಿಶ್ವಕರ್ಮನು ಸೂರ್ಯದೇವನನ್ನು ಕೆತ್ತಿ ಅವನ ತೇಜಸ್ಸನ್ನು ಸ್ವಲ್ಪ ಕಡಿಮೆ ಮಾಡಿದನು, ಇದರಿಂದ ಸಂಜನಾಳು ಯಾವ ಕಷ್ಟವಿಲ್ಲದೇ ಅವನ ಜೊತೆಯಲ್ಲಿರಬಹುದು. ಈ ರೀತಿ ಸೂರ್ಯ ದೇವನನ್ನು ಕೆತ್ತಿ ತೆಗೆದ ತೇಜದಿಂದ ವಿಶ್ವ ಕರ್ಮನು ಸುದರ್ಶನಚಕ್ರ, ತ್ರಿಶೂಲ ಹೀಗೆ ದೈವೀ ಶಸ್ತ್ರಗಳನ್ನು ಸಿದ್ಧಪಡಿಸಿದನು. ಅವನು ಸುದರ್ಶನಚಕ್ರವನ್ನು ಭಗವಾನ ವಿಷ್ಣುವಿಗೆ, ತ್ರಿಶೂಲವನ್ನು ಭಗವಾನ ಮಹಾದೇವನಿಗೆ ಉಡುಗೊರೆಯಾಗಿ ನೀಡಿದನು.

ತ್ರಿಶೂಲದ ೩ ಮೊನೆಗಳೆಂದರೆ ೩ ಶಕ್ತಿಗಳು !

ಶಿವಪುರಾಣದಲ್ಲಿ, ಸಂಪೂರ್ಣ ವಿಶ್ವದ ಆರಂಭದಲ್ಲಿ ಭಗವಾನ ಶಿವನು ಬ್ರಹ್ಮನಾದ ದಿಂದ ಪ್ರಕಟನಾದನು. ಅವನೊಂದಿಗೆ ೩ ಗುಣಗಳೂ ಪ್ರಕಟವಾದವು ಅವುಗಳೆಂದರೆ, ಸತ್ತ್ವ, ರಜ ಮತ್ತು ತಮ ! ಈ ಮೂರು ಗುಣಗಳಿಂದ ಶಿವಶೂಲವು ಸಿದ್ಧವಾಯಿತು. ಇದರಿಂದ ತ್ರಿಶೂಲವು ನಿರ್ಮಾಣವಾಯಿತು. ಈ ಜಗತ್ತಿನಲ್ಲಿ ೩ ರೀತಿಯ ಪ್ರವೃತ್ತಿಗಳಿವೆ, ಸತ್ತ್ವ, ರಜ ಮತ್ತು ತಮ ! ಮನುಷ್ಯನಲ್ಲಿ ಈ ಮೂರು ಪ್ರವೃತ್ತಿಗಳು ಕಂಡುಬರುತ್ತವೆ. ಕೇವಲ ಈ ಪ್ರವೃತ್ತಿಗಳ ಪ್ರಮಾಣವು ಪ್ರತಿಯೊಬ್ಬರಲ್ಲಿ ಬೇರೆ ಬೇರೆಯಾಗಿರುತ್ತವೆ. ತ್ರಿಶೂಲದಲ್ಲಿನ ೩ ಮೊನೆಗಳು ಈ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ತ್ರಿಶೂಲದ ೩ ಮೊನೆಗಳೆಂದರೆ ೩ ಶಕ್ತಿಗಳಾಗಿವೆ. ಬ್ರಹ್ಮಾಂಡದ ವಿಚಾರ ಮಾಡಿದರೆ, ಬ್ರಹ್ಮ, ವಿಷ್ಣು, ಮಹೇಶ ಎಂದು ತಿಳಿಯಬೇಕು. ೩ ಶಕ್ತಿಗಳೆಂದರೆ ಮಹಾಗೌರಿ, ಮಹಾಲಕ್ಷ್ಮಿ, ಮಹಾಸರಸ್ವತಿ ಇವರಿಗೆ ೩ ನಾಡಿಗಳಾದ ಇಡಾ, ಪಿಂಗಳಾ, ಸುಷುಮ್ನ ಹೀಗೆಯೂ ಕರೆಯುತ್ತಾರೆ; ಒಟ್ಟಿನಲ್ಲಿ ಶಂಕರನ ಕೈಯಲ್ಲಿರುವ ತ್ರಿಶೂಲವು ಇದೇ ವಿಷಯವನ್ನು ತೋರಿಸುತ್ತದೆ; ಆದ್ದರಿಂದ ಭಗವಾನ ಶಿವನು ನಮಗೆ, ಈ ಮೂರು ಗುಣಗಳ ಮೇಲೆ ನಮ್ಮ ನಿಯಂತ್ರಣವಿರಬೇಕು. ಯಾವಾಗ ಕಠಿಣ ಪರಿಸ್ಥಿತಿ ಬರುತ್ತದೆಯೋ, ಆವಾಗಲೇ ಈ ತ್ರಿಶೂಲವನ್ನು ಎತ್ತಲಾಗುತ್ತದೆ, ಎಂಬ ಸಂದೇಶವನ್ನು ನೀಡುತ್ತಾನೆ.

– ಶ್ರೀ. ಯಶವಂತ ನಾಯಿಕ, ಮಲೇಶಿಯಾ