ಟ್ರಂಪ್ ಅವರಿಗೆ ಕಪಾಳಮೋಕ್ಷ

ವಾಷಿಂಗ್ಟನ್ (ಅಮೇರಿಕಾ) – ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 2025 ರಲ್ಲಿ ಉಂಟಾದ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಅಮೇರಿಕಾದ ಪಾತ್ರವನ್ನು ವಿನಾಕಾರಣ ವೈಭವೀಕರಿಸಲಾಗುತ್ತಿದೆ. ಕೇವಲ ಅಮೇರಿಕಾದ ಮಧ್ಯಸ್ಥಿಕೆಯಿಂದಲೇ ಈ ಉದ್ವಿಗ್ನತೆ ಶಮನವಾಯಿತು ಎಂಬುದಕ್ಕೆ ಸದ್ಯದ ಮಾಹಿತಿಯಲ್ಲಿ ಯಾವುದೇ ಆಧಾರವಿಲ್ಲ. “ನಾನು ಭಾರತ ಸರಕಾರದ ಸದಸ್ಯರು, ಗುಪ್ತಚರ ಸಂಸ್ಥೆಗಳು ಮತ್ತು ‘ಅಮೇರಿಕನ್ ಇಂಟೆಲಿಜೆನ್ಸ್ ಕಮಿಟಿ’ಯಿಂದ ಏನು ಕೇಳಿದ್ದೇನೆ ಮತ್ತು ಓದಿದ್ದೇನೆ, ಅದರಿಂದ ಸ್ಪಷ್ಟವಾಗುವುದೇನೆಂದರೆ ಈ ವಿಷಯವನ್ನು ಭಾರತ ಮತ್ತು ಪಾಕಿಸ್ತಾನ ಆಂತರಿಕವಾಗಿ ಬಗೆಹರಿಸಿಕೊಂಡಿವೆ,” ಎಂದು ಅಮೇರಿಕಾದ ಪ್ರಭಾವಿ ಸಂಸದ ಮತ್ತು ‘ಸೆನೆಟ್ ಇಂಟೆಲಿಜೆನ್ಸ್ ಕಮಿಟಿ’ಯ ಅಧ್ಯಕ್ಷ ಮಾರ್ಕ್ ವಾರ್ನರ್ ಅವರು ಮಾಹಿತಿ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಅವರ ದಾವೆಗಳ ಹಿಂದಿನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂದೂರ್’ ಸಮಯದಲ್ಲಿ, “ನಾನು ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದಿಂದ ತಡೆದಿದ್ದೇನೆ,” ಎಂದು ಟ್ರಂಪ್ ಹೇಳಿಕೊಂಡಿದ್ದರು.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಾರ್ನರ್ ಅವರು, ಪರಿಸ್ಥಿತಿ ಗಂಭೀರವಾಗಿತ್ತು; ಆದರೆ ಅದು ಹೊಸದೇನಲ್ಲ ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಹಿಂದೆಯೂ ಹಲವು ಬಾರಿ ಇಂತಹ ಉದ್ವಿಗ್ನತೆ ಉಂಟಾಗಿದೆ. ಈ ಘಟನೆಯು ಒಂದು ಪರಿಚಿತ ಪದ್ಧತಿಯಂತೆಯೇ ನಡೆದಿದೆ. ಇದು ಮತ್ತೊಮ್ಮೆ ಭಯೋತ್ಪಾದನಾ ಘಟನೆಗೆ ಸಂಬಂಧಿಸಿದ್ದಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಯು ದೀರ್ಘಕಾಲದಿಂದಲೂ ಕಳವಳದ ವಿಷಯವಾಗಿದೆ. ಇಂತಹ ಸಂದರ್ಭಗಳಿಗಾಗಿ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಸಂವಹನದ ಮಾರ್ಗಗಳು ಈಗಾಗಲೇ ಲಭ್ಯವಿವೆ ಎಂದರು.
ಪಾಕಿಸ್ತಾನ ಯಾವಾಗಲೂ ಭಾರತವನ್ನೇ ಹೊಣೆಗಾರನನ್ನಾಗಿ ಮಾಡುತ್ತದೆ!
ಪಾಕಿಸ್ತಾನವನ್ನು ಟೀಕಿಸುತ್ತಾ ವಾರ್ನರ್ ಅವರು, ಪಾಕಿಸ್ತಾನವು ಯಾವಾಗಲೂ ಭಾರತದ ಮೇಲೆ ಅಗತ್ಯಕ್ಕಿಂತ ಹೆಚ್ಚು ಗಮನ ಹರಿಸುತ್ತದೆ ಮತ್ತು ತನ್ನ ಆರ್ಥಿಕ ಸವಾಲುಗಳಿಗೂ ಭಾರತವನ್ನೇ ಹೊಣೆ ಮಾಡುತ್ತದೆ ಎಂದು ಹೇಳಿದರು. ಇದಕ್ಕೆ ವಿರುದ್ಧವಾಗಿ, ಭಾರತವು ಈಗ ಈ ಸ್ಪರ್ಧೆಗಿಂತ ಬಹಳ ಮುಂದೆ ಹೋಗಿದೆ ಮತ್ತು ಅಲ್ಲಿನ ಹೊಸ ಪೀಳಿಗೆಯು ಅಮೇರಿಕಾದೊಂದಿಗೆ ಬಲವಾದ ಸಂಬಂಧವನ್ನು ಹೊಂದುವ ಪರವಾಗಿದೆ ಎಂದರು.
ಕದನ ವಿರಾಮದ ಶ್ರೇಯಸ್ಸನ್ನು ಟ್ರಂಪ್‌ಗೆ ನೀಡದ ಕಾರಣ ಟ್ರಂಪ್ ಅವರು ಭಾರತದ ಮೇಲೆ ಆಮದು ಸುಂಕ ಹೇರಿದರು!
ಅಮೇರಿಕಾದ ಪಾತ್ರವನ್ನು ಅತಿಶಯೋಕ್ತಿಯಿಂದ ವರ್ಣಿಸುವುದರಿಂದ ಮಿತ್ರ ರಾಷ್ಟ್ರಗಳ ನಡುವಿನ ನಂಬಿಕೆ ದುರ್ಬಲಗೊಳ್ಳಬಹುದು ಎಂದು ಮಾರ್ಕ್ ವಾರ್ನರ್ ಕಳವಳ ವ್ಯಕ್ತಪಡಿಸಿದರು. ಭಾರತದೊಂದಿಗಿನ ಸದ್ಯದ ಆಮದು ಸುಂಕದ ವಿವಾದವು ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕದನ ವಿರಾಮದ ಪೂರ್ಣ ಶ್ರೇಯಸ್ಸನ್ನು ಟ್ರಂಪ್‌ಗೆ ನೀಡದ ಅಸಮಾಧಾನದಿಂದಲೇ ಉಂಟಾದಂತೆ ತೋರುತ್ತದೆ. ಟ್ರಂಪ್ ಅನೇಕ ಬಾರಿ ಫಲಿತಾಂಶಗಳನ್ನು ಅತಿರಂಜಿತವಾಗಿ ವರ್ಣಿಸುತ್ತಾರೆ. ಇಂತಹ ಭಾಷೆಯು ರಾಜತಾಂತ್ರಿಕ ಹಾನಿಯನ್ನುಂಟುಮಾಡುತ್ತದೆ ಮತ್ತು ವಾಷಿಂಗ್ಟನ್ ಹಾಗೂ ನವದೆಹಲಿ ನಡುವಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಅಮೇರಿಕಾದ ಪಾತ್ರವನ್ನು ದೊಡ್ಡದು ಮಾಡಿ ಹೇಳುವುದು ಪ್ರಾದೇಶಿಕ ಸಮತೋಲನವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು ಮತ್ತು ಭಾರತ-ಅಮೇರಿಕಾ ಸಂಬಂಧವನ್ನು ಅಸ್ಥಿರಗೊಳಿಸಬಹುದು ಎಂದು ವಾರ್ನರ್ ಎಚ್ಚರಿಸಿದ್ದಾರೆ.
ಇರಾನ್ ಪರಮಾಣು ಸಾಮರ್ಥ್ಯ ನಾಶವಾಗಿಲ್ಲ!
ಇರಾನ್ ಮೇಲಿನ ಅಮೇರಿಕಾದ ದಾಳಿಯನ್ನು ಉಲ್ಲೇಖಿಸುತ್ತಾ ವಾರ್ನರ್ ಅವರು, ಅಮೇರಿಕಾದ ಯುದ್ಧ ವಿಮಾನಗಳು ಉತ್ತಮ ದಾಳಿ ನಡೆಸಿದವು; ಆದರೆ ಅವು ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಿಲ್ಲ. ಟೆಹ್ರಾನ್ ಅದನ್ನು ಕೆಲವು ತಿಂಗಳುಗಳಲ್ಲಿ ಮತ್ತೆ ಪುನರ್ನಿರ್ಮಿಸಬಹುದು ಎಂದು ಹೇಳಿದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !