ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲುಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನುನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರ ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು  ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

(ಲೇಖನ ೮)

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಾಲಿನ್ಯ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧೨. ವಿಚಾರಿಸಿ ಕೃತಿ ಮಾಡುವ ವಿಷಯದಲ್ಲಿಗುರುದೇವರಿಂದ ಮಾಡಲಾದ ದಿಶಾದರ್ಶನ !

ವಿಚಾರಿಸಿ ಕೃತಿ ಮಾಡುವುದರ ಮಹತ್ವವೇನು ? ಅದರೊಂದಿಗೆ ವಿಚಾರಿಸಿ ಕೃತಿ ಮಾಡುವುದರಿಂದ ಏನು ಲಾಭವಾಗುತ್ತದೆ ? ಈ ವಿಷಯದಲ್ಲಿ ಸ್ವತಃ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಮಯ-ಸಮಯದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಗುರುದೇವರ ಮಾರ್ಗದರ್ಶನದ ಆ ದಿವ್ಯ ಮತ್ತು ಅತ್ಯಂತ ಅಮೂಲ್ಯ ಅಂಶಗಳನ್ನು ನಾವು ಈಗ ಕೇಳೋಣ. ಆ ದಿವ್ಯ ಅಂಶಗಳನ್ನು ಭಕ್ತಿಮಯ ಲೇಖನಿಯಿಂದ ನಮ್ಮ ಅಂತರ್ಮನಸ್ಸಿನಲ್ಲಿ ಕೂಡ ಅಂಕಿತಗೊಳಿಸೋಣ.

೧೨ ಅ. ವಿಚಾರಿಸಿಕೊಳ್ಳುವುದರಿಂದ ಮನಸ್ಸಿನ ವಿಚಾರಗಳ ಯೋಗ್ಯಾಯೋಗ್ಯದ ಅರಿವು ಮೂಡುತ್ತದೆ ! : ಒಂದು ಬಾರಿ ಒಂದು ಸತ್ಸಂಗದಲ್ಲಿ ಒಬ್ಬ ಸಾಧಕಿಯು ಗುರುದೇವರಿಗೆ ತನ್ನ ಮನಸ್ಸಿನಲ್ಲಿ ಕೆಲವು ನಕಾರಾತ್ಮಕ ವಿಚಾರಗಳು ಬರುತ್ತವೆ ಎಂದು ಹೇಳಿದಳು. ಈ ನಕಾರಾತ್ಮಕ ವಿಚಾರಗಳಿಂದಾಗಿ ಅವಳ ಮನಸ್ಸು ಅಸ್ವಸ್ಥ ಮತ್ತು ದುಃಖಿಯಾಗಿರುತ್ತಿತ್ತು. ಆಗ ಗುರುದೇವರು ಅವಳಲ್ಲಿ ಕೇಳಿದರು, ‘ನೀನು ಮನಸ್ಸಿನಲ್ಲಿ ಬರುವ ಈ ನಕಾರಾತ್ಮಕ ವಿಚಾರಗಳನ್ನು ಇತರರಲ್ಲಿ ಹೇಳುತ್ತೀಯಲ್ಲ ? ವಿಚಾರಿಸಿಕೊಳ್ಳುತ್ತೀಯಲ್ಲ ?’ ಆಗ ಆ ಸಾಧಕಿಯು ‘ಇಲ್ಲ’ ಎಂದಳು. ಆಗ ಗುರುದೇವರು ಅವಳಿಗೆ ಮಾರ್ಗದರ್ಶನ ಮಾಡಿದರು ‘ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಯಾರ ಬಳಿಯಾದರೂ ಸಮಯ-ಸಮಯದಲ್ಲಿ ಹೇಳಿಕೊಳ್ಳಬೇಕು. ಇದರಿಂದ ನಮಗೆ ನಮ್ಮ ಮನಸ್ಸಿನ ವಿಚಾರಗಳು ಯೋಗ್ಯವೋ ಅಯೋಗ್ಯ ಎಂದು ಸ್ಪಷ್ಟವಾಗುತ್ತದೆ. ಮನಸ್ಸಿನ ಸಂಶಯಗಳು ಕೂಡ ದೂರವಾಗುತ್ತವೆ. ಆ ವಿಚಾರಗಳ ವಿಷಯದಲ್ಲಿ ಅನಾವಶ್ಯಕ ವಿಚಾರ ಪ್ರಕ್ರಿಯೆ ನಿಂತು ಹೋಗುತ್ತದೆ.’

೧೨ ಆ. ವಿಚಾರಿಸಿಕೊಳ್ಳುವುದರಿಂದ ಇತರರು ನೀಡಿದ ದೃಷ್ಟಿಕೋನ ಅಂತರ್ ಮನಸ್ಸಿನವರೆಗೂ ಹೋಗುತ್ತದೆ ! : ಒಂದು ಬಾರಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಹೇಳಿದರು, ‘ನಾವು ನಮ್ಮ ಮನಸ್ಸಿಗೆ ನಮ್ಮದೇ ಮನಸ್ಸಿನಂತೆ ದೃಷ್ಟಿಕೋನ ಕೊಟ್ಟಾಗ ಅದು ಬಾಹ್ಯಮನಸ್ಸಿನ ತನಕ ಹೋಗುತ್ತದೆ. ಆದರೆ ನಾವು ಇತರರಲ್ಲಿ ವಿಚಾರಿಸಿಕೊಂಡು, ಅವರಿಂದ ಪಡೆದ ದೃಷ್ಟಿಕೋನವು ನಮ್ಮ ಅಂತರ್ ಮನಸ್ಸಿನವರೆಗೆ ಹೋಗುತ್ತದೆ. ಆದುದರಿಂದ ಸಾಧನೆಯಲ್ಲಿ ಇತರರಲ್ಲಿ ವಿಚಾರಿಸಿ ಅವರ ಸಹಾಯ ಪಡೆದುಕೊಳ್ಳಬೇಕು.’

೧೨ ಇ. ವಿಚಾರಿಸಿ ಮಾಡಿದ ಕೃತಿಯು ಅಧಿಕ ಫಲಪ್ರದವಾಗುತ್ತದೆ : ನಮ್ಮ ಮನಸ್ಸಿನಂತೆ ಮಾಡಲಾದ ಕೃತಿಯ ಪರಿಣಾಮಕ್ಕೆ ಮಿತಿಗಳು ಇರುತ್ತವೆ, ಆದರೆ ನಾವು ಕೃತಿಗಳನ್ನು ಅದಕ್ಕೆಸಂಬಂಧಿಸಿದ ವ್ಯಕ್ತಿಯ ಬಳಿ ವಿಚಾರಿಸಿ ಮಾಡಿದಾಗ ಅದು ಅಧಿಕ ಪರಿಣಾಮಕಾರಿ ಹೆಚ್ಚು ಫಲಪ್ರದವಾಗುತ್ತದೆ.

೧೨ ಈ. ವಿಚಾರಿಸಿದುದರಿಂದ ಮನೋಲಯವಾಗುತ್ತದೆ : ವಿಚಾರಿಸಿ ಕೊಂಡು ಮಾಡುವುದರಿಂದ  ಸ್ವೇಚ್ಛೆ ಇಲ್ಲವಾಗುತ್ತದೆ. ಇದರಿಂದ ಶೀಘ್ರ ಮನೋಲಯ ಆಗುತ್ತದೆ. ಮನೋಲಯವಾಗುವುದರಿಂದ ಅಂದರೆ ಮನಸ್ಸಿನ ಕಾರ್ಯ ಕಡಿಮೆಯಾಗುವುದರಿಂದ ಹೆಚ್ಹೆಚ್ಚು ಸಮಯ ಭಾವದ ಸ್ಥಿತಿಯಲ್ಲಿರಲು ಸಾಧ್ಯವಾಗುತ್ತದೆ.

೧೨ ಉ. ವಿಚಾರಿಸಿ ಕೃತಿ ಮಾಡಿದುದರಿಂದ ಸಾಧಕರು ಸ್ವಾವಲಂಬಿಗಳಾಗುತ್ತಾರೆ ! : ಸಾಧಕನು ಕೇಳಿಕೊಂಡು ಕೃತಿಯನ್ನು ಮಾಡುವುದರಿಂದ ಆ ಕೃತಿಯನ್ನು ಯೋಗ್ಯ ರೀತಿಯಲ್ಲಿ ಮಾಡಲು ಕಲಿಯುತ್ತಾನೆ. ಅಂದರೆ ಅವನು ಇದರ ವಿಷಯವನ್ನು ಯಾರಲ್ಲಿ ಕೇಳುತ್ತಾನೋ, ಅವರ ಮಾಧ್ಯಮದಿಂದ ಕೃತಿ ಮಾಡುವ ಜ್ಞಾನಸಿಗುತ್ತದೆ. ಈ ಪ್ರಕಾರ ಪ್ರತಿಯೊಂದು ಕೃತಿ ಮಾಡುವ ಸಮಯ ವಿಚಾರಿಸಿಕೊಳ್ಳುತ್ತಾ ಇದ್ದರೆ ಸಾಧಕನು ಕಡಿಮೆ ಕಾಲಾವಧಿಯಲ್ಲಿ ಕಲಿತು ಸ್ವಾವಲಂಬಿಯಾಗುತ್ತಾನೆ. ಆದುದರಿಂದ ಯಾವುದೇ ಕ್ಷೇತ್ರದಲ್ಲಿ ಸೇವೆ ಮಾಡುವಾಗ ವಿಚಾರಿಸಿಯೇ ಮಾಡಬೇಕು. ಇದರಿಂದ ಮುಂದೆ ಪ್ರತಿಯೊಂದು ಕ್ಷೇತ್ರದಲ್ಲಿ ಯಾರ ಮೇಲೂ ಅವಲಂಬಿಸಿರದೇ ಅದರಿಂದ ಸ್ವತಃ ಪರಿಪೂರ್ಣ ಸೇವೆ ಮಾಡುವ ಕ್ಷಮತೆ ಉಂಟಾಗುತ್ತದೆ.

೧೨ ಊ. ಸಾಧಕರು ಆಪತ್ಕಾಲಕ್ಕಿಂತ ಮೊದಲೇ ಈಗ ಲಭ್ಯವಿರುವ ಮಾರ್ಗದರ್ಶನದ ಲಾಭ ಪಡೆದುಕೊಳ್ಳಬೇಕು ! : ‘ಮುಂದೆ ಆಪತ್ಕಾಲ ಬರಲಿದೆ, ಆಗ ನಾವು ಯಾರಲ್ಲಾದರೂ ಕೇಳಲು ಸಾಧ್ಯವಿದೆಯೋ ಇಲ್ಲವೋ ? ವಿಚಾರಿಸಿಕೊಳ್ಳಲು ಯಾರಾದರೂ ಲಭ್ಯವಿರುತ್ತಾರೋ ಇಲ್ಲವೋ ? ಇದು ನಮಗೆ ಗೊತ್ತಿಲ್ಲ. ಈಗ ನಮಗೆ ಸಂತ, ಸದ್ಗುರು ಮತ್ತು ಜವಾಬ್ದಾರ ಸಾಧಕರ ಮಾಧ್ಯಮದಿಂದ ಯೋಗ್ಯ ಮಾರ್ಗದರ್ಶನ ಸಹಜವಾಗಿ ಸಿಗುತ್ತಿದೆ. ಹಾಗಾಗಿ ಈಗಲೇ ಅದರ ಲಾಭವನ್ನು ಅಧಿಕಾಧಿಕವಾಗಿ ಪಡೆದುಕೊಳ್ಳಬೇಕು.’

೧೨ ಎ. ಒಂದು ಬಾರಿ ಸಾಧಕರೊಂದಿಗೆ ಮಾತನಾಡುತ್ತಿರುವಾಗ ಗುರುದೇವರು ಹೇಳಿದರು, ‘ನನಗೆ ಕೂಡ ಏನು ಬರುವುದಿಲ್ಲ ? ನಾನು ಕೂಡ ಪ್ರತಿಯೊಂದು ವಿಷಯವನ್ನು ಭಗವಂತನಲ್ಲಿ ವಿಚಾರಿಸಿಯೇ ಮಾಡುತ್ತೇನೆ.’

ಇದರಿಂದ ಗುರುದೇವರ ಅಹಂಶೂನ್ಯ ಸ್ಥಿತಿ ನಮಗೆ ಅರಿವಿಗೆ ಬರುತ್ತದೆ. ಅವರು ಪರಿಪೂರ್ಣರಾಗಿದ್ದಾರೆ. ಆದರೂ ವಿಚಾರಿಸಿಕೊಂಡು ಮಾಡುತ್ತಾರೆ. ಗುರುದೇವರು ಈ ಅವಸ್ಥೆಯಲ್ಲಿ  ಕೂಡ ವಿಚಾರಿಸಿಕೊಂಡು ಮಾಡುತ್ತಾರಾದರೆ, ಆಗ ನಮ್ಮಲ್ಲಿ ವಿಚಾರಿಸಿಕೊಳ್ಳುವ ವೃತ್ತಿ ಎಷ್ಟು ಇರಬೇಕು ? ಇದನ್ನು ಅರಿವಿನಲ್ಲಿಟ್ಟುಕೊಂಡು ನಾವು ಕೂಡ ವಿಚಾರಿಸಿಕೊಳ್ಳುವ ವೃತ್ತಿಯನ್ನು  ನಮ್ಮಲ್ಲಿ ಮೂಡಿಸಲು ಮನ, ಬುದ್ಧಿ ಮತ್ತು ಕೃತಿಯ ಸ್ತರದಲ್ಲಿ  ಅಧಿಕಾಧಿಕವಾಗಿ ಪ್ರಯತ್ನ ಮಾಡೋಣ.

ತಮ್ಮಲ್ಲಿ ‘ಕೇಳಿ ಮಾಡುವ’ (ವಿಚಾರಿಸುವ) ವೃತ್ತಿಯನ್ನು ಬೆಳೆಸಿಕೊಳ್ಳಲು ಕೆಲವು ಅಮೂಲ್ಯ ದೃಷ್ಟಿಕೋನಗಳು !

ಅ. ‘ನಮ್ಮ ಬುದ್ಧಿಯು ಬಹಳ ಅಲ್ಪವಾಗಿರುವುದರಿಂದ ನಮ್ಮ ನಿರ್ಧಾರ ಅಥವಾ ಕೃತಿಯು ತಪ್ಪಾಗಬಹುದು; ಆದರೆ ಗುರುಗಳ ಅಥವಾ ಭಗವಂತನ ಬುದ್ಧಿಯು ‘ವಿಶ್ವಬುದ್ಧಿ’ಯಾಗಿರುತ್ತದೆ. ಆದ್ದರಿಂದ‘ಯಾವುದು ಯೋಗ್ಯ ? ಮತ್ತು ಯಾವುದು ಅಯೋಗ್ಯ ?’, ಎಂಬುದನ್ನು ಅವರೇ ನಮಗೆ ಹೇಳಬಲ್ಲರು; ಆದ್ದರಿಂದ ವರದಿಸೇವಕರು ಮತ್ತು ಜವಾಬ್ದಾರ ಸಾಧಕರಲ್ಲಿ ಗುರುರೂಪವನ್ನು ಕಂಡು, ಅವರನ್ನು ಕೇಳಿಯೇ ಕೃತಿಯನ್ನು ಮಾಡಬೇಕು.’

ಆ. ‘ವಿಚಾರಿಸದೇ ಕೃತಿ ಮಾಡುವುದೆಂದರೆ ನಮ್ಮ ಸ್ವಂತ ಬುದ್ಧಿ ಯನ್ನೇ ಗುರು ಎಂದು ಭಾವಿಸುವುದು; ಇದನ್ನು ಗಮನದಲ್ಲಿರಿಸಿ ಸ್ವಂತದ ಅಲ್ಪಬುದ್ಧಿಯ ಮೇಲೆ ವಿಶ್ವಾಸವಿಡುವ ಬದಲು, ಗುರುಗಳೇ ಮಾರ್ಗದರ್ಶಕರನ್ನಾಗಿ ನೀಡಿದ ಜವಾಬ್ದಾರ ಸಾಧಕರಸಹಾಯವನ್ನು ಪಡೆಯಬೇಕು.’

ಇ. ‘ಪ್ರತಿಯೊಂದು ಕೃತಿಯನ್ನು ಮಾಡುವ ಮೊದಲು ‘ನಾನು ಇದನ್ನು ವಿಚಾರಿಸಿದ್ದೇನೆಯೇ ?’, ಎಂಬ ಪ್ರಶ್ನೆಯನ್ನು ಮನಸ್ಸಿಗೆ ಕೇಳುವುದು ಸಾಧಕತ್ವದ ಮೊದಲ ಹಂತವಾಗಿದೆ.’

ಈ. ‘ನಾವು ಒಳ್ಳೆಯ ಉದ್ದೇಶದಿಂದಲೇ ಕೃತಿ ಮಾಡಿದ್ದೇವೆ ಎಂದು ನಮಗೆ ಅನಿಸಬಹುದು; ಆದರೆ ಯಾವುದೋ ಸಮಯ ದಲ್ಲಿ ನಾವು ಕೇಳದೆ ಮಾಡಿದ ಕೃತಿಯು ಸ್ಥೂಲರೂಪದಲ್ಲಿ ಯೋಗ್ಯವಾಗಿ ಕಂಡರೂ, ಸೂಕ್ಷ್ಮ ಸ್ತರದಲ್ಲಿ ಅದರಿಂದ ನಮ್ಮ ಸಾಧನೆಗೆ ಹಾನಿಯೇ ಆಗಿರುತ್ತದೆ. ಆದ್ದರಿಂದ ‘ಕೃತಿ ಮಾಡುವಾಗ ನಮ್ಮ ಉದ್ದೇಶವು ಶುದ್ಧ ಅಥವಾ ಒಳ್ಳೆಯದಾಗಿದ್ದರೂ, ಕೇಳಿ ಮಾಡಿದರೆ ಮಾತ್ರ ಅದಕ್ಕೆ ಯೋಗ್ಯ ಫಲಿತಾಂಶ ಸಿಗುತ್ತದೆ’, ಎಂಬುದನ್ನು ನೆನಪಿಡಬೇಕು.’

ಉ. ‘ಯಾವ ಸೇವೆ ಅಥವಾ ಕೃತಿಯನ್ನು ನಾವು ಕೇಳಿ ಮಾಡು ತ್ತೇವೆಯೋ, ಆ ಸೇವೆಯು ಮಾತ್ರ ಯಶಸ್ವಿಯಾಗುತ್ತದೆ. ಸ್ವಂತ ನಿರ್ಧಾರದಿಂದ ನಮ್ಮ ಮನಸ್ಸಿನಂತೆ ನಾವು ಎಷ್ಟು ಸೇವೆ ಮಾಡಿದರೂ, ಅದರಿಂದ ನಮಗೆ ಮೇಲ್ನೋಟಕ್ಕೆ ಆನಂದ ಸಿಗಬಹುದು; ಆದರೆ ಅದರಿಂದ ನಮ್ಮ ಸಾಧನೆಯಾಗುವುದಿಲ್ಲ. ಆದ್ದರಿಂದಲೇ ಗುರುಗಳಲ್ಲಿ, ಅವರ ಸಮಷ್ಟಿ ರೂಪವನ್ನು ಕೇಳದೆ ಸಾಧನೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಸಾಧನೆಯಲ್ಲಿ ಎಷ್ಟೇ ಅನುಭವವಿದ್ದರೂ, ‘ಕೇಳಿ ಮಾಡುವ ಕೃತಿಯೇ’ ನಿಜವಾದ ನಮ್ರತೆ ಮತ್ತು ಶರಣಾಗತಿಯಾಗಿದೆ.’

ಊ. ‘ಕೇಳುವುದು ಎಂದರೆ ನಮ್ರತೆಯಿಂದ ಜ್ಞಾನದತ್ತ ಬಾಗುವುದು ಎಂದರ್ಥ. ಜವಾಬ್ದಾರ ಸಾಧಕರಲ್ಲಿ ವಿಚಾರಿಸಿ ಸೇವೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ತಡೆಯಬಹುದು ಮತ್ತು ನಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದು.’

ಎ. ‘ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ಮತ್ತು ಕೃಪಾಶೀರ್ವಾದಗಳು ನಮ್ಮ ಬೆನ್ನಿಗಿದ್ದರೆ ಮಾತ್ರ ಯಶಸ್ವಿ ಹಾಗೂ ಧರ್ಮನಿಷ್ಠರಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಂದು ಹಂತದಲ್ಲೂ ಕೇಳಿ ಮಾರ್ಗದರ್ಶನ ಪಡೆಯುವುದು ಮುಖ್ಯವಾಗಿದೆ.’

ಐ. ‘ವಿಚಾರಿಸುವಾಗ’ ‘ನನಗೆ ಗೊತ್ತಿದೆ’ ಎಂಬ ಅಹಂಕಾರ ವಿರಬಾರದು, ಬದಲಾಗಿ ’ನಾನು ಅಪೂರ್ಣನಾಗಿದ್ದೇನೆ, ನಾನುಕಲಿಯಬೇಕಿದೆ’ ಎಂಬ ನಮ್ರತೆ ಇರಬೇಕು. ಆಗ ಮಾತ್ರ ಆ ಕೃತಿಯನ್ನು ಮಾಡಲು ನಿಜವಾದ ಸಾಮರ್ಥ್ಯ ಪ್ರಾಪ್ತವಾಗುತ್ತದೆ. ‘ವಿಚಾರಿಸುವುದರಿಂದ ನಾವು ಸಣ್ಣವರು ಅಥವಾ ದುರ್ಬಲ ರಾಗುವುದಿಲ್ಲ, ಬದಲಾಗಿ ಸಮರ್ಥರಾಗುತ್ತೇವೆ’ ಎಂಬುದು ಸದಾ ನೆನಪಿನಲ್ಲಿಡಬೇಕು.

ಒ. ‘ಯಾವಾಗ ನಾವು ಸ್ವಂತ ಮನಸ್ಸಿನಂತೆ ಮಾಡುತ್ತೇವೆಯೋ, ಆಗ ನಾವು ನಮ್ಮ ಜವಾಬ್ದಾರಿಯನ್ನು ನಾವೇ ವಹಿಸಿಕೊಂಡಿರುತ್ತೇವೆ. ಇದರಿಂದಾಗಿ ನಾವು ‘ಕರ್ತೃತ್ವ, ಒತ್ತಡ ಮತ್ತು ನಿರಾಸೆ’ಗಳಿಗೆ ಬಲಿಯಾಗುತ್ತೇವೆ; ಆದರೆ ನಾವು ವಿಚಾರಿಸಿಕೊಂಡಾಗ ನಮ್ಮಜೀವನದ ನಿರ್ಧಾರಗಳನ್ನು ಭಗವಂತನ ಚರಣಗಳಲ್ಲಿ ಅರ್ಪಿಸುತ್ತೇವೆ. ಆಗ ಭಗವಂತನೇ ನಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ ಎಂಬುದನ್ನು ನೆನಪಿಡಿ.’

ಓ. ‘ಗುಣ, ವಿದ್ವತ್ತು ಮತ್ತು ಜ್ಞಾನವಿದ್ದರೂ ವಿಚಾರಿಸಿ ಕೃತಿ ಮಾಡದಿದ್ದರೆ ಅದು ಅಪೂರ್ಣವಾಗಿರುತ್ತದೆ; ಆದ್ದರಿಂದಲೇ ಶಿಷ್ಯನ ಬಳಿ ಜ್ಞಾನವಿರಲಿ ಅಥವಾ ಪ್ರತಿಭೆಯಿರಲಿ, ಶಿಷ್ಯನು ಅದನ್ನು ಗುರುಗಳ ಚರಣಗಳಲ್ಲಿ ಸಮರ್ಪಿಸಬೇಕು.’

ಅಂ. ‘ಗುರುಗಳ ಸಮಷ್ಟಿ ರೂಪದ ಅನುಮತಿಯಿಲ್ಲದೆ, ಅಂದರೆ ಅವರನ್ನು ಕೇಳದೆ ಕೃತಿ ಮಾಡುವುದು ಎಂದರೆ ‘ಸ್ವೇಚ್ಛೆ’ ಅಥವಾ ಮನಸ್ಸಿನಂತೆ ಮಾಡುವುದು ಎಂದರ್ಥ. ಈ ಸ್ವೇಚ್ಛೆಯೇ ಅಧ್ಯಾತ್ಮದಲ್ಲಿ ಅಡೆತಡೆಯಾಗುತ್ತದೆ. ‘ಗುರುಗಳ ಸಮಷ್ಟಿ ರೂಪ ವನ್ನು ಕೇಳಿ ಅವರ ಆಜ್ಞೆಯಂತೆ ಕಾರ್ಯ ನಿರ್ವಹಿಸುವುದು’ ಎಂದರೆ ನಮ್ಮ ಅಹಂಕಾರವನ್ನು ಮುರಿಯುವುದು ಎಂದರ್ಥ.”

ಕ. ‘ಒಮ್ಮೆ ನಾವು ಗುರುಗಳ ಬಳಿ ಬಂದ ಮೇಲೆ, ಸ್ವಂತ ಬುದ್ಧಿಯಿಂದ ಏನನ್ನೂ ನಿರ್ಧರಿಸದೆ ಪ್ರತಿಯೊಂದು ಕೃತಿಯನ್ನು ಮಾಡುವಾಗ ಗುರುಕೃಪೆಯ ಆಧಾರವನ್ನೇ ಪಡೆಯಬೇಕು. ಸಚ್ಚಿದಾನಂದ ಪರಬ್ರಹ್ಮ ಗುರುದೇವದ ಚರಣಗಳಿಗೆ ಬಂದ ನಂತರ ನಮ್ಮ ಪ್ರತಿಯೊಂದು ಕೃತಿ, ಸೇವೆ ಮತ್ತು ಸಾಧನೆಯ ಪ್ರಯತ್ನವು ಗುರುನಿಯೋಜಿತ, ಅಂದರೆ ಗುರುಗಳಿಗೆ ಅಪೇಕ್ಷಿತವಾದ ಮತ್ತು ಅವರ ಆಜ್ಞೆಯಂತೆಯೇ ಇರಬೇಕು ಎಂದು ಸಾಧಕರು ತಮ್ಮ ಅಂತರ್ಮನದಲ್ಲಿ ಕೆತ್ತಿಡಬೇಕು. ಅದಕ್ಕಾಗಿ ಕಾಲಕಾಲಕ್ಕೆ ಗುರುಗಳ ಸಮಷ್ಟಿ ರೂಪದ ಮಾರ್ಗದರ್ಶನ ಪಡೆಯಬೇಕು.’

ಖ. ‘ಶುದ್ಧತೆಯಿಂದ, ವಿನಮ್ರತೆಯಿಂದ ಮತ್ತು ಗುರುಗಳ (ಅವರ ಸಮಷ್ಟಿ ರೂಪದ) ಆಜ್ಞೆ ಪಡೆದು ಮಾಡಿದ ಕೃತಿಯೇ ಯಶಸ್ವಿ ಸಾಧನೆಯಾಗಿದೆ. ಅಂತಹ ಸಾಧನೆ ಮಾತ್ರ ಗುರುಗಳ ಚರಣಗಳನ್ನು ತಲುಪುತ್ತದೆ ಎಂಬ ಸಮೀಕರಣವನ್ನು ಸಾಧಕರು ಸದಾ ಸ್ಮರಣೆಯಲ್ಲಿಡಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೧.೮.೨೦೨೫)