
೧. ಮಾಯೆಯ ಅರ್ಥ
“ಯಾವ ಶಕ್ತಿಯು ಜೀವವನ್ನು ಭಗವಂತನಿಂದ ದೂರ ಕೊಂಡೊಯ್ಯುತ್ತದೆಯೋ, ಅದನ್ನು ‘ಮಾಯೆ’ ಎಂದು ಕರೆಯಲಾಗುತ್ತದೆ. ಮಾಯೆಯು ಬ್ರಹ್ಮ ನಿಂದಲೇ ನಿರ್ಮಿತಿಯಾಗಿದ್ದರೂ, ಅದು ಜೀವವನ್ನು ಬ್ರಹ್ಮನಿಂದ ದೂರವಿಟ್ಟು ಭ್ರಮೆಯಲ್ಲಿ ಮುಳುಗಿಸಿರುತ್ತದೆ.”
೨. ಮಾಯೆಯ ವಿಧಗಳು
‘ತಾಮಸಿಕ ಮಾಯೆ, ರಾಜಸಿಕ ಮಾಯೆ, ಸಾತ್ತ್ವಿಕ ಮಾಯೆ ಮತ್ತು ಯೋಗಮಾಯೆ’ ಹೀಗೆ ಮಾಯೆಯ ೪ ವಿಧಗಳಿವೆ.
೨ ಅ. ತಾಮಸಿಕ ಮಾಯೆ : ಈ ಮಾಯೆಯು ಜೀವಕ್ಕೆ ‘ಭೌತಿಕ ಜಗತ್ತೇ ಸತ್ಯ ಮತ್ತು ಪುನರ್ಜನ್ಮ ಅಥವಾ ಕರ್ಮಫಲ ನ್ಯಾಯ ಎಂಬುದು ಯಾವುದೂ ಇಲ್ಲ, ಕೇವಲ ಮಾಯೆಯ ಸುಖಗಳನ್ನು ಅನುಭವಿಸಲು ಜೀವವು ಜನ್ಮವೆತ್ತಿದೆ’ ಎಂದು ಭಾಸವಾಗುವಂತೆ ಮಾಡುತ್ತದೆ. ಇದರಿಂದ ಜೀವವು ಹುಟ್ಟಿನಿಂದ ಸಾವಿನ ವರೆಗೆ ಸುಖದ ಬೆನ್ನತ್ತಿ ಸಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇತರರಿಗೆ ದುಃಖ ನೀಡಿಯಾದರೂ ತಾನು ಸುಖವಾಗಿರಲು ಪ್ರಯತ್ನಿಸುತ್ತದೆ ಮತ್ತು ಪಾಪಕರ್ಮಗಳಲ್ಲಿ ತೊಡಗುತ್ತದೆ. ಉದಾಹರಣೆಗೆ ಸಮಾಜದಲ್ಲಿನ ಗೂಂಡಾ ಪ್ರವೃತ್ತಿಯ ವ್ಯಕ್ತಿಗಳು.

೨ ಆ. ರಾಜಸಿಕ ಮಾಯೆ : ಈ ಜೀವಗಳ ಮೇಲೂ ಮಾಯೆಯ ಪ್ರಭಾವ ಹೆಚ್ಚಿರುತ್ತದೆ. ಇವರು ತಮ್ಮ ಕರ್ಮದ ಮೇಲೆ ವಿಶ್ವಾಸವಿಟ್ಟು, ಸ್ವಂತ ಶಕ್ತಿಯಿಂದ ಜಗತ್ತಿನ ಸುಖಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇವರು ಕೇವಲ ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇವರು ತಾಮಸಿಕರಂತೆ ಪಾಪಕರ್ಮಗಳಲ್ಲಿ ತೊಡಗದಿದ್ದರೂ, ಅತ್ಯಂತ ಸ್ವಾರ್ಥಿಗಳಾಗಿರುವುದರಿಂದ ಪರೋಪಕಾರ ಮಾಡುವುದಿಲ್ಲ. ಉದಾಹರಣೆಗೆ : ಧರ್ಮಾಚರಣೆ ಅಥವಾ ಸಾಧನೆ ಮಾಡದ ಬುದ್ಧಿಜೀವಿಗಳು ಅಥವಾ ವಿಜ್ಞಾನನಿಷ್ಠ ವ್ಯಕ್ತಿಗಳು.
೨ ಇ. ಸಾತ್ತ್ವ್ವಿಕ ಮಾಯೆ : ಇವರ ಬುದ್ಧಿ ಸಾತ್ವಿಕವಾಗಿರುತ್ತದೆ. ಮಾಯೆಯಲ್ಲಿದ್ದರೂ ಇವರಲ್ಲಿ ‘ಮಾಯೆಯನ್ನು ಸೃಷ್ಟಿಸಿದವರು ಯಾರು ? ಯಾಕೆ ?’ ಎಂಬ ಜಿಜ್ಞಾಸೆ ಮೂಡುತ್ತದೆ. ಇವರು ಸಂತರನ್ನು ಪ್ರಶ್ನಿಸಿ ಅಥವಾ ಆಧ್ಯಾತ್ಮಿಕ ಗ್ರಂಥಗಳನ್ನು ಓದಿ ಉತ್ತರ ಕಂಡುಕೊಳ್ಳುತ್ತಾರೆ. ಇದರಲ್ಲಿ ಶೇ. ೯೦ ರಷ್ಟು ಜನರು ಕೇವಲ ತಾತ್ತ್ವಿಕ ಜ್ಞಾನಕ್ಕೆ ಸೀಮಿತರಾದರೆ, ಉಳಿದ ಶೇ. ೧೦ ರಷ್ಟು ಜನರು ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಅಥವಾ ಜ್ಞಾನಯೋಗದ ಮೂಲಕ ಈಶ್ವರನ ಹಾದಿಯಲ್ಲಿ ನಡೆಯುತ್ತಾರೆ. ಇವರು ಕ್ರಮೇಣ ಸಮಾಜ, ರಾಷ್ಟ್ರ ಮತ್ತು ಧರ್ಮದ ಬಗ್ಗೆ ಯೋಚಿಸುವ ಸಜ್ಜನರು, ಭಕ್ತರು ಅಥವಾ ಸಾಧಕರಾಗುತ್ತಾರೆ. ಉದಾಹರಣೆಗೆ : ಬಡವರಿಗೆ ಸಹಾಯ ಮಾಡುವುದು ಅಥವಾ ಭಕ್ತಿಯಿಂದ ಪೂಜೆ ಮಾಡುವುದು.
೨ ಈ. ಯೋಗಮಾಯೆ : ಈಶ್ವರನು ಭೂಮಿಯ ಮೇಲೆ ಅವತಾರವೆತ್ತಿದಾಗ, ತನ್ನ ಅವತಾರಿ ಲೀಲೆಗಳನ್ನು ನಡೆಸಲು ಪ್ರಕಟವಾಗುವ ಮಾಯೆಯೇ ‘ಯೋಗಮಾಯೆ’. ಇದರ ಪ್ರಭಾವದಿಂದ ಭಕ್ತರು ಈಶ್ವರನೊಂದಿಗೆ ವಿಧವಿಧದ ಭಕ್ತಿ ಸಂಬಂಧಗಳನ್ನು (ಉದಾ : ತಾಯಿ-ಮಗ, ಗೆಳೆಯ) ಬೆಳೆಸಿಕೊಳ್ಳುತ್ತಾರೆ. ಅವತಾರ ಮುಕ್ತಾಯವಾಗುವ ಮುನ್ನ ಭಕ್ತರಿಗೆ ಈಶ್ವರನ ನಿಜವಾದ ತತ್ವದ ಸಾಕ್ಷಾತ್ಕಾರವಾಗಿ ಅವರಿಗೆ ಮುಕ್ತಿ ಲಭಿಸುತ್ತದೆ. ಉದಾಹರಣೆಗೆ : ದೇವಕಿ ಮತ್ತು ಯಶೋದೆಯ ಮೇಲೆ ಯೋಗಮಾಯೆಯ ಪ್ರಭಾವವಿದ್ದುದರಿಂದ ಅವರಿಗೆ ಶ್ರೀಕೃಷ್ಣನು ತಮ್ಮ ಮಗನೆಂದೇ ಅನಿಸುತ್ತಿತ್ತು. ಕೊನೆಯಲ್ಲಿ ಮಾಯೆ ಸರಿದಾಗ ಅವರಿಗೆ ಕೃಷ್ಣನು ಸಾಕ್ಷಾತ್ ವಿಷ್ಣುವೆಂದು ಅರಿವಾಗಿ ಅವರಿಗೆ ಮುಕ್ತಿ ದೊರೆಯಿತು.
೩. ವಿವಿಧ ಮಾಯೆಗಳ ತುಲನಾತ್ಮಕ ವೈಶಿಷ್ಟ್ಯಗಳು (ಸಂಕ್ಷಿಪ್ತವಾಗಿ)

೪. ಸಕಾಮ ಸಾಧನೆ ಮತ್ತು ನಿಷ್ಕಾಮ ಸಾಧನೆಯ ನಡುವಿನ ವ್ಯತ್ಯಾಸ

೫. ಸಕಾಮ ಸಾಧನೆಯ ಮಿತಿ ಮತ್ತು ನಿಷ್ಕಾಮ ಸಾಧನೆಯ ಮಹತ್ವ
ಸಕಾಮ ಸಾಧನೆ ಮಾಡುವ ಜೀವಿಯು ರಾಜಸಿಕ ಅಥವಾ ಸಾತ್ವಿಕ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಆದರೆ ಈಶ್ವರಪ್ರಾಪ್ತಿಗಾಗಿ ನಿಷ್ಕಾಮ ಸಾಧನೆ ಮಾಡಿದಾಗ, ಜೀವಿಯ ಮೇಲಿರುವ ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಮಾಯೆಯ ಪರದೆಗಳು ಒಂದೊಂದಾಗಿ ಸರಿಯುತ್ತವೆ. ಕೊನೆಯಲ್ಲಿ ಯೋಗಮಾಯೆಯೂ ಸರಿದು ಜೀವವು ಎಲ್ಲ ಬಂಧನಗಳಿಂದ ಮುಕ್ತವಾಗಿ ಮೋಕ್ಷವನ್ನು ಪಡೆಯುತ್ತದೆ.
’ಸಕಾಮ ಸಾಧನೆಯು’ ಮಾಯೆಯ ಭಾಗವಾಗಿದ್ದು ’ನಿಷ್ಕಾಮ ಸಾಧನೆಯು’ ಮಾಯೆಯಿಂದ ಹೊರಬರುವ ಭಾಗವಾಗಿದೆ.
‘ಶ್ರೀ ಗುರುಕೃಪೆಯಿಂದಲೇ ನನಗೆ ಈ ಅಂಶಗಳು ಅರಿವಿಗೆ ಬಂದದ್ದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.’
– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೧೧.೨೦೨೫)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !