ಬಲವಂತದ ಮತಾಂತರದ ಬಗ್ಗೆ ನ್ಯಾಯಾಲಯ ಮತ್ತು ಪೊಲೀಸರ ಮೌನ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಸಂಘಟಿತ ಮತ್ತು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಅಪ್ರಾಪ್ತ ಬಾಲಕಿಯರ ಅಪಹರಣ, ಬಲವಂತದ ಮತಾಂತರ ಮತ್ತು ನಂತರ ಮದುವೆಗಾಗಿ ಒತ್ತಡ ಹೇರುವ ಘಟನೆಗಳು ಸತತವಾಗಿ ನಡೆಯುತ್ತಿವೆ. ಭಿಲ್, ಮೇಘವಾರ ಮತ್ತು ಕೋಲ್ಹಿಯಂತಹ ಅತ್ಯಂತ ಬಡ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿಂದೂ ಸಮುದಾಯದ ಹೆಣ್ಣುಮಕ್ಕಳನ್ನೇ ಗುರಿಯಾಗಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಂತಹ ಕುಟುಂಬಗಳಿಗೆ ಸುದೀರ್ಘ ಕಾನೂನು ಹೋರಾಟ ನಡೆಸಲು ಸಾಧ್ಯವಿಲ್ಲ ಮತ್ತು ಮಾಧ್ಯಮಗಳ ಅಥವಾ ಅಧಿಕಾರ ಕೇಂದ್ರಗಳ ಸಂಪರ್ಕವೂ ಅವರಿಗಿರುವುದಿಲ್ಲ. ದರ್ಗಾಗಳು ಮತ್ತು ಮದರಸಾಗಳಿಗೆ ಸಂಬಂಧಿಸಿದ ಜಾಲಗಳ ಮೂಲಕ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ‘ಪೀರ್ ಸರ್ಹಿಂದಿ’ ದರ್ಗಾಕ್ಕೆ ಸಂಬಂಧಿಸಿದವರು ಇದುವರೆಗೆ ಸುಮಾರು 1,೦೦೦ ಹಿಂದೂ ಹುಡುಗಿಯರನ್ನು ಮತಾಂತರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯು ಹೆಚ್ಚಾಗಿ ನೇರ ಅಪಹರಣದಿಂದ ಅಥವಾ ಭಯ ಮತ್ತು ಒತ್ತಡದ ಮೂಲಕ ನಡೆಯುತ್ತದೆ. ಅಪ್ರಾಪ್ತ ಹುಡುಗಿಯರಿಗೆ ಮದುವೆ, ಉದ್ಯೋಗ ಅಥವಾ ಆರ್ಥಿಕ ಭದ್ರತೆಯ ಸುಳ್ಳು ಭರವಸೆಗಳನ್ನು ನೀಡಲಾಗುತ್ತದೆ. ಅನೇಕ ಬಾರಿ ಬೆದರಿಕೆ ಹಾಕಿ ಮನೆ ಬಿಟ್ಟು ಹೋಗುವಂತೆ ಅನಿವಾರ್ಯಗೊಳಿಸಲಾಗುತ್ತದೆ. ಇಂತಹ ಹುಡುಗಿಯರನ್ನು ಕೂಡಲೇ ಬೇರೆ ಜಿಲ್ಲೆಗೆ ಕರೆದೊಯ್ಯಲಾಗುತ್ತದೆ. ಹುಡುಗಿಯರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಳ್ಳಬೇಕು, ಯಾವುದೇ ವಕೀಲರು ಅಥವಾ ಸಾಮಾಜಿಕ ಕಾರ್ಯಕರ್ತರವರೆಗೆ ತಲುಪ ಬಾರದು ಮತ್ತು ಸ್ಥಳೀಯ ಮಾಧ್ಯಮಗಳ ಗಮನ ಸೆಳೆಯಬಾರದೆಂಬುದೇ ಈ ಶೀಘ್ರ ಸ್ಥಳಾಂತರದ ಉದ್ದೇಶವಾಗಿದೆ.
ಮಸೀದಿ, ದರ್ಗಾ ಮತ್ತು ಮದರಸಾಗಳಲ್ಲಿ ಮತಾಂತರ
ಮತಾಂತರವು ಪ್ರಮುಖವಾಗಿ ಕೆಲವು ನಿರ್ದಿಷ್ಟ ಮಸೀದಿ, ದರ್ಗಾ ಅಥವಾ ಮದರಸಾಗಳಲ್ಲಿ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಮೂಲಭೂತವಾದಿ ಸಂಘಟನೆಗಳು ಸಕ್ರಿಯ ಪಾತ್ರ ವಹಿಸುತ್ತವೆ ಮತ್ತು ನಿಯೋಜಿತ ರೀತಿಯಲ್ಲಿ ಮುಂದೆ ಸಾಗುತ್ತವೆ. ಇನ್ನೊಂದು ಗಂಭೀರ ವಿಷಯವೆಂದರೆ ದಾಖಲೆಗಳ ತಿದ್ದುಪಡಿ. ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿ, ಅಪ್ರಾಪ್ತ ಹುಡುಗಿಯರ ವಯಸ್ಸನ್ನು ಬದಲಾಯಿಸಿ ಅವರನ್ನು ವಯಸ್ಕರು ಎಂದು ತೋರಿಸಲಾಗುತ್ತದೆ.
ಬಾಲ್ಯ ವಿವಾಹ ಕಾಯ್ದೆಯ ಉಲ್ಲಂಘನೆ
ತಿದ್ದುಪಡಿ ಮಾಡಲಾದ ಈ ನಕಲಿ ದಾಖಲೆಗಳನ್ನು ಬಳಸಿ ಸಿಂಧ್‌ನ ಬಾಲ್ಯ ವಿವಾಹ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲಾಗುತ್ತದೆ. ಮತಾಂತರಗೊಂಡ 3-4 ದಿನಗಳಲ್ಲೇ ಹುಡುಗಿಯ ಮದುವೆ ಮಾಡಿಸಲಾಗುತ್ತದೆ. ಹಲವು ಬಾರಿ ಈ ನಿಕಾಹ್ ವಯಸ್ಸಾದ ವ್ಯಕ್ತಿ ಅಥವಾ ಈಗಾಗಲೇ ಮದುವೆಯಾಗಿರುವ ಪುರುಷನೊಂದಿಗೆ ನಡೆಯುತ್ತದೆ. ಈ ಮೂಲಕ ಇಡೀ ಪ್ರಕರಣವು ಕಾನೂನುಬದ್ಧವಾಗಿದೆ ಎಂಬಂತೆ ತೋರಿಸಲಾಗುತ್ತದೆ.
ಆರೋಪಿಗಳ ಪರವಿರುವ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ
ನ್ಯಾಯಾಂಗ ಪ್ರಕ್ರಿಯೆಯು ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತಿದೆ. ಅನೇಕ ಬಾರಿ ಪೀಡಿತ ಹುಡುಗಿಯರ ಹೇಳಿಕೆಗಳನ್ನು ಒತ್ತಡದ ಮೇಲೆ ದಾಖಲಿಸಲಾಗುತ್ತದೆ. ಆದರೂ ಪೊಲೀಸರು ಮತ್ತು ನ್ಯಾಯಾಲಯಗಳು ‘ಸ್ವಯಂಪ್ರೇರಿತ ಮತಾಂತರ’ ಎಂಬ ವಾದವನ್ನು ಆಳವಾಗಿ ತನಿಖೆ ಮಾಡದೆ ಮಾನ್ಯ ಮಾಡುತ್ತವೆ. ಒಮ್ಮೆ ನ್ಯಾಯಾಲಯ ಮತಾಂತರಕ್ಕೆ ಮಾನ್ಯತೆ ನೀಡಿದರೆ, ಆ ನಿರ್ಧಾರವನ್ನು ಬದಲಿಸುವುದು ಅಸಾಧ್ಯವಾಗುತ್ತದೆ. ಇದರಿಂದ ಪೀಡಿತ ಕುಟುಂಬಗಳಿಗೆ ಕಾನೂನು ಹೋರಾಟದ ದಾರಿಗಳು ಮುಚ್ಚಿಹೋಗುತ್ತವೆ. ಪಾಕಿಸ್ತಾನದ ವ್ಯವಸ್ಥೆಯು ಎಷ್ಟರಮಟ್ಟಿಗೆ ಹದಗೆಟ್ಟಿದೆಯೆಂದರೆ, ಅಲ್ಲಿನ ಸರ್ಕಾರವು ಮೂಲಭೂತವಾದಿ ಆರೋಪಿಗಳ ಪರವಾಗಿಯೇ ನಿಂತಂತೆ ಕಾಣುತ್ತದೆ. ಪರಿಣಾಮವಾಗಿ ಅಲ್ಪಸಂಖ್ಯಾತ ಹುಡುಗಿಯರು ಇಂತಹ ಸುಳಿಗೆ ಸಿಲುಕುತ್ತಾರೆ, ಇದರಿಂದ ಹೊರಬರುವುದು ಬಹಳ ಕಠಿಣವಾಗುತ್ತದೆ. ಇದಕ್ಕಿಂತಲೂ ಕಠಿಣವಾದದ್ದು ಎಂದರೆ ಈ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಎದುರಿಸುವುದು. ಪಾಕಿಸ್ತಾನದಲ್ಲಿ ಇಂತಹ ಪ್ರಕರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ದಾಖಲಿಸಲಾಗಿವೆ.
ಮತಾಂತರದ ನಂತರ 7 ಮಕ್ಕಳ ತಂದೆಯೊಂದಿಗೆ ಅಪ್ರಾಪ್ತ ಹಿಂದೂ ಹುಡುಗಿಯ ವಿವಾಹ
ಅಕ್ಟೋಬರ್ 2025 ರಲ್ಲಿ ಸಿಂಧ್ ಪ್ರಾಂತ್ಯದ 15 ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯೊಬ್ಬಳನ್ನು 7 ಮಕ್ಕಳ ತಂದೆಯೊಂದಿಗೆ ಮದುವೆ ಮಾಡಿಸಲಾಯಿತು. ಆ ಹುಡುಗಿಯನ್ನು ಇಸ್ಲಾಂಗೆ ಮತಾಂತರಿಸಲಾಗಿತ್ತು. “ತನ್ನ ಮಾತುಬಾರದ ಮಗಳು ಒಬ್ಬ ಮಾದಕವಸ್ತು ಕಳ್ಳಸಾಗಾಣಿಕೆದಾರ ಮತ್ತು 7 ಮಕ್ಕಳ ತಂದೆಯನ್ನು ಮದುವೆಯಾಗಲು ಎಂದಿಗೂ ಒಪ್ಪಲು ಸಾಧ್ಯವಿಲ್ಲ, ಇದು ಬಲವಂತವಾಗಿ ನಡೆದಿದೆ” ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಪಾಕಿಸ್ತಾನದ ಹಿಂದೂ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಶಿವ ಕಚ್ಚಿ ಅವರು, ಅಪಹರಣದ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
‘ಕಲಿಯಬೇಕೆಂದರೆ ಮುಸಲ್ಮಾನರಾಗಿ’ ಎಂಬ ಬೆದರಿಕೆ
ಪಾಕಿಸ್ತಾನದಲ್ಲಿ ಮೂಲಭೂತವಾದ ಎಷ್ಟರ ಮಟ್ಟಿಗಿದೆ ಎಂದರೆ, ಹಿಂದೂ ಹುಡುಗಿಯರು ಶಿಕ್ಷಣ ಪಡೆಯಬೇಕಾದರೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಶಾಲೆಗಳಲ್ಲಿ ಒತ್ತಡ ಹೇರಲಾಗುತ್ತಿದೆ. ಡಿಸೆಂಬರ್ 2025 ರಲ್ಲಿ ಸಿಂಧ್ ಪ್ರಾಂತ್ಯದ ಮೀರ್‌ಪುರ್ ಸಕ್ರೋದ ಸರಕಾರಿ ಪ್ರೌಢಶಾಲೆಯಲ್ಲಿ ಇಂತಹ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರಿಸಬೇಕಿದ್ದರೆ ಇಸ್ಲಾಂ ಸ್ವೀಕರಿಸಬೇಕೆಂದು ಹೇಳಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ‘ಕಲ್ಮಾ’ (ಅಲ್ಲಾನ ಗೌರವಾರ್ಥವಾಗಿರುವಂತಹ ಸಾಲುಗಳು) ಹೇಳುವಂತೆ ಒತ್ತಾಯಿಸಲಾಯಿತು ಮತ್ತು ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಲಾಯಿತು. ನಿರಾಕರಿಸಿದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಮನೆಗೆ ಕಳುಹಿಸಲಾಯಿತು.
12 ವರ್ಷಗಳಲ್ಲಿ 14,೦೦೦ ಹಿಂದೂ ಹುಡುಗಿಯರ ಅಪಹರಣ-ಮತಾಂತರ
ಸಿಂಧ್‌ನಲ್ಲಿ ಹಿಂದೂಗಳ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ, ಅನೇಕರು ಹೇಗಾದರೂ ಮಾಡಿ ಪಾಕಿಸ್ತಾನವನ್ನು ಬಿಡಲು ಬಯಸುತ್ತಿದ್ದಾರೆ. ಭಾರತದ ವೀಸಾ ಸಿಗದ ಕಾರಣ ಕೆಲವು ಹಿಂದೂಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ವರದಿಯಾಗಿವೆ. 2023 ರಲ್ಲಿ ಸಿಂಧ್ ಪ್ರಾಂತ್ಯದಲ್ಲಿ ‘ಗಾಡಿಯ ಲುಹಾರ್ ಸಹಾಯ ಸಮಿತಿ’ ಯ ಅಧ್ಯಕ್ಷ ಮಾಂಜಿ ಲುಹಾರ್ ಅಲಿಯಾಸ್ ಕಾಕಾ ಅವರು, ಕಳೆದ 6 ತಿಂಗಳಲ್ಲಿ ನನ್ನ 4 ಪರಿಚಿತ ಹಿಂದೂಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತರಾದ ರೋಷನ್ ಭಿಲ್ ಅವರು, ಪ್ರತಿವೊಬ್ಬ ಹಿಂದೂ ಕುಟುಂಬ ತಮ್ಮ ಭೂತಕಾಲ ಮರೆಯಬೇಕು ಎಂದು ಬಯಸುತ್ತಾರೆ, ಆದರೆ ಹಾಗೆ ಆಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಕಳೆದ 12 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ 14,೦೦೦ ಹಿಂದೂ ಹುಡುಗಿಯರ ಅಪಹರಣ, ಬಲವಂತದ ಮತಾಂತರ ಮತ್ತು ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು ಬಹಿರಂಗವಾಗಿವೆ.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಹಿಂದೂಗಳ ರಕ್ಷಣೆ ಇದುವರೆಗೆ ಸಾಧ್ಯವಾಗಿಲ್ಲ ಮತ್ತು ಈಗಿನ ಸ್ಥಿತಿಯನ್ನು ನೋಡಿದರೆ ಮುಂದೆಯೂ ಸಾಧ್ಯವಿರುವಂತೆ ಕಾಣುತ್ತಿಲ್ಲ. ಹೀಗೇ ಮುಂದುವರಿದರೆ ಭವಿಷ್ಯದಲ್ಲಿ “ಪಾಕಿಸ್ತಾನದಲ್ಲಿ ಹಿಂದೂಗಳೂ ವಾಸಿಸುತ್ತಿದ್ದರು” ಎಂದು ಭೂತಕಾಲದಲ್ಲಿ ಹೇಳಬೇಕಾದ ಪರಿಸ್ಥಿತಿ ಬರಬಹುದು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ