
ಒಬ್ಬ ಮಹಿಳಾ ರೋಗಿಯ ತಾಯಿ ತನ್ನ ಬಗ್ಗೆ ಮಾತನಾಡುತ್ತಾ ”ಈಗಿನ ಪೀಳಿಗೆಯವರಿಗೆ ಏನಾಗಿದೆಯೋ ತಿಳಿಯದು. ನಮ್ಮ ಕಾಲದಲ್ಲಿ ನಾವು ಎಷ್ಟು ಕೆಲಸಗಳನ್ನು ಮಾಡುತ್ತಿದ್ದೆವು, ಎಲ್ಲವು ಆಗುತ್ತಿದ್ದವು; ಆನಂದದಲ್ಲಿಯೂ ಇರುತ್ತಿದ್ದೆವು. ಈಗ ಇವರಿಗೆ ಎಲ್ಲಾ ಸೌಲಭ್ಯಗಳಿವೆ, ಹಣವಿದೆ, ಆದರೂ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾರೆ ಮತ್ತು ಸಂತೋಷದಿಂದಲೂ ಇರುವುದಿಲ್ಲ” ಎಂದು ಹೇಳಿದರು. ನಾನು ಭೇಟಿಯಾಗುವ ರೋಗಿಗಳನ್ನು ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗಿ ಗಮನಕ್ಕೆ ಬಂದಿತು. ಅದೇನೆಂದರೆ, ಈ ಒತ್ತಡವು ಕೇವಲ ಕೆಲಸಕ್ಕೆ ಸಂಬಂಧಿಸಿದ್ದಲ್ಲ. ರಸ್ತೆಯಲ್ಲಿ ಕೇವಲ ೧೦೦ ಮೀಟರ್ ದೂರವನ್ನು ಕ್ರಮಿಸಲು ತಗಲುವ ೧೫ ನಿಮಿಷಕ್ಕೆ ಸಂಬಂಧಿಸಿದೆ; ಮನೆ, ಕಚೇರಿ ಅಥವಾ ವ್ಯವಹಾರದಲ್ಲಿ ತನ್ನದೇ ಆದ ಛಾಪು ಮೂಡಿಸಲು ಮಾಡುವ ನಿರಂತರ ಪ್ರಯತ್ನದ್ದಾಗಿದೆ; ‘Trying to fit in’ ಭರದಲ್ಲಿ ಪ್ರತಿಯೊಂದು ’ಟೀಮ್ ಔಟಿಂಗ್’(ಪ್ರವಾಸ) ಮತ್ತು ‘ಗೆಟ್ ಟುಗೆದರ್’(ಸ್ನೇಹ ಸಮ್ಮೇಳನ)ಗಳಿಗೆ ಹೋಗುವುದಾಗಿದೆ; ಸಹೋದ್ಯೋಗಿಯೊಬ್ಬರು ಹಠಾತ್ತನೆ ಹೃದಯಾಘಾತದಿಂದ ನಿಧನರಾದಾಗ ಉಂಟಾಗುವ ಭಯದ್ದಾಗಿದೆ.
ವಿಭಕ್ತ ಕುಟುಂಬ ಪದ್ಧತಿಯಿಂದಾಗಿ ‘ನಮಗೆ ಏನಾದರೂ ಆದಲ್ಲಿ ನಮ್ಮ ಮಕ್ಕಳ ಗತಿ ಏನು ?’ ಎಂಬ ಆತಂಕದ್ದಾಗಿದೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗಲೂ ಪ್ರತಿಯೊಬ್ಬರೂ ನಿರಂತರವಾಗಿ ಜೋರಾಗಿ, ಮನಬಂದಂತೆ ಹಾರ್ನ್ ಬಾರಿಸುವುದರಿಂದ ಉಂಟಾಗುವ ಕಿರಿಕಿರಿಯದ್ದಾಗಿದೆ. ಈ ತೊಂದರೆಗಳಿಂದ ಯಾರೂ ತಪ್ಪಿಸಿಕೊಂಡಿಲ್ಲ.
ಆಯುರ್ವೇದದಲ್ಲಿ ಶರೀರಕ್ಕೆ ಆದ್ಯತೆ ನೀಡಿ ಔಷಧೋಪಚಾರ
ಶರೀರದ ಬಗ್ಗೆ ಹೇಳುವುದಾದರೆ, ಇಂದಿನ ದಿನಗಳಲ್ಲಿ ಸಣ್ಣ ಶೀತ ಅಥವಾ ಕೆಮ್ಮು ಕೂಡ ತಿಂಗಳುಗಟ್ಟಲೆ ಇರುತ್ತದೆ ಎಂಬ ಅನುಭವ ನಿಮಗೆ ಬಂದಿರಬಹುದು. ಇದರಿಂದ ಪ್ರಾಣಾಪಾಯ ಸಂಭವಿಸುತ್ತದೆಯೇ ? ಬಹಳಷ್ಟು ಸಲ ಇಲ್ಲ. ಆದರೆ ಇದು ತೊಂದರೆದಾಯಕವೇ ? ಖಂಡಿತವಾಗಿಯೂ ಹೌದು. ಇವುಗಳ ವಿರುದ್ಧ ಹೋರಾಡಲು ಶರೀರದ ಮೇಲೆ ನಿರಂತರವಾಗಿ ಅತಿಯಾದ ಔಷಧಗಳಿಂದ ದಾಳಿ ಮಾಡಲಾಗುತ್ತದೆ. ಹಾಗಾದರೆ ಔಷಧಗಳನ್ನು ತೆಗೆದುಕೊಳ್ಳಬಾರದೇ ? ಖಂಡಿತವಾಗಿ ತೆಗೆದುಕೊಳ್ಳಬೇಕು, ಆದರೆ ನಮಗೆ ಹೆಚ್ಚು ಉಪಯುಕ್ತವಾದ, ಅಷ್ಟೇ ವೇಗವಾಗಿ ಕೆಲಸ ಮಾಡುವ ಮತ್ತು ಅಡ್ಡಪರಿಣಾಮಗಳಿಲ್ಲದ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಆಯುರ್ವೇದದಲ್ಲಿ ಯಾವಾಗಲೂ ಶರೀರಕ್ಕೆ ಆದ್ಯತೆ ನೀಡಿ ಆಯಾ ರೋಗಕ್ಕೆ ಔಷಧಗಳನ್ನು ನೀಡಲಾಗುತ್ತದೆ. ಇವು ರೋಗದ ಲಕ್ಷಣಗಳನ್ನು ತಕ್ಷಣವೇ ಕಡಿಮೆ ಮಾಡಿ ಶರೀರದಲ್ಲಿ ರೋಗವು ಮತ್ತೆ ಬೆಳೆಯಲು ಬಿಡುವುದಿಲ್ಲ. ಇದು ಸಾಧ್ಯವಾದರೆ, ರೋಗವು ತಾನಾಗಿಯೇ ನಿಯಂತ್ರಣಕ್ಕೆ ಬರುತ್ತದೆ.

ಸಣ್ಣಪುಟ್ಟ ರೋಗಗಳಿಂದ ಹೆಚ್ಚಿನ ತೊಂದರೆಯಾಗುತ್ತದೆ ಮತ್ತು ಹೊರಗಡೆ ಕಾಣಿಸದಂತೆ ಶರೀರದ ಒಳಗಡೆ ಗಂಭೀರ ಬದಲಾವಣೆಗಳು ನಡೆಯುವುದು. ಈ ಆಧುನಿಕ ಯುಗದ ಫಲಗಳಾಗಿವೆ. ಈ ಎಲ್ಲ ಗದ್ದಲದಲ್ಲಿ ನಮ್ಮ ಶರೀರದ ಮೇಲೆ ಪರಿಣಾಮ ಬೀರುತ್ತಿರುವುದು ಮೊದಲು ತಿಳಿಯುವುದಿಲ್ಲ ಮತ್ತು ತಿಳಿದ ಕೂಡಲೇ ಅದಕ್ಕೆ ಆವಶ್ಯಕವಿರುವಷ್ಟು ಗಮನ ಹರಿಸಲು ಅಥವಾ ನಮ್ಮ ಮನಸ್ಸಿಗೆ ನಿಶ್ಚಿಂತತೆಯನ್ನು ನೀಡುವಲ್ಲಿ ಹಿಂದೆ ಬೀಳುತ್ತೇವೆ. ಏಕೆಂದರೆ ಸಮಯದ ಕೊರತೆ, ನಾವು ಸಮಯವನ್ನು ನೀಡಲು ಪ್ರಯತ್ನಿಸಿದರೂ, ಸಾಧ್ಯವಾಗುವುದಿಲ್ಲ. ಏಕೆಂದರೆ ಮನಸ್ಸಿನಲ್ಲಿ ಅಂತಹ ಶಾಂತಿಯೇ ಇರುವುದಿಲ್ಲ. ಇದರಿಂದ ಶರೀರದಲ್ಲಿ ರೋಗಗಳು ನೆಲೆಗೊಳ್ಳಲು ಸುಲಭವಾಗುತ್ತಿದೆ. ಹೊಲದಲ್ಲಿಯೇ ಪೌಷ್ಟಿಕ ಆಹಾರ ಬೆಳೆಯದ ಕಾರಣ ದುರ್ಬಲಗೊಳ್ಳುತ್ತಿರುವ ಮುಂದಿನ ಪೀಳಿಗೆಯಿಂದ ಹಿಡಿದು, ನಮ್ಮ ಅನಿವಾರ್ಯವಾಗಿ ಬದಲಾದ ದಿನಚರಿಯವರೆಗೆ ಎಲ್ಲ ವಿಷಯಗಳಿಂದ ಇದು ನಡೆಯುತ್ತದೆ. ಆಯುರ್ವೇದದಲ್ಲಿ ’ಎಲ್ಲವನ್ನೂ ಬದಿಗಿಟ್ಟು ಮೊದಲು ಶರೀರದ ಕಡೆಗೆ ಗಮನ ಹರಿಸಬೇಕು’ ಎಂದು ಹೇಳಲಾಗಿದೆ. ಶರೀರದ ಮೇಲಾಗುವ ಪರಿಣಾಮಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಜಾಗರೂಕತೆ
ಕುತ್ತಿಗೆ ನೋವು, ತಲೆನೋವು, ಮೈಕೈ ನೋವು, ಅತಿಯಾದ ನಿದ್ರೆ ಅಥವಾ ನಿದ್ರಾಹೀನತೆ ಇವು ಇತ್ತೀಚೆಗೆ ಸಾಮಾನ್ಯ ಲಕ್ಷಣಗಳಾಗಿವೆ. ಇವುಗಳಿಗೆ ಔಷಧಗಳಿವೆ, ಈ ಲಕ್ಷಣಗಳು ನಿರಂತರವಾಗಿರುವುದರಿಂದ ಮತ್ತು ಕೇವಲ ತಾತ್ಕಾಲಿಕವಾಗಿ ಕಡಿಮೆ ಮಾಡಿ ಮುಂದೆ ಯಾವುದೇ ಉಪಾಯಗಳನ್ನು ಕೈಗೊಳ್ಳದಿದ್ದರೆ ಹೃದ್ರೋಗ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಇನ್ನಿತರ ಪರಿಣಾಮಗಳನ್ನು ತಡೆಯಲು ಕೆಲವು ಅಂಶಗಳು ಇಲ್ಲಿವೆ:
೧. ಎರಡು ದಿನಗಳ ಹಿಂದೆ ಸಿದ್ಧಪಡಿಸಿದ ಆಹಾರ, ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಬಿಸಿ ಆಹಾರ, ಅತಿಯಾದ ಖಾರ ಸೇವನೆ ಶರೀರಕ್ಕೆ ಅಪಾಯಕಾರಿ. ಇವು ಶರೀರದಲ್ಲಿ ಸರಿಪಡಿಸಲಾಗದಂತಹ ಬದಲಾವಣೆಗಳನ್ನು ತರುತ್ತವೆ. ವಯಸ್ಸಾದಂತೆ ಈ ತೊಂದರೆಗಳು ಇನ್ನು ಹೆಚ್ಚಾಗುತ್ತವೆ.
೨. ವೈದ್ಯರೊಂದಿಗೆ ಸಮಾಲೋಚಿಸಿ ಕೆಲವು ’ರಾಸಾಯನಿಕ’ ಔಷಧಗಳನ್ನು ಪ್ರಾರಂಭಿಸಬಹುದು. ನಿಮ್ಮ ವೃತ್ತಿಗೆ ಅನುಗುಣವಾಗಿ ಇವು ಅನಿವಾರ್ಯ ದುಷ್ಪರಿಣಾಮಗಳನ್ನು ಹತೋಟಿಯಲ್ಲಿಡುತ್ತವೆ. ಶರೀರದಲ್ಲಿ ಇಂತಹ ಬದಲಾವಣೆಗಳನ್ನು ತರುವ ಔಷಧಿಗಳಿವೆ ಇದರಿಂದ ಅಧಿಕ ತೊಂದರೆಯೇನೂ ಆಗುವುದಿಲ್ಲ ಹಾಗೂ ನೋವು ಕಡಿಮೆಯಾಗುತ್ತದೆ.
೩. ಮೆದುಳು, ವಿಚಾರ ಮತ್ತು ಮನಸ್ಸಿನ ಮೇಲೆ ಕೆಲಸ ಮಾಡುವ ಔಷಧಗಳ ಬಗ್ಗೆ ವಿಚಾರ ಮಾಡಬೇಕು. ನಿದ್ರೆ ಸರಿಯಾಗಿ ಬರದಿದ್ದರೆ ತಲೆಗೆ ಔಷಧಯುಕ್ತ ತೈಲವನ್ನು ಹಚ್ಚುವುದು ಅಥವಾ ವೈದ್ಯರ ಸಲಹೆಯಂತೆ ಬ್ರಾಹ್ಮಿ, ಅಶ್ವಗಂಧ, ಆಮ್ಲದಂತಹ ಸಸ್ಯಜನ್ಯ ಔಷಧಗಳನ್ನು ಬಳಸುವುದು ಉಪಯುಕ್ತವಾಗಿದೆ.

೪. ಪ್ರತಿದಿನದ ಪ್ರಯಾಣದಿಂದ ಉಂಟಾಗುವ ವಾತದೋಷ, ಮಾನಸಿಕ ತೊಂದರೆ ಮತ್ತು ಅದರಿಂದ ಬರುವ ಕೀಲು ನೋವುಗಳನ್ನು ತಡೆಯಲು ಮೈಗೆ ಎಣ್ಣೆ ಹಚ್ಚುವುದು (ಅಭ್ಯಂಗ), ವ್ಯಾಯಾಮ ಮತ್ತು ವಾರ್ಷಿಕ ’ಬಸ್ತಿ’ ಚಿಕಿತ್ಸೆ ಸಹಕಾರಿಯಾಗಿದೆ.
೫. ನಿಮ್ಮ ಹತೋಟಿಯಲ್ಲಿಲ್ಲದ ವಿಷಯಗಳ ಬಗ್ಗೆ ಉದಾ: ಜನದಟ್ಟಣೆ (ಟ್ರಾಫಿಕ್ ಜಾಮ್) ನಿಮ್ಮ ಮಕ್ಕಳ ಕ್ಷಮತೆ ಅಥವಾ ಯಾವುದೇ ಸಂಬಂಧಿಕರು ನಿಮ್ಮೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಇತ್ಯಾದಿ ವಿಷಯಗಳ ಮೇಲೆ ಕೋಪಗೊಳ್ಳುವುದನ್ನು ನಿಲ್ಲಿಸಿರಿ. ನಿಮ್ಮ ಹತೋಟಿಯಲ್ಲಿರುವ ವಿಷಯಗಳ ಮೇಲೆ ಮಾತ್ರ ಗಮನ ಹರಿಸಿರಿ.
೬. ‘ರ‍್ಯಾಶನಲ್ ಇಮೊಟಿವ್ ಬಿಹೇವಿಯರ್ ಥೆರಪಿ’ (ಆರ್. ಇ.ಬಿ.ಟಿ.- ತರ್ಕಶುದ್ಧ ಭಾವನಾತ್ಮಕ ನಡುವಳಿಕೆಯ ಮೇಲೆ ಉಪಚಾರ)ಯಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶಗಳನ್ನು ಬಹಳ ಚೆನ್ನಾಗಿ ಹೇಳಲಾಗಿದೆ. ’ಎ-ಬಿ-ಸಿ’ ಅಂದರೆ ‘ಎ’ (ಅಫೆಕ್ಟಿಂಗ ಇವೆಂಟ, ಪರಿಣಾಮ ಬೀರುವ ಘಟನೆ) ಅಂದರೆ ಸಂಭವಿಸಿದ ಘಟನೆ, ‘ಬಿ’ (ಬಿಲೀಫ್, ನಂಬಿಕೆ) ಅಂದರೆ ಆ ಘಟನೆಯ ಬಗ್ಗೆ ನಿಮಗೆ ಏನು ಅನಿಸಿತು ಮತ್ತು ‘ ಸಿ’ (ಕಾನ್ಸಿಕ್ವೆನ್ಸ ಪರಿಣಾಮ) ಅಂದರೆ ಅದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲು ಬಿಡುತ್ತೀರಿ ಎಂಬುದರ ಮೇಲೆ ಕೆಲಸ ಮಾಡಿರಿ. ಅದರ ಮೇಲೆ ‘ಬಿ’ ಮತ್ತು ‘ಸಿ’ ಮೇಲೆ ಕೆಲಸ ಮಾಡುವುದು.
೭. ಕೊನೆಯದಾಗಿ ಮತ್ತು ಮಹತ್ವದ್ದು, ಅಂದರೆ ದಿನಚರಿಯನ್ನು ರೂಢಿಸಿಕೊಳ್ಳುವುದು (ಸಮಯಕ್ಕೆ ಸರಿಯಾಗಿ ಮಲಗುವುದು, ಊಟ, ವ್ಯಾಯಾಮ ಮಾಡುವುದು) ಕನಿಷ್ಠ ಪ್ರಮಾಣದಲ್ಲಿ ರಾಸಾಯನಿಕ ಔಷಧಗಳನ್ನು ಬಳಸಿ ಮತ್ತು ಕೃತಕ ಹಾರ್ಮೋನ್ ಗಳನ್ನು ತೆಗೆದುಕೊಳ್ಳುವ ಮೊದಲು ಆಯುರ್ವೇದದಂತಹ ನೈಸರ್ಗಿಕ ಆಯ್ಕೆಗಳನ್ನು ಪರಿಶೀಲಿಸುವುದು. ತನ್ನ ದಿನಚರಿಯನ್ನು ಹೆಚ್ಚು ಶಿಸ್ತುಬದ್ಧಗೊಳಿಸುವುದರಿಂದ ಪ್ರತಿದಿನದ ಮನಸ್ತಾಪಗಳ ದೈಹಿಕ ಪರಿಣಾಮಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸಬಹುದು ಎಂದು ಖಂಡಿತವಾಗಿ ಹೇಳುತ್ತೇನೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !