|
|
|
’೨೨.೧೨.೨೦೨೫ ರಂದು ಸನಾತನದ ಸಂತರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ ಅವರು ದೇಹತ್ಯಾಗ ಮಾಡಿದರು. ಬಾಲ್ಯದಿಂದಲೇ ಅವರಿಗೆ ದೇವರು-ಧರ್ಮದ ಬಗ್ಗೆ ಅತೀವ ಆಸಕ್ತಿಯಿತ್ತು. ವಿವಾಹದ ನಂತರ ಪುಣೆಯ ಅತ್ತೆಮನೆಗೆ ಬಂದಾಗ ಅವರ ಆಧ್ಯಾತ್ಮಿಕ ಸೆಳೆತ ಮತ್ತು ಸೇವಾಭಾವವು ಹೆಚ್ಚಾಯಿತು. ಮಕ್ಕಳಲ್ಲಿ ಉತ್ತಮ ಸಂಸ್ಕಾರವಾಗಬೇಕೆಂದು ಅವರು ಸದಾ ಪ್ರಯತ್ನಿಸುತ್ತಿದ್ದರು. ಸನಾತನದ ಸಂಪರ್ಕಕ್ಕೆ ಬಂದ ನಂತರ ಅವರಿಗೆ ಮುಂದಿನ ಹಂತದ ಅಧ್ಯಾತ್ಮದ ಅರಿವಾಯಿತು ಮತ್ತು ಅವರು ಸ್ವತಃ ಕರ್ಮಕಾಂಡದ ಸಾಧನೆಯನ್ನು ಕಡಿಮೆ ಮಾಡಿದರು. ಪೂ. ದಾತೆ ಅಜ್ಜಿಯವರಿಂದಾಗಿ ಅವರ ಸಂಪೂರ್ಣ ಕುಟುಂಬವು ಪೂರ್ಣಕಾಲಿಕ ಸಾಧನೆಯಲ್ಲಿ ತೊಡಗಿಕೊಂಡಿತು ಮತ್ತು ಅವರ ಮನೆಯೇ ಪುಣೆಯ ಆಶ್ರಮವಾಗಿ ಪರಿವರ್ತನೆಯಾಯಿತು. ನಾನು ಪುಣೆಗೆ ಹೋದಾಗಲೆಲ್ಲಾ ಅವರ ಮನೆಯಲ್ಲಿಯೇ ಉಳಿಯುತ್ತಿದ್ದೆ. ಪೂ. ಅಜ್ಜಿಯವರು ಬಹಳ ಚೆನ್ನಾಗಿ ಅತಿಥಿಸತ್ಕಾರ ಮಾಡುವ ಗುಣದವರಾಗಿದ್ದುದರಿಂದ ಎಲ್ಲವನ್ನೂ ಬಹಳ ಭಾವಪೂರ್ಣವಾಗಿ ಮತ್ತು ಪ್ರೀತಿಯಿಂದ ಮಾಡುತ್ತಿದ್ದರು. ಅವರು ’ತ್ಯಾಗ ಮತ್ತು ಪ್ರೇಮಭಾವ’ದ ಸಾಕಾರ ಉದಾಹರಣೆಯಾಗಿದ್ದರು. ಪ್ರಸ್ತುತ ಪುಣೆಯಲ್ಲಿ ಅಧ್ಯಾತ್ಮ ಪ್ರಸಾರ ಕಾರ್ಯವು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದೆ; ಆದರೆ ಇದಕ್ಕೆ ಅಡಿಪಾಯ ಹಾಕಿದವರು ಪೂ. ಅಜ್ಜಿ ಮತ್ತು ದಾತೆ ಕುಟುಂಬದವರು.
ಸದ್ಗುರುಗಳ ಅದ್ವಿತೀಯತೆ
’ಸಾಧಕರು ಆಧ್ಯಾತ್ಮಿಕ ಉನ್ನತಿ ಸಾಧಿಸಿ ಶೇ. ೭೦ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪಿದಾಗ ಅವರನ್ನು ’ಸಂತರು’ ಎಂದು ಕರೆಯಲಾಗುತ್ತದೆ. ಸಂತರ ಆಧ್ಯಾತ್ಮಿಕ ಮಟ್ಟ ಶೇ. ೮೦ ತಲುಪಿದಾಗ ಅವರಿಗೆ ’ಸದ್ಗುರು’ ಪದವಿ ಮತ್ತು ಶೇ. ೯೦ ಕ್ಕಿಂತ ಹೆಚ್ಚಾದಾಗ ’ಪರಾತ್ಪರ ಗುರು’ ಪದವಿ ಲಭಿಸುತ್ತದೆ. ’ಸದ್ಗುರು’ ಮತ್ತು ’ಪರಾತ್ಪರ ಗುರು’ ಎಂದರೆ ಈಶ್ವರನ ನಡೆದಾಡುವ ರೂಪವೇ ಆಗಿದ್ದಾರೆ. ಅವರು ಸಾಧಕರನ್ನು ರೂಪಿಸುತ್ತಾರೆ ಮತ್ತು ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುತ್ತಾರೆ. ಅವರ ಉಚ್ಚ ಆಧ್ಯಾತ್ಮಿಕ ಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಅವರ ಜೀವನ ಈಶ್ವರನ ಇಚ್ಛೆಯಂತೆ ಸಾಗುತ್ತಿರುತ್ತದೆ. ಸನಾತನದ ಸದ್ಗುರುಗಳ ಕಾರ್ಯವು ಈಗ ಚೈತನ್ಯದ ಮಟ್ಟದಲ್ಲಿ ನಡೆಯುತ್ತಿದ್ದು, ಅದು ಹೆಚ್ಚು ಹೆಚ್ಚು ವ್ಯಾಪಕ ಮತ್ತು ಸೂಕ್ಷ್ಮವಾಗುತ್ತಿದೆ. ಸಾಧಕರೇ, ಆನಂದ ಮತ್ತು ಶಾಂತಿಯ ಸ್ಥಿತಿಯಲ್ಲಿರುವ ಸದ್ಗುರುಗಳ ಚೈತನ್ಯದ ಲಾಭ ಪಡೆದು ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿ ಸಾಧಿಸಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೦.೧೨.೨೦೨೫)
’ಶ್ರದ್ಧೆ, ನಿರಪೇಕ್ಷ ಪ್ರೀತಿ, ತ್ಯಾಗದ ಗುಣ, ಸದಾ ಇತರರ ಬಗ್ಗೆ ವಿಚಾರ ಮಾಡುವುದು ಮತ್ತು ಆಂತರಿಕ ಸಾಧನೆ’ ಈ ಗುಣಗಳಿಂದಾಗಿ ಅಜ್ಜಿಯವರು ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿ ಸಾಧಿಸಿದರು. ೨೦೧೦ ರಲ್ಲಿ ಶೇ. ೬೧ ರಷ್ಟು ಮಟ್ಟವನ್ನು ತಲುಪಿದ ಅವರು, ಕೇವಲ ೫ ವರ್ಷಗಳಲ್ಲಿ ಅಂದರೆ ೨೦೧೫ ರಲ್ಲಿ ಶೇ. ೭೧ ರಷ್ಟು ಮಟ್ಟವನ್ನು ತಲುಪಿ ಸನಾತನದ ’ಸಂತ’ ಪದವಿಯನ್ನು ಅಲಂಕರಿಸಿದರು.
ನವೆಂಬರ್ ೨೦೨೨ ರಿಂದ ಅವರು ಗೋವಾದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯಕ್ಕೆ ಬಂದಿದ್ದರು. ಕಳೆದ ಒಂದೂವರೆ ವರ್ಷದಿಂದ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಈ ಸ್ಥಿತಿಯಲ್ಲೂ ಅವರ ಆಂತರಿಕ ಸಾಧನೆ ನಿರಂತರವಾಗಿ ನಡೆಯುತ್ತಿತ್ತು. ಸಾಧನೆಯ ಕಾರಣದಿಂದ ಅವರ ದೇಹದಲ್ಲಿ ಅನೇಕ ಒಳ್ಳೆಯ (ಸಕಾರಾತ್ಮಕ) ಬದಲಾವಣೆಗಳಾಗಿದ್ದವು. ಪೂ. ಅಜ್ಜಿಯವರು ನಿರ್ಗುಣ ಸ್ಥಿತಿಯತ್ತ ಸಾಗುತ್ತಿದ್ದರು ಮತ್ತು ಈ ಬಗ್ಗೆ ಅನೇಕ ಸಾಧಕರಿಗೆ ಅನುಭೂತಿಗಳು ಬಂದಿದ್ದವು. ಕೇವಲ ಜಾಗೃತ ಸ್ಥಿತಿಯಲ್ಲಿ ಮಾತ್ರವಲ್ಲ, ಅರೆಪ್ರಜ್ಞಾವಸ್ಥೆಯಲ್ಲೂ ಸಾಧನೆ ಮಾಡಿ ಸಾಧಕರಿಗೆ ಆದರ್ಶಪ್ರಾಯರಾದ ಪೂ. (ದಿ.) ನಿರ್ಮಲಾ ದಾತೆ ಅಜ್ಜಿಯವರು ಶೇ. ೮೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನದ ’ಸದ್ಗುರು’ ಪದವಿಯನ್ನು ಅಲಂಕರಿಸಿದ್ದಾರೆ.
ಸದ್ಗುರು (ದಿ.) ದಾತೆ ಅಜ್ಜಿಯವರ ಸೇವೆಯನ್ನು ಅಹೋರಾತ್ರಿ ಭಾವಪೂರ್ಣವಾಗಿ ಮಾಡಿದ ಮತ್ತು ಅವರ ಅನಾರೋಗ್ಯದ ಸಮಯದಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡಿದ ಅವರ ಕುಟುಂಬದವರು ಸಹ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅವರ ಆಧ್ಯಾತ್ಮಿಕ ಉನ್ನತಿಯೂ ವೇಗವಾಗಿ ಆಗುತ್ತಿದೆ.
’ಸಾಧನೆಯ ತೀವ್ರ ತಳಮಳ, ಭಾವ ಮತ್ತು ನಿರಪೇಕ್ಷ ಪ್ರೀತಿ’ ಹೊಂದಿರುವ ಸದ್ಗುರು (ದಿ.) ದಾತೆ ಅಜ್ಜಿ ಅವರ ಮುಂದಿನ ಸಾಧನೆಯೂ ಅತೀ ವೇಗವಾಗಿ ಸಾಗಲಿದೆ ಎಂಬ ಪೂರ್ಣವಿಶ್ವಾಸ ನನಗಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೩೦.೧೨.೨೦೨೫)

ಪೂ. (ಶ್ರೀಮತಿ) ನಿರ್ಮಲಾ ದಾತೆ ಅಜ್ಜಿ ಅವರ ದೇಹತ್ಯಾಗದ ದಿನದಂದು ಕಂಡುಬಂದ ಅಂಶಗಳು
’೨೨.೧೨.೨೦೨೫ ರಂದು ಸನಾತನದ ೪೮ ನೇ ವ್ಯಷ್ಟಿ ಸಂತರಾದ ಪೂ. (ಶ್ರೀಮತಿ) ನಿರ್ಮಲಾ ದಾತೆ ಅಜ್ಜಿ ಅವರು ದೇಹತ್ಯಾಗ ಮಾಡಿದರು. ಅವರ ದೇಹತ್ಯಾಗದ ದಿನದಂದು ಪೂ. ದಾತೆ ಅಜ್ಜಿ ಅವರ ಬಗ್ಗೆ ಕಂಡುಬಂದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.

೧. ಪೂ. ನಿರ್ಮಲಾ ದಾತೆ ಅಜ್ಜಿಯವರು ಪ.ಪೂ. ಡಾಕ್ಟರರ ಉಪಸ್ಥಿತಿಯಲ್ಲಿಯೇ ಕೊನೆ ಉಸಿರೆಳೆದರು
೨೨.೧೨.೨೦೨೫ ರ ಸಾಯಂಕಾಲ ಅಜ್ಜಿಯವರಿಗೆ ಉಸಿರಾಡಲು ತುಂಬಾ ತೊಂದರೆಯಾಗುತ್ತಿತ್ತು ಮತ್ತು ಅವರ ಪ್ರಾಣವಾಯುವಿನ ಮಟ್ಟ (Oxygen Level) ಕಡಿಮೆಯಾಗಿತ್ತು. ನಾವು ತಕ್ಷಣವೇ ಪ.ಪೂ. ಡಾಕ್ಟರರಿಗೆ ಆ ಸಂದೇಶವನ್ನು ಕಳುಹಿಸಿದೆವು. ಪ.ಪೂ. ಡಾಕ್ಟರರು ಬರುವ ಎರಡು ನಿಮಿಷಗಳ ಮೊದಲು ಅಜ್ಜಿಯವರು ಎರಡು-ಮೂರು ಬಾರಿ ದೀರ್ಘವಾಗಿ ಉಸಿರಾಡಿ ಶಾಂತರಾದರು. ತದನಂತರ ಪ.ಪೂ. ಡಾಕ್ಟರರು ಅಲ್ಲಿಗೆ ತಲುಪಿದರು. ಪ.ಪೂ. ಡಾಕ್ಟರರು ಎದುರಿಗೆ ಬರುತ್ತಿದ್ದಂತೆಯೇ ಪೂ. ಅಜ್ಜಿಯವರು ಮತ್ತೊಮ್ಮೆ ಕೊನೆಯ ಉಸಿರನ್ನು ಎಳೆದು ಬಿಟ್ಟರು. ನಂತರ ಆಧುನಿಕ ವೈದ್ಯರು ‘ಪೂ. ಅಜ್ಜಿಯವರು ದೇಹತ್ಯಾಗ ಮಾಡಿದ್ದಾರೆ’ ಎಂದು ಖಚಿತಪಡಿಸಿದರು. ಅದನ್ನು ನೋಡಿದಾಗ, ಪ.ಪೂ. ಡಾಕ್ಟರರ ಭೇಟಿಗಾಗಿಯೇ ಪೂ. ಅಜ್ಜಿಯವರು ತಮ್ಮ ಕೊನೆಯ ಉಸಿರನ್ನು ಹಿಡಿದಿಟ್ಟುಕೊಂಡಿದ್ದರು ಎಂದು ನನಗೆ ತೀವ್ರವಾಗಿ ಅನಿಸಿತು.
೨. ಅಜ್ಜಿಯವರು ದೇಹತ್ಯಾಗ ಮಾಡಿದ ನಂತರ ಅವರ ಮುಖವು ಅಧಿಕ ಪ್ರಕಾಶಮಾನವಾಗಿ ಕಾಣಿಸತೊಡಗಿತ್ತು. ಅವರ ಮುಖಮಂಡಲದ ಮೇಲೆ ಒಂದು ನೆರಿಗೆ(ಸುಕ್ಕು) ಕಾಣಿಸುತ್ತಿರಲಿಲ್ಲ. ಕೋಣೆಯಲ್ಲಿಯೂ ಸಂಪೂರ್ಣವಾಗಿ ಚೈತನ್ಯದ ಅನುಭವವಾಗುತ್ತಿತ್ತು.’
– ಶ್ರೀ. ನಿರಂಜನ ದಾತೆ (ಪೂ. ದಾತೆ ಅಜ್ಜಿ ಅವರ ಕಿರಿಯ ಪುತ್ರ), ಫೋಂಡಾ, ಗೋವಾ. (೨೭.೧೨.೨೦೨೫)
‘ತ್ಯಾಗ, ಅನಾಸಕ್ತ ಜೀವನ’ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅಪಾರ ಭಾವ ಮತ್ತು ಗುಣಗಳ ಮೂಲಕ ಸನಾತನದ ಸದ್ಗುರು ಪದವಿ ತಲುಪಿದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ !
’ಮೂಲತಃ ಪುಣೆಯವರಾದ ಪೂ. (ದಿ) ನಿರ್ಮಲಾ ದಾತೆ ಅಜ್ಜಿಯವರು ವೃದ್ಧಾಪ್ಯದಲ್ಲಿ ರಾಮನಾಥಿ ಆಶ್ರಮಕ್ಕೆ ವಾಸ್ತವ್ಯಕ್ಕೆ ಬಂದರು. ಈ ವಯಸ್ಸಿನಲ್ಲಿ ಆಶ್ರಮ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟ; ಆದರೆ ಅವರು ಸಹಜವಾಗಿ ಏಕರೂಪವಾಗಿದ್ದರು. ಅವರಲ್ಲಿ ಗುರುದೇವರ ಬಗ್ಗೆ ಅತ್ಯುಚ್ಚ ಮಟ್ಟದ ಭಾವವಿತ್ತು. ಆದ್ದರಿಂದ ಗುರುದೇವರು ಹೇಳಿದ ಪ್ರತಿಯೊಂದು ವಿಷಯವನ್ನು ಅವರು ತತ್ಪರತೆಯಿಂದ ಆಜ್ಞಾಪಾಲನೆ ಮಾಡುತ್ತಿದ್ದರು.

ಪೂ. ಅಜ್ಜಿಯವರಲ್ಲಿ ಸಾಧನೆ ಮತ್ತು ಆಜ್ಞಾಪಾಲನೆಯ ತಳಮಳ ಎಷ್ಟು ತೀವ್ರವಾಗಿತ್ತು ಎನ್ನುವುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುವುದು. ಹಿಂದೆ ಅವರು ಸಮಷ್ಟಿಗಾಗಿ ನಾಮಜಪ ಮಾಡುತ್ತಿದ್ದರು. ನಂತರ ವಯೋಸಹಜ ಮರೆವಿನಿಂದ ಅವರು ‘ಇಂದು ಯಾವ ನಾಮಜಪವನ್ನು ಮಾಡಬೇಕು ?’ ಎನ್ನುವುದನ್ನು ಮರೆಯುತ್ತಿದ್ದರು.

ಈ ಮರೆವಿಗಾಗಿ ಪೂ. ಅಜ್ಜಿ ಮತ್ತು ದಾತೆ ಕುಟುಂಬದವರು ಒಂದು ಸುಂದರವಾದ ಉಪಾಯವನ್ನು ಕಂಡು ಹಿಡಿದಿದ್ದರು. ಪೂ. ಅಜ್ಜಿಯವರು ತಮ್ಮ ಸೊಸೆ ಸೌ. ಜ್ಯೋತಿ ದಾತೆಯವರಿಂದ ಪ್ರತಿದಿನ ತಮ್ಮ ಅಂಗೈ ಮೇಲೆ ನಾಮಜಪವನ್ನು ಬರೆಸಿಕೊಂಡು ಅದನ್ನು ಓದುತ್ತಾ ಜಪ ಮಾಡುತ್ತಿದ್ದರು. ಅಂಗೈ ಮೇಲೆ ಓದಲು ಸಾಧ್ಯವಾಗುವಂತಹ ಅಕ್ಷರಗಳಲ್ಲಿ ಬರೆದಿರುವ ಈ ನಾಮಜಪವನ್ನು ಓದಿ ಪೂ. ಅಜ್ಜಿಯವರು ಆ ನಾಮಜಪವನ್ನು ಮಾಡುತ್ತಿದ್ದರು. ’ತಳಮಳವಿದ್ದರೆ ಹೇಗೆ ದಾರಿ ಕಂಡುಕೊಳ್ಳಬಹುದು’ ಎನ್ನುವುದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.

ಪೂ. ದಾತೆ ಅಜ್ಜಿಯವರು ನೀಡಿದ ಸುಸಂಸ್ಕಾರ ಮತ್ತು ಸಾಧನೆಯಿಂದ ಅವರ ಸಂಪೂರ್ಣ ಕುಟುಂಬವೇ ಆದರ್ಶಪ್ರಾಯವಾಗಿದೆ. ಪೂ. ಅಜ್ಜಿಯವರಿಗೆ ತಮ್ಮ ಇಬ್ಬರು ಸೊಸೆಯಂದಿರ ಮೇಲೆ ಅತೀವ ಪ್ರೇಮ ವಿತ್ತು ಮತ್ತು ಆ ಇಬ್ಬರಿಗೂ ಅಜ್ಜಿಯವರ ಮೇಲೆ ಅ? ಪ್ರೀತಿಯಿತ್ತು. ಸಾಧನೆಯಿಂದಾಗಿ ಕುಟುಂಬದಲ್ಲಿ ಪ್ರೀತಿ, ಸಮರ್ಪಣೆ, ತ್ಯಾಗ ಮುಂತಾದ ಗುಣಗಳು ವೃದ್ಧಿಯಾಗಿ ’ಆದರ್ಶ ಸಂಬಂಧ ಗಳು ಹೇಗೆ ತಯಾರಾಗುತ್ತವೆ ?’, ಎಂಬುದಕ್ಕೆ ದಾತೆ ಕುಟುಂಬವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಕಳೆದ ಒಂದೂವರೆ ವ?ದಿಂದ ಪೂ. ಅಜ್ಜಿಯವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು ಮತ್ತು ಅವರ ಕುಟುಂಬದವರು ಮನಃಪೂರ್ವಕವಾಗಿ ಅವರ ಸೇವೆಯನ್ನು ಮಾಡುತ್ತಿದ್ದರು. ಪೂ. ಅಜ್ಜಿಯವರ ಈ ಅನಾರೋಗ್ಯದಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ಅನೇಕ ವಿಷಯಗಳನ್ನು ಕಲಿಸಿದರು. ’ವ್ಯಕ್ತಿಗೆ ಮುಂದಿನ ಹಂತದ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಹೇಗೆ ಮಾಡಬೇಕು ? ಆ ಬಗ್ಗೆ ಸಂಶೋಧನೆ ಹೇಗೆ ಮಾಡಬೇಕು ? ಹಾಗೆಯೇ ಆದರ್ಶ ಸಂತಸೇವೆಯನ್ನು ಹೇಗೆ ಮಾಡಬೇಕು ?’ ಮುಂತಾದವುಗಳನ್ನು ಅವರು ಕಲಿಸಿಕೊಟ್ಟರು. ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಇದ್ದ ಅವರ ಭಾವ ಮತ್ತು ಸಾಧನೆಯ ತಳಮಳ’ ಇವುಗಳಿಂದಾಗಿ ಅನಾರೋಗ್ಯದ ಸ್ಥಿತಿಯಲ್ಲೂ ಪೂ. ಅಜ್ಜಿಯವರ ಆಧ್ಯಾತ್ಮಿಕ ಉನ್ನತಿಯಾಗಿ ಅವರು ‘ಸದ್ಗುರು’ ಪದವಿಯನ್ನು ತಲುಪಿದರು.
ಸದ್ಗುರು (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರಂತಹ ಸಂತರತ್ನವನ್ನು ರೂಪಿಸಿದ ಆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧನ್ಯರು ಹಾಗೂ ಪರಮ ಪೂಜ್ಯ ಗುರುದೇವರ ಆಜ್ಞಾಪಾಲನೆಯನ್ನು ಮಾಡಿ ‘ಸದ್ಗುರು’ ಪದವಿಯವರೆಗೆ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡ ಆ ಸದ್ಗುರು ದಾತೆ ಅಜ್ಜಿಯವರು ಧನ್ಯರು. ಉಭಯತರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೩೦.೧೨.೨೦೨೫)


|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !