ದೆಹಲಿಯಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದದ ನಿಮಿತ್ತ ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಅಗ್ನಿಹೋತ್ರ ಮಾಡುವಾಗ ದೇವರು ನೀಡಿದ ಸಾಕ್ಷಿ !

ಅಗ್ನಿಹೋತ್ರ ಮಾಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.)ಅಂಜಲಿ ಗಾಡಗೀಳ

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಸಾಧಕರ ರಕ್ಷಣೆ ಮತ್ತು ಸಮಷ್ಟಿಯ ಕಲ್ಯಾಣಕ್ಕಾಗಿ ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಿರುತ್ತಾರೆ. ಡಿಸೆಂಬರ್‌ ೧೩ ಮತ್ತು ೧೪ ರಂದು ದೆಹಲಿಯ ಭಾರತ ಮಂಡಪಮ್‌ನಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದಲ್ಲಿ ಯಾವುದೇ ಅಡ್ಡಿಗಳು ಬರಬಾರದೆಂದು ಅಗ್ನಿಹೋತ್ರ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಭಾರತ ಮಂಡಪಮ್‌ ನ ಛಾಯಾಚಿತ್ರವನ್ನು ನೋಡಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಡಿಸೆಂಬರ್‌ ೧ (ಗೀತಾ ಜಯಂತಿ) ರಂದು ಬೆಳಿಗ್ಗೆ ಅಗ್ನಿಹೋತ್ರ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು, ‘ಹೇ, ಶ್ರೀಮನ್ನಾರಾಯಣನೇ, ಭಾರತ ಮಂಡಪಮ್‌ನಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ನೀನು ಉಪಸ್ಥಿತನಿದ್ದು ಈ ಮಹೋತ್ಸವವನ್ನು ನಿರ್ವಿಘ್ನವಾಗಿ ನೆರವೇರಿಸಿಕೊಡಬೇಕು ಎಂದು ನಾವು ಭಕ್ತರು ನಿನ್ನ ಚರಣಗಳಲ್ಲಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಪ್ರಾರ್ಥನೆ ಮಾಡಿದರು. ಆಗ ಅವರಿಗೆ ಸೂಕ್ಷ್ಮದಿಂದ ತಿಳಿದುಬಂದಿದ್ದೇನೆಂದರೆ, ‘ಇಂದು ಬೆಳಗ್ಗೆ ಶ್ರೀ ಅಗ್ನಿನಾರಾಯಣನು ಭಾರತ ಮಂಡಪಮ್‌ ಪ್ರವೇಶ ಮಾಡುತ್ತಿದ್ದಾನೆ. ನಂತರ ಅಗ್ನಿ ನಾರಾಯಣನು ಸ್ವತಃ ವೇದಿಕೆಯ ಮೇಲೆ ಆರೂಢನಾಗಿದ್ದಾನೆ.? ಸೂಕ್ಷ್ಮ ದಿಂದ ಈ ದೃಶ್ಯವನ್ನು ನೋಡಿದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಡಿಸೆಂಬರ್‌ ೧ ರಂದು ಇರುವ ತಿಥಿಯನ್ನು ನೋಡಿದಾಗ ಆ ದಿನ ‘ಗೀತಾ ಜಯಂತಿ’ ಇರುವುದು ಅವರ ಗಮನಕ್ಕೆ ಬಂದಿತು. ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪದ ದರ್ಶನವನ್ನು ನೀಡಿ ಗೀತೋಪದೇಶವನ್ನು ಮಾಡಿದ ದಿನ ಅದು ! ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಆಮಂತ್ರಣ ಪತ್ರದಲ್ಲಿಯೂ ಭಗವಾನ್‌ ಶ್ರೀಕೃಷ್ಣನ ವಿಶ್ವರೂಪದ ಚಿತ್ರವಿದೆ. ಇದರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ ತಿಳಿದುಬಂದಿದ್ದೇನೆಂದರೆ, ‘ಗೀತಾ ಜಯಂತಿಯ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಹೇಗೆ ವಿಶ್ವರೂಪದ ದರ್ಶನವನ್ನು ನೀಡಿದನೋ, ಅದೇ ತತ್ತ್ವವು ಭಾರತ ಮಂಡಪಮ್‌ ಪ್ರವೇಶ ಮಾಡುತ್ತಿದೆ ಮತ್ತು ಅದೇ ಮಹೋತ್ಸವವನ್ನು ನಿರ್ವಿಘ್ನವಾಗಿ ನಡೆಸಿಕೊಡಲಿದೆ. ನಾವು ಕೇವಲ ನಿಮಿತ್ತ ಮಾತ್ರ ಅಲ್ಲಿ ಹೋಗಿ ಬರಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಸ್ವತಃ ಭಗವಂತನು ಉಪಸ್ಥಿತನಿರುವುದು ನಮ್ಮ ಮಹಾಭಾಗ್ಯವೇ ಆಗಿರುತ್ತದೆ.’

‘ಅಗ್ನಿಹೋತ್ರ ಮಾಡುವಾಗ ಅಗ್ನಿನಾರಾಯಣ ಮತ್ತು ಭಾರತ ಮಂಡಪಮ್‌ನ ವಾಸ್ತುದೇವತೆ ಇವರಿಗೆ ಪ್ರಾರ್ಥನೆ ಮಾಡುತ್ತಿರುವುದರಿಂದ ‘ಸ್ವತಃ ಅಗ್ನಿನಾರಾಯಣನೇ ಈ ಪ್ರಸಾದವನ್ನು ನೀಡಿದ್ದಾನೆ’ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ತಿಳಿದುಬಂದಿತು.