
ಅ. ಪ್ರಯಾಗ ಮಹಾಕುಂಭ (ಜನವರಿ ೨೦೨೫)
ಶ್ರೀ. ಸೀತಾರಾಮನ್ ಗುರೂಜಿಯವರು ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಶ್ರೀ ವಿಜಯೇಂದ್ರ ಸರಸ್ವತಿಯವರ ಹಸ್ತದಿಂದ ಸೋಮನಾಥ ಜ್ಯೋತಿರ್ಲಿಂಗದ ೨೦ ಕ್ಕೂ ಹೆಚ್ಚು ದಿವ್ಯ ಅಂಶಗಳ ಮೇಲೆ ತ್ರಿವೇಣಿ ಸಂಗಮದಲ್ಲಿ ಅಭಿಷೇಕ ನೆರವೇರಿಸಿ, ಇದನ್ನು ಜಗತ್ತಿಗೆ ಪರಿಚಯಿಸಿದರು. ಕಾಂಚಿ ಕಾಮಕೋಟಿ ಪೀಠದ ಆಚಾರ್ಯರ ಆಜ್ಞೆಯಂತೆ ಅವುಗಳಲ್ಲಿನ ೧೧ ದಿವ್ಯ ಅಂಶಗಳನ್ನು ಶ್ರೀ ಶ್ರೀ ರವಿಶಂಕರರಿಗೆ ಒಪ್ಪಿಸಲಾಯಿತು.
ಆ. ಗೋವಾದಲ್ಲಿನ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ (ಮೇ ೨೦೨೫)
೧೭ ರಿಂದ ೧೯ ಮೇ ೨೦೨೫ ರ ಕಾಲಾವಧಿಯಲ್ಲಿ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ನೆರವೇರಿತು. ಆಗ ಗುರುದೇವ ಶ್ರೀ ಶ್ರೀ ರವಿಶಂಕರ ಇವರು ಮಹೋತ್ಸವದ ಸಾಧಕರ ದರ್ಶನಕ್ಕಾಗಿ ಸೋಮನಾಥ ಜ್ಯೋತಿರ್ಲಿಂಗದ ೨ ದಿವ್ಯ ಅಂಶಗಳನ್ನು ಕಳುಹಿಸಿದ್ದರು. ಈ ವೇಳೆ ೩೦ ಸಾವಿರಕ್ಕೂ ಹೆಚ್ಚು ಜನರು ದರ್ಶನ ಪಡೆದರು.
ಇ. ತಂಜಾವೂರಿನಲ್ಲಿ ಸೀತಾರಾಮನ್ ಗುರೂಜಿಯವರ ಮೊದಲ ಭೇಟಿ (ಅಕ್ಟೋಬರ್ ೨೦೨೫)
೨೬ ಅಕ್ಟೋಬರ್ ೨೦೨೫ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸ್ವತಃ ತಂಜಾವೂರಿಗೆ ಶ್ರೀ. ಸೀತಾರಾಮನ್ ಗುರೂಜಿಯವರ ವೇದಪಾಠಶಾಲೆಗೆ ತೆರಳಿದರು. ಈ ಸಮಯದಲ್ಲಿ ಗುರೂಜಿಯವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದ ರುದ್ರಪಾರಾಯಣ ಸಹಿತ ಸೋಮನಾಥ ಜ್ಯೋತಿರ್ಲಿಂಗದ ೨ ದಿವ್ಯ ಅಂಶಗಳ ಮೇಲೆ ಅಭಿಷೇಕವನ್ನು ಮಾಡಿಸಿದರು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಶ್ರೀ. ಸೀತಾರಾಮನ್ ಗುರೂಜಿ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಸಂದರ್ಶನವನ್ನು ಸಹ ನಡೆಸಿದರು.

ಈ. ದೆಹಲಿಯಲ್ಲಿ ಸನಾತನ ರಾಷ್ಟ್ರ ಶಂಖನಾದಮಹೋತ್ಸವ (ಡಿಸೆಂಬರ್ ೨೦೨೫)
ಇದಾದ ನಂತರ ಡಿಸೆಂಬರ್ ೨೦೨೫ ರಲ್ಲಿ ದೆಹಲಿಯ ಭಾರತ ಮಂಡಪಮ್‌ದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ತಂಜಾವೂರಿನ ಶ್ರೀ. ಸೀತಾರಾಮನ್ ಗುರೂಜಿಯವರು ಆಗಮಿಸಿದ್ದರು. ಈ ಸಮಯದಲ್ಲಿ ಅವರು ತಮ್ಮ ಬಳಿ ಇದ್ದ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ಪೈಕಿ ೨ ಅಂಶಗಳ ದರ್ಶನವನ್ನು ಸಾವಿರಾರು ಜನರಿಗೆ ಮಾಡಿಸಿದರು. ಆ ಬಗ್ಗೆ ಅವರು ಉಪಸ್ಥಿತರಿಗೆ ವ್ಯಾಸಪೀಠದಿಂದ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಉ. ಶ್ರೀರಾಮನವಮಿ (ಮಾರ್ಚ್ ೨೦೨೬)
೨೦೨೬ ರ ಶ್ರೀರಾಮನವಮಿಯಂದು ಶ್ರೀ. ಸೀತಾರಾಮನ್ ಗುರೂಜಿಯವರಿಗೆ ಈಶ್ವರಿ ಪ್ರೇರಣೆಯಾಯಿತು, ‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರು ಧರ್ಮಸಂಸ್ಥಾಪನೆಗಾಗಿ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಅವಿರತ ಶ್ರಮಿಸುತ್ತಿರುವುದರಿಂದ, ಅವರ ಬಳಿಯಿರುವ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ಪೈಕಿ ೪ ಅಂಶಗಳನ್ನು ಶಾಶ್ವತವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಎಲ್ಲಾ ಅಡೆತಡೆಗಳು ದೂರವಾಗಿ ಅದು ಶೀಘ್ರದಲ್ಲೇ ಸಾಕಾರಗೊಳ್ಳುವುದು.’ ಈ ಬಗ್ಗೆ ಶ್ರೀ. ಸೀತಾರಾಮನ್ ಗುರೂಜಿಯವರು ತಕ್ಷಣವೇ ಸಂಚಾರವಾಣಿ ಕರೆ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ತಿಳಿಸಿದರು. ಇದು ಕೇಳುತ್ತಿದ್ದಂತೆ ಇಬ್ಬರೂ ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಆನಂದವಾಗಿ ಮತ್ತು ಅವರ ಮನಸ್ಸು ಭಗವಾನ ಶಿವನು ತೋರಿದ ಕೃಪೆಯ ಬಗ್ಗೆ ಕೃತಕೃತ್ಯವಾಯಿತು. ಅವರು ಈ ಎಲ್ಲ ವಿಷಯವನ್ನು ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ತಿಳಿಸಿದರು. ಗುರುದೇವರು, “ಸಾಕ್ಷಾತ್ ಶಂಕರನೇ ಈಗ ನಮ್ಮೊಂದಿಗೆ ಇರಲು ಬರುತ್ತಿದ್ದಾನೆ !” ಎಂದು ಹೇಳಿದರು. ಇದರ ನಂತರ ಮೂವರೂ ಮೋಕ್ಷ ಗುರುಗಳು ಶ್ರೀ. ಸೀತಾರಾಮನ್ ಗುರೂಜಿಯವರಿಂದ ಶಿವಲಿಂಗದ ದಿವ್ಯ ಅಂಶಗಳನ್ನು ಸ್ವೀಕರಿಸಲು ೧೧ ನೇ ರುದ್ರ ಹನುಮಂತ ಜಯಂತಿಯಂದು, ಅಂದರೆ ೨ ಏಪ್ರಿಲ್ ೨೦೨೬ ಈ ದಿನವನ್ನು ಆರಿಸಿಕೊಂಡರು !
– ಶ್ರೀ. ವಿನಾಯಕ ಶಾನಭಾಗ, ಕಾಂಚಿಪುರಮ್, ತಮಿಳುನಾಡು.
೨ ಏಪ್ರಿಲ್ ೨೦೨೬ ಈ ದಿನದ ವಿಶೇಷ ಮಹತ್ವ !
ಮೂರ್ತಿಭಂಜಕ ಮಹಮ್ಮದ್ ಗಝನಿಯು ಸೋಮನಾಥ ಜ್ಯೋತಿರ್ಲಿಂಗವನ್ನು ಒಡೆದು ಅನೇಕ ದಿನಗಳ ಕಾಲ ಪ್ರಯಾಣ ಬೆಳೆಸಿ ಗಝನಿಯನ್ನು ತಲುಪಿದ ದಿನವೆಂದರೆ ೧ ಏಪ್ರಿಲ್ ೧೦೨೬. ಸರಿಯಾಗಿ ೧೦೦೦ ವರ್ಷಗಳ ನಂತರ, ಅಂದರೆ ೨ ಏಪ್ರಿಲ್ ೨೦೨೬ ರಂದು
ಸನಾತನ ಸಂಸ್ಥೆಗೆ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಲಭಿಸಿದವು. ಶಿವಶಂಕರನೇ ಈ ದಿನವನ್ನು ಆಯ್ದುಕೊಂಡಿದ್ದನು, ಎಂಬುದರಲ್ಲಿ ಸಂಶಯವಿಲ್ಲ !
– ಶ್ರೀ. ವಿನಾಯಕ ಶಾನಭಾಗ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ