ಪ.ಪೂ. ಕಲಾವತಿ ಆಯಿಯವರ ಅಮೂಲ್ಯ ಸುವಚನಗಳ ಬಗ್ಗೆ ಡೊಂಬಿವಲಿ (ಠಾಣೆ ಜಿಲ್ಲೆ) ಯ ಶಾಸ್ತ್ರೀಯ ಗಾಯಕ ಪೂ. ಕಿರಣ ಫಾಟಕ ಇವರ ವಿಶ್ಲೇಷಣೆ

ಜನವರಿ ೧೯ ರಂದು ಬೆಳಗಾವಿಯ ಪ.ಪೂ. ಕಲಾವತಿ ಆಯಿಯವರ ಪುಣ್ಯತಿಥಿ ಇದೆ ಆ ನಿಮಿತ್ತ ಅವರ ಚರಣಗಳಲ್ಲಿ ನಮನಗಳು !

ಪ.ಪೂ. ಕಲಾವತಿ ಆಯಿ

ಪೂ. ಕಿರಣ ಫಾಟಕ

೧. ಪ.ಪೂ. ಕಲಾವತಿ ಆಯಿಯವರ ಸುವಚನಗಳು

‘ಕತ್ತಲು ಮತ್ತು ಬೆಳಕು ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲ, ಹಾಗೆ ಷಡ್ವಿಕಾರಗಳು ಮತ್ತು ಆನಂದ ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲ. ಸಂತರು ಯಾವಾಗಲೂ ನಿರ್ವಿಕಾರರಾಗಿದ್ದು ಸದಾ ಆನಂದದಿಂದಿರುತ್ತಾರೆ.’- ಪ.ಪೂ. ಕಲಾವತಿಆಯಿ, ಬೆಳಗಾವಿ (ಆಧಾರ : ಬೋಧಾಮೃತ)

೨. ಈ ಸುವಚನದ ಬಗ್ಗೆ ಪೂ. ಕಿರಣ ಫಾಟಕರ ವಿಶ್ಲೇಷಣೆ

೨ ಅ. ಷಡ್ವಿಕಾರಗಳು ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕಿಸುವುದು : ‘ಮನುಷ್ಯನು ಪ್ರಾರಬ್ಧವನ್ನು ತೆಗೆದುಕೊಂಡೇ  ಜನಿಸುತ್ತಾನೆ. ಅವನು ಬೆಳೆದಂತೆ, ಒಂದೊಂದೇ ವಿಕಾರಗಳು ಅವನಿಗೆ ಅಂಟಿ ಕೊಳ್ಳುತ್ತವೆ. ಅವು ಮನುಷ್ಯನಿಗೆ ಸ್ಥಿರವಾಗಿರಲು ಬಿಡುವುದಿಲ್ಲ. ಮನುಷ್ಯನು ಸುತ್ತ ಮುತ್ತಲಿನ ಆರ್ಥಿಕ, ಹಾಗೆಯೇ ಸಾಮಾಜಿಕ ಪರಿಸ್ಥಿತಿಗನುಸಾರ ವರ್ತಿಸುತ್ತಾನೆ. ಕ್ರಮೇಣ ಮನುಷ್ಯನು ಈ ವಿಕಾರಗಳಿಗೆ ಬಲಿ ಯಾಗುತ್ತಾನೆ. ಹಾಗಾದರೆ ಈ ವಿಕಾರಗಳೆಂದರೆ, ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಈ ಆರು ಷಡ್ರಿಪುಗಳು. ಮನುಷ್ಯನು ವಿಕಾರಗಳಿಗೆ ಬಲಿ ಯಾದಾಗ, ‘ನಾನು ಯಾರು ? ಏಕೆ ನನ್ನ ಜನ್ಮವಾಗಿದೆ ?’, ಎಂಬುದನ್ನು ಸಂಪೂರ್ಣವಾಗಿ ಮರೆತು ದಾರಿ ತಪ್ಪಿ ಪುನಃ ಪುನಃ ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕುತ್ತಾನೆ. ‘ಪುನರಪಿ ಜನನಂ ಪುನರಪಿ ಮರಣಂ |’ (ಅಂದರೆ ಪುನಃ ಜನ್ಮ ಮತ್ತು ಪುನಃ ಮರಣ)’, ಎಂಬ ಸಂಸ್ಕೃತ ವಚನವು ಸುಳ್ಳಲ್ಲ. ಈ ಎಲ್ಲ ವಿಕಾರಗಳು ಮನುಷ್ಯನಿಗೆ ಜನ್ಮ-ಮೃತ್ಯುವಿನ ಬಲೆಯಲ್ಲಿ ಸಿಲುಕಿಸುತ್ತವೆ.

೨ ಆ. ಸಂತರ ಸಹವಾಸದ ಮಹತ್ವ !

೨ ಆ ೧. ಸಂತಸಹವಾಸದಲ್ಲಿ ಮನುಷ್ಯನಿಗೆ ಸ್ವತ್ವದ ಬಗ್ಗೆ ಅರಿವಾಗುವುದು : ಜನ್ಮ-ಮೃತ್ಯುವಿನಿಂದ ಬಿಡುಗಡೆಯಾಗಲು, ಮನುಷ್ಯನಿಗೆ ಸಂತರ ಸಹವಾಸವಿರಬೇಕಾಗುತ್ತದೆ. ಸಂತರು ಎಲ್ಲ ಕಡೆಯಲ್ಲಿದ್ದರೂ ಇಲ್ಲದಂತಿರುತ್ತಾರೆ. ಸಂತರ ಸಂಪೂರ್ಣ ಜೀವನವು ಜಗತ್ತಿನ ಪರೋಪಕಾರಕ್ಕಾಗಿರುತ್ತದೆ. ಸುಖ-ದುಃಖಗಳನ್ನು ಸಮನಾಗಿ ನೋಡುತ್ತಾರೆ. ಇತರರ ದುಃಖವನ್ನು ನೋಡಿ ಅವರು ದುಃಖದಿಂದ ತಳಮಳಿಸುತ್ತಾರೆ ಮತ್ತು ಇತರರ ಸುಖವನ್ನು ನೋಡಿ ಆನಂದಪಡುತ್ತಾರೆ. ಸಂತರ ಸಹವಾಸಕ್ಕೆ ಬಂದನಂತರ ಮನುಷ್ಯನಿಗೆ ಸ್ವತ್ವದ ಬಗ್ಗೆ ಅರಿವಾಗುತ್ತದೆ. ಅವನು ಪ್ರಪಂಚದಿಂದ ಪರಮಾರ್ಥದತ್ತ ಹೋಗತೊಡಗುತ್ತಾನೆ. ‘ತನ್ನ ಮತ್ತು ಪರರದ್ದು’, ಹೀಗೇನೂ ಉಳಿಯುವುದಿಲ್ಲ. ಅವನು ‘ಇಡೀ ಜಗತ್ತೇ ನನ್ನ ಮನೆ’, ಎಂಬಂತೆ ವರ್ತಿಸಲು ಪ್ರಾರಂಭಿಸುತ್ತಾನೆ.

೨ ಆ ೨. ಸಂತರ ಸಹವಾಸದಿಂದ ಮನುಷ್ಯನಿಗೆ ಸಾಕ್ಷಾತ್ಕಾರ ವಾಗುವುದು ಮತ್ತು ವಿಕಾರಗಳು ಅವನಿಂದ ದೂರವಾಗಿರುವುದರಿಂದ ಅವನು ಕ್ರಮೇಣ ಸಂತಪದವಿಯಲ್ಲಿ ತಲುಪುವುದು : ವಿಕಾರಗಳ ಕಗ್ಗತ್ತಲಿನಲ್ಲಿ ಸಂತರು ಆ ಮನುಷ್ಯನಿಗೆ ಸಾತ್ತ್ವಿಕತೆಯ ಒಂದು ಹಣತೆಯನ್ನು ಕೊಡುತ್ತಾರೆ. ಆ ಹಣತೆಯ ಬೆಳಕಿನಲ್ಲಿ ಅವನು ಪ್ರಗತಿಯ ದಿಶೆಯಿಂದ ಮಾರ್ಗ ಕ್ರಮಿಸುತ್ತಾನೆ. ನಿಧಾನವಾಗಿ ಅವನು ಸೂರ್ಯನ ಪ್ರಕಾಶದಲ್ಲಿ ಪ್ರವೇಶಿಸಿ ತನ್ನ ಆತ್ಮಸ್ವರೂಪವನ್ನು ನೋಡುತ್ತಾನೆ. ಅವನಿಗೆ ತನ್ನ ಸ್ವರೂಪವು ಕಂಡ ಕೂಡಲೇ ಒಂದು ವೈಶ್ವಿಕ ಶಕ್ತಿಯೊಂದಿಗೆ ವೇಗದಿಂದ ಹೋಗತೊಡಗುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ನಾನು ಮತ್ತು ಶರೀರ ಬೇರೆ ಇದೆ’, ಎಂಬುದರ ಅರಿವಾಗುತ್ತದೆ. ಇದಕ್ಕೆ ಕೆಲವರು ‘ಸಾಕ್ಷಾತ್ಕಾರ’ ಎನ್ನುತ್ತಾರೆ. ಈ ವೈಶ್ವಿಕ ಊರ್ಜೆ ಕೆಲವರಿಗೆ ಸಗುಣ ರೂಪದಲ್ಲಿ ಕೆಲವರಿಗೆ ನಿರ್ಗುಣ ಸ್ವರೂಪದಲ್ಲಿ ಕಾಣಿಸುತ್ತದೆ. ಸಗುಣ ರೂಪವೆಂದರೆ ಅವನ ಆರಾಧ್ಯ ದೇವತೆಯು ಅವನಿಗೆ ಅತ್ಯಂತ ತೇಜೋಮಯವಾಗಿ ಕಾಣಿಸುತ್ತದೆ. ಒಂದು ವೇಳೆ ಅವನಿಗೆ ನಿರ್ಗುಣ ಅವಸ್ಥೆಯಲ್ಲಿ ದರ್ಶನವಾದರೆ, ಅವನ ಕಣ್ಣುಗಳಿಂದ ತೇಜದ ಒಂದು ದೊಡ್ಡ ಗೋಲವನ್ನು ನೋಡಬಹುದು. ತೇಜೋಮಯ ಪ್ರಕಾಶವಿರುವಲ್ಲಿ ವಿಕಾರಗಳ ಕತ್ತಲು ವಿರುವುದಿಲ್ಲ ’ ಎಲ್ಲ ವಿಕಾರಗಳು ಅವನಿಂದ ದೂರ ದೂರ ಹೊರಟು ಹೋಗಿರುವುದರಿಂದ ಅವನು ಸಹ ನಿಧಾನವಾಗಿ ಸಂತಪದವಿಯಲ್ಲಿ ತಲುಪುತ್ತಾನೆ ಮತ್ತು ಸ್ವಾನಂದದಲ್ಲಿ ಮಗ್ನನಾಗುತ್ತಾನೆ.’

– (ಪೂ.) ಕಿರಣ ಫಾಟಕ, ಡೊಂಬಿವಲಿ, ಜಿಲ್ಲೆ ಠಾಣೆ. (೧೦.೮.೨೦೨೩)