
ಸನಾತನ ಪ್ರಭಾತವು ಈಶ್ವರ ನಿರ್ಮಿತವಾಗಿದೆ. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದರ ಸಂಸ್ಥಾಪಕರಾಗಿದ್ದು, ಅವರು ಕಾಲದ ಅವಶ್ಯಕತೆಯನ್ನು ಅರಿತು ಈ ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದಾರೆ. ‘ಸನಾತನ ಪ್ರಭಾತ’ ನಿಯತಕಾಲಿಕೆಯು ತತ್ತ್ವ, ಧ್ಯೇಯ ಮತ್ತು ಧರ್ಮನಿಷ್ಠವಾಗಿದೆ. ‘ಸನಾತನ ಪ್ರಭಾತ’ ರವನ್ನು ‘ಹಿಂದೂ ಧರ್ಮದ ಮುಖವಾಣಿ’ ಎಂದು ಹೇಳಿದರೆ ತಪ್ಪಾಗಲಾರದು. ಹಿಂದೂ ಧರ್ಮಕ್ಕಾಗಿ ಹೋರಾಡುವ, ಹಿಂದೂ ಧರ್ಮದವರನ್ನು ಸಂಘಟಿಸುವ ಮತ್ತು ಭಾರತದ ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಯ ಮೇಲೆ ತರುವ ಏಕೈಕ ಪತ್ರಿಕೆಯಾಗಿದೆ. ಹಿಂದೂ ಧರ್ಮದ ಬಗ್ಗೆ ಉದಾಸೀನತೆ ಹೊಂದಿರುವ, ರಾಷ್ಟ್ರಾಭಿಮಾನಶೂನ್ಯ ನಿದ್ರಿಸ್ತ ಹಿಂದೂಗಳನ್ನು ಜಾಗೃತಗೊಳಿಸುವ ಹಾಗೂ ಜಾಗೃತ ಕರ್ಮ ಹಿಂದೂಗಳಿಗೆ ಧರ್ಮಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಕಲಿಸುವುದರ ಜೊತೆಗೆ ಕ್ರಿಯಾಶೀಲರನ್ನಾಗಿ ಮಾಡುವ ಏಕೈಕ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ’
೧. ಸಂಪಾದಕೀಯ ದೃಷ್ಟಿಕೋನ
ಸಮಾಜದಲ್ಲಿನ ದುಷ್ಪ್ರವೃತ್ತಿಗಳ ವಿರುದ್ಧ ಹೋರಾಡುವ ಏಕೈಕ ಈಶ್ವರನಿಷ್ಠ ಪತ್ರಿಕೆ ಎಂದರೆ ‘ಸನಾತನ ಪ್ರಭಾತ’. ‘ಸನಾತನ ಪ್ರಭಾತ’ದಲ್ಲಿನ ಪ್ರತಿಯೊಂದು ಸುದ್ದಿಯನ್ನು ಓದುವಾಗ ಆ ಸುದ್ದಿಗೆ ನೀಡಲಾದ ಸಂಪಾದಕೀಯ ದೃಷ್ಟಿಕೋನವು ಬಹಳ ಮಹತ್ವದ ಪಾತ್ರ ವಹಿಸುತ್ತದೆ; ಏಕೆಂದರೆ ಯಾವುದೇ ಸುದ್ದಿಯನ್ನು ಓದಿದ ನಂತರ ಏನು ಸರಿ ಮತ್ತು ಏನು ತಪ್ಪು ಎಂಬುದು ತಕ್ಷಣ ಗಮನಕ್ಕೆ ಬರುತ್ತದೆ. ಇತರ ಪತ್ರಿಕೆಗಳಲ್ಲಿ ಈ ಸಂಪಾದಕೀಯ ದೃಷ್ಟಿಕೋನ ಇರುವುದಿಲ್ಲ; ಆದರೆ ದೈನಿಕ ‘ಸನಾತನ ಪ್ರಭಾತ’ದಲ್ಲಿನ ದೃಷ್ಟಿಕೋನವನ್ನು ಓದಿರುವುದರಿಂದ, ಇತರ ವರ್ತಮಾನಪತ್ರಿಕೆಗಳ ಸುದ್ದಿಗಳನ್ನು ಓದಿದ ನಂತರವೂ, ವಾಚಕರಾದ ನಮಗೆ ಈಗ ಆ ಸುದ್ದಿಯಿಂದ ಏನು ಅಪೇಕ್ಷಿತ ಇತ್ತು ? ಮತ್ತು ಯಾರ ತಪ್ಪು ? ಎಂಬುದು ಗಮನಕ್ಕೆ ಬರುತ್ತದೆ. ಈ ಅಭ್ಯಾಸವು ‘ಸನಾತನ ಪ್ರಭಾತ’ದ ವಾಚಕರಲ್ಲಿ ಮೈಗೂಡಿದೆ. ಆದ್ದರಿಂದ ‘ಸಂಪಾದಕೀಯ ದೃಷ್ಟಿಕೋನ’ವು ಈ ನಿಯತಕಾಲಿಕೆಯ ವೈಶಿಷ್ಟ್ಯವಾಗಿದೆ.

೨. ಧರ್ಮಯೋಧ
‘ಸನಾತನ ಪ್ರಭಾತ’ವು ಕೇವಲ ಒಂದು ವಾರ್ತಾಪತ್ರಿಕೆಯಲ್ಲ, ಅದು ರಾಷ್ಟ್ರಪ್ರೇಮಿ ಮತ್ತು ಹಿಂದೂ ಧರ್ಮಕ್ಕಾಗಿ ಹೋರಾಡುವ ಧ್ಯೇಯನಿಷ್ಠ ಯೋಧನಾಗಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಹಿಂದೂ ಧರ್ಮದ ಮೇಲಾಗುವ ಆಘಾತಗಳು, ಹಿಂದೂಗಳಿಗೆ ಆಗುತ್ತಿರುವ ಅನ್ಯಾಯಗಳಿಗೆ ಧ್ವನಿ ನೀಡುವ ಏಕೈಕ ‘ಧರ್ಮನಿಷ್ಠ ಮುಖವಾಣಿ’ಯಾಗಿದೆ. ಇದರಲ್ಲಿ ಪ್ರಕಾಶಿತ ಧರ್ಮದ್ವೇಷಿಗಳ ಕುರಿತಾದ ವರದಿಗಳನ್ನು ಹೆಚ್ಚಿನ ವಾರ್ತಾಪತ್ರಿಕೆಗಳು ಮುದ್ರಿಸುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಕೆಲವು ನಿಯಮಿತ ಅಂಕಣಗಳ ಮೂಲಕ, ಅಂದರೆ ‘ಆರೋಗ್ಯ’, ‘ವ್ಯಾಯಾಮ’ ಮತ್ತು ವಿವಿಧ ಸಂತರು/ಸಾಧುಗಳ ಮಾರ್ಗದರ್ಶನವು ಓದಲು ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸನಾತನ ಪ್ರಭಾತದಲ್ಲಿನ (ಕನ್ನಡ ಸಾಪ್ತಾಹಿಕ / ಮರಾಠಿ ದೈನಿಕ, ಪಾಕ್ಷಿಕ ಹಿಂದೀ ಮತ್ತು ಆಂಗ್ಲ ಪತ್ರಿಕೆಗಳು) ಸಂಪಾದಕೀಯ ಲೇಖನಗಳು ಓದಲು ಯೋಗ್ಯವಾಗಿವೆ ಮತ್ತು ಅನುಕರಣೀಯವಾಗಿವೆ.
೩. ಸಾಧನೆಗೆ ಮಾರ್ಗದರ್ಶಕ ಲೇಖನಗಳು
ಅ. ನಾವು ಸಾಧನೆಗೆ ಉಪಯುಕ್ತವಾದ ಅನೇಕ ಗ್ರಂಥಗಳನ್ನು ಓದಿರುತ್ತೇವೆ; ಆದರೆ ಗ್ರಂಥಗಳಲ್ಲಿ ಹೇಳಿದ ನೇರ ಕೃತಿಯ ಮಟ್ಟದಲ್ಲಿ ಅನುಭವಿಸಿದ ಪ್ರಸಂಗಗಳು, ಅನುಭೂತಿಗಳು ಎಲ್ಲಿಯೂ ಓದಲು ಸಿಗುವುದಿಲ್ಲ. ಅದು ಕೇವಲ ಮತ್ತು ಕೇವಲ ‘ಸನಾತನ ಪ್ರಭಾತ’ದಲ್ಲಿ ಮಾತ್ರ ಓದಲು ಸಿಗುತ್ತದೆ.
ಆ. ಕೆಲವು ಸಾಧಕರ ಆಧ್ಯಾತ್ಮಿಕ ತೊಂದರೆಗಳಿಗೆ ಸದ್ಗುರು ಡಾ. ಮುಕುಲ ಗಾಡಗೀಳ ಅವರು ಹೇಳಿದ ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯಗಳ ಪರಿಣಾಮಗಳನ್ನು ಓದಿದಾಗ ಆಶ್ಚರ್ಯ ಚಕಿತರಾಗುತ್ತೇವೆ. ಅವರು ಹೇಳಿದ ಆಧ್ಯಾತ್ಮಿಕ ಸ್ತರದ ಉಪಾಯ, ನಾಮಜಪದಿಂದ ತೊಂದರೆಗಳಿಂದ ಮುಕ್ತರಾದ ಸಾಧಕರ ಅನುಭವಗಳನ್ನು ನೋಡಿ ಕೃತಜ್ಞತೆಯ ಭಾವ ವ್ಯಕ್ತವಾಗುತ್ತದೆ.
ಇ. ಕೆಲವೊಮ್ಮೆ ದೈನಿಕದ ಮೂಲಕ ಸಾಧಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಕೇಳಿದ ಪ್ರಶ್ನೋತ್ತರಗಳ ಮಾಧ್ಯಮದಿಂದ ಮನಸ್ಸಿನ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಗಳು ದೊರೆಯುತ್ತವೆ.
ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವೈಶಿಷ್ಟ್ಯಪೂರ್ಣ ದೈವೀ ಪ್ರವಾಸಗಳ ಕುರಿತು ಲೇಖನಗಳಿರುತ್ತವೆ. ಅವರು ಭೇಟಿ ನೀಡುತ್ತಿರುವ ತೀರ್ಥಕ್ಷೇತ್ರಗಳ ಮಹಾತ್ಮೆಯು ಓದುಗರನ್ನು ಆಕರ್ಷಿಸುವಂತಿರುತ್ತವೆ. ಆ ಲೇಖನಗಳನ್ನು ಓದಲಾರಂಭಿಸಿದಾಗ, ‘ನಾವು ಆ ತೀರ್ಥಕ್ಷೇತ್ರದಲ್ಲಿಯೇ ಇದ್ದು ಅಲ್ಲಿನ ಅನುಭವಗಳನ್ನು ಪಡೆಯುತ್ತಿದ್ದೇವೆ’ ಎಂದೆನಿಸುತ್ತದೆ. ಇದರೊಂದಿಗೆ, ‘ಭಾರತೀಯ ಸಂಸ್ಕೃತಿಯು ಎಷ್ಟು ಮಹಾನ ಆಗಿದೆ’ ಎಂಬುದನ್ನೂ ಅನುಭವಿಸಲು ಸಿಗುತ್ತದೆ.
ಉ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ‘ಭಕ್ತಿಸತ್ಸಂಗ’ದ ಅಂಕಣದ ಮೂಲಕ ‘ಭಕ್ತಿಯನ್ನು ಹೇಗೆ ಮಾಡಬೇಕು ?’ ಎಂಬುದರ ಕುರಿತು ಕಲಿಯಲು ಸಿಗುತ್ತದೆ. ಅವರು ಗುರು-ಶಿಷ್ಯರ ಸಂಬಂಧವನ್ನು ವರ್ಣಿಸುವ ಕಥೆಗಳ ಮಾಧ್ಯಮದಿಂದ ಸಾಧಕರನ್ನು ರೂಪಿಸುತ್ತಿದ್ದಾರೆ.
೪. ಹಬ್ಬ ಮತ್ತು ಉತ್ಸವಗಳ ಪರಿಪೂರ್ಣ ಮಾಹಿತಿ
ಭಾರತದಲ್ಲಿ ಬೇರೆಲ್ಲಿಯೂ ಆಚರಣೆ ಮಾಡದೇ ಇರುವಂತಹ ಹಬ್ಬಗಳು ಮತ್ತು ಉತ್ಸವಗಳನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಹಬ್ಬವನ್ನು ಹೇಗೆ ಆಚರಿಸಬೇಕು ? ಅದರ ಶಾಸ್ತ್ರವೇನು ? ಇತ್ಯಾದಿ ಮಾಹಿತಿಯು ದೊರೆಯುವುದರಿಂದ ಹಬ್ಬಗಳನ್ನು ಆಚರಿಸುವವರಿಗೆ ಆನಂದ ಸಿಗುತ್ತದೆ. ಯುಗಾದಿ ಹಬ್ಬದಿಂದ ಹಿಡಿದು ಹೋಳಿ ಹಬ್ಬದ ವರೆಗಿನ ಎಲ್ಲ ಹಬ್ಬಗಳ ಮಹತ್ವ, ಹಾಗೆಯೇ ಈ ಹಬ್ಬಗಳ ಸಮಯದಲ್ಲಿ ಮಾಡುವ ಟೀಕೆಗಳಿಗೆ ತೀಕ್ಷ್ಣವಾದ ಖಂಡನೆಯು ‘ಸನಾತನ ಪ್ರಭಾತ’ದಲ್ಲಿ ಓದಲು ಸಿಗುತ್ತದೆ.
೫. ಸಂಶೋಧನಾತ್ಮಕ ಲೇಖನಗಳು
ಈ ಸಾಪ್ತಾಹಿಕದ ವೈಶಿಷ್ಟ್ಯವೆಂದರೆ ಇದರಲ್ಲಿ ಸಂಶೋಧನಾತ್ಮಕ ಲೇಖನಗಳು ಓದಲು ಸಿಗುತ್ತವೆ. ಹಿಂದೂ ಧರ್ಮದಲ್ಲಿ ಹೇಳಿದ ಆಚರಣೆಯು ಹೇಗೆ ಯೋಗ್ಯವಾಗಿದೆ ಎಂಬುದನ್ನು ವೈಜ್ಞಾನಿಕ ಭಾಷೆಯಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ, ಹಾಗೆಯೇ ಅವುಗಳ ತುಲನಾತ್ಮಕ ಅಧ್ಯಯನ ಮಾಡಿ ವೈಜ್ಞಾನಿಕ ಪರೀಕ್ಷೆಯ ಮೂಲಕ ಮಂಡಿಸಲಾಗುತ್ತದೆ. ಯಾವುದೇ ವಸ್ತುವಿನ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳ ಹಾಗೂ ಅದರಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಘಟಕಗಳಿಂದ ನಮ್ಮ ಮೇಲಾಗುವ ಪರಿಣಾಮಗಳ ಕುರಿತು ಆಳವಾಗಿ ಅಧ್ಯಯನ ಮಾಡಿ ಅದನ್ನು ಮಂಡಿಸಲಾಗುತ್ತದೆ.
೬. ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯದಿಂದ ಪ್ರೇರಿತ ‘ಸನಾತನ ಪ್ರಭಾತ’ !
ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವನ್ನು ಇಟ್ಟುಕೊಂಡು ‘ಸನಾತನ ಪ್ರಭಾತ’ವು ಭಾರತದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆ ಯಾಗಬೇಕು’ ಎಂದು ಆಗ್ರಹಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ೨೭ ವರ್ಷಗಳ ಹಿಂದೆ ‘ಈಶ್ವರಿ ರಾಜ್ಯದ ಸ್ಥಾಪನೆ’ ಎಂಬ ಗ್ರಂಥವನ್ನು ಬರೆದು ಹಿಂದೂ ರಾಷ್ಟ್ರದ ಕುರಿತು ವಿಚಾರವನ್ನು ಮಂಡಿಸಿದ್ದರು ಮತ್ತು ಅದೇ ವಿಚಾರವನ್ನು ‘ಸನಾತನ ಪ್ರಭಾತ’ವು ನಿರಂತರವಾಗಿ ಮಂಡಿಸುತ್ತಾ ಬಂದಿದೆ. ಇದರಿಂದಾಗಿ ಪ್ರಸ್ತುತ ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯು ಬಲ ಪಡೆದಿದೆ. ಪರಿಣಾಮವಾಗಿ ಈ ಕುರಿತು ಜಾಗತಿಕ ಮಟ್ಟದಲ್ಲಿಯೂ ಚರ್ಚೆಗಳು ನಡೆಯಲು ಆರಂಭವಾಗಿವೆ. ಇದು ಕೇವಲ ಮತ್ತು ಕೇವಲ ‘ಸನಾತನ ಪ್ರಭಾತ’ವು ಹಾಕಿದ ಒಂದು ಕಿಡಿಯ ಪರಿಣಾಮವಾಗಿದೆ.
ಇಂತಹ ವಿವಿಧ ರೀತಿಯ ಬರವಣಿಗೆಯನ್ನು ಮಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನ ಅಮೂಲ್ಯ ಕೊಡುಗೆಯನ್ನು ನೀಡಿ ರಾಷ್ಟ್ರ ಮತ್ತು ಧರ್ಮದ ಉನ್ನತಿಗಾಗಿ ಶ್ರಮಿಸುತ್ತಿರುವ ‘ಸನಾತನ ಪ್ರಭಾತ’ಕ್ಕೆ ತ್ರಿವಾರ ವಂದನೆ ! ಇದರೊಂದಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
– ಶ್ರೀ. ಅಶೋಕ ಲಕ್ಷ್ಮಣ ರೇಣಕೆ, ಪಾಟಣತಳಿ, ಫೋಂಡಾ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು