ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೭ ನೆಯ ವರ್ಧಂತ್ಯುತ್ಸವದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಂದೇಶ !

‘ವೈಚಾರಿಕ ಪರಿವರ್ತನೆಯ ತತ್ತ್ವಜ್ಞಾನ ಜನರ ವರೆಗೆ ತಲುಪಿಸುವ ಸಾಮಥ್ಯರ್ವು ದಿನಪತ್ರಿಕೆಗಳಲ್ಲಿ ಇರುತ್ತದೆ. ‘ಸನಾತನ ಪ್ರಭಾತ’ ವು ಆರಂಭದಿಂದಲೇ ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ವಿಚಾರವನ್ನು ಪ್ರಸಾರ ಮಾಡಿತು. ೨೭ ವರ್ಷಗಳ ಹಿಂದೆ ಸಮಾಜದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಉಚ್ಚರಿಸುವುದು ಒಂದು ಅಘೋಷಿತ ಅಪರಾಧವೆಂಬಂತಿತ್ತು. ಅಂತಹ ಕಾಲದಲ್ಲಿ ‘ಈಶ್ವರೀ ರಾಜ್ಯ’, ‘ಹಿಂದೂ ರಾಷ್ಟ್ರ’ ಎಂಬ ಪದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಲ್ಲಿ ಯಾರಾದರೂ ರೂಢಿಗೆ ತಂದಿದ್ದರೆ, ಅದು ‘ಸನಾತನ ಪ್ರಭಾತ‘ !

‘ಸನಾತನ ಪ್ರಭಾತ’ವು ಮೊದಲಿನಿಂದಲೂ ಹಿಂದೂ ರಾಷ್ಟ್ರದೊಂದಿಗೆ ವೈಚಾರಿಕ ಬದ್ಧತೆಯನ್ನು ಕಾಪಾಡಿಕೊಂಡಿದೆ. ‘ಹಿಂದೂ ರಾಷ್ಟ್ರಕ್ಕಾಗಿ ಕಟಿಬದ್ಧ – ಸನಾತನ ಪ್ರಭಾತ !’ ಎಂಬುದು ಈ ಪತ್ರಿಕೆಯ ಧ್ಯೇಯವಾಕ್ಯವೇ ಆಗಿದೆ. ಇದರಿಂದ ‘ಸನಾತನ ಪ್ರಭಾತ’ ವು ಹಿಂದೂ ರಾಷ್ಟ್ರಕ್ಕಾಗಿ ಸದಾ ಕಟಿಬದ್ಧವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ’ ಪ್ರಸಾರಮಾಧ್ಯಮ ಸಮೂಹ (೧೪.೪.೨೦೨೫)
ಕಾಲಮಹಿಮೆಯಂತೆ ಈಗ ಹಿಂದೂ ರಾಷ್ಟ್ರದ ಸ್ಥಾಪನೆಯ ಸಮಯವು ಹತ್ತಿರ ಬಂದಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದಲ್ಲಿ ಕ್ಷಾತ್ರತೇಜದ ಜಾಗೃತಿ ಮೂಡಿಸುವುದು ಕಾಲಾನುಸಾರ ಅಗತ್ಯವಾದ ಕಾರ್ಯವಾಗಿದೆ. ‘ಸನಾತನ ಪ್ರಭಾತ’ವು ಕಳೆದ ೨೭ ವರ್ಷಗಳಿಂದ ಅಖಂಡವಾಗಿ ಈ ವೈಚಾರಿಕ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯಾಗುವ ವರೆಗೆ ಕ್ಷಾತ್ರತೇಜದ ಜಾಗೃತಿ ಮೂಡಿಸುವ ಕಾರ್ಯವನ್ನು ‘ಸನಾತನ ಪ್ರಭಾತ’ವು ವ್ರತದಂತೆ ಪೂರೈಸಲಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ? ಪ್ರಸಾರಮಾಧ್ಯಮ ಸಮೂಹ (೧೪.೪.೨೦೨೫)
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !