
‘೨೨.೪.೨೦೨೫ ರಂದು ಪಹಲಗಾಮ್ (ಜಮ್ಮು-ಕಾಶ್ಮೀರ) ನಲ್ಲಿನ ಭಯೋತ್ಪಾದಕ ಆಕ್ರಮಣದಲ್ಲಿ ೨೮ ಜನರು ಪ್ರಾಣ ಕಳೆದುಕೊಂಡರು. ಈ ಘಟನೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಪರೀತ ಒತ್ತಡ ನಿರ್ಮಾಣವಾಗಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಂತರ ೭.೫.೨೦೨೫ ರಂದು ರಾತ್ರಿ ಭಾರತ ಪಾಕಿಸ್ತಾನದ ೯ ಭಯೋತ್ಪಾದಕ ತಾಣಗಳ ಮೇಲೆ ಕ್ಷಿಪಣಿಗಳಿಂದ ದಾಳಿ ಮಾಡಿ ಅವುಗಳನ್ನು ಧ್ವಂಸಗೊಳಿಸಿತು.

ಪಾಕಿಸ್ತಾನದ ಪರವಾಗಿ ತುರ್ಕಿ ಮತ್ತು ಚೀನಾ ಈ ದೇಶಗಳು ಮುಂದೆ ಬರುತ್ತಿವೆ. ಭಾರತದ ಪರವಾಗಿ ಅಮೇರಿಕಾ, ಇಸ್ರೆಲ್ ಮತ್ತು ರಷ್ಯಾ ಈ ದೇಶಗಳು ಮುಂದೆ ಬರುತ್ತಿವೆ. ಇದರಿಂದ ಎರಡು ಗುಂಪುಗಳಾಗಿ ಮೂರನೆ ಮಹಾಯುದ್ಧ ನಡೆಯುವ ಲಕ್ಷಣ ಕಾಣಿಸುತ್ತಿದೆ. ಈ ಮೇಲಿನ ವಿಷಯಗಳು ತಿಳಿದಾಗ ನನಗೆ ಈ ಮುಂದಿನ ಪ್ರಸಂಗ ನೆನಪಾಯಿತು. ಸುಮಾರು ೫ ವರ್ಷಗಳ ಹಿಂದೆ ಪರಾತ್ಪರ ಗುರು ಡಾಕ್ಟರರು, ”ಮುಂದೆ ಸ್ವಲ್ಪ ಕಾಲದ ನಂತರ ಯಾವುದೋ ಕಾರಣಕ್ಕಾಗಿ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವುದು. ಅನಂತರ ಪಾಕಿಸ್ತಾನವೂ ಭಾರತದ ಮೇಲೆ ಆಕ್ರಮಣ ಮಾಡುವುದು. ಇದರಿಂದ ಮೂರನೇ ಮಹಾಯುದ್ಧದ ಕಿಡಿ ಹೊತ್ತುವುದು ಹಾಗೂ ಅದೇ ಮುಂದೆ ಮೂರನೇ ಮಹಾಯುದ್ಧವಾಗಿ ರೂಪುಗೊಳ್ಳುವುದು” ಎಂದು ಹೇಳಿದ್ದರು.
ಇದರಿಂದ ‘ಪರಾತ್ಪರ ಗುರು ಡಾಕ್ಟರರ ಸೂಕ್ಷ್ಮಜ್ಞಾನದ ಕ್ಷಮತೆ ಹಾಗೂ ದ್ರಷ್ಟಾರತ್ವ ಎಷ್ಟಿದೆಯೆಂಬುದು ತಿಳಿಯುತ್ತದೆ, ಅದೇ ರೀತಿ ಅವರ ಪ್ರತಿಯೊಂದು ವಾಕ್ಯವೂ ನಿಜ ಹಾಗೂ ದೈವಿಕವಾಗಿದೆ’, ಎಂಬುದು ಅರಿವಾಗುತ್ತದೆ. ‘ನಮ್ಮೆಲ್ಲರಿಗೂ ಇಂತಹ ಗುರುಗಳು ಲಭಿಸಿರುವುದಕ್ಕಾಗಿ ನಾನು ಈಶ್ವರನ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ ಗೋವಾ. (೭.೫.೨೦೨೫)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ