ವಾಸ್ತುಶಾಸ್ತ್ರ ಮತ್ತು ವಿಶ್ವ !

‘ವಾಸ್ತುಶಾಸ್ತ್ರದ’ ಬಗ್ಗೆ ಮಾಹಿತಿಯನ್ನು ನೀಡುವ ಲೇಖನಮಾಲೆ !

ಶ್ರೀ. ಶ್ರೇಯಸ್ ಪಿಸೋಳಕರ

ಕಳೆದ ವಾರದ ಲೇಖನದಲ್ಲಿ ನಾವು ‘ಮತ್ಸ್ಯಪುರಾಣ’ ದಲ್ಲಿನ ವಾಸ್ತುಪುರುಷನ ಜನ್ಮದ ಕಥೆಯನ್ನು ಓದಿದೆವು. ಈಗ ರಾಷ್ಟ್ರ ಮತ್ತು ವಾಸ್ತುಶಾಸ್ತ್ರದ ಶಾಸ್ತ್ರವನ್ನು ತಿಳಿದುಕೊಳ್ಳೋಣ. ‘ಭೂರೇವ ಮುಖ್ಯಂ ವಾಸ್ತು |?, ಅಂದರೆ ಪೃಥ್ವಿಯೇ ಮುಖ್ಯ ವಾಸ್ತುವಾಗಿದೆ. ವಾಸ್ತುಶಾಸ್ತ್ರದ ಯಾವ ನಿಯಮಗಳು ನಮ್ಮ ವಾಸ್ತುವಿಗೆ ಅನ್ವಯಿಸುತ್ತವೆಯೋ, ಅವೇ ನಿಯಮಗಳು ಈ ಜಗತ್ತಿನಲ್ಲಿನ ವಿವಿಧ ಭೂಖಂಡಗಳಿಗೂ ಅನ್ವಯಿಸುತ್ತವೆ. ಪ್ರತಿಯೊಂದು ರಾಷ್ಟ್ರದ ಭೌಗೋಳಿಕ ಪರಿಸ್ಥಿತಿ ಮತ್ತು ರಚನೆಯು ಅಲ್ಲಿನ ವಿವಿಧ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಪರಿಣಾಮದಿಂದ ಆ ರಾಷ್ಟ್ರದ ಜನತೆಗೆ ಅದರ ಫಲಗಳನ್ನು ಭೋಗಿಸಬೇಕಾಗುತ್ತದೆ. ವಿವಿಧ ರಾಷ್ಟ್ರಗಳ ರಚನೆ ಮತ್ತು ಭೌಗೋಳಿಕ ಸ್ಥಿತಿಯನ್ನು ವಾಸ್ತುಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿದರೆ, ವಾಸ್ತುಶಾಸ್ತ್ರವು ಸಂಪೂರ್ಣ ಜಗತ್ತಿಗೆ ಹೇಗೆ ಅನ್ವಯಿಸುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. (ಭಾಗ 4)

೧. ಭಾರತ

ಅ. ಭಾರತ ದೇಶದ ಈಶಾನ್ಯ ದಿಕ್ಕಿನಲ್ಲಿ ನೀರು ಮತ್ತು ತಗ್ಗುಗಳ ಬದಲಾಗಿ ಅತೀ ವಿಶಾಲ ಹಿಮಾಲಯ ಪರ್ವತ ನಿರ್ಮಾಣವಾಗಿದೆ. ಈಶಾನ್ಯ ದಿಕ್ಕಿಗೆ ವಾಸ್ತುಪುರುಷನ ಶಿರ(ತಲೆ) ಬರುತ್ತದೆ ಮತ್ತು ಆ ಭಾಗವೇ ಕಡಿಮೆ ಆಗಿರುವುದರಿಂದ ಅದು ವಾಸ್ತುಶಾಸ್ತ್ರಕ್ಕೆ ಸಂಪೂರ್ಣ ವಿರುದ್ಧವಾಗಿದೆ.

ಆ. ಭಾರತದ ಪೂರ್ವಕ್ಕೆ ಬಂಗಾಳದ ಕೊಲ್ಲಿ ಇದೆ, ಪಶ್ಚಿಮಕ್ಕೆ ಅರಬೀ ಸಮುದ್ರ ಮತ್ತು ದಕ್ಷಿಣಕ್ಕೆ ಹಿಂದೂ ಮಹಾಸಾಗರವಿದೆ. ಅಂದರೆ ಆಗ್ನೇಯ ದಿಕ್ಕಿನಲ್ಲಿ ನೀರು ಇರುವುದರಿಂದ ಮಹಿಳೆಯರಿಗೆ ಕಷ್ಟ ಎನ್ನುವ ಫಲವಿದೆ. ನೈಋತ್ಯದಲ್ಲಿಯೂ ನೀರು ಇರುವುದರಿಂದ ಭಾರತದ ಮೇಲೆ ಇಲ್ಲಿಯವರೆಗೆ ಅನೇಕ ಆಕ್ರಮಣಗಳು ಆಗಿವೆ.

ಇ. ಹಿಂದೆ ಭಾರತದ ಪೂರ್ವ ದಿಕ್ಕು ದೊಡ್ಡದಾಗಿತ್ತು; ಆದರೆ ಈಗ ಮ್ಯಾನ್ಮಾರ್‌, ಬಾಂಗ್ಲಾದೇಶ ಈ ದೇಶಗಳು ಭಾರತದ ನಕಾಶೆಯಲ್ಲಿಲ್ಲ. ಆದ್ದರಿಂದ ಭಾರತವು ಈಗ ಹಿಂದಿನಂತೆ ಸಮೃದ್ಧಿಯನ್ನು ಹೊಂದಿಲ್ಲ. ಭಾರತವು ಪೂರ್ವದಿಕ್ಕಿಗೆ ವಾಲಿದೆ. ಇದರಿಂದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಿಷಯಗಳು ಸಂಪೂರ್ಣ ಜಗತ್ತಿನ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ.

ಈ. ಮುಂಬಯಿಯ ಆಗ್ನೇಯ ದಿಕ್ಕಿನಲ್ಲಿ ‘ಭಾಭಾ ಆಟೋಮಿಕ್‌ ರಿಸರ್ಚ ಸೆಂಟರ್’ ಇದೆ. ಆಗ್ನೇಯ ದಿಕ್ಕಿನ ತತ್ತ್ವವು ಅಗ್ನಿತತ್ತ್ವವಾಗಿದೆ. ಹಾಗೆಯೇ ಮುಂಬಯಿಯ ಪಶ್ಚಿಮಕ್ಕೆ ವರುಣನ ದಿಶೆಗೆ ಸಮುದ್ರವಿದೆ. ಇವೆರಡೂ ವಾಸ್ತುಶಾಸ್ತ್ರದ ಪ್ರಕಾರ ಸರಿಯಾಗಿರು ವುದರಿಂದ ಮುಂಬಯಿಯ ಪ್ರಗತಿಯು ಗಮನಾರ್ಹವಾಗಿದೆ.

ಉ. ಗೋವಾ ರಾಜ್ಯದ ‘ಗೋಮಂತಕ’ ಈ ವಾರ್ತಾಪತ್ರಿಕೆಯಲ್ಲಿ ೧ ಜನವರಿ ೨೦೨೫ ರ ದಿನಪತ್ರಿಕೆಯಲ್ಲಿ ಒಂದು ವಾರ್ತೆ ಮುದ್ರಣವಾಗಿತ್ತು. ‘ಉತ್ತರದಲ್ಲಿ ಗದ್ದಲ, ದಕ್ಷಿಣದಲ್ಲಿ ನಿಶ್ಯಬ್ದ !’ ಎಂಬ ಆಶಯದ ಶೀರ್ಷಿಕೆ ಇತ್ತು. ಗೋವಾದ ಸಮುದ್ರತಡದಲ್ಲಿ ಪ್ರವಾಸಿಗರ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಲೇಖನದ ಶೀರ್ಷಿಕೆಯಿಂದ ವಾಸ್ತುಶಾಸ್ತ್ರದ ನಿಯಮ ನಮಗೆ ಕಲಿಯಲು ಸಿಗುತ್ತದೆ. ಉತ್ತರ ದಿಕ್ಕು ಸಮೃದ್ಧಿಯದ್ದಾಗಿದೆ ಮತ್ತು ದಕ್ಷಿಣ ದಿಕ್ಕು ಸಂಘರ್ಷ ಮತ್ತು ಕಷ್ಟಗಳನ್ನು ನೀಡುತ್ತದೆ. ಆದ್ದರಿಂದ ಸ್ವಾಭಾವಿಕವಾಗಿ ಪ್ರವಾಸಿಗರ ಒಲವು ಉತ್ತರದ ಕಡೆಗೆ ಹೆಚ್ಚಾಗಿತ್ತು.

ಊ. ಕಾಶ್ಮೀರ ರಾಜ್ಯದಲ್ಲಿ ಈಶಾನ್ಯ ಮೂಲೆಯು ಚೀನಾದ ವಶದಲ್ಲಿರುವುದರಿಂದ, ಆ ಭಾಗದಲ್ಲಿ ವಾಸ್ತುಪುರುಷನ ಶಿರವು ಬರುವುದರಿಂದ ಒಂದು ರೀತಿ ದೋಷವು ನಿರ್ಮಾಣವಾಗಿದ್ದು ಅದರ ಕೆಟ್ಟ ಪರಿಣಾಮಗಳನ್ನು ಕಾಶ್ಮೀರ ರಾಜ್ಯವು ಭೋಗಿಸಬೇಕಾಗುತ್ತದೆ.

೨. ಜಪಾನ್‌

ಅ. ಜಪಾನ್‌ನ ಕ್ಷೇತ್ರಫಲ ಕಡಿಮೆಯಿದ್ದರೂ ಪ್ರಗತಿ ಗಣನೀಯ ವಾಗಿದೆ; ಕಾರಣ ಅದರ ಈಶಾನ್ಯದಲ್ಲಿ ಪೆಸಿಫಿಕ್‌ ಮಹಾಸಾಗರವಿದೆ.

ಆ. ನೈಋತ್ಯ ಮತ್ತು ದಕ್ಷಿಣ ದಿಕ್ಕುಗಳು ನೀರಿನಿಂದ ಸುತ್ತುವರೆದುದ ರಿಂದ ಜಪಾನ್‌ಗೆ ಹೆಚ್ಚಿನ ಬಾರಿ ಭೂಕಂಪ ಎದುರಿಸಬೇಕಾಗುತ್ತದೆ.

ಇ. ಜಪಾನ್‌ನ ಪೂರ್ವ ಭಾಗವು ಸಾಕಷ್ಟು ದೊಡ್ಡದಾಗಿದೆ. ಆದ್ದರಿಂದ ಅದು ನಿರಂತರವಾಗಿ ಪ್ರಗತಿ ಹೊಂದುತ್ತಿದೆ. ಜಪಾನ್‌ ಈಶಾನ್ಯದ ಕಡೆಗೆ ಬಾಗಿದೆ.

. ಜಪಾನ್‌ನ ರಾಜಧಾನಿ ಟೊಕಿಯೊ ಪೂರ್ವ ದಿಕ್ಕಿಗಿದೆ. ಅದರ ಪೂರ್ವಕ್ಕೆ ಪೆಸಿಫಿಕ್‌ ಮಹಾಸಾಗರವಿದೆ.

೩. ಇಂಗ್ಲೆಂಡ್‌

ಅ. ದೇಶದ ಪಶ್ಚಿಮ ದಿಕ್ಕಿನಲ್ಲಿ ಅಟ್ಲಾಂಟಿಕ್‌ ಮಹಾಸಾಗರವಿದೆ. ಈಶಾನ್ಯಕ್ಕೆ ಸಮುದ್ರವಿದೆ. ಇಂಗ್ಲೆಂಡ್‌ನ ವಿಸ್ತಾರವು ಪೂರ್ವ-ಉತ್ತರ ಭಾಗದ ಕಡೆಗೆ ಹೆಚ್ಚಿರುವುದು ಕಂಡುಬರುತ್ತದೆ. ಪೂರ್ವ ಭಾಗದ ಉದ್ದವು ದಕ್ಷಿಣ ದಿಕ್ಕಿಗಿಂತ ಹೆಚ್ಚು ಇರುವುದರಿಂದ ಅದು ಇಡೀ ಜಗತ್ತನ್ನೇ ಆಳಿತು.

ಆ. ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ ಆಗ್ನೇಯ ದಿಕ್ಕಿನಲ್ಲಿದೆ. ಥೇಮ್ಸ್ ಮಹಾನದಿಯು ಪೂರ್ವಕ್ಕೆ ಹರಿಯುತ್ತಿದೆ. ಲಂಡನ್‌ನ ವಾಯವ್ಯ ಖಂಡದಲ್ಲಿ ಪ್ರಾಣಿಸಂಗ್ರಹಾಲಯ, ರಿಜೇಂಟಸ್‌ ಪಾರ್ಕ ಸೆಂಟ್‌ ಜೊಸೆಫ್‌ ವುಡ್‌ (ಕಾಡು) ಇದ್ದು ಅವು ಪೂರ್ವ-ಉತ್ತರ ಬದಿಗೆ ಇವೆ, ಅಂದರೆ ಆ ಭಾಗವು ಮುಕ್ತವಾಗಿದೆ. ‘ಬಿಬಿಸಿ ಆಫ್‌ ಲಂಡನ್‌’ ವಾಯವ್ಯ ಖಂಡದಲ್ಲಿದೆ.

. ಲಂಡನ್‌ ವಿಶ್ವವಿದ್ಯಾಲಯವು ಈಶಾನ್ಯ ದಿಕ್ಕಿನಲ್ಲಿದೆ.

ಮೇಲಿನ ವಿಷಯಗಳು ವಾಸ್ತುಶಾಸ್ತ್ರದ ಪ್ರಕಾರ ಇರುವುದರಿಂದ ಇಂಗ್ಲೆಂಡ್‌ ಇಡೀ ಜಗತ್ತಿನ ಮೇಲೆ ತನ್ನ ಪ್ರಭಾವ ಬೀರಿದೆ.


‘ವಾಸ್ತು ವಾಸ್ತುಶಾಸ್ತ್ರದ ಪ್ರಕಾರ ಇದೆಯೇ ?’, ಎಂಬುದರ ಸಮಗ್ರ ಅಧ್ಯಯನ ಮಾಡಬೇಕು !

ತಮ್ಮ ಫ್ಲ್ಯಾಟ್‌ ಯಾವ ಕಟ್ಟಡದಲ್ಲಿದೆಯೋ ಅದರ ರಚನೆಯ ಪರಿಣಾಮವು ಫ್ಲ್ಯಾಟ್‌ನ ಮೇಲೆ ಆಗುತ್ತಿರು ತ್ತದೆ. ಕಟ್ಟಡದಲ್ಲಿರುವ ಮೆಟ್ಟಿಲುಗಳ ರಚನೆ, ನೀರಿನ ಸಂಗ್ರಹ, ವಾಹನದ ನಿಲುಗಡೆ ಸ್ಥಳ, ‘ಸೆಪ್ಟಿಕ್‌ ಟ್ಯಾಂಕ್‌’ (ಮಲಕುಂಡ) ಇತ್ಯಾದಿಗಳ ಪರಿಣಾಮವೂ ವಾಸ್ತುವಿನ ಮೇಲೆ ಆಗುತ್ತಿರುತ್ತದೆ. ಆದ್ದರಿಂದ, ಯಾವುದಾದರೊಂದು ವಾಸ್ತು ವಾಸ್ತುಶಾಸ್ತ್ರದ ಪ್ರಕಾರ ಇದೆಯೇ ?’, ಎಂಬುದರ ಬಗ್ಗೆ ಅಧ್ಯಯನ ಮಾಡುವಾಗ, ಮುಖ್ಯ ಸೊಸೈಟಿ, ಕಟ್ಟಡ, ಫ್ಲಾಟ್‌ ಈ ಮೂರು ದೃಷ್ಟಿಯಿಂದ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಅಥವಾ ಪರಿಹಾರೋಪಾಯಗಳನ್ನು ಮಾಡುವಾಗ ಮೂರೂ ವಿಷಯಗಳ ಕುರಿತು ವಿಚಾರ ಮಾಡಬೇಕು.

೪. ಉತ್ತರ ಅಮೇರಿಕಾ

ಅ. ಈ ದೇಶದ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ದೊಡ್ಡ ದಾಗಿದ್ದು, ಈಶಾನ್ಯ ಮೂಲೆಯು ಹೆಚ್ಚಾಗುತ್ತಾ ಹೋಗಿದೆ. ಅಮೇರಿಕಾದ ರಾಜಧಾನಿ ವಾಷಿಂಗ್ಟನ್‌ ಪೂರ್ವದಲ್ಲಿದೆ; ಆದರೆ ಈಶಾನ್ಯ ದಿಕ್ಕಿನಲ್ಲಿರುವ ನ್ಯೂಯಾರ್ಕ ನಗರವು ಹೆಚ್ಚು ಪ್ರಗತಿ ಸಾಧಿಸಿದೆ.

ಆ. ಅಮೇರಿಕದ ಪೂರ್ವ ಭಾಗದಲ್ಲಿ ಉತ್ತರ ಅಟ್ಲಾಂಟಿಕ್‌ ಸಮುದ್ರವಿದ್ದು, ಈಶಾನ್ಯ ಭಾಗದಲ್ಲಿಯೂ ನೀರಿನ ದೊಡ್ಡ ದೊಡ್ಡ ಸರೋವರಗಳಿವೆ. ಅಮೇರಿಕದ ಪಶ್ಚಿಮ ಭಾಗದಲ್ಲಿ ಅತೀ ಎತ್ತರದ ಪರ್ವತಗಳಿವೆ. ಇದರಿಂದ ಅಮೇರಿಕದ ಭೌಗೋಳಿಕ ರಚನೆಯು ಬಹುತೇಕ ವಾಸ್ತುಶಾಸ್ತ್ರದ ಪ್ರಕಾರ ಇರುವುದರಿಂದ ಅದರ ಲಾಭವಾಗಿ ಅಮೇರಿಕಾ ಪ್ರಗತಿ ಹೊಂದಿದ ರಾಷ್ಟ್ರವಾಗಿದೆ.

೫. ವಾಸ್ತುಶಾಸ್ತ್ರದ ಪ್ರಕಾರ ವಾಸ್ತುವನ್ನು ನಿರ್ಮಿಸಿ ಸಂಬಂಧಿತ ಪರಿಣಾಮಗಳನ್ನು ಎದುರಿಸುವ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಆವಶ್ಯಕ !

ಮೇಲಿನ ಅಂಶಗಳು ಭೌಗೋಳಿಕ ದೃಷ್ಟಿಯಿಂದ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತವೆ. ಯಾವುದಾದರೊಂದು ಗ್ರಾಮದಲ್ಲಿ ರೋಗವು ಹರಡಿದರೆ, ಗ್ರಾಮದಲ್ಲಿನ ಎಲ್ಲರೂ ರೋಗದಿಂದ ಸಾಯುತ್ತಾರೆ, ಎಂದಿಲ್ಲ, ಯಾರ ರೋಗನಿರೋಧಕ ಸಾಮಥ್ಯರ್ವು ಉತ್ತಮವಾಗಿರುತ್ತದೆಯೋ ಅವರ ಮೇಲೆ ಕಡಿಮೆ ಪರಿಣಾಮವಾಗುತ್ತದೆ ಅಥವಾ ಕೆಲವರ ಮೇಲೆ ಪರಿಣಾಮವೇ ಆಗುವುದಿಲ್ಲ. ಅದೇ ರೀತಿ, ಭೌಗೋಳಿಕ ಪರಿಸ್ಥಿತಿ ಅನುಕೂಲಕರವಾಗಿರದಿದ್ದರೂ, ನಾವು ನಮ್ಮ ವಾಸ್ತುವನ್ನು ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಿ ಸಂಬಂಧಿತ ಪರಿಣಾಮಗಳನ್ನು ಎದುರಿಸುವ ಪ್ರತಿರೋಧಕ ಶಕ್ತಿ ಹೆಚ್ಚಿಸಬಹುದು; ಏಕೆಂದರೆ ಭೌಗೋಳಿಕ ಪರಿಸ್ಥಿತಿ ನಮ್ಮ ಕೈಯಲ್ಲಿರುವುದಿಲ್ಲ.

ಭಾರತದಲ್ಲಿ ಭೌಗೋಳಿಕ ಪರಿಸ್ಥಿತಿಯು ಸ್ವಲ್ಪ ಪ್ರತಿಕೂಲ ವಾಗಿದ್ದರೂ, ಋಷಿ-ಮುನಿಗಳು ದೇಶಕ್ಕೆ ನೀಡಿದ ವಾಸ್ತುಶಾಸ್ತ್ರದ ಜ್ಞಾನ, ನಿರ್ಮಿಸಿದ ಜಾಗೃತ ದೇವಸ್ಥಾನಗಳು, ಶಕ್ತಿಪೀಠಗಳು ಇತ್ಯಾದಿಗಳಿಂದ ಒಂದು ರೀತಿಯಲ್ಲಿ ಈ ಭೌಗೋಳಿಕ ಪ್ರತಿಕೂಲತೆಯನ್ನು ಎದುರಿಸಲು ಶಕ್ತಿಯನ್ನೇ ನೀಡಲಾಗಿದೆ. ತದ್ವಿರುದ್ಧ ಇತರ ರಾಷ್ಟ್ರಗಳಲ್ಲಿ ಭೌಗೋಳಿಕ ಪರಿಸ್ಥಿತಿ ಅನುಕೂಲಕರವಾಗಿದ್ದರೂ, ಅವರು ಆಂತರಿಕ ವಿನ್ಯಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿದ್ದಾರೆ. ಅದು ವಾಸ್ತುಶಾಸ್ತ್ರದ ಪ್ರಕಾರ ಸರಿಯಾಗಿರಲೇಬೇಕು ಎಂದಿಲ್ಲ. ಆದ್ದರಿಂದ ಇತರ ರಾಷ್ಟ್ರಗಳಲ್ಲಿ ಕುಟುಂಬ ವ್ಯವಸ್ಥೆಯು ನಾಶವಾಗುತ್ತಿರುವುದು ಕಾಣಿಸುತ್ತಿದೆ. ಅದರೊಂದಿಗೆ ಭೌಗೋಳಿಕ ಪರಿಸ್ಥಿತಿಯ ಲಾಭವು ಸಿಗುವುದಿಲ್ಲ.

೬. ವಾಸ್ತು ಜೊತೆ ಪರಿಸರದ ಅಧ್ಯಯನ ಮಾಡಬೇಕು !

ನಾವು ರಾಷ್ಟ್ರದ ಭೌಗೋಳಿಕ ದೃಷ್ಟಿಕೋನದಿಂದ ವಿಚಾರ ಮಾಡಿದಂತೆ, ಊರಿನ ಅಥವಾ ಕಟ್ಟಡದ ದೃಷ್ಟಿಯಿಂದಲೂ ವಿಚಾರ ಮಾಡಬೇಕಾಗುತ್ತದೆ; ಏಕೆಂದರೆ ಕಟ್ಟಡದ ರಚನೆಯ ಪರಿಣಾಮವೂ ನಮ್ಮ ಮೇಲಾಗುತ್ತದೆ. ರಸ್ತೆಯು ನಮ್ಮ ಮನೆಯವರೆಗೆ ಬರುತ್ತದೆ ಅಥವಾ ಮುಖ್ಯ ನೀರಿನ ಟ್ಯಾಂಕ್‌ನಿಂದ ನಮ್ಮ ವಾಸ್ತುವಿನ ವರೆಗೆ ನೀರು ಬರುತ್ತಿರುತ್ತದೆ. ಆದ್ದರಿಂದ ಯಾವುದಾದರೊಂದು ವಾಸ್ತುವಿನ ಅಧ್ಯಯನ ಮಾಡುವಾಗ ಅದರ ಪರಿಸರದ ಅಧ್ಯಯನ ಮಾಡುವುದೂ ಆವಶ್ಯಕವಾಗಿರುತ್ತದೆ.

೭. ವಾಸ್ತುವಿನ ಬಗ್ಗೆ ಆಳ ಅಧ್ಯಯನ ಮಾಡಬೇಕು !

ವಾಸ್ತುವಿನ ಅಧ್ಯಯನ ಮಾಡುವಾಗ ದೇವರಮನೆ, ಅಡುಗೆಮನೆ ಅಥವಾ ಮಲಗುವ ಕೋಣೆ ಎಲ್ಲಿರಬೇಕು ? ಎಂಬಂತಹ ಮೇಲುಮೇಲಿನ ವಿಷಯಗಳ ಅಧ್ಯಯನ ಮಾಡಿ ಅದಕ್ಕನುಸಾರ ವಾಸ್ತುಶಾಸ್ತ್ರದ ವಿಚಾರ ಮಾಡುವುದು ಸರಿಯಾಗಿರುವುದಿಲ್ಲ; ಏಕೆಂದರೆ ಭೂಮಿಯ ಆಕಾರ ಇಳಿಜಾರು, ಯಜಮಾನನ ಜಾತಕದ ಪ್ರಕಾರ ಆ ಭೂಮಿಯ ಒಳಿತು-ಕೆಡುಕಿನ, ವಿಥಿಶೂಲ ದೋಷ (ಮನೆಯ ದಿಕ್ಕುಗಳಿಂದಾಗಿ ನಿರ್ಮಾಣವಾಗುವ ದೋಷ), ಭೂಗರ್ಭದ ಶಕ್ತಿ, ವಿದ್ಯುತ್‌ ಶಕ್ತಿ, ಪ್ರವೇಶದ್ವಾರ, ಮರಗಳು, ಚಿತ್ರಕಲೆ ಇತ್ಯಾದಿ ವಿಷಯಗಳ ಆಳವಾದ ವಿಚಾರ ಮಾಡಿ ವಾಸ್ತುವಿನ ಅಧ್ಯಯನ ಮಾಡಬೇಕು. ವಾಸ್ತು ಪರಿಹಾರ ಮಾಡುವಾಗ ಇನ್ನೊಂದು ದೋಷವನ್ನು ಸೃಷ್ಟಿಸುತ್ತಿಲ್ಲವಲ್ಲ ? ಎಂದು ನೋಡಬೇಕು.

– ಶ್ರೀ. ಶ್ರೇಯಸ ಪಿಸೋಳಕರ, ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ; ಫೋಂಡಾ, ಗೋವಾ.