ಸಂಸ್ಕೃತ ಭಾಷೆಯಲ್ಲಿನ ‘ವಂದೇ ಮಾತರಮ್‌’ ರಾಷ್ಟ್ರಗೀತೆಯನ್ನು ಹಾಡಿದ ಸಾಧಕಿಯರಲ್ಲಿನ ಸಕಾರಾತ್ಮಕತೆ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುವುದು

‘ವಂದೇ ಮಾತರಮ್‌’ ಈ ಗೀತೆ ಸ್ವಾತಂತ್ರ್ಯಸಂಗ್ರಾಮದ ಅವಿಭಾಜ್ಯ ಅಂಗವಾಗಿತ್ತು; ಅಥವಾ ‘ವಂದೇ ಮಾತರಮ್‌’ ಇಲ್ಲದೇ ಭಾರತೀಯ ಸ್ವಾತಂತ್ರ್ಯಹೋರಾಟವು ಅಪೂರ್ಣವೇ ಎಂದು ಹೇಳಬೇಕಾಗುವುದು. ‘ವಂದೇ ಮಾತರಮ್‌ !’ ಈ ಎರಡು ಶಬ್ದಗಳು ಸಾವಿರಾರು ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡಿದವು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಹೋರಾಟಕ್ಕೆ ಇದೊಂದು ಮೂಲಮಂತ್ರವೇ ಆಯಿತು ! ‘ವಂದೇ ಮಾತರಮ್‌’ ಇದು ಭಾರತೀಯ ಸ್ವಾತಂತ್ರ್ಯಹೋರಾಟಕ್ಕೆ ಎಷ್ಟೊಂದು ಪ್ರೇರಕ ಮಂತ್ರವಾಗಿತ್ತೆಂದರೆ, ಮೇಡಮ್‌ ಕಾಮಾ ಇವರು ‘ವಂದೇ ಮಾತರಮ್‌’ ಈ ಶಬ್ದಗಳನ್ನು ಭಾರತದ ಉದ್ದೇಶಿತ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ ಎದ್ದು ಕಾಣುವಂತೆ ಸ್ಥಾನ ನೀಡಿದರು ಮತ್ತು ೧೯೦೭ ರಲ್ಲಿ  ಬರ್ಲಿನ್‌ನಲ್ಲಿ ಆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯು ಇಂದಿಗೂ, ಅಂದರೆ ಅದರ ರಚನೆಯ ೧೫೦ ವರ್ಷಗಳ ನಂತರವೂ ರಾಷ್ಟ್ರಾಭಿಮಾನಿಗಳಲ್ಲಿ ಜಾಜ್ವಲ್ಯ ರಾಷ್ಟ್ರಭಕ್ತಿ ಮತ್ತು ಭಾರತಭೂಮಿಯ ಬಗ್ಗೆ ಅತ್ಯಂತ ಪ್ರೀತಿಯನ್ನು ಹುಟ್ಟಿಸುವಲ್ಲಿ ಸಿಂಹಪಾಲನ್ನು ಹೊಂದಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಸ್‌. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ ನಂತರ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು  ೧೧.೮.೨೦೧೮ ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಸ್‌. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣವನ್ನು ಬಳಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಸೌ. ಮಧುರಾ ಧನಂಜಯ ಕರ್ವೆ

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಇಬ್ಬರು ಸಾಧಕಿಯರು ಭಾಗವಹಿಸಿದ್ದರು. ಪರೀಕ್ಷಣೆಯಲ್ಲಿನ ಮೊದಲನೇ ಸಾಧಕಿಗೆ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇತ್ತು, ಇನ್ನೊಬ್ಬ ಸಾಧಕಿಗೆ ಆಧ್ಯಾತ್ಮಿಕ ತೊಂದರೆ ಇರಲಿಲ್ಲ. ಇಬ್ಬರು ಸಾಧಕಿಯರು ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡುವ ಮೊದಲು ಮತ್ತು ಹಾಡಿದ ನಂತರ ಅವರ ‘ಯುಎ.ಎಸ್.’ ಉಪಕರಣದಿಂದ ನಿರೀಕ್ಷಣೆ ಮಾಡಲಾಯಿತು. ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದಾಗ ಸಾಧಕಿಯರ ಮೇಲಾದ ಪರಿಣಾಮವನ್ನು ಮುಂದೆ ಕೊಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ – ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ ಸಾಧಕಿಯರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ ನಂತರ ಇಬ್ಬರು ಸಾಧಕಿಯರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಅಥವಾ ಅದರಲ್ಲಿ ಹೆಚ್ಚಳವಾಯಿತು. ಇದು ಮುಂದೆ ನೀಡಿದ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

೨. ನಿಷ್ಕರ್ಷ

‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ ಇಬ್ಬರೂ ಸಾಧಕಿಯರ ಮೇಲೆ ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ ನಂತರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ ಮತ್ತು ತೊಂದರೆ ಇಲ್ಲದಿರುವ ಸಾಧಕಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗುವುದು ಮತ್ತು ಅದರ ಹಿಂದಿನ ಕಾರಣಮೀಮಾಂಸೆ

೩ ಅ ೧. ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯು ಸಂಸ್ಕೃತ ಭಾಷೆಯಲ್ಲಿ ಇರುವುದರಿಂದ, ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಮತ್ತು ಅವಳನ್ನು ಸ್ತುತಿಸಿರುವುದರಿಂದ ಈ ಗೀತೆಯಲ್ಲಿ ಶಕ್ತಿ ಮತ್ತು ಚೈತನ್ಯವಿದೆ : ಸಂಸ್ಕೃತವು ಜಗತ್ತಿನಲ್ಲಿನ ಅತ್ಯಧಿಕ ಸಾತ್ತ್ವಿಕ ಭಾಷೆಯಾಗಿದೆ. ಸಾತ್ತ್ವಿಕ ಭಾಷೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ರಾಷ್ಟ್ರಭಕ್ತರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು ರಚಿಸಿದ ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯು ಸಂಸ್ಕೃತ ಭಾಷೆಯಲ್ಲಿ ಇರುವುದರಿಂದ, ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಮತ್ತು ಅವಳನ್ನು ಸ್ತುತಿಸಿರುವುದರಿಂದ ಅದರಲ್ಲಿ ಶಕ್ತಿ ಮತ್ತು ಚೈತನ್ಯವಿದೆ. ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡುವಾಗ ಮಾತೃಭೂಮಿಯ ಬಗೆಗಿನ ಪ್ರೀತಿ ಮತ್ತು ಗೌರವ ಉಂಟಾಗುತ್ತದೆ. ಆದ್ದರಿಂದ ಹಾಡುವವರಲ್ಲಿ ರಾಷ್ಟ್ರದ ಬಗೆಗಿನ ಅಸ್ಮಿತೆ (ಆತ್ಮಾಭಿಮಾನ) ಹೆಚ್ಚಾಗಿ ರಾಷ್ಟ್ರನಿಷ್ಠೆ ಪ್ರಬಲವಾಗುತ್ತದೆ.

ಪರೀಕ್ಷಣೆಯಲ್ಲಿನ ಸಾಧಕಿಯರು ‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡಿದ್ದರಿಂದ ಅವರಿಗೆ ಗೀತೆಯಲ್ಲಿನ ಶಕ್ತಿ ಮತ್ತು ಚೈತನ್ಯದ ಲಾಭವಾಯಿತು. ಆದ್ದರಿಂದ ಇಬ್ಬರೂ ಸಾಧಕಿಯರಿಗೆ ‘ಅವರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗುವುದು, ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು’, ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿನ ಲಾಭವಾಯಿತು.

‘ವಂದೇ ಮಾತರಮ್‌’ ಈ ರಾಷ್ಟ್ರಗೀತೆಯನ್ನು ಹಾಡುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗುತ್ತದೆ’, ಇದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಿ-ಅಂಚೆ : [email protected]