
‘೧೨.೭.೨೦೨೫ ರಂದು ಸಾಯಂಕಾಲ ಸೌ. ಮೀನಾ ಎಂಬ ಹೆಸರಿನ ಓರ್ವ ಸಾಧಕಿಯು ಒಂದು ಸೇವೆಯ ನಿಮಿತ್ತ ನನ್ನ ಹತ್ತಿರ ಬಂದಿದ್ದಳು. ಆ ಸಮಯದಲ್ಲಿ ನನಗೆ, ಅವಳ ನಿಜವಾದ ಹೆಸರು ‘ಮೀನಾಕ್ಷಿ’ ಆಗಿದ್ದರೂ ಅವಳು ಮೊದಲಿನಿಂದಲೂ ‘ಮೀನಾ’ ಎಂಬ ಹೆಸರನ್ನೇ ಇಟ್ಟುಕೊಂಡಿದ್ದಾಳೆ, ಎಂದು ತಿಳಿಯಿತು. ಅವಳು ‘ಮೀನಾ’ ಮತ್ತು ‘ಮೀನಾಕ್ಷಿ’ ಈ ಹೆಸರುಗಳನ್ನು ಉಚ್ಚರಿಸಿದಾಗ ನಾನು ‘ಅವಳ ಬಾಯಿಯಿಂದ ಈ ಎರಡೂ ಹೆಸರುಗಳನ್ನು ಕೇಳಿದ ನಂತರ’ ಮತ್ತು ನಂತರ ‘ಅವಳು ತನ್ನ ಹೆಸರನ್ನು ಉಚ್ಚರಿಸಿದ ನಂತರ’, ಹೀಗೆ ಎರಡು ಪ್ರಯೋಗಗಳನ್ನು ಮಾಡಿದೆನು. ಆ ಸಮಯದಲ್ಲಿ ನನಗೆ ಅರಿವಾದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.
೧. ‘ಮೀನಾ’ ಈ ಹೆಸರಿನ ಅರ್ಥ, ಆ ಹೆಸರಿನಿಂದ ಆ ವ್ಯಕ್ತಿಯ ಮನಸ್ಸಿನ ಮೇಲಾಗುವ ಪರಿಣಾಮ ಮತ್ತು ಅವಳ ಹೆಸರಿನಿಂದ ಅರಿವಾಗುವ ಸ್ವಭಾವ
೧ ಅ. ಅರ್ಥ
೧. ‘ಮೀನಾ’ ಈ ಹೆಸರನ್ನು ಬಿಡಿಸಿ ಹೇಳಿದರೆ ‘ಮೀ’ + ‘ನಾ’ ಎಂದಾಗುತ್ತದೆ. ಇದನ್ನು ಕನ್ನಡಕ್ಕೆ ಅನುವಾದಿಸಿದರೆ ‘ನಾನು + ‘ಇಲ್ಲ’ ಎಂದಾಗುತ್ತದೆ ! ‘ನಾನು ಎಂದರೆ ‘ಸ್ವತಃ’ ತಾನೇ ಮತ್ತು ‘ನಾ ಅಂದರೆ ಇಲ್ಲ.’ ಆದ್ದರಿಂದ ‘ಮೀನಾ’ ಈ ಹೆಸರನ್ನು ಉಚ್ಚರಿಸಿದಾಗ ‘ನಾನು ಇಲ್ಲ’, ಎಂಬ ಅರ್ಥ ಬರುತ್ತದೆ ಮತ್ತು ‘ಅವನು ನಾನಲ್ಲ (ಮರಾಠಿಯಲ್ಲಿನ ಒಂದು ತುಂಬಾ ಪ್ರಸಾರವಾದ ನಾಟಕದ ಹೆಸರು) !’, ಎಂದು ಅವಳ ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ ಮತ್ತು ‘ಕಾಲಾಂತರದಲ್ಲಿ ಅದರ ಸಂಸ್ಕಾರವೂ ಅದೇ ರೀತಿ ಆಗುತ್ತದೆ’, ಎಂದು ನನಗೆ ಅನಿಸಿತು.
೨. ಕೊಂಕಣದ ಮಾಲವಣಿ ಭಾಷೆಗನುಸಾರ ‘ಮೀನಾ’ ಈ ಶಬ್ದವನ್ನು ‘ನಾನು ಅಲ್ಲ’. ‘ನಾನು ಇದನ್ನು ಮಾಡಿಲ್ಲ’ ಅಥವಾ ‘ನಾನು ಅದನ್ನು ಮಾಡುವುದಿಲ್ಲ’ ಅಥವಾ ‘ನನ್ನಿಂದಾಗಿ ಅಗಿಲ್ಲ’, ಅಥವಾ ‘ನನಗೆ ಅದರೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂಬ ಅರ್ಥದಿಂದ ಬಳಸಲಾಗುತ್ತದೆ.
೧ ಆ. ಸ್ವಭಾವ
೧. ಅವಳ ಸ್ವಭಾವವೆಂದರೆ ‘ಯಾರಾದರೂ ಅವಳಿಗೆ ಏನಾದರೂ ಹೇಳಿದರೆ ‘ನಾನು ಇಲ್ಲ’ ಎಂಬ ಭೂಮಿಕೆಯಿಂದ ‘ಈ ವಿಷಯವನ್ನು ತಮ್ಮ ಮೇಲೆ ಎಳೆದುಕೊಳ್ಳುವುದಿಲ್ಲ’, ಎಂದು ನನಗೆ ಇಲ್ಲಿ ಅರಿವಾಗುತ್ತದೆ.
೨. ಹಾಗೆಯೇ ‘ಯಾವುದೇ ವಿಷಯವನ್ನು ಸುಲಭವಾಗಿ ಸ್ವೀಕರಿಸಬಾರದು’, ಎಂಬುದನ್ನು ಪ್ರಯತ್ನಪೂರ್ವಕವಾಗಿ ಅವರ ಗಮನಕ್ಕೆ ತಂದು ಕೊಡಬೇಕಾಗುತ್ತದೆ. ಆದುದರಿಂದ ಯಾರಾದರೂ ಅವರಿಗೆ ಏನಾದರೂ ಹೇಳಿದರೆ, ಸಲಹೆ ನೀಡಿದರೆ ಅಥವಾ ಅವರಿಗೆ ಸೇವೆಯಲ್ಲಿನ ಲೋಪದೋಷ ಇತ್ಯಾದಿಗಳನ್ನು ಹೇಳಿದರೂ ಅದರ ಬಗ್ಗೆ ಅವರ ಸ್ಪಷ್ಟೀಕರಣವಿರುತ್ತದೆ.
೩. ಅವರಿಗೆ ಯಾರಾದರೂ ಏನಾದರೂ ಹೇಳಿದರೆ, ಅವಶ್ಯಕತೆ ಇಲ್ಲದಿದ್ದರೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಒಂದು ವಾಕ್ಯವನ್ನಾದರೂ ಮಾತನಾಡುತ್ತಾರೆ.
೨. ಸೌ. ಮೀನಾ ಇವರ ಹೆಸರಿನಿಂದ ಅರಿವಾದ ಅವರ ಸ್ವಭಾವ
‘ಮೀನಾ’ ಈ ಹೆಸರಿನ ನಕಾರಾತ್ಮಕ ಪರಿಣಾಮ ಆ ವ್ಯಕ್ತಿಯ ಸ್ವಭಾವದ ಮೇಲೆ ಆಗುತ್ತದೆಯೇ ? ಅಂದರೆ ‘ನಾನು ಇದನ್ನು ಮಾಡಿಲ್ಲ’, ನನ್ನಿಂದಾಗಿ ಈ ತಪ್ಪು ನಡೆದಿಲ್ಲ’, ‘ನಾನು ಇದಕ್ಕೆ ಜವಾಬ್ದಾರಳಲ್ಲ’, ಇತ್ಯಾದಿ ಅಥವಾ ‘ಏನೇ ಹೇಳಿದರೂ ಅದನ್ನು ದುರ್ಲಕ್ಷಿಸಲಾಗುತ್ತಿತ್ತು’, ‘ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ’, ‘ಮಾತನಾಡುವಾಗ ಸ್ಪಷ್ಟೀಕರಣವಿರುತ್ತದೆ’ ಇತ್ಯಾದಿಗಳಂತೆ
ಸೌ. ಮೀನಾ ಇವರ ಸ್ವಭಾವವೂ ಸ್ವಲ್ಪ ಮಟ್ಟಿಗೆ ಹಾಗಿದೆ. ಅವರಲ್ಲಿ ಸೇವೆಯ ತಳಮಳವಿದೆ, ಅವರು ಜವಾಬ್ದಾರಿ ವಹಿಸಿ ಸೇವೆಯನ್ನು ಮಾಡುತ್ತಾರೆ. ಪ್ರತಿದಿನ ದೂರದಿಂದ ಪ್ರಯಾಣ ಮಾಡಿ ಬೆಳಗ್ಗೆ ಆಶ್ರಮಕ್ಕೆ ಸಾಧನೆಗಾಗಿ ಬರುತ್ತಾರೆ. ಆಶ್ರಮಕ್ಕೆ ಬರುವಾಗ ಅವರು ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಬರುತ್ತಾರೆ. ಅವರ ಆಧ್ಯಾತ್ಮಿಕ ಪ್ರಗತಿಯೂ ಆಗಿದೆ, ಆದರೂ ಅವರಲ್ಲಿ ಮೇಲಿನ ಸ್ವಭಾವದೋಷಗಳ ತೀವ್ರತೆ ನನಗೆ ಅರಿವಾಗುತ್ತದೆ.
೩. ‘ಮೀನಾ’ ಮತ್ತು ‘ಮೀನಾಕ್ಷಿ’ ಈ ಹೆಸರುಗಳನ್ನು ಉಚ್ಚರಿಸಿದಾಗ ಅವುಗಳ ಪರಿಣಾಮದಲ್ಲಿ ಅರಿವಾದ ವ್ಯತ್ಯಾಸ
‘ಮೀನಾ’ ಹೆಸರಿನ ಪರಿಣಾಮ ‘ಮೀನಾಕ್ಷಿ’ ಹೆಸರಿನ ಪರಿಣಾಮ
೧. ಹೆಸರು ಯಾರದ್ದು ? ಮಾನವ ನಿರ್ಮಿತ ಸರ್ವಸಾಮಾನ್ಯ ಹೆಸರು ದೇವಿ ಪಾರ್ವತಿಯ ಹೆಸರುಗಳಲ್ಲಿನ ಒಂದು ಹೆಸರು
೨. ಸಹಸ್ರಾರ ಚಕ್ರದ ಮೇಲಾಗುವ ಪರಿಣಾಮ
೨ ಅ. ಸ್ಪಂದನಗಳು ಸ್ವಲ್ಪ ತೊಂದರೆದಾಯಕ ಸ್ಪಂದನಗಳ ಅರಿವಾಗುವುದು ಒತ್ತಡ ಕಡಿಮೆಯಾಗಿ ಹಗುರತೆಯ ಅರಿವಾಗುವುದು
೨ ಆ. ಸಹಸ್ರಾರ ಚಕ್ರದ ಮೇಲಿರುವ ಹಾಲಿನ ಬಣ್ಣದ ಸಹಸ್ರದಳ ಕಮಲ ಕಮಲ ವೇಗದಿಂದ ಅಲುಗಾಡುವುದು, ಅದರ ಪಕಳೆಗಳು ಅಂಕುಡೊಂಕಾಗುವುದು ಮತ್ತು ನಂತರ ಅವು ಬಾಡುತ್ತಾ ಕ್ರಮೇಣ ಮುಚ್ಚಿಹೋಗುವುದು ಕಾಣಿಸುವುದು ಕಮಲವು ಸಂಪೂರ್ಣವಾಗಿ ಅರಳುವುದು, ಕಮಲದ ಸುತ್ತಲೂ ಬಹಳಷ್ಟು ಸುವರ್ಣ ಬಣ್ಣದ ದೈವಿ ಕಣಗಳು ಕಾಣಿಸುವುದು, ಕಮಲದ ಸುತ್ತಲಿನ ವಾತಾವರಣವು ಸುವರ್ಣ ಪ್ರಕಾಶಮಯ ಬಣ್ಣದ ಮತ್ತು ದೈವೀಯಾಗಿರುವುದು ಕಾಣಿಸುವುದು, ಹಾಗೆಯೇ ಅದು ದೇವಲೋಕದ ಯಾವುದೋ ಒಂದು ವಾತಾವರಣದಂತೆ ಕಾಣಿಸುವುದು
೩. ವಿಶುದ್ಧ ಚಕ್ರ ಮತ್ತು ಉಸಿರಾಟದ ಮೇಲಾಗುವ ಪರಿಣಾಮ ನಕಾರಾತ್ಮಕ ಪರಿಣಾಮವಾಗುವುದು, ಅದರಿಂದ ಹೆಸರನ್ನು ಪುನಃ ಪುನಃ ಉಚ್ಚರಿಸುವಾಗ ನಿಧಾನವಾಗಿ ಉಸಿರಾಟ ನಿಲ್ಲುವುದು ಮತ್ತು ಉಸಿರು ಕಷ್ಟಕರವಾಗುವುದು ಸಕಾರಾತ್ಮಕ ಪರಿಣಾಮವಾಗುವುದು, ಹೆಸರನ್ನು ಪುನಃ ಪುನಃ ಉಚ್ಚರಿಸುವಾಗ ಉಸಿರು ದೀರ್ಘವಾಗುವುದು ಮತ್ತು ಉಸಿರಾಟ ಸರಾಗವಾಗುತ್ತಾ ಹೋಗುವುದು
೪. ಅನಾಹತಚಕ್ರ ಮತ್ತು ಮನಸ್ಸಿನ ಮೇಲಿನ ಪರಿಣಾಮ ಇಲ್ಲಿಂದ ಚೈತನ್ಯ ಗ್ರಹಣವಾಗುವುದು ಮತ್ತು ನಿಲ್ಲುವುದು, ‘ಮನಸ್ಸು ಒಂದು ತೊಂದರೆದಾಯಕ ಟೊಳ್ಳಿನಲ್ಲಿದೆ’, ಎಂದು ಅರಿವಾಗುವುದು ಅದರ ಸ್ಥಳದಲ್ಲಿ ಸಕಾರಾತ್ಮಕ ಊರ್ಜೆಯ ಅರಿವಾಗುವುದು, ಹೆಸರನ್ನು ಉಚ್ಚರಿಸಿದಾಗ ಚಕ್ರದ ಸ್ಥಳದಲ್ಲಿ ಒಳ್ಳೆಯ ಭಾವ ನಿರ್ಮಾಣವಾಗುವುದು, ಮನಸ್ಸಿಗೆ ಆನಂದ ಮತ್ತು ಶಾಂತಿ ಅನಿಸುವುದು, ನಿಧಾನವಾಗಿ ಮನಸ್ಸು ನಿರ್ವಿಚಾರವಾಗುವುದು
೫. ಹೆಸರನ್ನು ಉಚ್ಚರಿಸಿದ ನಂತರ ನಕಾರಾತ್ಮಕತೆಯ ಅರಿವಾಗುವುದು ಸಕಾರಾತ್ಮಕತೆಯ ಅರಿವಾಗುವುದು
೫ ಅ. ಆ ಸಮಯದಲ್ಲಿ ಮನಸ್ಸಿನಲ್ಲಿ ಯಾವ ಭಾವ ಬರುತ್ತವೆ ? ಸಂಕುಚಿತ ಅನಿಸುವುದು, ‘ಮನಸ್ಸು ನಕಾರಾತ್ಮಕ ಮತ್ತು ರಕ್ಷಣಾತ್ಮಕ ಸ್ಥಿತಿಗೆ ಹೋಗುತ್ತಿದೆ’, ಎಂದು ಅನಿಸುವುದು ಮನಸ್ಸು ವ್ಯಾಪಕವಾಗುವುದು, ‘ಮನಸ್ಸು ಸ್ವೀಕರಿಸುವ ಸ್ಥಿತಿಗೆ ಬರುತ್ತಿದೆ’, ಎಂದು ಅನಿಸುವುದು
೬. ಪ್ರತ್ಯಕ್ಷ ಆಯಾ ಹೆಸರುಗಳಿರುವ ಸಾಧಕಿಯರ ಮೇಲೆ ಅವರ ಹೆಸರುಗಳಲ್ಲಿನ ಸ್ಪಂದನಗಳ ಪರಿಣಾಮವಾಗಿ ಅವರಲ್ಲಿ ಕಂಡು ಬಂದ ಗುಣ-ದೋಷಗಳು ‘ಆತುರತೆ, ಅಧೀರತೆ, ತಿಳಿಗೇಡಿತನ’, ಈ ದೋಷಗಳು ಹೆಚ್ಚಾಗುತ್ತಿವೆ’, ಎಂದು ಅರಿವಾಗುವುದು ‘ಸಂಯಮ ಮತ್ತು ತಿಳುವಳಿಕೆ’, ಈ ಗುಣಗಳು ಹೆಚ್ಚಾಗುತ್ತಿವೆ’, ಎಂದು ಅರಿವಾಗುವುದು
೭. ಸಂಬಂಧಿತ ಸಾಧಕಿಯರ ಹೆಸರುಗಳನ್ನು ಉಚ್ಚರಿಸಿದಾಗ ಅವರ ಮುಖದ ಮೇಲೆ ಕಂಡು ಬಂದ ಬದಲಾವಣೆ ‘ಮೀನಾ’ ಈ ಹೆಸರನ್ನು ಉಚ್ಚರಿಸಿದಾಗ ಅವರ ಮುಖ ಕಣ್ಮುಂದೆ ಬರುವುದು, ಆ ಸಮಯದಲ್ಲಿ ಆ ಹೆಸರಿನ ಸ್ಪಂದನಗಳ ನಕಾರಾತ್ಮಕ ಪರಿಣಾಮವು ಅವರ ಮನೋದೇಹದ ಮೇಲೆ ಆಗುವುದರಿಂದ ಅವರ ಮುಖ ತೊಂದರೆಗೀಡಾದ, ದಣಿದಂತೆ ಮತ್ತು ಕಪ್ಪಾದಂತೆ ಕಾಣಿಸುವುದು,
ಹಾಗೆಯೇ ಅವರ ಮನಸ್ಸಿನ ಸ್ಥಿತಿ ಸರಿ ಇಲ್ಲದಿರುವುದರಿಂದ ಅದು ಚಿಂತಾಕ್ರಾಂತ ಮತ್ತು ದುಃಖಿತವಾಗಿ ಕಾಣುವುದು ‘ಮೀನಾಕ್ಷಿ’ ಈ ಹೆಸರನ್ನು ಉಚ್ಚರಿಸುವಾಗ ಅವರ ಮುಖ ಕಣ್ಮುಂದೆ ಬಂದು ಅದು ಆನಂದದಿಂದ ಕೂಡಿದ, ಉಜ್ವಲ ಮತ್ತು ಪ್ರಕಾಶಮಾನವಾಗಿ ಕಾಣುವುದು, ‘ಮೀನಾಕ್ಷಿ’ ಎಂಬ ಹೆಸರಿನ ದೈವೀ ಸ್ಪಂದನಗಳ ಸಕಾರಾತ್ಮಕ ಪರಿಣಾಮ ಅವರ ಮನಸ್ಸಿನ ಮೇಲೆ ಆಗಿ ಅವರ ಮನಸ್ಸಿನಲ್ಲಿ ಮೊದಲಿದ್ದ ನಕಾರಾತ್ಮಕ ಸ್ಪಂದನಗಳ ಉಚ್ಚಾಟನೆಯಾಗಿದ್ದರಿಂದ ಅವರ ಮನೋದೇಹದಲ್ಲಿ ಹಗುರತನ ಬರುವುದು, ಆದುದರಿಂದ ಮೇಲಿನ ಸಕಾರಾತ್ಮಕ ಬದಲಾವಣೆ ಅವರ ಮುಖದ ಮೇಲೂ ಕಾಣಿಸುವುದು

೪. ನಿಷ್ಕರ್ಷ
೪ ಅ. ವ್ಯಕ್ತಿಯ ಸಪ್ತಚಕ್ರಗಳ ಮೇಲೆ ಅವನ ಹೆಸರಿನ ಪರಿಣಾಮ ಆಗುವುದು ಮತ್ತು ಆಯಾ ಚಕ್ರಗಳಿಗೆ ಸಂಬಂಧಿಸಿದ ಪರಿಣಾಮಗಳು ಆಯಾ ಅವಯವಗಳ ಮೇಲೂ ಆಗುವುದು : ಮೇಲಿನ ಪ್ರಯೋಗದಿಂದ, ‘ವ್ಯಕ್ತಿಯ ಹೆಸರಿನ ಒಳ್ಳೆಯ ಅಥವಾ ಕೆಟ್ಟ ಪರಿಣಾಮವು ಅವನ ಸಪ್ತಚಕ್ರಗಳ ಮೇಲಾಗುತ್ತದೆ ಮತ್ತು ಆಯಾ ಚಕ್ರಗಳಿಗೆ ಸಂಬಂಧಿಸಿದ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳು ಆಯಾ ಅವಯವಗಳ ಮೇಲೂ ಆಗುತ್ತದೆ. ಆದುದರಿಂದ ಆ ವ್ಯಕ್ತಿಯಲ್ಲಿ ಅದಕ್ಕೆ ಸಂಬಂಧಿಸಿದ ಕಾಯಿಲೆ ಉಲ್ಮಣಗೊಳ್ಳುತ್ತವೆ ಅಥವಾ ಆ ಕಾಯಿಲೆಗಳು ಉದ್ಭವಿಸುತ್ತವೆ’, ಎಂಬುದು ಗಮನಕ್ಕೆ ಬಂದಿತು.
೪ ಆ. ಹೆಸರಿನ ಪರಿಣಾಮವು ದೇಹದ ಮೇಲ್ಭಾಗದಲ್ಲಿರುವ ಚಕ್ರಗಳ ಮೇಲೆ ಅಂದರೆ ಸಹಸ್ರಾರಚಕ್ರ, ಆಜ್ಞಾಚಕ್ರ, ವಿಶುದ್ಧಚಕ್ರ, ಅನಾಹತ ಚಕ್ರಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದರೆ, ಅದರ ಪರಿಣಾಮವು ಆಯಾ ಚಕ್ರಗಳಿಗೆ ಸಂಬಂಧಿಸಿದ ಅವಯವಗಳ ಮೇಲೂ ಆಗಿ, ಆ ಸಂಬಂಧದ ರೋಗಗಳು ಉಲ್ಬಣಗೊಳ್ಳುತ್ತವೆ.
೧. ಸಹಸ್ರಾರಚಕ್ರ : ಇದರ ಮೇಲೆ ಪರಿಣಾಮವಾದರೆ ಮೆದುಳಿಗೆ ಸಂಬಂಧಿಸಿದ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಉಂಟಾಗುತ್ತವೆ, ಉದಾ. ನೆನಪಿನ ಶಕ್ತಿ ಕಳೆದುಕೊಳ್ಳುವುದು (ಸ್ಮೃತಿಭ್ರಂಶ), ಪಾರ್ಶ್ವವಾಯು ಮತ್ತು ಮಾನಸಿಕ ಕಾಯಿಲೆಗಳು ಇತ್ಯಾದಿ
೨. ವಿಶುದ್ಧಚಕ್ರ : ಇದರ ಮೇಲೆ ಪರಿಣಾಮವಾದರೆ ಉಸಿರಾಟದ ನಳಿಕೆಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ.
೩. ಅನಾಹತ ಚಕ್ರ : ಇದರ ಮೇಲೆ ಪರಿಣಾಮವಾದರೆ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಹಾಗೆಯೇ ಮನಸ್ಸಿನ ಮೇಲೂ ಪರಿಣಾಮವಾಗುವುದರಿಂದ ಮಾನಸಿಕ ರೋಗಗಳು ಬರುತ್ತವೆ, ಸ್ವಭಾವದೋಷ ಉಕ್ಕಿ ಬರುವಂತಹ ತೊಂದರೆಗಳು ಆಗುತ್ತವೆ.
೪. ಕೆಳಭಾಗದ ಚಕ್ರಗಳು : ದೇಹದ ಕೆಳಭಾಗದಲ್ಲಿರುವ ಚಕ್ರಗಳ ಮೇಲೆ ವ್ಯಕ್ತಿಯ ಹೆಸರಿನ ಪರಿಣಾಮವಾದರೆ ಕೆಳಗಿನ ಚಕ್ರಗಳ ಮೇಲೆ ಉದಾ. ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಇತ್ಯಾದಿ ಚಕ್ರಗಳಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ. ಉದಾ. ಹೊಟ್ಟೆ, ಮೂತ್ರಪಿಂಡ, ರಕ್ತ, ಚರ್ಮದ ಕಾಯಿಲೆಗಳು
೫. ವ್ಯಕ್ತಿಯ ಹೆಸರಿನಿಂದ ತನ್ನ ಮೇಲೆ, ಇತರರ ಮೇಲೆ ಮತ್ತು ವಾತಾವರಣದ ಮೇಲೂ ಪರಿಣಾಮವಾಗುವುದು ಮತ್ತು ಅದರ ಸ್ಪಂದನಗಳಿಂದ ಆ ವ್ಯಕ್ತಿಯ ಮೇಲೆ ಪರಿಣಾಮವಾಗಿ ಅದು ಅವನ ಸ್ವಭಾವದಲ್ಲಿ ಇಳಿಯುವುದು
ವ್ಯಕ್ತಿಗೆ ಇಡುವ ಹೆಸರಿನ ಒಳ್ಳೆಯ ಅಥವಾ ಕೆಟ್ಟ ಪರಿಣಾಮವು ಹೆಚ್ಚಾಗಿ ಅಥವಾ ಕೆಲವೊಮ್ಮೆ ಕಡಿಮೆ ಪ್ರಮಾಣದಲ್ಲಾದರೂ ಅವನ ಮೇಲೆ ಆಗುತ್ತದೆ. ಹಾಗೆಯೇ ಅದರ ಪರಿಣಾಮ ಇತರ ವ್ಯಕ್ತಿ ಮತ್ತು ವಾತಾವರಣದ ಮೇಲೂ ಆಗುತ್ತದೆ. ಕಾಲಾಂತರದಲ್ಲಿ ಆ ಹೆಸರಿನ ಸ್ಪಂದನಗಳಿಂದ ಆ ವ್ಯಕ್ತಿಯ ಮೇಲೆ ಪರಿಣಾಮವಾಗಿ ಅದು ಅವನ ಸ್ವಭಾವದಲ್ಲಿ ಸೇರಿಕೊಳ್ಳುತ್ತದೆ. ಅದರಿಂದ ಅವನ ವ್ಯಕ್ತಿತ್ವವೂ ಅದೇ ರೀತಿ ರೂಪುಗೊಳ್ಳುತ್ತದೆ; ಏಕೆಂದರೆ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಸಂಬಂಧಿತ ಶಕ್ತಿ ಆ ಹೆಸರಿನಲ್ಲಿರುತ್ತದೆ. ಹೆಸರಿನಲ್ಲಿ ಒಳ್ಳೆಯ ಶಕ್ತಿ ಇದ್ದರೆ ಅದರಲ್ಲಿನ ಒಳ್ಳೆಯ ಸ್ಪಂದನಗಳ ಪರಿಣಾಮವಾಗಿ ಆ ಶಕ್ತಿ ಒಳ್ಳೆಯ ಕಾರ್ಯ ಮಾಡುತ್ತದೆ. ಅದರಿಂದ ಪರಿಣಾಮವು ಉತ್ತಮವಾಗಿರುತ್ತದೆ ಮತ್ತು ಒಂದು ವೇಳೆ ಹೆಸರು ತೊಂದರೆದಾಯಕವಾಗಿದ್ದರೆ, ಅದಕ್ಕೆ ಸಂಬಂಧಿಸಿದ ತೊಂದರೆದಾಯಕ ಶಕ್ತಿ ಮತ್ತು ತೊಂದರೆದಾಯಕ ಸ್ಪಂದನಗಳು ಕಾರ್ಯನಿರತವಾಗುತ್ತವೆ.
ಮೇಲಿನ ಪ್ರಯೋಗದಿಂದ, ‘ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರು ದೋಷರಹಿತವಾಗಿರಬೇಕು ಮತ್ತು ಅವು ದೈವೀ ಸ್ಪಂದನಗಳಿಂದ ಕೂಡಿರಬೇಕು ಏಕೆ ?’, ಎಂಬುದನ್ನು ದೇವರೇ ನನ್ನ ಗಮನಕ್ಕೆ ತಂದು ಕೊಟ್ಟರು. ಅದಕ್ಕಾಗಿ ನಾನು ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಮಾಡುತ್ತೇನೆ.’
– ಸೌ. ರಂಜನಾ ಗೌತಮ ಗಡೆಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೭.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !