
೧. ಅತ್ಯಂತ ಕಷ್ಟಕರ ಸಾಧನೆ ಮಾಡಿದ ದೇವವ್ರತ ರೇಖೆ ಅವರ ಮೇಲೆ ಮಾಡಲಾಗುತ್ತಿರುವ ದುರ್ವಾಸನೆಯುಕ್ತ ಜಾತಿವಾದಿ ನಿಂದನೆಗಳು ಅತ್ಯಂತ ವಿಷಾದನೀಯ !
‘ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ದೃಶ್ಯವು ಪದೇ ಪದೇ ಕಾಣಿಸುತ್ತಿದೆ. ೧೯ ವರ್ಷದ ಯುವಕ ದೇವವ್ರತ ರೇಖೆ, ಅವರು ಶುಕ್ಲ ಯಜುರ್ವೇದದ ದಂಡಕ್ರಮ ಪಾರಾಯಣದಂತಹ ಅತ್ಯಂತ ಕಠಿಣ ಮತ್ತು ದುರ್ಲಭವಾದ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಕಳೆದ ೨೦೦ ವರ್ಷಗಳಿಂದ ಯಾರೂ ಮಾಡದಿರುವುದನ್ನು ಈ ಹುಡುಗನು ಮಾಡಿ ತೋರಿಸಿದ್ದಾನೆ ! ಇದರ ಹಿಂದೆ ಅವರ ಎಷ್ಟು ವರ್ಷಗಳ ಸಾಧನೆ ಮತ್ತು ಪರಿಶ್ರಮವಿದೆ ! ದೇವವ್ರತ ಅವರ ಈ ಯಶಸ್ಸಿನ ಹಿಂದೆ ಅವರ ಇಡೀ ಕುಟುಂಬದ ತ್ಯಾಗ ಎಷ್ಟಿದೆ !
ಯಾವುದೇ ಕಾರಣವಿಲ್ಲದೆ ಆ ಯುವಕನ ಮೇಲೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುರಿಯುವ ದುರ್ವಾಸನೆಯ ಜಾತಿವಾದಿ ನಿಂದನೆಗಳು ಅತ್ಯಂತ ವಿಷಾದನೀಯವಾಗಿವೆ.
೨. ಬುದ್ಧಿವಂತ ಮತ್ತು ವಿನಮ್ರ ದೇವವ್ರತ !
೧೯ ವರ್ಷದ ಹುಡುಗನು ಪ್ರತಿದಿನ ೪ ಗಂಟೆಗಳ ಕಾಲ, ಸತತ ೫೦ ದಿನಗಳ ವರೆಗೆ, ೨ ಸಾವಿರ ಮಂತ್ರಗಳನ್ನು, ಒಂದು ತಪ್ಪೂ ಇಲ್ಲದೆ ಕಂಠಸ್ಥವಾಗಿ ಉಚ್ಚರಿಸಿದ್ದಾನೆ ! ಈ ಹುಡುಗನು ಅತ್ಯಂತ ಬುದ್ಧಿವಂತನಾಗಿದ್ದಾನೆ, ಇದರಲ್ಲಿ ಯಾವುದೇ ವಾದವೇ ಇಲ್ಲ. ಆತನು ಬೇರೆ ಯಾವುದೇ ಕ್ಷೇತ್ರದಲ್ಲಿ ಇಳಿದಿದ್ದರೂ ತನ್ನ ಅಸಾಮಾನ್ಯ ಬುದ್ಧಿವಂತಿಕೆ ಮತ್ತು ನಿರಂತರ ಪರಿಶ್ರಮದಿಂದ ಆ ಕ್ಷೇತ್ರವನ್ನು ಪ್ರಕಾಶಮಾನಗೊಳಿಸುತ್ತಿದ್ದನು; ಆದರೆ ವೇದಾಭ್ಯಾಸ ಮಾಡುವುದು ಅವನ ಆಯ್ಕೆಯಾಗಿತ್ತು. ಇತರರಿಗೆ ಯಾವುದೇ ತೊಂದರೆ ನೀಡದೆ, ೫ ನೇ ವಯಸ್ಸಿನಿಂದಲೇ ಈ ಹುಡುಗನು ವೇದಾಭ್ಯಾಸ ಮಾಡುತ್ತಿದ್ದಾನೆ. ದಂಡಕ್ರಮ ಪಾರಾಯಣದ ವೇಳೆಯೂ ಅವನು ಪ್ರಚಾರಕ್ಕೆ ಆಗ್ರಹ ಮಾಡಿರಲಿಲ್ಲ. ಯಾರ ಬಳಿಯೂ ಹಣ ಅಥವಾ ಬೇರೆ ಯಾವುದೇ ಸಹಾಯವನ್ನು ಕೇಳಿರಲಿಲ್ಲ !
೩. ಶ್ಲಾಘನೆಯ ಬದಲಿಗೆ ಅಶ್ಲೀಲ ಟೀಕೆ; ಇದು ಜಾತಿದ್ವೇಷದಿಂದ ಕೂಡಿದ ದ್ವಂದ್ವ ನೀತಿಯಾಗಿದೆ !
ಒಬ್ಬ ೧೯ ವರ್ಷದ ಯುವಕ ಕ್ರಿಕೆಟ್ ಆಡಿ ಶತಕಗಳಿಸಿದ್ದರೆ, ‘ಐಐಟಿ’ ಪರೀಕ್ಷೆಯಲ್ಲಿ ಪ್ರಾವೀಣ್ಯ ಪಡೆದಿದ್ದರೆ, ದೂರದರ್ಶನದ ಯಾವುದಾದರೂ ‘ರಿಯಾಲಿಟಿ ಶೋ’ನಲ್ಲಿ ಚೆನ್ನಾಗಿ ಹಾಡಿದ್ದರೆ ಅಥವಾ ನೃತ್ಯ ಮಾಡಿದ್ದರೆ, ಅವನ ಪಾಲಿಗೆ ಕೇವಲ ಮತ್ತು ಕೇವಲ ಪ್ರಶಂಸೆಯ ಸುರಿಮಳೆಯೇ ಆಗುತ್ತಿತ್ತು; ಆದರೆ ಕೇವಲ ಅವರು (ದೇವವ್ರತ) ಬ್ರಾಹ್ಮಣರಾಗಿದ್ದಾರೆ ಮತ್ತು ಸ್ವೇಚ್ಛೆಯಿಂದ ವೇದಾಭ್ಯಾಸ ಮಾಡುತ್ತಾರೆ ಎಂಬ ಕಾರಣಕ್ಕಾಗಿ, ಅವರಿಗೆ ‘ಶುಭಂ ಕರೋತಿ’ಯನ್ನು ಸಹ ಸರಿಯಾಗಿ ಹೇಳಲು ಬಾರದ ದರಿದ್ರ ಜನರು ಅತ್ಯಂತ ಅಸಭ್ಯ ಭಾಷೆಯಲ್ಲಿ ಟೀಕಿಸಿದ್ದಾರೆ !
೪. ಏಕೆ ಇಷ್ಟೊಂದು ದ್ವೇಷ ? ಏಕೆ ಇಷ್ಟೊಂದು ಕೋಪ ?
ಇಷ್ಟೊಂದು ದ್ವೇಷ, ಇಷ್ಟೊಂದು ಕೋಪ ಏಕೆ ? ಏಕೆಂದರೆ ದೇವವ್ರತ ಅವರ ಅಪಾರ ‘ಮೇಧಾಶಕ್ತಿ’ ಕೆಲವು ಜನರ ದುರ್ಬಲ ಅಹಂಕಾರವನ್ನು ಘಾಸಿಗೊಳಿಸುತ್ತದೆ. ೧೯ ವರ್ಷದ ಹುಡುಗನನ್ನು ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಸಚಿವರು, ಶೃಂಗೇರಿ ಶಂಕರಾಚಾರ್ಯರಂತಹ ಗಣ್ಯರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಎಂದೋ ಅಥವಾ ಕೇವಲ ಅವನ ಉಪನಾಮ ರೇಖೆ ಎಂಬ ಕಾರಣಕ್ಕಾಗಿ ?
೫. ಜಾತಿವಾದದ ‘ಲೇಖನ’ಗಳ ಮೂಲಕ ಅವರ ಯಶಸ್ಸನ್ನು ಮರೆ ಮಾಚಲು ಪ್ರಯತ್ನ !
ಈ ಜಾತಿದ್ವೇಷದ ಹಿಂದಿನ ಕಾರಣ ಬಹಳ ಸರಳವಾಗಿದೆ. ದೇವವ್ರತ ಅವರನ್ನು ಟೀಕಿಸುವ ಜನರ ಬಳಿ ಸ್ವತಃ ತಮ್ಮ ಬಗ್ಗೆ ಹೆಮ್ಮೆ ಪಡಲು ಏನೂ ಇಲ್ಲ. ಸಾಧನೆಯಿಲ್ಲ, ಕರ್ತೃತ್ವವಿಲ್ಲ, ಬುದ್ಧಿವಂತಿಕೆಯಿಲ್ಲ, ಶಿಸ್ತಿಲ್ಲ, ಪರಂಪರೆಯ ಅಭಿಮಾನವಿಲ್ಲ, ಅಸಾಮಾನ್ಯ ಪ್ರತಿಭೆಯೂ ಇಲ್ಲ ! ಹಾಗಾಗಿ ಮಾಡಲು ಅತ್ಯಂತ ಸುಲಭವಾದ ಕೆಲಸ ಯಾವುದು ? ಅಂದರೆ ಜಾತಿಯನ್ನು ಎತ್ತಿ ತೋರಿಸುವುದು. ಯಾರದೇ ಉಜ್ವಲ ಯಶಸ್ಸನ್ನು ನೋಡಿದಾಗ ಜಾತಿವಾದದ ಲೇಖನಗಳನ್ನು (ಪೋಸ್ಟ್) ಪ್ರಸಾರ ಮಾಡಿ ಆ ಯಶಸ್ಸನ್ನು ಮರೆಮಾಚಲು ಪ್ರಯತ್ನಿಸುವುದು. ಈ ಜಾತಿವಾದಿ ಟೀಕಾಕಾರರ ಜೀವನದಲ್ಲಿ ಅತಿ ದೊಡ್ಡ ಯಶಸ್ಸು ಎಂದರೆ, ಅವರ ಜಾತಿವಾದಿ ನಾಯಕನ ಜನ್ಮದಿನಕ್ಕೆ ಸಿಕ್ಕಂತಹ ಯಾವುದಾದರೂ ಎಂಜಲು ಕೇಕ್ ತುಂಡು ಅಥವಾ ಒಂದು ಹಳಸಿದ ವಡಾ-ಪಾವ್ ಆಗಿರುತ್ತದೆ.

೬. ಟೀಕಿಸುವವರ ೧೯ ವರ್ಷದ ಮಕ್ಕಳು ಏನು ಮಾಡುತ್ತಾರೆ ?
‘ವೇದಗಳನ್ನು ಕಂಠಪಾಠ ಮಾಡುವುದರಿಂದ ಸಮಾಜಕ್ಕೆ ಏನು ಉಪಯೋಗ ?’ ಎಂದು ಕುತರ್ಕದಿಂದ ಕೇಳುವ ಜನರ ೧೯ ವರ್ಷದ ಮಕ್ಕಳು ಹಗಲೂರಾತ್ರಿ ‘ರೀಲ್ಸ್’ (ಸಣ್ಣ ವಿಡಿಯೋಗಳು) ನೋಡುತ್ತಾರೆ, ತಂದೆಯ ಹಣವನ್ನು ಮದ್ಯದಲ್ಲಿ ವ್ಯರ್ಥ ಮಾಡುತ್ತಾರೆ. ಇವರಿಂದಾದರೂ ಸಮಾಜಕ್ಕೆ ಏನು ಉಪಯೋಗ ? ದೇವವ್ರತ ರೇಖೆ ಅವರು ಒಂದು ಪ್ರಾಚೀನ ಪರಂಪರೆಯನ್ನು ರಕ್ಷಿಸುತ್ತಿದ್ದಾರೆ. ಐದನೇ ವಯಸ್ಸಿನಿಂದಲೇ ಅವರು ವೇದಾಧ್ಯಯನ ಮಾಡುತ್ತಿದ್ದಾರೆ. ಕಾಶಿಯಲ್ಲಿ ನೆಲೆಸಿ ಶುಕ್ಲ ಯಜುರ್ವೇದದ ಮಾಧ್ಯಮದಿಂದ ಶಾಖೆಯ ಪಠ್ಯಕ್ರಮವನ್ನೂ ಅವರು ಪೂರ್ಣಗೊಳಿಸಿದ್ದಾರೆ. ಸುಮಾರು ೨೦೦ ವರ್ಷಗಳ ನಂತರ ಭಾರತದಲ್ಲಿ ‘ದಂಡಕ್ರಮ’ ಪೂರ್ಣಗೊಳಿಸಿದ ಮೊಟ್ಟಮೊದಲ ಯುವಕ ಇವರಾಗಿದ್ದಾರೆ !
೭. ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಶಂಸೆಗೆ ಪಾತ್ರರಾದ ದೇವವ್ರತ ರೇಖೆ !
‘ಇದು ಸುಲಭ’ ಎಂದು ಭಾವಿಸುವ ಜನರು ಸಂಸ್ಕೃತವನ್ನು ಬಿಡಿ, ಯಾವುದೇ ಕನ್ನಡ ಪುಸ್ತಕದ ಒಂದು ಪುಟವನ್ನು ಇದ್ದಂತೆ ಕಂಠಪಾಠ ಮಾಡಿ ತೋರಿಸಲಿ. ದೇವವ್ರತ ಅವರು ಮಾಡಿ ತೋರಿಸಿದ್ದು ಕಠಿಣ ಪರಿಶ್ರಮ, ಅವಿರತ ಅಭ್ಯಾಸ, ಅಚಲ ನಿಷ್ಠೆ ಮತ್ತು ಪ್ರಾಚೀನ ಪರಂಪರೆಗಳ ಮಹಾಸಂಗಮವಾಗಿದೆ; ಅದಕ್ಕಾಗಿಯೇ ಪ್ರಧಾನಮಂತ್ರಿ ಮೋದಿ ಅವರು ಅವರನ್ನು ‘ಭಾರತದ ಗೌರವ’ ಎಂದು ಕರೆದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅವರನ್ನು ವೇದಿಕೆಯ ಮೇಲೆ ಕರೆದು ಸನ್ಮಾನಿಸಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಂಡಕ್ರಮ ವನ್ನು ‘ವೇದೋಚ್ಚಾರಗಳ ಮುಕುಟಮಣಿ’ ಎಂದು ಕರೆದರು.
೮. ದೇವವ್ರತ ರೇಖೆ ಎಂದರೆ ವಿಕೃತಿ, ವಿಷ ಮತ್ತು ಟೊಳ್ಳು ಬುದ್ಧಿವಾದಕ್ಕೆ ನೀಡಿದ ಕಟುವಾದ ಉತ್ತರವಾಗಿದೆ !
ಸ್ವತಃ ಒಂದು ಪುಟವನ್ನು ಸಹ ಕಂಠಪಾಠ ಮಾಡಲು ಸಾಧ್ಯವಾಗದ, ಒಂದು ಶ್ಲೋಕವನ್ನೂ ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ, ಒಂದು ದಿನವೂ ಶಿಸ್ತನ್ನು ಪಾಲಿಸಲು ಸಾಧ್ಯವಾಗದ ಈ ದರಿದ್ರ ಜನರು ೫೦ ದಿನಗಳ ಅಖಂಡ ವೇದ ಸಾಧನೆಯ ಮೇಲೆ ಟೀಕೆ ಮಾಡುತ್ತಾರೆಂದರೆ, ಇದು ಎಷ್ಟು ಹಾಸ್ಯಾಸ್ಪದ ! ದೇವವ್ರತ ರೇಖೆ ಎಂದರೆ ವಿಕೃತಿ, ವಿಷ ಮತ್ತು ಟೊಳ್ಳು ಬುದ್ಧಿವಾದಕ್ಕೆ ನೀಡಿದ ಒಂದು ಖಂಡತುಂಡ ಉತ್ತರವಾಗಿದ್ದಾನೆ.
೯. ಜಾತಿವಾದಿ ಹಲಾಹಲವು ಯಶಸ್ವಿ ಜನರನ್ನಲ್ಲ, ಬದಲಾಗಿ ಅದನ್ನು ಎಸೆಯುವವರ ಮುಖವನ್ನೇ ವಿಕಾರಗೊಳಿಸುತ್ತದೆ !
ಅವರ ಸಾಧನೆಯು ಹಿಂದೂ ಜ್ಞಾನ ಪರಂಪರೆಯು ಇಂದಿಗೂ ಜೀವಂತವಾಗಿದೆ, ಅಷ್ಟೇ ತೇಜಸ್ವಿಯಾಗಿದೆ ಎಂದು ಜಗತ್ತಿಗೆ ತೋರಿಸಿದೆ. ಇಂದಿಗೂ ೧೯ ವರ್ಷದ ಒಬ್ಬ ಯುವಕ ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಬಲ್ಲ. ದೇವವ್ರತ ಅವರ ಯಾವುದೇ ದೋಷವಿಲ್ಲದಿದ್ದರೂ ಅವರು ಎದುರಿಸಿರುವ ಜಾತಿವಾದಿ ಹಲಾಹಲವು ಅವರನ್ನು ಅಥವಾ ಅವರ ಉಜ್ವಲ ಯಶಸ್ಸನ್ನು ಮಲೀನಗೊಳಿಸುವುದಿಲ್ಲ, ಬದಲಾಗಿ ಅದನ್ನು ಎಸೆಯುವವರ ಮುಖವನ್ನೇ ವಿರೂಪಗೊಳಿಸುತ್ತದೆ.
೧೦. ದೇವವ್ರತ ರೇಖೆ ಅವರು ಸಾಧನೆ ಮತ್ತು ಬುದ್ಧಿವಂತಿಯ ಬಲದಲ್ಲಿ ಮುಂದುವರಿಯುವರು, ಇದನ್ನು ನೆನಪಿಡಿ !
ದೇವವ್ರತ ಅವರ ತೇಜಸ್ಸು ನಿಮ್ಮ (ಟೀಕಾಕಾರರ) ಕೊಳಕು ಶಬ್ದಗಳಿಂದ ನಶಿಸುವುದಿಲ್ಲ. ಅವರ ಮನಸ್ಸಿನಲ್ಲಿ ವೇದಮಂತ್ರಗಳಿವೆ, ನಿಮ್ಮ ಮಾತಿನಲ್ಲಿರುವುದು ಕೇವಲ ಜಾತಿವಾದದ ವಿಷ ಮಾತ್ರ. ಭಾರತದ ಇತಿಹಾಸದಲ್ಲಿ ದೇವವ್ರತ ಅವರ ಹೆಸರು ಹೆಮ್ಮೆಯಿಂದ ಬರೆಯಲ್ಪಟ್ಟಿದೆ. ದೇವವ್ರತ ರೇಖೆ ಅವರ ಸಾಮಥ್ಯರ್ಕ್ಕೆ ನಿಮ್ಮ ದ್ವೇಷ ಏನನ್ನೂ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ಸಾಧನೆ ಮತ್ತು ಬುದ್ಧಿವಂತಿಕೆಯ ಬಲದ ಮೇಲೆ ಮುಂದುವರಿಯುವರು. ಆದರೆ ನೀವು ಮಾತ್ರ ಜಾತಿವಾದದ ಕೆಸರಿನಲ್ಲಿಯೇ ಮುಳುಗಿರುತ್ತೀರಿ.
– ಸೌ. ಶೆಫಾಲಿ ವೈದ್ಯ, ಹಿಂದುತ್ವನಿಷ್ಠ ಲೇಖಕಿ, ಪುಣೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು