
ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !
‘ಸನಾತನ ಸಂಸ್ಥೆ’ಯು ಸನಾತನ ಧರ್ಮದಲ್ಲಿನ ಅಧ್ಯಾತ್ಮದ ವೈಜ್ಞಾನಿಕ ಭಾಷೆಯಲ್ಲಿ ಪ್ರಸಾರ ಮಾಡುವ ಸಂಸ್ಥೆಯಾಗಿದೆ, ಆನಂದ, ಒತ್ತಡರಹಿತ ಮತ್ತು ವ್ಯಸನಮುಕ್ತ ಜೀವನವನ್ನು ನಡೆಸುವುದು, ಯುವಕರ ವ್ಯಕ್ತಿತ್ವವಿಕಾಸವನ್ನು ಸಾಧಿಸುವುದು, ಹಾಗೆಯೇ ವಿದ್ಯಾರ್ಥಿಗಳು ಶಾಲೆಯ ಅಭ್ಯಾಸದಲ್ಲಿ ಏಕಾಗ್ರತೆಯನ್ನು ಸಾಧಿಸುವುದು ಇತ್ಯಾದಿಗಳಿಗಾಗಿ ಅಧ್ಯಾತ್ಮ ಮತ್ತು ಸಾಧನೆ ಇವುಗಳ ಮಹತ್ವವಿದೆ. ಇದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಸಮಾಜದ ವಿವಿಧ ವರ್ಗಗಳಿಗಾಗಿ, ಉದಾ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಮಹಿಳಾವರ್ಗ, ಸರಕಾರಿ ಸಿಬ್ಬಂದಿಗಳು, ಕಾರ್ಪೋರೇಟ್ ಕಂಪನಿಗಳಲ್ಲಿ ನೌಕರಿ ಮಾಡುವವರು, ವಿವಿಧ ಕ್ಷೇತ್ರಗಳಲ್ಲಿನ ವ್ಯವಸಾಯಕರು, ಉದ್ಯಮಿಗಳು, ನ್ಯಾಯವಾದಿಗಳು, ಹಾಗೆಯೇ ಒತ್ತಡಯುಕ್ತ ಜೀವನವಾಗಿರುವ ಪೊಲೀಸ್ ದಳಗಳು ಮತ್ತು ಸೇನಾ ದಳಗಳಿಗಾಗಿ ಪ್ರತಿತಿಂಗಳು ಸಾವಿರಾರು ಪ್ರವಚನಗಳನ್ನು ಆಯೋಜಿಸಲಾಗುತ್ತದೆ. ಈ ಪ್ರವಚನಗಳ ಮಾಧ್ಯಮದಿಂದ ಸಮಾಜದಲ್ಲಿನ ಅನೇಕ ಜಿಜ್ಞಾಸು ವ್ಯಕ್ತಿಗಳು ಸಾಧನೆ ಮಾಡಲು ಆರಂಭಿಸಿದ್ದು ಅವರು ಆನಂದಮಯ ಜೀವನದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯಿಂದ ಆಯೋಜಿಸಲಾದ ಈ ಪ್ರವಚನಗಳ ವಿಧಗಳು ಮುಂದಿನಂತಿವೆ.
೧. ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ನಾವು ಪ್ರತಿದಿನ ಪ್ರತಿಯೊಂದು ಕೃತಿಯನ್ನು ಆನಂದ ಪಡೆಯಲು ಮಾಡುತ್ತಿರುತ್ತೇವೆ; ಆದರೆ ‘ನಿಜವಾದ ಆನಂದವನ್ನು ಹೇಗೆ ಪಡೆಯಬೇಕು ? ಅದಕ್ಕಾಗಿ ಸಾಧನೆಯ ಮಹತ್ವ’ ಈ ಕುರಿತು ಮಾರ್ಗದರ್ಶನವನ್ನು ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಈ ಪ್ರವಚನದಿಂದ ಮಾಡಲಾಗುತ್ತದೆ.
೨. ಒತ್ತಡಮುಕ್ತಿಗಾಗಿ ಅಧ್ಯಾತ್ಮ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಒತ್ತಡಗಳಿಗೆ ಒಳಗಾಗುತ್ತಿರುತ್ತಾರೆ. ಕೆಲವೊಮ್ಮೆ ಈ ಒತ್ತಡವನ್ನು ಸಹಿಸಲಾಗದೇ ಅನೇಕ ಜನರು ವಿಪರೀತ ನಿರ್ಧಾರವನ್ನು ತೆಗೆದುಕೊಳ್ಳುವುದನ್ನೂ ನಾವು ಕೇಳುತ್ತೇವೆ. ಇಂತಹ ಸ್ಥಿತಿಯಲ್ಲಿ ಮತ್ತು ಪ್ರಸಂಗಗಳಿಂದ ಹೆಚ್ಚುತ್ತಿರುವ ಒತ್ತಡವನ್ನು ನಿಯಂತ್ರಿಸಲು ಸ್ವಯಂಸೂಚನೆ ಮುಂತಾದ ಮಾನಸೋಪಚಾರ ಮತ್ತು ಆಧ್ಯಾತ್ಮಿಕ ಪ್ರಯತ್ನಗಳನ್ನು ‘ಒತ್ತಡಮುಕ್ತಿಗಾಗಿ ಅಧ್ಯಾತ್ಮ’ ಎಂಬ ಪ್ರವಚನಗಳಿಂದ ಕಲಿಸಲಾಗುತ್ತದೆ.
೩. ವ್ಯಸನಮುಕ್ತಿಗಾಗಿ ಸಾಧನೆ
ಪ್ರಸ್ತುತ ಸಮಾಜದಲ್ಲಿ ವ್ಯಸನಾಧೀನತೆ ತುಂಬಾ ಹೆಚ್ಚಾಗಿದೆ. ಆದ್ದರಿಂದ ವ್ಯಸನಕ್ಕೊಳಗಾದ ವ್ಯಕ್ತಿಗಳ ಕೌಟುಂಬಿಕ, ವ್ಯಾವಹಾರಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುತ್ತಿದೆ. ವ್ಯಸನಗಳಿಂದ ಮುಕ್ತವಾಗಲು ಸಾಧನೆ ಇದೊಂದು ಪ್ರಭಾವಿ ಮಾಧ್ಯಮವಾಗಿದ್ದು ಅದರ ಬಗ್ಗೆ ‘ವ್ಯಸನಮುಕ್ತಿಗಾಗಿ ಸಾಧನೆ’ ಈ ಪ್ರವಚನಗಳಿಂದ ಮಾರ್ಗದರ್ಶನ ಮಾಡಲಾಗುತ್ತದೆ.
೪. ವ್ಯಕ್ತಿತ್ವ ವಿಕಾಸಕ್ಕಾಗಿ ಸಾಧನೆ
ಇಂದಿನ ಯುವಕರು ಪ್ರಭಾವಿ ವ್ಯಕ್ತಿತ್ವವನ್ನು ರೂಪಿಸುವುದರ ಕಡೆಗೆ ಒಲವು ತೋರಿಸುತ್ತಿದ್ದಾರೆ. ನಮ್ಮ ವ್ಯಕ್ತಿತ್ವವು ಪ್ರಭಾವಿಯಾಗಲು ನಮ್ಮ ನಡೆ-ನುಡಿಗಳಲ್ಲಿನ ಮೂಲ ಸ್ವಭಾವದೋಷಗಳು ಯಾವವು ? ಎಂಬುದನ್ನು ಗುರುತಿಸುವುದು ಮತ್ತು ಅವುಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಿ ಆ ಜಾಗದಲ್ಲಿ ಸದ್ಗುಣಗಳನ್ನು ಹೆಚ್ಚಿಸುವುದು ಆವಶ್ಯಕವಾಗಿರುತ್ತದೆ. ಇದಕ್ಕಾಗಿ ಮಾಡುವ ಸ್ವಭಾವದೋಷ ನಿರ್ಮೂಲನೆ ಮತ್ತು ಸಾಧನೆಯ ಪ್ರಯತ್ನಗಳ ಬಗ್ಗೆ ‘ವ್ಯಕ್ತಿತ್ವ ವಿಕಾಸಕ್ಕಾಗಿ ಸಾಧನೆ’ ಎಂಬ ಪ್ರವಚನಗಳಿಂದ ಮಾರ್ಗದರ್ಶನ ಮಾಡಲಾಗುತ್ತದೆ.
೫. ಹಬ್ಬ ಮತ್ತು ಉತ್ಸವಗಳ ನಿಮಿತ್ತ ಪ್ರವಚನಗಳು
ಧರ್ಮಶಾಸ್ತ್ರಕ್ಕನುಸಾರ ಕೃತಿಯನ್ನು ತಿಳಿದುಕೊಂಡು ಅದಕ್ಕನುಸಾರ ಹಬ್ಬ ಮತ್ತು ಉತ್ಸವಗಳನ್ನು ಆಚರಿಸಿದರೆ ಅದನ್ನು ಮಾಡುವವರಿಗೆ ಅದರ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ. ಧರ್ಮಶಾಸ್ತ್ರಕ್ಕನುಸಾರ ಆದರ್ಶ ಪದ್ಧತಿಯಿಂದ ಹಬ್ಬ ಮತ್ತು ಉತ್ಸವಗಳನ್ನು ಹೇಗೆ ಆಚರಿಸಬೇಕು ? ಅದರಿಂದ ಆ ಜೀವಕ್ಕೆ ಸಿಗುವ ಲಾಭ ಇತ್ಯಾದಿಗಳ ಬಗ್ಗೆ ಈ ಪ್ರವಚನಗಳಿಂದ ಮಾರ್ಗದರ್ಶನ ನೀಡಲಾಗುತ್ತದೆ. ಮಕರಸಂಕ್ರಾಂತಿ, ಅಕ್ಷಯ ತದಿಗೆ, ಮಹಾಶಿವರಾತ್ರಿ, ಶ್ರೀರಾಮನವಮಿ, ಹನುಮಾನ ಜಯಂತಿ, ದತ್ತಜಯಂತಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳು ಮತ್ತು ಗಣೇಶೋತ್ಸವ, ನವರಾತ್ರ್ಯುತ್ಸವ, ಹೋಳಿಹಬ್ಬ ಮುಂತಾದ ಉತ್ಸವಗಳ ಸಮಯದಲ್ಲಿಯೂ ಪ್ರಾಸಂಗಿಕ ಪ್ರವಚನಗಳ ಆಯೋಜನೆ ಮಾಡಲಾಗುತ್ತದೆ.
ನೀವು ಕೂಡ ಸನಾತನ ಸಂಸ್ಥೆಯ ವತಿಯಿಂದ ತೆಗೆದುಕೊಳ್ಳಲಾಗುವ ಈ ಪ್ರವಚನಗಳ ಲಾಭವನ್ನು ಪಡೆಯಬಹುದು. ನೀವು ಕಾರ್ಯನಿರತವಾಗಿರುವ ಕಂಪನಿಗಳಲ್ಲಿ, ತಮ್ಮ ಕೌಟುಂಬಿಕ ಕಾರ್ಯಕ್ರಮಗಳಲ್ಲಿ, ಮಹಿಳಾ ಉಳಿತಾಯ ಗುಂಪಿನಲ್ಲಿ, ಶಾಲೆ, ಕಾಲೇಜು ಇತ್ಯಾದಿ ಮಟ್ಟಗಳಲ್ಲಿ ಮುಂದಾಳತ್ವವನ್ನು ವಹಿಸಿ ಇಂತಹ ಪ್ರವಚನಗಳನ್ನು ಆಯೋಜಿಸಬಹುದು. ಆ ಮಾಧ್ಯಮದಿಂದ ಅನೇಕ ಜಿಜ್ಞಾಸುಗಳಿಗೆ ಸಾಧನೆಯ ಮಹತ್ವವು ತಿಳಿಯುವುದು ಮತ್ತು ಆ ಮಾಧ್ಯಮದಿಂದ ನಿಮ್ಮಿಂದ ಸಮಾಜೋಪಯೋಗಿ ಅಂದರೆ ಸಮಷ್ಟಿ ಸಾಧನೆಯಾಗುವುದು.
ತಮ್ಮ ತಮ್ಮ ಸಂಪರ್ಕದಲ್ಲಿನ ಸನಾತನ ಸಂಸ್ಥೆಯ ಸಾಧಕರನ್ನು ಸಂಪರ್ಕಿಸಿ ಪ್ರವಚನಗಳ ಬೇಡಿಕೆಯನ್ನು ಮಾಡಬಹುದು.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !