‘ನಮ್ಮನ್ನು ನಾವು ಸ್ವೀಕರಿಸುವುದು’, ಇದು ಆಧ್ಯಾತ್ಮಿಕ ಉನ್ನತಿ ಮತ್ತು ಆತ್ಮೋದ್ಧಾರಕ್ಕೆ ಇರುವ ರಾಜಮಾರ್ಗ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದು ಬಂದ ಅಮೃತಬಿಂದು !

‘ಪ್ರಸ್ತುತ ನಡೆಯುತ್ತಿರುವ ವಿಶೇಷ ಭಕ್ತಿಸತ್ಸಂಗ ಸರಣಿಯ ಅಂತರ್ಗತ, ಸಾಧನೆಯ ಪಂಚಸೂತ್ರಗಳಲ್ಲಿನ ಮೂರನೇ ಸೂತ್ರವಾದ ‘ಸ್ವೀಕರಿಸುವುದು’ ಈ ವಿಷಯದ ಬಗ್ಗೆ ಗುರುಕೃಪೆಯಿಂದ ಸಾಧಕರಿಗೆ ಮಾರ್ಗದರ್ಶನ ಲಭಿಸುತ್ತಿದೆ. ಪಂಚಸೂತ್ರಗಳಲ್ಲಿ ‘ಸ್ವೀಕರಿಸುವುದು’ ಇದು ಅತ್ಯಂತ ಮಹತ್ವಪೂರ್ಣ ಸೂತ್ರವಾಗಿದೆ. ಸ್ವೀಕರಿಸುವುದು ಇದರ ಮೂರು ಮುಖ್ಯ ಪ್ರಕಾರಗಳಿವೆ. ೧. ನಮ್ಮನ್ನು ನಾವು ಸ್ವೀಕರಿಸುವುದು, ೨. ಇತರರನ್ನು ಸ್ವೀಕರಿಸುವುದು ಮತ್ತು ೩. ಪರಿಸ್ಥಿತಿಯನ್ನು ಸ್ವೀಕರಿಸುವುದು. ಇಂದು ನಾವು ‘ನಮ್ಮನ್ನು ನಾವು ಸ್ವೀಕರಿಸುವುದು’ ಎಂಬ ಮೊದಲ ಆಯಾಮದ ಬಗೆಗಿನ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.

೧. ನಮ್ಮನ್ನು ನಾವು ಸ್ವೀಕರಿಸದಿರುವುದು – ಇದರ ಹಿಂದಿರುವ ಸಾಧಕರ ಅಯೋಗ್ಯ ಮಾನಸಿಕತೆಯ ಕೆಲವು ಉದಾಹರಣೆಗಳು

ಈಶ್ವರನ ಚರಣಗಳನ್ನು ತಲುಪುವ ಸಾಧನೆಯ ಆನಂದಮಯ ಪ್ರವಾಸದಲ್ಲಿ ‘ನಮ್ಮನ್ನು ನಾವು ಸ್ವೀಕರಿಸುವುದು’ ಇದು ಒಂದು ಮಹತ್ವದ ಹಂತವಾಗಿದ್ದು, ಈ ಪ್ರವಾಸದ ಮೂಲ ಆಧಾರಸ್ತಂಭವಾಗಿದೆ. ಯಾವಾಗ ಸಾಧಕನು ಸಾಧನೆ ಮಾಡಲು ಪ್ರಾರಂಭಿಸುತ್ತಾನೋ, ಆಗ ಅವನ ಮನಸ್ಸು ಅನೇಕ ಬಾರಿ ತನ್ನನ್ನು ಬಾಹ್ಯ ಜಗತ್ತಿನೊಂದಿಗೆ ಹೋಲಿಸಿಕೊಳ್ಳುವುದರಲ್ಲಿ ಮುಳುಗಿರುತ್ತದೆ. ‘ಇದು ನನ್ನಿಂದ ಸಾಧ್ಯವೇ ? ನನಗೆ ಎಷ್ಟು ಅಡಚಣೆಗಳಿವೆ ? ನನಗಿಂತ ಆ ಸಾಧಕ ಎಷ್ಟು ಪ್ರಗತಿ ಮಾಡಿಕೊಂಡಿದ್ದಾನೆ ! ನನ್ನಲ್ಲಿ ಎಷ್ಟು ಸ್ವಭಾವದೋಷಗಳಿವೆ, ಭೂತಕಾಲದ ನನ್ನ ತಪ್ಪುಗಳಿಂದ ನಾನು ಈಶ್ವರನ ಕೃಪೆಗೆ ಪಾತ್ರನಾಗಬಲ್ಲೆನೇ ?’ ಮುಂತಾದ ಅನೇಕ ವಿಚಾರಗಳಲ್ಲಿ ಅವನ ಮನಸ್ಸು ಸಿಲುಕಿಕೊಂಡಿರುತ್ತದೆ. ಈ ಕೀಳರಿಮೆ ಮತ್ತು ತನ್ನನ್ನು ತಾನು ಸ್ವೀಕರಿಸದಿರುವುದರಿಂದ ಸಾಧಕನ ಶಕ್ತಿಯು ಕ್ಷೀಣ ಎಂದರೆ ಕಡಿಮೆಯಾಗುತ್ತಿರುತ್ತದೆ.

೨. ತನ್ನ ನಿಜವಾದ ಪರಿಚಯ ಎಂದರೆ ತನ್ನಲ್ಲಿರುವ ಆತ್ಮತತ್ತ್ವದ ಪರಿಚಯ !

ಅಧ್ಯಾತ್ಮಶಾಸ್ತ್ರವು ಅತ್ಯಂತ ಸ್ಪಷ್ಟವಾಗಿ ಹೇಳುವುದೇನೆಂದರೆ, ‘ಮನುಷ್ಯ ಎಂದರೆ ಕೇವಲ ನಶ್ವರ ಶರೀರ, ಚಂಚಲ ಮನಸ್ಸು ಅಥವಾ ಬುದ್ಧಿಯಲ್ಲ, ಬದಲಾಗಿ ಅವನು ಅನಂತ, ಅವಿನಾಶಿ ಮತ್ತು ಆನಂದಮಯನಾದ ಪರಮಾತ್ಮನ ಒಂದು ಶುದ್ಧ ಅಂಶವಾಗಿದ್ದಾನೆ.’ ನಮ್ಮನ್ನು ನಾವು ಸ್ವೀಕರಿಸುವುದು, ಎಂದರೆ ನಮ್ಮಲ್ಲಿರುವ ಆ ದೈವೀ ತತ್ವದ, ಆತ್ಮತತ್ವದ ಪರಿಚಯ ಮಾಡಿಕೊಳ್ಳುವುದಾಗಿದೆ ! ಏಕೆಂದರೆ ಈ ಪರಿಚಯವಾಗದ ಹೊರತು ನಾವು ಹೇಗೆ ತಾನೆ ಆ ಆತ್ಮತತ್ವದೊಂದಿಗೆ ಏಕರೂಪವಾಗಬಲ್ಲೆವು ?

೩. ‘ನಮ್ಮನ್ನು ನಾವು ಸ್ವೀಕರಿಸುವುದು’ ಎಂದರೆ ಏನು ?

ಅ. ‘ನಮ್ಮನ್ನು ನಾವು ಸ್ವೀಕರಿಸುವುದು’ ಎಂದರೆ ಸ್ವತಃದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿ, ಹಾಗೆಯೇ ಪ್ರಾರಬ್ಧ ಮತ್ತು ಗುಣ-ದೋಷಗಳ ವಾಸ್ತವಿಕ ಅರಿವನ್ನು ಇಟ್ಟುಕೊಂಡು ಅದನ್ನು ನಮ್ರತೆಯಿಂದ ಒಪ್ಪಿಕೊಳ್ಳುವುದು.

ಆ. ನಾವು ಹೇಗಿದ್ದೇವೆಯೋ, ಯಾವ ಸ್ಥಿತಿಯಲ್ಲಿದ್ದೇವೆಯೋ, ‘ಅದು ಈಶ್ವರನ ಇಚ್ಛೆಯೇ ಆಗಿದೆ’ ಎಂಬ ಭಾವವನ್ನು ಇಟ್ಟುಕೊಳ್ಳುವುದು ಎಂದರೆ, ನಿಜವಾದ ಅರ್ಥದಲ್ಲಿ ‘ನಮ್ಮನ್ನು ನಾವು ಸ್ವೀಕರಿಸುವುದು.’

ಇ. ನಮ್ಮನ್ನು ನಾವು ಸ್ವೀಕರಿಸುವುದು, ಎಂದರೆ ಸ್ವತಃದ ಕಡೆಗೆ ವಾಸ್ತವಿಕ ದೃಷ್ಟಿಯಿಂದ ನೋಡುವುದು. ‘ನಾನು ಎಲ್ಲಿದ್ದೇನೆ, ಹೇಗಿದ್ದೇನೆ ಎಂಬುದನ್ನು ನೋಡಿ ಒಪ್ಪಿಕೊಳ್ಳುವುದು ಮತ್ತು ತನ್ನನ್ನು ಸುಧಾರಿಸಿಕೊಳ್ಳಲು ಸಜ್ಜಾಗುವುದು.’

೪. ಶ್ರೀಮದ್ಭಗವದ್ಗೀತೆ ಮತ್ತು ಉಪನಿಷತ್ತುಗಳಲ್ಲಿನ ಚಿರಂತನ ಸತ್ಯ !

೪ ಅ. ಶ್ರೀಮದ್ಭಗವದ್ಗೀತೆ : ಗೀತೆಯ ‘ಆತ್ಮಸಂಯಮಯೋಗ’ ಎಂಬ ಆರನೇ ಅಧ್ಯಾಯದಲ್ಲಿ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ಆತ್ಮೋದ್ಧಾರದ ಮರ್ಮವನ್ನು ಹೇಳಿದ್ದಾನೆ.

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |

ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೬, ಶ್ಲೋಕ ೫

ಅರ್ಥ : ಮನುಷ್ಯನು ಈ ಸಂಸಾರ ಸಾಗರದಿಂದ ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು ಮತ್ತು ತನ್ನನ್ನು ಅಧೋಗತಿಗೆ ತಳ್ಳಬಾರದು; ಏಕೆಂದರೆ ಈ ಜೀವಾತ್ಮನೇ ಸ್ವತಃ ತನಗೆ ತಾನು ಮಿತ್ರನು ಮತ್ತು ಅವನೇ ತನಗೆ ತಾನು ಶತ್ರುವೂ ಆಗಿದ್ದಾನೆ.

ಇದರ ಮೂಲಕ ಭಗವಾನ ಶ್ರೀಕೃಷ್ಣನು ಸಾಧಕರಿಗೆ ಕಲಿಸುತ್ತಿರುವುದೇನೆಂದರೆ, ಯಾವಾಗ ಒಬ್ಬ ಸಾಧಕನು ತನ್ನನ್ನು ತನ್ನ ದೋಷಗಳೊಂದಿಗೆ ಸ್ವೀಕರಿಸುತ್ತಾನೋ ಮತ್ತು ಆ ದೋಷಗಳನ್ನು ದೂರಗೊಳಿಸಲು ಈಶ್ವರನಲ್ಲಿ ಆರ್ತತೆಯಿಂದ ಪ್ರಾರ್ಥಿಸುತ್ತಾನೋ, ಆಗ ಅವನು ಸ್ವತಃ ತನ್ನ ‘ಮಿತ್ರ’ನಾಗುತ್ತಾನೆ. ಇದಕ್ಕೆ ವಿರುದ್ಧವಾಗಿ, ನಿರಂತರವಾಗಿ ತನ್ನನ್ನು ತಾನು ದೂಷಿಸಿಕೊಳ್ಳುತ್ತಾ ಹತಾಶನಾಗುವ ಮನುಷ್ಯನು ತನ್ನ ಸ್ವಂತ ‘ಶತ್ರು’ವಾಗುತ್ತಾನೆ.

೪ ಆ. ಉಪನಿಷತ್ತುಗಳಲ್ಲಿನ ಮಹಾವಾಕ್ಯಗಳು : ಉಪನಿಷತ್ತುಗಳಲ್ಲಿ ‘ಅಹಂ ಬ್ರಹ್ಮಾಸ್ಮಿ’ |’ ಎಂದರೆ ‘ನಾನು ಬ್ರಹ್ಮನಾಗಿದ್ದೇನೆ’ ಅಥವಾ ‘ತತ್ತ್ವಮಸಿ’ | ಎಂದರೆ ‘ಆ (ಬ್ರಹ್ಮ) ನೀನೇ ಆಗಿರುವೆ’, ಎಂಬ ಮಹಾವಾಕ್ಯಗಳಿವೆ. ಅವು ಮನುಷ್ಯನಿಗೆ ಸ್ವತಃದ ಸೀಮಿತ ಅಸ್ತಿತ್ವದ ಆಚೆಗಿರುವ ಆಳವಾದ ಪೂರ್ಣತ್ವದ ಅರಿವು ಮಾಡಿ ಕೊಡುತ್ತವೆ. ನಮ್ಮನ್ನು ನಾವು ಸ್ವೀಕರಿಸುವುದು, ಎಂದರೆ ಈ ಆಂತರಿಕ ಪೂರ್ಣತ್ವದ ಮತ್ತು ಈಶ್ವರೀ ಅಂಶವನ್ನು ಆದರಿಸುವುದು ಎಂದಾಗುತ್ತದೆ. ಸಂಕ್ಷಿಪ್ತದಲ್ಲಿ ತನ್ನನ್ನು ತಾನು ದೂಷಿಸಿಕೊಳ್ಳುವುದು, ಎಂದರೆ ತನಗೆ ತಾನೇ ಶತ್ರುವಾಗುವುದು ಮತ್ತು ತನ್ನನ್ನು ಸ್ವೀಕರಿಸುವುದು ಎಂದರೆ ತನಗೆ ತಾನೇ ಮಿತ್ರನಾಗುವುದು. ಸಾಧಕರೇ, ನಮ್ಮ ಸ್ಥಿತಿಯನ್ನು ಪೂರ್ಣವಾಗಿ ಸ್ವೀಕರಿಸದ ಹೊರತು ಮತ್ತು ನಮ್ಮಲ್ಲಿನ ದೋಷಗಳನ್ನು ತೆಗೆದುಹಾಕದ ಹೊರತು ಆತ್ಮೋದ್ಧಾರವು ಅಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮನ್ನು ನೀವು ಸಂಪೂರ್ಣವಾಗಿ ಸ್ವೀಕರಿಸಲು ಪ್ರಯತ್ನಿಸಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೯.೪.೨೦೨೬)