
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಸಂಘವು ದೇಶಾದ್ಯಂತ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಇದಕ್ಕಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತದಲ್ಲಿ ಒಂದು ಸಂಘಟನೆಯು ೧೦೦ ವರ್ಷಗಳನ್ನು ಪೂರೈಸಿ, ದೇಶದಲ್ಲಿ ಮತ್ತು ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಇನ್ನೂ ಸಕ್ರಿಯವಾಗಿರುವುದು ಮತ್ತು ಅದರಿಂದಲೇ ಹುಟ್ಟಿದ ಒಂದು ರಾಜಕೀಯ ಪಕ್ಷವು ದೇಶದ ಮೇಲೆ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು – ಇದು ಜಗತ್ತಿನ ಏಕೈಕ ಉದಾಹರಣೆಯಾಗಿರಬಹುದು. ಸಂಘದ ಇತಿಹಾಸವನ್ನು ಗಮನಿಸಿದರೆ, ಕಳೆದ ೧೦೦ ವರ್ಷಗಳಲ್ಲಿ ಸಂಘವು ಅನೇಕ ಹೋರಾಟಗಳನ್ನು ಮಾಡಿದೆ. ಚಿನ್ನವನ್ನು ಭಟ್ಟಿಯಲ್ಲಿ ಕಾಯಿಸದ ಹೊರತು ಅದರ ತೇಜಸ್ಸು ಹೊರಬರುವುದಿಲ್ಲ, ಹಾಗೆಯೇ ಸಂಘವೂ ಆಗಿದೆ. ಲಕ್ಷಾಂತರ ಸ್ವಯಂಸೇವಕರ ತ್ಯಾಗ ಮತ್ತು ಬಲಿದಾನದಿಂದ ಇಂದು ಸಂಘವು ೧೦೦ ವರ್ಷಗಳನ್ನು ಪೂರೈಸುತ್ತಿದೆ. ೪೦ ಲಕ್ಷಗಳಿಗಿಂತಲೂ ಹೆಚ್ಚು ಸ್ವಯಂಸೇವಕರನ್ನು ಹೊಂದಿರುವ ಇಂತಹ ಸಂಘಟನೆ ಜಗತ್ತಿನಲ್ಲಿ ಬೇರೊಂದಿಲ್ಲ. ಇಂತಹ ಸಂಘಟನೆಗೆ ಕಪ್ಪು ಬೆಕ್ಕಿನಂತೆ ಅಡ್ಡಬರುವವರು, ಅದರ ಮೇಲೆ ಬೊಗಳುವವರು ಇಂದಿಗೂ ದೇಶದಲ್ಲಿ ಕಡಿಮೆ ಇಲ್ಲ. ಅಂತಹವರನ್ನು ಎದುರಿಸಿ ಈ ಸಂಘಟನೆ ಮುನ್ನಡೆಯುತ್ತಿದೆ. ೨ ಬಾರಿ ನಿಷೇಧಕ್ಕೊಳಗಾಗಿಯೂ ಈ ಸಂಘಟನೆ ಮತ್ತು ಅದರ ಸ್ವಯಂಸೇವಕರು ಕುಗ್ಗಲಿಲ್ಲ ಮತ್ತು ಅಷ್ಟೇ ಉತ್ಸಾಹದಿಂದ ಅವರು ಕಾರ್ಯವನ್ನು ನಿರ್ವಹಿಸಿದರು. ನಮ್ರತೆ, ವಿನಯ ಎಂಬುದು ಏನಿರಬೇಕೋ ಅದು ಈ ಸಂಘಟನೆಯ ಸ್ವಯಂಸೇವಕರಲ್ಲಿ ಪ್ರತಿಬಾರಿಯೂ ಕಂಡುಬರುತ್ತದೆ. ಇಂತಹ ಬೋಧನೆಯ ಮೇಲೆ ದ್ವೇಷದಿಂದ ಟೀಕಿಸುವವರ ಅರ್ಹತೆ ಎಷ್ಟಿರಬಹುದು ಎಂಬುದು ಇದರಿಂದ ತಿಳಿಯುತ್ತದೆ. ಹಿಂದುತ್ವನಿಷ್ಠ ಸಂಘಟನೆಯಾಗಿರುವ ಸಂಘವನ್ನು ಕಾಂಗ್ರೆಸ್ ವಿರೋಧಿಸಿತು, ವಿರೋಧಿಸುತ್ತಿದೆ ಮತ್ತು ಮುಂದೆಯೂ ವಿರೋಧಿಸುತ್ತಾ ಇರುತ್ತದೆ, ಇದರಲ್ಲಿ ಸಂದೇಹವಿಲ್ಲ. ಪ್ರತಿಬಾರಿಯೂ ಕಾಂಗ್ರೆಸ್ ಸೋಲನ್ನುಭವಿಸಿದರೂ, ಮತ್ತೆ ಮತ್ತೆ ಅದು ಸಂಘವನ್ನು ವಿರೋಧಿಸುತ್ತದೆ.

ಸಂಘದ ಶತಮಾನೋತ್ಸವವನ್ನು ಕಾಂಗ್ರೆಸ್ ವಿರೋಧಿಸದೆ ಹೇಗೆ ಇರಲು ಸಾಧ್ಯ ? ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ, ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದ್ದ ಸಂಘದ ಪಥಸಂಚಲನಕ್ಕೆ ವಿರೋಧಿಸಲು ಕಾಂಗ್ರೆಸ್ ಪ್ರಯತ್ನಿಸಿತು. ವಿಶೇಷವಾಗಿ, ಚಿತ್ತಾಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತು. ಈ ಪ್ರಕರಣ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಹೋದಾಗ, ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡು ಅನುಮತಿ ನೀಡುವುದರೊಂದಿಗೆ ರಕ್ಷಣೆ ಒದಗಿಸುವಂತೆ ಆದೇಶಿಸಿತು. ಮತ್ತೆ ಕಾಂಗ್ರೆಸ್‌ನ ಮುಖಭಂಗವಾಯಿತು. ಸಂಘದಿಂದ ಎಂದಿಗೂ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಿಲ್ಲ, ಹಾಗೆಯೇ ಕರ್ನಾಟಕದಲ್ಲಿಯೂ ಪಥಸಂಚಲನದ ಸಮಯದಲ್ಲಿ ಉಂಟಾಗಿಲ್ಲ, ಎಂಬುದನ್ನು ಸ್ವತಃ ಕಾಂಗ್ರೆಸ್ ಸರಕಾರವೇ ವಿಧಾನಸಭೆಯಲ್ಲಿ ಅಧಿಕೃತವಾಗಿ ಹೇಳಬೇಕಾಯಿತು. ಇದರಿಂದ ಪುನಃ ಕಾಂಗ್ರೆಸ್ಸಿನ ಮುಖಭಂಗವಾಯಿತು. ರಾಜ್ಯದಲ್ಲಿ ಒಟ್ಟು ೫೧೮ ಸ್ಥಳಗಳಲ್ಲಿ ಪಥಸಂಚಲನ ಮಾಡಲಾಯಿತು. ಈ ಸಂಖ್ಯೆ ಕಡಿಮೆ ಏನಲ್ಲ ಎಂಬುದನ್ನು ಗಮನಿಸಿ. ಮತಾಂಧ ಮತ್ತು ಜಾತ್ಯಂಧರ ಸಂಘಟನೆಗಳಿಂದ ಯಾವುದೇ ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳದಲ್ಲಿ ಆಯೋಜಿಸಿದರೆ, ಅಲ್ಲಿ ಗದ್ದಲ ಉಂಟಾಗದಿರುವ ಉದಾಹರಣೆ ಇಲ್ಲ. ಅದಕ್ಕೆ ಹೋಲಿಸಿದರೆ, ಸಂಘದ ಪಥಸಂಚಲನದ ಮಹತ್ವವು ಸ್ಪಷ್ಟವಾಗುತ್ತದೆ. ಈಗ ಕಾಂಗ್ರೆಸ್ ಸರಕಾರವು ಉದ್ದೇಶಪೂರ್ವಕವಾಗಿ ಸಂಘಕ್ಕೆ ಅನುಮತಿ ನಿರಾಕರಿಸಿದ್ದಕ್ಕಾಗಿ ಸಂಘದ ಮತ್ತು ಜನರ ಕ್ಷಮೆ ಕೇಳಬೇಕು. ಅದಕ್ಕಾಗಿ ಸಂಘದ ಮೇಲೆ ಟೀಕೆ ಮಾಡಿ ನಿಷೇಧಕ್ಕೆ ಆಗ್ರಹಿಸಿದ್ದ ಸಚಿವ ಪ್ರಿಯಾಂಕ ಖರ್ಗೆ ಇವರು ಕ್ಷಮೆ ಕೇಳಬೇಕು, ಇದಕ್ಕಾಗಿ ಈಗ ಹಿಂದೂಗಳು ಸರಕಾರದ ಮೇಲೆ ಒತ್ತಡ ಹೇರಬೇಕು.
ಗಾಂಧಿಯವರ ಕೋತಿಗಳಂತೆ ವರ್ತಿಸುವ ಕಾಂಗ್ರೆಸ್ !

ಸಂಘಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಅನುಮತಿ ನಿರಾಕರಿಸುವ ಕಾಂಗ್ರೆಸ್, ದೇಶದಲ್ಲಿ ಗಲಭೆಗಳನ್ನು ಯಾರು ಮಾಡುತ್ತಾರೆ ಎಂಬುದನ್ನು ಎಂದಿಗೂ ಹೇಳುವುದಿಲ್ಲ. ಗುಜರಾತ್‌ನ ಗೋಧ್ರಾದಲ್ಲಿ ಕಾರಸೇವಕರಿದ್ದ ಸಾಬರಮತಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದವರು ಯಾರು ? ಮತ್ತು ಅದರಲ್ಲಿ ೫೯ ಕಾರಸೇವಕರನ್ನು ಜೀವಂತ ಸುಟ್ಟವರು ಯಾರು ? ಎಂಬುದನ್ನು ಏಕೆ ಹೇಳುವುದಿಲ್ಲ ? ಅನಂತರ ಉಂಟಾದ ಪ್ರತಿಕ್ರಿಯೆ ಮತ್ತು ಆಕ್ರೋಶಕ್ಕೆ, ಹಿಂದೂಗಳನ್ನು ಮತ್ತು ಅವರ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡುವ ಕಾಂಗ್ರೆಸ್ ಪಕ್ಷವು ದ್ವಿಮುಖವಾಗಿದೆ. ದೇಶದಲ್ಲಿ ಹಿಂದೂಗಳ ಪ್ರತಿಯೊಂದು ಹಬ್ಬದ ಸಮಯದಲ್ಲಿ ಅವರ ಧಾರ್ಮಿಕ ಮೆರವಣಿಗೆಗಳ ಮೇಲೆ ಮಸೀದಿಗಳ ಬಳಿ ಮುಸಲ್ಮಾನರಿಂದ ನಡೆಯುವ ಆಕ್ರಮಣಗಳ ಬಗ್ಗೆ ಕಾಂಗ್ರೆಸ್ ಎಂದಿಗೂ ಮಾತನಾಡುವುದಿಲ್ಲ. ಕಳೆದ ವರ್ಷ ಉತ್ತರಪ್ರದೇಶದ ಬಹರೈಚ್‌ನಲ್ಲಿ ಶ್ರೀ ದುರ್ಗಾಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಆಕ್ರಮಣ ಮಾಡಿ ರಾಮಗೋಪಾಲ ಮಿಶ್ರಾ ಎಂಬುವರನ್ನು ಗುಂಡಿಕ್ಕಿ ಕೊಂದ ೯ ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ ಹಾಗೂ ಒಬ್ಬನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಈ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನು ಇದ್ದಿದ್ದರೆ, ಕಾಂಗ್ರೆಸ್ ತಕ್ಷಣವೇ ಆ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸುತ್ತಿತ್ತು; ಆದರೆ ಕೊಲೆ ಮಾಡಿದವರು ಮುಸಲ್ಮಾನರು ಮತ್ತು ಸತ್ತವರು ಹಿಂದೂ ಆಗಿದ್ದರಿಂದ ಕಾಂಗ್ರೆಸ್ ಗಾಂಧಿಯವರ ೩ ಕೋತಿಗಳ ಪಾತ್ರವನ್ನು ವಹಿಸಿತು. ಇಂದು ಕಾಂಗ್ರೆಸ್‌ನ ಸ್ಥಿತಿ ಕೋತಿಗಳಂತೆಯೇ ಆಗಿದೆ. ಅದರ ನಾಯಕತ್ವವೂ ಇದೇ ರೀತಿ ವರ್ತಿಸುತ್ತಿದೆ ಮತ್ತು ಜನರೂ ಅದನ್ನು ಹಾಸ್ಯಾಸ್ಪದ ವ್ಯಕ್ತಿಯಾಗಿ ನೋಡುತ್ತಾರೆ. ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೇತರ ಪಕ್ಷಗಳ ಸರಕಾರಗಳಿವೆಯೋ, ಅಲ್ಲಿ ಮತಾಂಧರ ಕಾರ್ಯಕ್ರಮಗಳ ಮೇಲೆ ಎಂದಿಗೂ ನಿಷೇಧ ಹೇರುವುದಿಲ್ಲ ಅಥವಾ ಅನುಮತಿ ನಿರಾಕರಿಸುವುದಿಲ್ಲ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಮೊಹರಂ ಮೆರವಣಿಗೆಗಾಗಿ ಶ್ರೀ ದುರ್ಗಾದೇವಿಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ನಿಷೇಧ ಹೇರಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವಿದೆ. ರಾಜ್ಯದ ರಾಜಧಾನಿ ಸಿಮ್ಲಾದಲ್ಲಿ ಸಂಜೌಲಿ ಮಸೀದಿಯು ಅನಧಿಕೃತವಾಗಿದೆ ಎಂದು ನ್ಯಾಯಾಲಯ ಹೇಳಿ ಅದನ್ನು ಕೆಡವಲು ಆದೇಶ ನೀಡಿದರೂ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸ್ಥಳದಲ್ಲಿ ಹಿಂದೂ ಸಂಘಟನೆಯ ಯಾವುದಾದರೂ ಕಚೇರಿ ಇದ್ದಿದ್ದರೆ, ಕಾಂಗ್ರೆಸ್ ಒಂದೋ ಮೊದಲೇ ಅದನ್ನು ನಿರ್ಮಿಸಲು ಬಿಡುತ್ತಿರಲಿಲ್ಲ ಮತ್ತು ಈಗಾಗಲೇ ನಿರ್ಮಿಸಿದ್ದರೆ, ಕಾಂಗ್ರೆಸ್ ನೇರವಾಗಿ ಹೋಗಿ ಅದನ್ನು ಕೆಡವುತ್ತಿತ್ತು. ಆದರೆ ಮುಸಲ್ಮಾನರ ವಿಷಯದಲ್ಲಿ ಕಾಂಗ್ರೆಸ್ ಎಂದಿಗೂ ಹಾಗೆ ಮಾಡುವುದಿಲ್ಲ. ವಕ್ಫ್ ಮಂಡಳಿಗೆ ಕಾನೂನಿನ ಮೂಲಕ ಅಧಿಕಾರ ನೀಡಿ ಭೂಮಿ ಕಬಳಿಸಲು ಕಾಂಗ್ರೆಸ್ ಅನುಮತಿ ನೀಡಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇದರಿಂದಾಗಿ ಇಂದು ದೇಶದಲ್ಲಿ ಉಂಟಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯ ಬಗ್ಗೆ ಮಾತನಾಡುವ ಬದಲು, ಕಾಂಗ್ರೆಸ್ ವಕ್ಫ್ ಕಾಯ್ದೆಯನ್ನು ಸಮರ್ಥಿಸುತ್ತಿದೆ. ಅದರಲ್ಲಿನ ಸುಧಾರಣೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದೆ.

ಕಾಂಗ್ರೆಸ್ಸಿನ ಸೋಲನ್ನು ಎಲ್ಲೆಡೆ ತಿಳಿಸಿ !
ರಾ.ಸ್ವ. ಸಂಘದಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಎಂದಿಗೂ ಅಪಾಯ ಉಂಟಾಗಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ; ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶ ಮತ್ತು ಹಿಂದೂಗಳ ಸುರಕ್ಷತೆಯ ದೃಷ್ಟಿಯಿಂದ ಅಪಾಯವಿರುತ್ತದೆ ಎಂಬುದು ಇಲ್ಲಿಯ ವರೆಗಿನ ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿಯೂ ಕಂಡುಬಂದಿದೆ. ರಾಜ್ಯದ ಅನೇಕ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಮತಾಂಧರಿಗೆ ಮುಕ್ತ ಅವಕಾಶ ಸಿಕ್ಕು ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಸಂಘವು ಇಂತಹ ವಿರೋಧವನ್ನು ಎಂದಿಗೂ ಬಲವಾಗಿ ವಿರೋಧಿಸಿಲ್ಲ. ಶಾಂತ ಮತ್ತು ಸಂಯಮದ ಮಾರ್ಗದಲ್ಲಿ ಇದನ್ನು ಖಂಡಿಸಿ ನ್ಯಾಯದ ಪರ ನಿಂತು ಸಂಯಮವನ್ನು ಕಾಪಾಡಿಕೊಂಡಿತು. ಇದರ ಫಲ ಅವರಿಗೆ ದೊರಕಿತು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವು ಅದನ್ನು ಒಪ್ಪಿಕೊಳ್ಳಬೇಕಾಯಿತು. ಇದು ಕಾಂಗ್ರೆಸ್ಸಿನ ಸೋಲು ಮತ್ತು ರಾ.ಸ್ವ.ಸಂಘದ ವಿಜಯವಾಗಿದೆ. ಕಾಂಗ್ರೆಸ್ ಪಕ್ಷವು ತನ್ನದೇ ತಪ್ಪಿನಿಂದ ತನಗೆ ಹಾನಿ ಮಾಡಿಕೊಂಡಿತು. ಇದರ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು. ಇದರ ಆಧಾರದ ಮೇಲೆ ಎಲ್ಲೆಡೆಯೂ ಕಾಂಗ್ರೆಸ್ ಪಕ್ಷವನ್ನು ಅಪಹಾಸ್ಯ ಮಾಡಬೇಕು. ಅದರ ಸಂಘದ್ವೇಷವು ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದನ್ನು ಹೇಳಬೇಕು !
”ವಂದೇ ಮಾತರಂ” ಅನ್ನು ಪೂರ್ಣವಾಗಿ ಹಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿಯ ಭಾಗ! (ವಂತೆ)
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
‘ಭಾರತವನ್ನು ಇತಿಹಾಸದ ಪುಟಗಳಿಂದ ಅಳಿಸುತ್ತೇವೆ!’
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!