ಪಾಕ್ ಸಭೆ ಆರೋಪ: ಹರಿಪ್ರಸಾದ್‌ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ

ಕ್ಷಮೆ ಕೇಳದಿದ್ದರೆ ಕಾನೂನು ಹೋರಾಟ

ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರಾದ ರಾಮ ಮಾಧವ ರವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ ಪ್ರದೇಶಾಧ್ಯಕ್ಷರಾದ ಬಿ.ಕೆ. ಹರಿಪ್ರಸಾದ ರವರು ನಗರದಲ್ಲಿ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಮ ಮಾಧವ ರವರು ಹರಿಪ್ರಸಾದ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ‘ನನ್ನ ಪ್ರತಿಷ್ಠೆ ಮತ್ತು ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಈ ಸುಳ್ಳು ಹೇಳಿಕೆ ನೀಡಲಾಗಿದೆ’ ಎಂದು ಹೇಳಿರುವ ರಾಮ ಮಾಧವ ರವರು, ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ‘ಹರಿಪ್ರಸಾದ ರವರು ತಮ್ಮ ಹೇಳಿಕೆಗೆ ತಕ್ಷಣವೇ ಕ್ಷಮೆಯಾಚಿಸಬೇಕು’ ಎಂದು ನೋಟಿಸ್‌ ನಲ್ಲಿ ಉಲ್ಲೇಖಿಸಲಾಗಿದೆ.
​ಲಂಡನ್‌ ನ ಹಿಲ್ಟನ್ ಹೋಟೆಲ್‌ ನಲ್ಲಿ ರಾಮ ಮಾಧವ ರವರು ಪಾಕಿಸ್ತಾನದ ‘ಐ.ಎಸ್‌.ಐ.’ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ – ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆ) ನ ಮಾಜಿ ಮೇಜರ್ ಜನರಲ್ ಅವರೊಂದಿಗೆ ಒಟ್ಟು 4 ಬಾರಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಹರಿಪ್ರಸಾದ ಆರೋಪಿಸಿದ್ದರು.