ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
ರಾಷ್ಟ್ರಪುರುಷರ ಆದರ್ಶವನ್ನು ಪಡೆದು ರಾಷ್ಟ್ರಕ್ಕಾಗಿ ಕೊಡುಗೆ ನೀಡಲು ವಿದ್ಯಾರ್ಥಿಗಳ ನಿರ್ಣಯ !

ದೆಹಲಿ, ಡಿಸೆಂಬರ್ 15 (ವಾರ್ತೆ) – ಭಾರತ್ ಮಂಟಪಂನಲ್ಲಿ ಆಯೋಜಿಸಲಾದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಆಯೋಜಿಸಲಾದ ಮರಾಠರ ಕಾಲದ ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಡಿಸೆಂಬರ್ 15 ರಂದು ದೆಹಲಿಯ ವಿವಿಧ ಕಾಲೇಜುಗಳು ಮತ್ತು ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡಿದರು. ಹಿಂದವಿ ಸ್ವರಾಜ್ಯ ಸ್ಥಾಪನೆಯ ಸಮಯದಲ್ಲಿ ಮಾವಳಾ ಸೈನಿಕರು ಬಳಸಿದ ಶಸ್ತ್ರಾಸ್ತ್ರಗಳನ್ನು ವಿದ್ಯಾರ್ಥಿಗಳು ಈ ಸಮಯದಲ್ಲಿ ಪ್ರತ್ಯಕ್ಷವಾಗಿ ಮುಟ್ಟಿ ನೋಡಿದರು ಮತ್ತು ಮಾವಳಾ ಸೈನಿಕರ ಶೌರ್ಯವನ್ನು ಅನುಭವಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಚಾರುದತ್ತ ಪಿಂಗಳೆ, ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಮತ್ತು ಸನಾತನದ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ ರಾಜಹಂಸ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಪ್ರದರ್ಶನ ನೋಡಿದ ಬಳಿಕ ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಾಷ್ಟ್ರಪುರುಷರ ಆದರ್ಶವನ್ನು ಪಡೆದು ರಾಷ್ಟ್ರಕಾರ್ಯಕ್ಕಾಗಿ ಕೊಡುಗೆ ನೀಡುತ್ತೇವೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರ ಪತ್ನಿಯೊಂದಿಗೆ ಪ್ರದರ್ಶನಕ್ಕೆ ಭೇಟಿ!

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು ತಮ್ಮ ಪತ್ನಿಯೊಂದಿಗೆ ಶಸ್ತ್ರಾಸ್ತ್ರ ಮತ್ತು ಇತರ ಪ್ರದರ್ಶನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಶಸ್ತ್ರಾಸ್ತ್ರ ಪ್ರದರ್ಶನದಲ್ಲಿನ ಶಸ್ತ್ರಾಸ್ತ್ರಗಳನ್ನು ಸ್ವತಃ ನಿರ್ವಹಿಸಿದರು ಮತ್ತು ಈ ಶಸ್ತ್ರಾಸ್ತ್ರಗಳ ಬಗ್ಗೆ ತಮಗೆ ತಿಳಿದಿರುವ ಮಾಹಿತಿಯನ್ನು ಪ್ರದರ್ಶನದ ಸಂಗ್ರಾಹಕ ಶ್ರೀ ರಾಕೇಶ್ ಧಾವಡೆ ಅವರಿಗೂ ತಿಳಿಸಿದರು. ಈ ಸಂದರ್ಭದಲ್ಲಿ, ಮಾಜಿ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು “ಶ್ರೀ ಧಾವಡೆ ಅವರ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸುವುದಾಗಿ” ಹೇಳಿದರು.
ರಾಧಾಕೃಷ್ಣ ವಿದ್ಯಾ ನಿಕೇತನ ಶಾಲೆ, ಬಾಳಾಜಿ ಮಹಾವಿದ್ಯಾಲಯ ಸೇರಿದಂತೆ ಇತರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಭೇಟಿ ನೀಡಿದರು.
ದೆಹಲಿಯ ರಾಧಾಕೃಷ್ಣ ವಿದ್ಯಾ ನಿಕೇತನದ 50 ವಿದ್ಯಾರ್ಥಿಗಳು ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಭೇಟಿ!
ಪುಷ್ಪವಿಹಾರದ ರಾಧಾಕೃಷ್ಣ ವಿದ್ಯಾ ನಿಕೇತನ ಶಾಲೆಯ 50 ವಿದ್ಯಾರ್ಥಿಗಳು ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಭೇಟಿ ನೀಡಿದರು. ಶಾಲೆಯ ಹಿರಿಯ ಶಿಕ್ಷಕಿ ಸಾರಿಕಾ ಶರ್ಮಾ ಮತ್ತು ಶಿಕ್ಷಕಿ ಕೃತ್ರಿಕಾ ಕಟಾರಿಯಾ ವಿದ್ಯಾರ್ಥಿಗಳನ್ನು ಕರೆತಂದಿದ್ದರು. ವಿದ್ಯಾರ್ಥಿಗಳು ಪ್ರದರ್ಶನದಲ್ಲಿನ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅಲ್ಲಿನ ಶಸ್ತ್ರಾಸ್ತ್ರಗಳ ಸ್ಪರ್ಶವನ್ನು ಅನುಭವಿಸಿದರು.
ರಾಷ್ಟ್ರಪುರುಷರ ಗುಣಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ! – ಸಾರಿಕಾ ಶರ್ಮಾ, ಹಿರಿಯ ಶಿಕ್ಷಕಿ, ರಾಧಾಕೃಷ್ಣ ವಿದ್ಯಾ ನಿಕೇತನ ಶಾಲೆ
ಶಸ್ತ್ರಾಸ್ತ್ರ ಪ್ರದರ್ಶನವನ್ನು ನೋಡಿದ ನಂತರ ಪ್ರಾಚೀನ ಭಾರತದಲ್ಲಿ ಯಾವ ರೀತಿ ಕೌಶಲ್ಯಪೂರ್ಣ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗಿತ್ತು ಎಂಬುದು ತಿಳಿಯಿತು. ಈ ಶಸ್ತ್ರಾಸ್ತ್ರ ಪ್ರದರ್ಶನವನ್ನು ನೋಡಿದ ನಂತರ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಮತ್ತು ರಾಷ್ಟ್ರಗುಣಗಳು ಬೆಳೆಯಲು ಸಹಾಯವಾಗುತ್ತದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ರಾಷ್ಟ್ರಪುರುಷರ ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ನಮ್ಮ ವಿದ್ಯಾರ್ಥಿಗಳು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ ಎಂದರು.
ರಾಷ್ಟ್ರಭಕ್ತಿಯ ಭಾವನೆಯನ್ನು ಮೂಡಿಸುವ ಪ್ರದರ್ಶನ! – ಕೃತ್ರಿಕಾ ಕಟಾರಿಯಾ, ಶಿಕ್ಷಕಿ, ರಾಧಾಕೃಷ್ಣ ವಿದ್ಯಾ ನಿಕೇತನ ಶಾಲೆ
ಶಿವಾಜಿ ಮಾಹಾರಾಜರ ಕಾಲದ ಸುಧಾರಿತ ಶಸ್ತ್ರಾಸ್ತ್ರಗಳು ವಿಜ್ಞಾನವನ್ನು ಆಧರಿಸಿದ್ದವು ಎಂಬುದು ತಿಳಿಯಿತು. ರಾಷ್ಟ್ರಪುರುಷರು ಮತ್ತು ಅವರ ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನವನ್ನು ಪ್ರತಿಯೊಂದು ಶಾಲೆಯಲ್ಲಿಯೂ ಆಯೋಜಿಸುವುದು ಅಗತ್ಯವಾಗಿದೆ. ಈ ಪ್ರದರ್ಶನವನ್ನು ನೋಡಿದ ನಂತರ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯ ಭಾವನೆ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಧಾಕೃಷ್ಣ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳ ಪ್ರತಿಕ್ರಿಯೆ!
ಕು. ದೇವ ನಾರಾಯಣ, ವಿದ್ಯಾರ್ಥಿ: ಭಾರತೀಯ ಇತಿಹಾಸದಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು, ಆ ಶಸ್ತ್ರಾಸ್ತ್ರಗಳನ್ನು ಸ್ಪರ್ಶಿಸಿದಾಗ ಸಂತೋಷವಾಯಿತು. ನಮ್ಮ ರಾಷ್ಟ್ರಪುರುಷರ ಬಗ್ಗೆ ಹೆಮ್ಮೆ ಎನಿಸಿತು.
ಕು. ಪೂಜಾ ಕೌಶಿಕ್, ವಿದ್ಯಾರ್ಥಿನಿ (6 ನೇ ತರಗತಿ): ಛತ್ರಪತಿ ಶಿವಾಜಿ ಮಹಾರಾಜರು ಈ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಲು ಚಿಕ್ಕ ವಯಸ್ಸಿನಲ್ಲಿಯೇ ಯುದ್ಧ ಮಾಡಿದರು.
ಕು. ಅನನ್ಯಾ (7 ನೇ ತರಗತಿ): ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಯಾವ ರೀತಿ ಶಿಕ್ಷೆ ನೀಡುತ್ತಿದ್ದರು ಎಂಬುದು ಅವರ ಕಾರ್ಯಗಳ ಮಾಹಿತಿಯನ್ನು ನೋಡಿದಾಗ ತಿಳಿಯಿತು. ಮಹಾರಾಣಾ ಪ್ರತಾಪ ಅವರ ಪರಾಕ್ರಮ ತಿಳಿಯಿತು.
ನಾನು ದೊಡ್ಡವಳಾದ ಮೇಲೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತೆ ಆಗುತ್ತೇನೆ! – ಕು. ಆರಾಧ್ಯಾ, (7 ನೇ ತರಗತಿ)
ಈಗ ವಿವಿಧ ಯಂತ್ರಗಳು ಬಂದಿವೆ; ಆದರೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಹಿಂದಿನ ಕಾಲದ ಕುಶಲಕರ್ಮಿಗಳು ಕೈಯಿಂದ ತಯಾರಿಸಿದ್ದರು. ಹಿಂದಿನ ಕಾಲದವರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಇದರಿಂದ ತಿಳಿಯಿತು. ಛತ್ರಪತಿ ಶಿವಾಜಿ ಮಹಾರಾಜರು, ರಾಣಿ ಲಕ್ಷ್ಮೀಬಾಯಿ ಅವರು ನಮಗೆ ಸ್ವಾತಂತ್ರ್ಯ ಸಿಗಲಿ ಎಂದು ಮಾಡಿದ ಕಾರ್ಯಗಳು ತಿಳಿಯಿತು. ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಝಾನ್ಸಿ ರಾಣಿಯು ಬ್ರಿಟಿಷರೊಂದಿಗೆ ಯುದ್ಧ ಮಾಡಿದರು. ನಾನು ದೊಡ್ಡವಳಾದ ಮೇಲೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತೆ ಆಗುತ್ತೇನೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !