
ಮಿರಜ (ಜಿಲ್ಲೆ ಸಾಂಗ್ಲಿ), ಡಿಸೆಂಬರ್ ೧೦ (ಸುದ್ದಿ) – ಸನಾತನದ ೫೧ನೇ ಸಮಷ್ಟಿ ಸಂತ, ಪ್ರೇಮಭಾವದ ಮೂರ್ತಿಮಂತ ರೂಪವಾಗಿದ್ದ, ಸಾಧಕರ ಕುರಿತು ವಾತ್ಸಲ್ಯ ಭಾವ ಹೊಂದಿದ್ದ, ಭಾವಭಕ್ತಿಯ ಬಲದಿಂದ ಮಿರಜ್ ಆಶ್ರಮದ ಆಧಾರಸ್ತಂಭವಾಗಿದ್ದ ಪೂ. ಜಯರಾಮ ಜೋಶಿ ಅಜ್ಜ (ಪೂ. ಆಬಾ) (ವಯಸ್ಸು ೮೮ ವರ್ಷ) ಅವರು ಡಿಸೆಂಬರ್ ೯, ೨೦೨೫ ರಂದು ರಾತ್ರಿ ೯ ಗಂಟೆ ೨೫ ನಿಮಿಷಕ್ಕೆ ಸನಾತನದ ಮಿರಜ್ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರ ಅಂತಿಮ ಸಂಸ್ಕಾರಗಳನ್ನು ಡಿಸೆಂಬರ್ ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಮಿರಜ್ ನ ವೈಕುಂಠಭೂಮಿಯಲ್ಲಿ ನೆರವೇರಿಸಲಾಯಿತು. ಅವರ ಪಾರ್ಥಿವ ಶರೀರಕ್ಕೆ ಅಗ್ನಿಸಂಸ್ಕಾರ ಮಾಡುವ ಮೊದಲು ಸನಾತನದ ಸದ್ಗುರು ಸ್ವಾತಿ ಖಾಡ್ಯೆ ಅವರು ದರ್ಶನ ಮಾಡಿ ಹಾರ ಅರ್ಪಿಸಿದರು.
ಪೂ. ಜೋಶಿ ಅಜ್ಜ ಅವರ ನಂತರ, ಅವರ ಇಬ್ಬರು ಸಹೋದರರಾದ ಶ್ರೀ ಮನೋಹರ ಜೋಶಿ, ಶ್ರೀ ಮಧುಕರ ಜೋಶಿ, ಮೂವರು ಅತ್ತಿಗೆಯರಾದ ಸೌ. ಉಷಾ ಜೋಶಿ, ಶ್ರೀಮತಿ ಮಂಜರಿ ಜೋಶಿ ಮತ್ತು ಶ್ರೀಮತಿ ಸುನಿತಾ ಜೋಶಿ, ಅವರ ಮಗ ಶ್ರೀ ಯೋಗೇಶ ಜೋಶಿ, ಸೊಸೆ ಸೌ. ಭಾಗ್ಯಶ್ರೀ ಜೋಶಿ, ಮೊಮ್ಮಗಳು ಕು. ಐಶ್ವರ್ಯ ಜೋಶಿ, ಮಗಳು ಸೌ. ಆರತಿ ಮ್ಹೈಸಕರ, ಅಳಿಯ ಶ್ರೀ ಪ್ರಸಾದ ಮ್ಹೈಸಕರ, ಮೊಮ್ಮಗ ಶ್ರೀ ದರ್ಶನ ಮ್ಹೈಸಕರ, ಶ್ರೀ ದರ್ಶನ ಅವರ ಪತ್ನಿ ಸೌ. ಅನುಶ್ರೀ ಮ್ಹೈಸಕರ ಮತ್ತು ಮರಿ ಮೊಮ್ಮಗ ಕು. ಅರ್ಣವ ಮ್ಹೈಸಕರ ಅವರನ್ನು ಒಳಗೊಂಡ ಕುಟುಂಬವಿದೆ.
ಪೂ. ಜೋಶಿ ಅಜ್ಜ ಅವರು ೭೩ನೇ ವಯಸ್ಸಿನಲ್ಲಿ ಆಶ್ರಮದಲ್ಲಿ ವಾಸಿಸಲು ಬಂದರು ಮತ್ತು ಅಲ್ಪಾವಧಿಯಲ್ಲಿಯೇ ಆಶ್ರಮ ಜೀವನದೊಂದಿಗೆ ಬೆರೆತುಹೋದರು. ಪ್ರೇಮಭಾವಕ್ಕೆ ತತ್ವನಿಷ್ಠೆಯ ಜೋಡಣೆಯನ್ನು ನೀಡುವ ಪೂ. ಜೋಶಿ ಅಜ್ಜ ಅವರು ಮಿರಜ್ ಆಶ್ರಮದ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುವ ಮೂಲಕ ಅಲ್ಲಿನ ಸಾಧಕರಿಗೆ ಆಧಾರಸ್ತಂಭವಾದರು. ಎಷ್ಟು ದೈಹಿಕ ತೊಂದರೆಯಿದ್ದರೂ, ಆನಂದದಿಂದಿರುವುದು ಅವರ ವೈಶಿಷ್ಟ್ಯವಾಗಿತ್ತು. ಆರೋಗ್ಯ ಚೆನ್ನಾಗಿಲ್ಲದಿದ್ದರೂ, ಹೆಚ್ಚು ಸಮಯ ಸೇವೆ ಮಾಡಬೇಕೆಂಬ ತೀವ್ರ ತಳಮಳ ಅವರಲ್ಲಿತ್ತು.
ಕ್ಷಣಚಿತ್ರಗಳು
೧. ದೇಹತ್ಯಾಗದ ನಂತರವೂ ಪೂ. ಜೋಶಿ ಅಜ್ಜ ಅವರ ಮೈಬಣ್ಣ ಹಳದಿಯಾಗಿ ಕಾಣುತ್ತಿತ್ತು. ಅವರ ಕಾಂತಿ ಹಾಗೆಯೇ ಇತ್ತು.
೨. ಅವರ ಪಾರ್ಥಿವ ಶರೀರವನ್ನು ಅಗ್ನಿಸಂಸ್ಕಾರಕ್ಕಾಗಿ ಕೊಂಡೊಯ್ಯುವಾಗ ಅವರ ಮುಖವು ಒಬ್ಬ ಋಷಿ-ಮುನಿಗಳಂತೆ ಕಾಣುತ್ತಿತ್ತು.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !