
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು (ಗುರುದೇವರು) ಸಾಧಕರಿಗೆ, ”ಯೋಗ್ಯ ಸಾಧನೆ ಮಾಡಿದರೆ, ಸಾಧಕನು ಪ್ರತಿವರ್ಷ ಶೇ. ೧-೨ ರಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬಹುದು,” ಎಂದಿದ್ದಾರೆ. ಸಾಧಕನು ಪೂರ್ಣವೇಳೆ ಸಾಧನೆ ಮಾಡಲು ಆರಂಭಿಸಿದಾಗ ಅವನ ಮಾಯೆಯ ಸೆಳೆತವು ಸುಮಾರು ಶೇ. ೫೦ ರಷ್ಟು ಕಡಿಮೆಯಾಗಿರುವುದರಿಂದ ಅವನ ಆಧ್ಯಾತ್ಮಿಕ ಮಟ್ಟವು ಶೇ. ೫೦ ರಷ್ಟಿರುತ್ತದೆ. ಅನಂತರ ಸಾಧಕನು ೧೦ ರಿಂದ ೨೦ ವರ್ಷಗಳ ವರೆಗೆ ಸತತ ಸಾಧನೆ ಮಾಡುತ್ತಿದ್ದರೆ, ಅವನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತನಾಗುತ್ತಾನೆ ಅಥವಾ ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಸಂತಪದವಿಯಲ್ಲಿ ತಲುಪುವನು. ಆದರೆ ಎಲ್ಲರ ಸಂದರ್ಭದಲ್ಲಿ ಹೀಗಾಗಲ್ಲ; ಏಕೆಂದರೆ ‘ಪ್ರತಿ ಕ್ಷಣವೂ ಯೋಗ್ಯ ಸಾಧನೆ ಆಗುತ್ತದೆ’, ಎನ್ನಲು ಸಾಧ್ಯವಿಲ್ಲ. ಸಾಧಕನ ಸ್ಥಿತಿಯೂ ಏರುಪೇರಾಗುತ್ತದೆ. ಅಹಂಕಾರಿ ಮನಸ್ಸೇ ಅವನತಿಗೆ ಕಾರಣವಾಗುತ್ತದೆ ಗುರುಕೃಪೆಯಿಂದ ಕೇವಲ ಸನಾತನ ಸಂಸ್ಥೆಯಲ್ಲಿ ಸಾಧಕರ ಪ್ರಗತಿಯ ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೂಲಕ ಸಾಧಕರಿಗೆ ಸಾಧನೆಯಲ್ಲಿ ಪ್ರೋತ್ಸಾಹ ನೀಡಿ ಯೋಗ್ಯ ಸಾಧನೆ ಮಾಡಿಸಿಕೊಳ್ಳಲಾಗುತ್ತದೆ. ಸಾಧಕನ ಆಧ್ಯಾತ್ಮಿಕ ಪ್ರಗತಿ ಆಗದಿದ್ದರೂ, ಅವನು ಶ್ರದ್ಧೆ, ಕೃತಜ್ಞತಾಭಾವ ಮತ್ತು ಶರಣಾಗತಭಾವದಿಂದ ಇರಬೇಕು. ಸಾಧಕನ ಸಾಧನೆಯ ಪ್ರಗತಿಯ ಮೇಲೆ-ಕೆಳಗೆ ಆಗುತ್ತಿರುವ ಮಟ್ಟವನ್ನು ನೋಡಿ ಅವನಿಗೆ ತನ್ನ ಸಾಧನೆಯ ಸ್ಥಿತಿಯು ತಿಳಿದಿರುವುದರಿಂದ ಅವನು ಗುರುಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು. ಅವನು ಪ್ರಗತಿಯ ಅಥವಾ ಅವನತಿಯ ಮಟ್ಟ ನೋಡಿ ನಿರಾಶೆ ಅಥವಾ ವಿಕಲ್ಪಕ್ಕೆ ಒಳಗಾಗದೇ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ಕೃತಜ್ಞತೆಯ ಭಾವದಲ್ಲಿದ್ದು ಅದರಿಂದ ಕಲಿತು ಸಾಧನೆಯ ಪ್ರಯತ್ನ ಹೆಚ್ಚಿಸುವುದು ಅಪೇಕ್ಷಿತವಾಗಿದೆ.
– (ಪೂ.) ಶಿವಾಜಿ ವಟಕರ, ಸನಾತನ ಆಶ್ರಮ, ದೇವದ್.
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು