ಆಶ್ರಮದ ಸಾಧಕರು ಇತರ ಸಾಧಕರೊಂದಿಗೆ ಆತ್ಮೀಯತೆಯನ್ನು ಬೆಳೆಸಲು ‘ಗುರುಗಳ ಆಶ್ರಮವೇ ನಮ್ಮ ಮನೆಯಾಗಿದೆ’, ಎಂಬ ಭಾವವನ್ನು ಇಡುವುದರ ಮಹತ್ವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

‘ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುವ ಓರ್ವ ವೃದ್ಧ ಸಾಧಕಿಯ ಮನಸ್ಸಿನಲ್ಲಿ, ‘ಈಗ ನನಗೆ ವಯಸ್ಸಾಗಿದೆ. ಆದ್ದರಿಂದ ವಯಸ್ಸಿಗನುಸಾರ ನನಗೆ ಕೆಲವು ವ್ಯಾಧಿಗಳಿವೆ. ನನಗೆ ವ್ಯಾಧಿಯಿಂದ ಔಷಧಿ ಮತ್ತು ಪಥ್ಯಗಳನ್ನು ಪಾಲಿಸಬೇಕಾಗುತ್ತದೆ. ನನ್ನ ಪತಿ ಮತ್ತು ಮಗ ಇವರಿಬ್ಬರೂ ಸೇವೆಗಾಗಿ ಹೊರಗಿರುತ್ತಾರೆ. ಇವರಲ್ಲಿ ಯಾರಾದರೊಬ್ಬರು ನನ್ನ ಜೊತೆಯಲ್ಲಿರಬೇಕಿತ್ತು. ನನ್ನ ಮಗನಿಗೆ ಮದುವೆ ಆಗಿದ್ದರೆ, ಸೊಸೆಯಾದರೂ ನನ್ನ ಸಹಾಯಕ್ಕೆ ಇರುತ್ತಿದ್ದಳು. ನನ್ನ ಸ್ವಂತ ಮನೆ ಇದ್ದಿದ್ದರೆ, ಅಗತ್ಯಗನುಸಾರ ನನಗೆ ಪಥ್ಯ ಮತ್ತು ಔಷಧಿ-ನೀರು ಇವೆಲ್ಲವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿತ್ತು’, ಈ ವಿಚಾರಗಳಿಂದ ಆ ಸಾಧಕಿಗೆ ನಿರಾಶೆಯಾಯಿತು. ಈ ಕುರಿತು ಸಾಧಕರು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು.

೧. ಪ್ರತಿಯೊಬ್ಬ ಸಾಧಕನಿಗೆ ಆಶ್ರಮದಲ್ಲಿ ದೊರಕುವ ಎಲ್ಲ ಸೌಲಭ್ಯಗಳ ಅರಿವಿರಬೇಕು !

ಅ. ‘ಒಬ್ಬ ಸಾಧಕನು ಪೂರ್ಣವೇಳೆ ಸೇವೆ ಮಾಡಲು ಆಶ್ರಮದ ಜೀವನವನ್ನು ಸ್ವೀಕರಿಸಿದಾಗ ಆ ಸಾಧಕನು ಅನೇಕ ವಿಷಯಗಳನ್ನು ತ್ಯಜಿಸಬೇಕಾಗುತ್ತದೆ. ತ್ಯಾಗ ಮಾಡಿದಾಗ ಸಾಧನೆಯಾಗಿ ಈಶ್ವರ ಪ್ರಾಪ್ತಿಯು ಶೀಘ್ರಗತಿಯಿಂದ ಆಗಲು ಸಹಾಯವಾಗುತ್ತದೆ.

ಆ. ಆಶ್ರಮದಲ್ಲಿ ಅನೇಕ ಬಾರಿ ಇಷ್ಟೊಂದು ದೊಡ್ಡ ಸ್ತರದಲ್ಲಿ ಆಯೋಜನೆಯನ್ನು ನೋಡಿಕೊಳ್ಳುವಾಗ ಕೆಲವು ಮಿತಿಗಳು ಬರುವುದು ಸಹಜವಾಗಿದೆ. ಹೀಗಿದ್ದರೂ ‘ಆಶ್ರಮದಲ್ಲಿ ಸಾಧಕರ ಸಾಧನೆ ಆಗಬೇಕು ಮತ್ತು ಅವರ ದೈನಂದಿನ ಜೀವನದಲ್ಲಿ ಅಗತ್ಯವಿದ್ದಷ್ಟು ಸೌಲಭ್ಯಗಳು ಅವರಿಗೆ ಉತ್ತಮ ರೀತಿಯಲ್ಲಿ ದೊರಕುತ್ತವೆ’, ಅದಕ್ಕಾಗಿ ಆಶ್ರಮದ ವ್ಯವಸ್ಥಾಪನೆಯು ತನ್ನ ಮಟ್ಟದಲ್ಲಿ ಸಂಪೂರ್ಣವಾಗಿ ಪ್ರಯತ್ನಿಸುತ್ತದೆ.

ಇ. ಭಾರತದ ಇತರ ಅನೇಕ ಸಂಪ್ರದಾಯಗಳ ಆಶ್ರಮಗಳಲ್ಲಿ ತುಂಬಾ ದಯನೀಯ ಸ್ಥಿತಿ ನೋಡಲು ಸಿಗುತ್ತದೆ. ಅಲ್ಲಿನ ಸಾಧಕರಿಗೆ ಸಮಯಕ್ಕೆ ಊಟವೂ ಸಿಗುವುದಿಲ್ಲ. ‘ಸಿಗುತ್ತಿರುವ ಊಟವು ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ’, ಎಂದು ಹೇಳಲು ಬರುವುದಿಲ್ಲ. ಆಹಾರ, ವಸ್ತ್ರ ಮತ್ತು ವಸತಿ ಎಂಬ ದೈನಂದಿನ ಮೂಲಭೂತ ಸೌಲಭ್ಯಗಳ ಕೊರತೆಯೂ ಇರುತ್ತದೆ; ಆದರೆ ಈ ಎಲ್ಲ ಪರಿಸ್ಥಿತಿಯಲ್ಲಿ ಆ ಸಾಧಕರು ಮತ್ತು ಶಿಷ್ಯರು ಸಾಧನೆ ಮಾಡುತ್ತಿರುತ್ತಾರೆ.

ಈ. ಈ ಎಲ್ಲವನ್ನು ಹೋಲಿಸಿದರೆ ‘ಪ.ಪೂ. ಡಾಕ್ಟರರ ಕೃಪೆಯಿಂದ ಸಾಧನೆಯಲ್ಲಿ ಮುಂದೆ ಹೋಗಲು ಸನಾತನದ ಸಾಧಕರಿಗೆ ಆಶ್ರಮದಲ್ಲಿ ಯಾವ ಕೊರತೆಯೂ ಇಲ್ಲ’, ಅದಕ್ಕಾಗಿ ನಾವೆಲ್ಲ ಸಾಧಕರು ಪ.ಪೂ. ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸೋಣ. ಪ್ರತಿಯೊಬ್ಬ ಸಾಧಕನಿಗೆ ಆಶ್ರಮದಲ್ಲಿ ದೊರಕುವ ಎಲ್ಲ ಸೌಲಭ್ಯಗಳ ಅರಿವು ಇರಬೇಕು.

ಉ. ಪ್ರತಿಯೊಬ್ಬ ಸಾಧಕನು ತನ್ನ ಮಟ್ಟದಲ್ಲಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳೊಂದಿಗೆ ಹೋರಾಡುತ್ತಿದ್ದಾನೆ. ಮನಸ್ಸಿನಲ್ಲಿ ವಿಚಾರ ಬರುವುದು ಸಹಜವಾಗಿದೆ; ಆದರೆ ಅದರ ಜೊತೆಗೆ ‘ಇತರ ಸಾಧಕರಿಂದ ಕಲಿತು ನಾವು ಅದನ್ನು ಹೇಗೆ ಪರಿಹರಿಸಬಹುದು ?’, ಎಂಬುದನ್ನು ನೋಡುವುದು ಹೆಚ್ಚು ಯೋಗ್ಯವಾಗಿದೆ.

೨. ಆಶ್ರಮದಲ್ಲಿರಲು ಬಂದ ನಂತರ ಎಲ್ಲರೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು ಮಹತ್ವದ್ದಾಗಿರುತ್ತದೆ ಮತ್ತು ‘ಪ್ರಸಂಗವಶಾತ್‌ ಸಾಧಕರ ತಾಯಿಯ ಸ್ಥಾನದಲ್ಲಿದ್ದು ಸಹಾಯ ಮಾಡಬೇಕಾಗುತ್ತದೆ’, ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಡಬೇಕು !

ಸಾಧಕಿಗೆ ವಿಚಾರ ಬರುವುದೆಂದರೆ, ಸಾಧಕಿಯಲ್ಲಿ ತನ್ನ ಕುಟುಂಬದವರೊಂದಿಗೆ ಇದ್ದಷ್ಟು ಆತ್ಮೀಯತೆ ಆಶ್ರಮದ ಇತರ ಸಹಸಾಧಕರೊಂದಿಗೆ ಇಲ್ಲ ಎಂಬುದು ಕಂಡುಬರುತ್ತದೆ. ಈ ಪ್ರಸಂಗದಲ್ಲಿ ಓರ್ವ ಸಂತರು ಅವರಿಗೆ, ‘ನಾವು ಯಾವಾಗ ಆಶ್ರಮದಲ್ಲಿರಲು ಬರುತ್ತೇವೆಯೋ, ಆಗ ನಾವು ದೊಡ್ಡ ಕುಟುಂಬದಲ್ಲಿರಲು ಬಂದಿದ್ದೇವೆ. ಈ ಪ್ರಸಂಗದಲ್ಲಿ ಎಲ್ಲರೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು ಮಹತ್ವದ್ದಾಗಿದೆ. ‘ಪ್ರಸಂಗವಶಾತ್‌ ನಮಗೆ ಕೆಲವೊಮ್ಮೆ ಸಾಧಕರ ತಾಯಿಯೂ ಆಗಬೇಕಾಗುತ್ತದೆ’, ಎಂಬುದನ್ನು ಪ್ರತಿಯೊಬ್ಬರು ಗಮನದಲ್ಲಿಡಬೇಕು’ ಎಂದು ಹೇಳಿದ್ದರು.

೩. ಆಶ್ರಮದಲ್ಲಿನ ಸಾಧಕರೊಂದಿಗೆ ನಿಜವಾಗಿಯೂ ‘ಕುಟುಂಬಭಾವ’ವನ್ನಿಟ್ಟು ಅವರೊಂದಿಗೆ ಪ್ರೀತಿಯಿಂದ ನಡೆದುಕೊಂಡರೆ, ಕುಟುಂಬದವರಂತೆ ಸಾಧಕರು ಕೂಡ ಹತ್ತಿರದವರು ಅನಿಸುವುದು !

ನಾವು ನಮ್ಮಲ್ಲಿನ ಪ್ರೇಮಭಾವವನ್ನು ಹೆಚ್ಚಿಸಿದರೆ, ನಾವೇ ಮುಂದೆ ಸಾಧಕರಿಗೆ ಆಧಾರವಾಗುವೆವು ಮತ್ತು ನಮಗೂ ಅನೇಕ ಸಾಧಕರ ತಾಯಿಯಾಗುವ ಭಾಗ್ಯ ಸಿಗುತ್ತದೆ. ನಮ್ಮೊಂದಿಗೆ ಎಲ್ಲರೂ ಮಮತೆಯಿಂದ ಜೋಡಿಸಲ್ಪಡುತ್ತಾರೆ. ಇಂತಹ ಸಮಯದಲ್ಲಿ ನಮ್ಮಲ್ಲಿನ ಸಂಕುಚಿತವೃತ್ತಿಯು ಕಡಿಮೆಯಾಗಲು ಸಹಾಯವಾಗಿ ‘ಇಡೀ ವಿಶ್ವವೇ ನನ್ನ ಮನೆ’ ಈ ಸಂಕಲ್ಪದ ಕಡೆಗೆ ನಮ್ಮ ಮಾರ್ಗಕ್ರಮಣವಾಗುತ್ತದೆ. ಆಶ್ರಮದಲ್ಲಿನ ಸಾಧಕರೊಂದಿಗೆ ನಾವು ನಿಜವಾಗಿಯೂ ‘ಕುಟುಂಬಭಾವ’ವನ್ನಿಟ್ಟು ಅವರೊಂದಿಗೆ ಪ್ರೀತಿಯಿಂದ ನಡೆದುಕೊಂಡರೆ, ಕುಟುಂಬದವರು ಹೇಗೆ ಸಹಾಯ ಮಾಡುತ್ತಾರೆಯೋ ಮತ್ತು ನಮಗೆ ಹತ್ತಿರದವರೆನಿಸುತ್ತಾರೆಯೋ, ಹಾಗೆಯೇ ಸಾಧಕರ ಬಗ್ಗೆಯೂ ಅನಿಸುತ್ತದೆ.

೪. ‘ಎಲ್ಲ ಸಾಧಕರು ಕಾರ್ಯ ಮಾಡಲು ಒಟ್ಟಿಗೆ ಸೇರಿರದೇ ಸಾಧನೆಗಾಗಿ ಗುರುಗಳು ನಮ್ಮನ್ನು ಒಟ್ಟಿಗೆ ತಂದಿದ್ದಾರೆ’, ಎಂಬ ಅರಿವನ್ನು ನಾವು ಸತತವಾಗಿ ಜಾಗೃತವಾಗಿಡಬೇಕು ! 

ಈ ಸಾಧಕಿಯ ಮನಸ್ಸಿನಲ್ಲಿ ಇಂತಹ ವಿಚಾರ ಬರುತ್ತಿದೆ ಎಂದರೆ ಆ ಸಾಧಕಿಯ ಸಂಪರ್ಕಕ್ಕೆ ಬರುವ ಸಾಧಕರು ಮತ್ತು ಅವಳೊಂದಿಗೆ ಸೇವೆ ಮಾಡುವ ಸಾಧಕರೂ ಈ ವಿಚಾರ ಮಾಡುವಂತಾಗಿದೆ; ಏಕೆಂದರೆ ನಮ್ಮ ಜೊತೆಯಲ್ಲಿ ಸೇವೆ ಮಾಡುವ ಸಾಧಕರೊಂದಿಗೆ ನಾವು ನಮ್ಮ ಪ್ರೀತಿಯನ್ನೇ ತೋರಿಸದಿದ್ದರೆ, ದೇವರು ನಮ್ಮನ್ನು ಹೇಗೆ ಹತ್ತಿರ ಮಾಡುವನು ? ನಮ್ಮ ಜೊತೆಯಲ್ಲಿ ಸೇವೆ ಮಾಡುವ ಪ್ರತಿಯೊಬ್ಬ ಸಾಧಕನ ಜವಾಬ್ದಾರಿಯು ಪರಸ್ಪರರ ಮೇಲಿರುತ್ತದೆ. ‘ನಾವೆಲ್ಲ ಸಾಧಕರು ಕಾರ್ಯ ಮಾಡಲು ಒಟ್ಟಿಗೆ ಬಂದಿದ್ದಲ್ಲ; ಸಾಧನೆಗಾಗಿ ಒಟ್ಟಿಗೆ ಬಂದಿದ್ದೇವೆ’, ಎಂಬ ಅರಿವನ್ನು ನಾವು ಸತತವಾಗಿ ಜಾಗೃತವಾಗಿಡಬೇಕು.

ನಮ್ಮೊಂದಿಗೆ ಇರುವ ಸಾಧಕರ ಬಗ್ಗೆ ಕಡಿಮೆಪಕ್ಷ ಕಾಳಜಿ ವಹಿಸಲು ನಮಗೆ ಸಾಧ್ಯವಾಗಬೇಕು. ಅದನ್ನು ಇತರ ಯಾರಾದರೂ ಹೇಳುವಂತಹ ಪ್ರಮೇಯ ಬಂತೆಂದರೆ, ಇದು ನಮ್ಮಲ್ಲಿ ಪ್ರೇಮಭಾವ ಕಡಿಮೆ ಇರುವುದರ ಲಕ್ಷಣವಾಗಿದೆ. ‘ಗುರುಗಳು ನೀಡಿದ ಸಾಧಕರೇ ನಮಗಾಗಿ ನಮ್ಮ ಕಠಿಣ ಪ್ರಸಂಗಗಳಲ್ಲಿ ಧಾವಿಸಿ ಬರುತ್ತಾರೆ’, ಎಂಬ ಅನುಭೂತಿಯನ್ನು ಅನೇಕ ಸಾಧಕರು ಪಡೆದಿರುತ್ತೇವೆ.

‘ಈಗ ಗುರುಗಳ ಆಶ್ರಮವೇ ನನ್ನ ಏಕೈಕ ಮನೆಯಾಗಿದೆ’, ಎಂಬ ವಿಚಾರದೊಂದಿಗೆ ಏಕರೂಪವಾಗಲು ಸಾಧ್ಯವಾದರೆ ಮಾತ್ರ ಸಾಧಕರೊಂದಿಗೆ ಆತ್ಮೀಯತೆಯನ್ನು ಬೆಳೆಸಲು ಸುಲಭವಾಗುತ್ತದೆ. ಆದ್ದರಿಂದ ‘ನಾನು ಮತ್ತು ನನ್ನ ಕುಟುಂಬ’ ಎಂಬ ವಿಚಾರವು ಕೊನೆಗೊಂಡು ಸಾಧನೆಯಲ್ಲಿ ಪ್ರಗತಿ ಆಗತೊಡಗುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೧೩.೭.೨೦೨೦)