‘ಶಿಶುಪಾಲನ ೧೦೧ ಅಪರಾಧಗಳು ಪೂರ್ಣವಾದವು’, ಇನ್ನು ಧರ್ಮ ಸಹಿಸುವುದಿಲ್ಲ

ಜಮ್ಮು ಕಾಶ್ಮೀರದ ಪಹಲಗಾಮನಲ್ಲಿನ ಆಕ್ರಮಣ

ಮಹಾಭಾರತದಲ್ಲಿ ಗೌರವದ ಸ್ಥಾನವಾಗಿರುವ ಕಾಶ್ಮೀರ, ಇದು ಉತ್ತರಭಾರತದಲ್ಲಿನ ಸಭ್ಯತೆ ಮತ್ತು ತಪಸ್ಸಿನ ಉಗಮಸ್ಥಾನವಾಗಿದೆ. ‘ಕಾಶ್ಮೀರ’ ಹೆಸರು ವೈದಿಕ ಋಷಿ ಕಶ್ಯಪರಿಂದ ಉಗಮವಾಗಿದೆ. ಇವರು ಒಂದು ಕಾಲದಲ್ಲಿ ಭಾರತದ ಉತ್ತರ ದಿಕ್ಕಿನ ಸರೋವರಗಳನ್ನು ಒಣಗಿಸಿದರು ಹಾಗೂ ಆ ಪ್ರದೇಶವನ್ನು ‘ಕಾಶ್ಯಪ ಮೀರ’ ಎಂದು ಹೇಳಲು ಆರಂಭಿಸಿದರು. ಈ ಪ್ರದೇಶವನ್ನು ಈಗ ‘ಕಾಶ್ಮೀರ’ ಎಂದು ಸಂಬೋಧಿಸಲಾಗುತ್ತದೆ. ಇತ್ತೀಚೆಗೆ ಕಶ್ಯಪರ ಈ ಭೂಮಿಯಲ್ಲಿ ರಜೆಯನ್ನು ಕಳೆಯಲು ಹೋಗಿರುವ ನಿಃಶಸ್ತ್ರ ನಾಗರಿಕರ ಮೇಲೆ ಇಸ್ಲಾಮೀ ಮತಾಂಧರು ಮಾಡಿದ ಆಕ್ರಮಣವು ನಿಜವಾಗಿಯೂ ಸನಾತನ ಧರ್ಮದ ಅನುಯಾಯಿಗಳಿಗೆ ಅವರದ್ದೇ ಭೂಮಿಯಲ್ಲಿ ಆಗಿರುವ ದೊಡ್ಡ ಆಕ್ರಮಣವಾಗಿದೆ. ಅವರ ಆಕ್ರಮಣದ ಕಾರ್ಯಪದ್ಧತಿ ಧರ್ಮಸಾಪೇಕ್ಷವಾಗಿತ್ತು, ಎಂಬುದರಲ್ಲಿ ಸಂಶಯವಿಲ್ಲ. ನಿಶಸ್ತ್ರ ನಾಗರಿಕರ ಮೇಲೆ ಅಮಾನವೀಯ ಆಕ್ರಮಣ ಮಾಡುವ ಮತಾಂಧರು ಅವರ ‘ಧರ್ಮ’ವನ್ನು ನಂಬುವವರು ಹಾಗೂ ಕಾಫೀರರು ಹೀಗೆ ವರ್ಗೀಕರಣ ಮಾಡಿ ಅವರ ಕಲುಷಿತ ಮಾನಸಿಕತೆಯನ್ನು ತೋರಿಸಿದರು. ಅದರಲ್ಲಿ ಅವರು ಗುರುತುಪತ್ರವನ್ನು ತಪಾಸಣೆ ಮಾಡಿ ಹಾಗೂ ಶಾರೀರಿಕ ತಪಾಸಣೆಯಲ್ಲಿ ಗುಪ್ತಾಂಗವನ್ನು ತಪಾಸಣೆ ಮಾಡಿ ಹಿಂದೂಗಳನ್ನು ಬೇರ್ಪಡಿಸಿದರು ಹಾಗೂ ಅವರ ಕುಟುಂಬದವರ ಮುಂದೆಯೆ ಅವರನ್ನು ನಿರ್ದಯವಾಗಿ ಹತ್ಯೆ ಮಾಡಿದರು. ಸಾವನ್ನಪ್ಪಿದ ಈ ಜನರ ತಪ್ಪೆಂದರೆ ಅವರು ಹಿಂದೂಗಳಾಗಿದ್ದರು !

ಲೇಖಕರು : ನ್ಯಾಯವಾದಿ ಶ್ರೀಧರ ಪೋತರಾಜೂ, ಸರ್ವೋಚ್ಚ ನ್ಯಾಯಾಲಯ, ನವ ದೆಹಲಿ.

೧. ಕಾಶ್ಮೀರದಲ್ಲಿ ಹಿಂದೂಗಳನ್ನು ಮೂಲಭೂತ ಹಕ್ಕು ಮತ್ತು ಧರ್ಮಾಚರಣೆಯಿಂದ ವಂಚಿತರನ್ನಾಗಿಸಲಾಯಿತು !

ಪಕ್ಕದ ಚೌಕ್ಕಟ್ಟಿನಲ್ಲಿ ನೀಡಿರುವ ಘಟನೆಯಿಂದ ನನಗೆ ಅಮೇರಿಕನ್‌ ಸಂಶೋಧಕರು ಮತ್ತು ಲೇಖಕ ವಿಲ್‌ ಡ್ಯುರಾಂಟ್‌ ಇವರು ಅವರ ‘ದ ಸ್ಟೋರೀ ಆಫ್‌ ಸಿವಿಲೈಸೇಶನ್‌’ನಲ್ಲಿ ಬರೆದಿರುವ ಘಟನೆ ನೆನಪಾಯಿತು. ರಾಜಕಾರಣಿಗಳ ಆಶ್ರಯ ಇರುವ ಈ ಆಕ್ರಮಣ ಸಾವಿರಾರು ವರ್ಷಗಳಿಂದ ಗಡಿಯಾಚೆ ಯಿಂದ ಬರುವ ದ್ವೇಷದ ದುರ್ಗಂಧವನ್ನು ಅಡಗಿಸುವುದರಲ್ಲಿ ವಿಫಲವಾಯಿತು. ನಿರಂತರ ನಡೆಯುವ ಆಕ್ರಮಣದಿಂದ ಈ ಪ್ರದೇಶದಲ್ಲಿ ಧಾರ್ಮಿಕ ಜನಸಂಖ್ಯೆಯ ಪ್ರಮಾಣ ಬದಲಾಯಿತು ಹಾಗೂ ಕ್ರಮೇಣ ಭಾರತದ ಗಡಿರೇಖೆ ಸಂಕುಚಿತವಾಯಿತು. ‘ದ ಸ್ಟೋರೀ ಆಫ್‌ ಸಿವಿಲೈಸೇಶನ್’ ಈ ಪುಸ್ತಕದಲ್ಲಿ ಸನಾತನ ಧರ್ಮದ ಅನುಯಾಯಿಗಳ ಮೇಲೆ ನಿರ್ದಯವಾಗಿ ಆಗಿರುವ ಆಕ್ರಮಣದ ಕೆಲವು ಮಾಹಿತಿಯನ್ನು ಐತಿಹಾಸಿಕ ದೃಷ್ಟಿಕೋನದಿಂದ ಈ ಲೇಖನದಲ್ಲಿ ವಿವರಿಸಲಾಗಿದೆ. ಇದರಿಂದ, ಪಹಲಗಾಮ್‌ನಲ್ಲಾದ ಆಕ್ರಮಣವು ಮೊದಲ ಆಕ್ರಮಣವಾಗಿರಲಿಲ್ಲ ಎಂಬುದು ಸಿದ್ಧವಾಗುತ್ತದೆ. ಕೇವಲ ‘ಕಾಶ್ಮೀರಿ’ ಎಂಬ ಗುರುತಿನ ಆಧಾರದಲ್ಲಿ ರಾಜಕೀಯ ನಡೆಯೂ ಆಗಿರಲಿಲ್ಲ, ಇದು ಅನೇಕ ಪೀಳಿಗೆಗಳಿಂದ ನಿರಂತರ ನಡೆಯುತ್ತಿರುವ ಆಕ್ರಮಣವಾಗಿವೆ. ಅದರಲ್ಲಿ ಈ ಪ್ರದೇಶದ ಜನರಿಗೆ ಅವರ ಮೂಲಭೂತ ಹಕ್ಕು ಹಾಗೂ ಅವರ ಧರ್ಮವನ್ನು ಅನುಕರಣೆ ಮಾಡದಂತೆ ತಡೆಯಲಾಯಿತು.

ನ್ಯಾಯವಾದಿ ಶ್ರೀಧರ ಪೋತರಾಜೂ

೨. ವಿಲ್‌ ಡ್ಯುರಾಂಟ್‌ ಇವರು ಹೇಳಿರುವ ಭಾರತದ ಇತಿಹಾಸದಲ್ಲಿನ ರಕ್ತರಂಜಿತ ಘಟನೆಗಳು ಮತ್ತು ಅವರ ಸಲಹೆ ವಿಲ್‌ ಡ್ಯುರಾಂಟ ಇವರ ಹೇಳಿಕೆಗನುಸಾರ, ಈ ಘಟನೆಗಳು ಕ್ರಿ.ಶ. ೯೯೭ ರಿಂದ ಪ್ರಾರಂಭವಾದವು. ಭಾರತದಲ್ಲಿ ಮುಸಲ್ಮಾನರ ಗೆಲುವು ಭಾರತದ ಇತಿಹಾಸದಲ್ಲಿನ ರಕ್ತರಂಜಿತ ಕಥೆಯಾಗಿದೆ.

ಅ. ಗಝನಿಯಲ್ಲಿನ ಮಹಮೂದ ಹಿಂದೂಗಳ ಮೂರ್ತಿಪೂಜೆ ಯನ್ನು ನಾಶಗೊಳಿಸುವ ಪವಿತ್ರ ಕಾರ್ಯ ಮಾಡುತ್ತಿದ್ದೇವೆ ಎಂಬ ಭಾಸವನ್ನು ತೋರಿಸಿ ಧಾರ್ಮಿಕ ಲೂಟಿ ಮಾಡುವ ಪವಿತ್ರ ಆಕಾಂಕ್ಷೆಯೊಂದಿಗೆ ಅವನು ತನ್ನ ಸೈನ್ಯದೊಂದಿಗೆ ಗಡಿ ದಾಟಿ ಬಂದನು. ಭೀಮನಗರದಲ್ಲಿ ಯಾವುದೇ ಸಿದ್ಧತೆಯಲ್ಲಿಲ್ಲದ ಹಿಂದೂಗಳು ಅವನಿಗೆ ಸಿಕ್ಕರು. ಅವನು ಹಿಂದೂಗಳನ್ನು ಹತ್ಯೆ ಮಾಡಿದನು, ನಗರಗಳನ್ನು ಕೊಳ್ಳೆಹೊಡೆದನು ಹಾಗೂ ಮಂದಿರಗಳನ್ನು ನಾಶಗೊಳಿಸಿ ಅನೇಕ ಶತಮಾನಗಳಿಂದ ಶೇಖರಿಸಿದÀ ಸಂಪತ್ತನ್ನು ಅವನು ಲೂಟಿ ಮಾಡಿ ಕೊಂಡೊಯ್ದನು.

ಆ. ಕುತುಬುದ್ದೀನ ಐಬಕ ಇವನು ಕಟ್ಟರ್, ಉಗ್ರ ಹಾಗೂ ನಿರ್ದಯಿಯಾಗಿದ್ದನು. ಮುಸಲ್ಮಾನ ಇತಿಹಾಸಕಾರರ ಅಭಿಪ್ರಾಯಕ್ಕನುಸಾರ ಅವನು ಸಾವಿರಾರು ಜನರನ್ನು ಕೊಲೆ ಮಾಡಿದನು.

ಇ. ಸುಲ್ತಾನ ಮಹಮ್ಮದ ಬಿನ ತುಘಲಕ ತನ್ನ ತಂದೆಯ ಹತ್ಯೆ ಮಾಡಿ ತಾನು ಗದ್ದುಗೆಯ ಮೇಲೆ ಕುಳಿತನು. ಅವನು ಅನೇಕ ಹಿಂದೂಗಳ ಹತ್ಯೆ ಮಾಡಿದನು. ಒಬ್ಬ ಮುಸಲ್ಮಾನ ಇತಿಹಾಸಕಾರನು ಬರೆದಿದ್ದಾನೆ, ‘ಅವನ ರಾಜವೈಭವದಲ್ಲಿ ಹಾಗೂ ನಾಗರಿಕರ ನ್ಯಾಯಾಲಯದಲ್ಲಿ ಶವಗಳ ರಾಶಿ ಬಿದ್ದಿರುತ್ತಿತ್ತು.’

ಈ. ಫಿರೋಜ ಶಹಾ ಬಂಗಾಲದ ಮೇಲೆ ಆಕ್ರಮಣ ಮಾಡಿದನು. ಆಗ ಪ್ರತಿಯೊಬ್ಬ ಹಿಂದೂವಿನ ರುಂಡಕ್ಕಾಗಿ ಅವನು ಉಡುಗೊರೆಯನ್ನು ಘೋಷಣೆ ಮಾಡಿದ್ದನು. ಅವನು ಈ ರೀತಿ ಸುಮಾರು ೧ ಲಕ್ಷದ ೮೦ ಸಾವಿರ ಹಿಂದೂಗಳ ಕೊಲೆ ಮಾಡಿದನು.

ಉ. ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಹಿಂದೂಗಳು ಸುಲ್ತಾನ ಮಹಮ್ಮದ ಶಹಾನ ಪ್ರದೇಶಕ್ಕೆ ಬಂದಾಗ ಅವನು ಒಂದೇ ದಿನದಲ್ಲಿ ಸುಮಾರು ೨೦ ಸಾವಿರ ಹಿಂದೂಗಳ ಕೊಲೆ ಮಾಡಿದನು. ಅನಂತರ ೩ ದಿನ ಔತಣ ಕೂಟ ಮಾಡಿದನು. ಭಯೋತ್ಪಾದನೆ ಮತ್ತು ದಬ್ಬಾಳಿಕೆಯಿಂದ ಹಿಂದೂಗಳ ಶಾರೀರಿಕ ಹಾಗೂ ಮಾನಸಿಕ ಕ್ಷಮತೆ ಕಡಿಮೆಯಾಯಿತು. ಅಲ್ಲಾಉದ್ದೀನನಿಗೆ ಅವನ ಸಲಹೆಗಾರರಿಂದ ಹಿಂದೂಗಳನ್ನು ಸುಲಿಗೆ ಮಾಡುವ ನಿಯಮ ಹಾಗೂ ಶರತ್ತನ್ನು ಸಿದ್ಧಪಡಿಸಲಿಕ್ಕಿತ್ತು, ಅದೇ ರೀತಿ ಹಿಂದೂಗಳಿಗೆ ಅವರ ಸಂಪತ್ತು ಮತ್ತು ಆಸ್ತಿ ಸಿಗದಂತೆ ಮಾಡುವುದೇ ಅವನ ಉದ್ದೇಶವಾಗಿತ್ತು. ಆದ್ದರಿಂದ ಹಿಂದೂಗಳಲ್ಲಿ ಅಸಂತೋಷ ನಿರ್ಮಾಣವಾಗಿ ಬಂಡಾಯ ಹೆಚ್ಚಾಯಿತು. ಅಲ್ಲಾಉದ್ದೀನ ಹೇಳುತ್ತಾನೆ, ‘ಹಿಂದೂಗಳನ್ನು ದುರ್ಬಲಗೊಳಿಸದೆ ಅವರು ಮೃದು ಹಾಗೂ ಆಜ್ಞಾಧಾರಕರಾಗುವುದಿಲ್ಲ.’ ವಿಲ್‌ ಡ್ಯುರಾಂಟ್‌ ಈ ಎಲ್ಲ ಘಟನೆಗಳಿಂದ ನಿರ್ಣಯಿಸಿ ಸಲಹೆ ನೀಡುತ್ತಾರೆ, ‘ರಾಷ್ಟ್ರಶಾಂತಿಯ ಪಾಲನೆ ಮಾಡಬೇಕು; ಆದರೆ ಸಂದರ್ಭಾನುಸಾರ ಕೃತಿಯನ್ನು ಮಾಡಬೇಕು.’

೩. ಕಾಶ್ಮೀರಿ ಪಂಡಿತರ ವಿಷಯದಲ್ಲಿ ಮಾನವಾಧಿಕಾರದವರ ಸಂವೇದನಾಶೂನ್ಯತೆ !

ಮತಾಂಧತೆಯ ಈ ಕಥೆ ಇಂದಿಗೂ ಮುಂದುವರೆದಿದೆ. ೧೯೯೦ ರಲ್ಲಾದ ಘಟನೆ ಕಾಫೀರರ ಭೂಮಿಯನ್ನು ಕಬಳಿಸಲು ನಿಯೋಜನಾಬದ್ದ ಹತ್ಯಾಕಾಂಡವಾಗಿತ್ತು’, ಎಂದು ಕಾಶ್ಮೀರಿ ಪಂಡಿತರು ಜಗತ್ತಿಗೆ ಹೇಳುತ್ತಿದ್ದಾರೆ. ಅವರು ತಮ್ಮ ದೇಶದಲ್ಲಿ ‘ನಿರಾಶ್ರಿತ’ರಾಗಿರಬೇಕಾಗುತ್ತಿದೆ; ಆದರೆ ಅವರ ಈ ಧ್ವನಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ತದ್ವಿರುದ್ಧ ಕೆಲವರು ಕೀಳ್ಮಟ್ಟ ಕ್ಕಿಳಿದು ‘ಈ ದುರ್ಘಟನೆಯನ್ನು ವಿನಾಕಾರಣ ಪ್ರಚಾರ ಮಾಡ ಲಾಗುತ್ತಿದೆ’, ಎನ್ನುತ್ತಿದ್ದಾರೆ. ಮೇಲೆ ಉಲ್ಲೇಖಿಸಿದ ಮಾನವಾಧಿಕಾರದ ಹೊಸ ಉದ್ಯೋಗಿಗಳೆಂದು ಹೇಳಿಸಿಕೊಳ್ಳುವವರು ಕಾಶ್ಮೀರಿ ಪಂಡಿತರ ವೇದನೆ ಹಾಗೂ ಸಂತಾಪವನ್ನು ತಿಳಿದುಕೊಳ್ಳಬೇಕು, ಅವರು ಅತ್ಯಂತ ಸಂವೇದನಾಶೂನ್ಯರಾಗಿದ್ದಾರೆ !

೪. ಇಸ್ಲಾಮೀ ಜಿಹಾದಿಗಳ ಕ್ರೂರ ಮಾನಸಿಕತೆ

ಪಹಲಗಾಮದಲ್ಲಿನ ನಿಯೋಜನಬದ್ಧ ಹತ್ಯಾಕಾಂಡವನ್ನು ಎದುರಿಸಿರುವ ಹಾಗೂ ಅದರಲ್ಲಿ ಬದುಕುಳಿದವರು, ಅಂದರೆ ಅವರು ಎಂತಹ ಭಯಾನಕ ಸ್ಥಿತಿಯನ್ನು ಅನುಭವಿಸಿದರು, ಎಂಬುದನ್ನು ಜಗತ್ತಿಗೆ ಹೇಳಲು ಅವರನ್ನು ಜೀವಂತ ಇಡಲಾಗಿದೆ, ಎಂಬ ವಾಸ್ತವ ಬೆಳಕಿಗೆ ಬರುತ್ತದೆ. ‘ಧಾರ್ಮಿಕ ಕಟ್ಟರತೆಯ ಬೇಟೆಗೆ ಬಲಿಯಾದವರ ಮನಸ್ಸಿನಲ್ಲಿ ಭಯ ಮೂಡಿಸುವುದು’, ಅವರ ಧೋರಣೆಯಾಗಿತ್ತು, ಎಂಬುದು ಇಲ್ಲಿ ತಿಳಿಯುತ್ತದೆ. ಸಂಪೂರ್ಣ ಮಾನವತೆಗೆ ಇದು ಸ್ಪಷ್ಟವಾದ ಬೆದರಿಕೆಯಾಗಿತ್ತು. ಆದ್ದರಿಂದ ಜನಸಾಮಾನ್ಯರ ಬಗ್ಗೆ ಯಾವುದೇ ವಿಚಾರ ಮಾಡದೆ ರಾಕ್ಷಸರಂತೆ ವರ್ತಿಸುವ ಮತಾಂಧರು ಹರಡಿದ ದ್ವೇಷದೊಂದಿಗೆ ನಾವು ವರ್ತಿಸುತ್ತಿದ್ದೇವೆಯೆ ?, ಎಂಬುದನ್ನು ಪ್ರತಿಯೊಬ್ಬರೂ ವಿಚಾರ ಮಾಡಬೇಕು. ಮನುಷ್ಯರಂತೆ ಕಾಣುವ ಈ ಕ್ರೂರಿಗಳು ಇತರರೊಂದಿಗೆ ಹೇಗೆ ವರ್ತಿಸುತ್ತಿದ್ದಾರೆ ? ಅಮಾನವೀಯವಾಗಿ ವರ್ತಿಸುವವರನ್ನು ಕೆಟ್ಟವವರೆನ್ನಲು ನಮ್ಮ ಮನಸ್ಸು ಹಿಂಜರಿಯುವುದಿಲ್ಲ; ಏಕೆಂದರೆ ಮಾನವತೆಯನ್ನು ದ್ವೇಷಿಸುವುದು ಅವರ ಸ್ವಭಾವ ಆಗಿದ್ದು ಅದು ಹಾನಿಕರವಾಗಿದೆ.

೫. ಹಿಂದೂಗಳು ಶ್ರೀಕೃಷ್ಣನ ವಚನಗಳ ಆದರ್ಶವನ್ನು ಪಾಲಿಸಬೇಕು !

ಈ ಇತಿಹಾಸದಿಂದ ಭಾರತ ಕೆಟ್ಟ ವಿಷಯವನ್ನು ತಿಳಿದು ಕೊಂಡಿದೆ ಹಾಗೂ ಇದರಿಂದ ಕೆಟ್ಟ ವಿಷಯವನ್ನು ಹೇಗೆ ನಿಯಂತ್ರಿಸಬೇಕೆಂಬುದು ಕಲಿಯಲು ಸಿಗುತ್ತದೆ. ಸಮಾಜ, ರಾಜಕಾರಣ, ಪ್ರಸಿದ್ಧಿಮಾಧ್ಯಮಗಳು, ಸರಕಾರೇತರ ಸಂಸ್ಥೆಗಳಲ್ಲಿ ಅಲೆದಾಡುವ ಇಸ್ಲಾಮೀ ಭಯೋತ್ಪಾದಕರು ನಮ್ಮ ಇತಿಹಾಸದಲ್ಲಿ ಹೇಳಿರುವ ದೈತ್ಯರು, ಅಸುರರು ಅಥವಾ ದಾನವರ ಹಾಗಿದ್ದಾರೆ. ಆದ್ದರಿಂದ ಇಂತಹ ಅಪರಾಧಿಗಳು ಹಾಗೂ ಅವರಿಗೆ ಸಹಾಯ ಮಾಡುವ ‘ಇಕೋಸಿಸ್ಟಮ್‌’ಅನ್ನು ಗುರುತಿಸುವುದು ಅತ್ಯಂತ ಮಹತ್ವದ್ದಾಗಿದ್ದು ಅವರ ವಿಷಯದಲ್ಲಿ ಸಹಾನುಭೂತಿ ಅಥವಾ ಅವರು ಸುಧಾರಿಸಿಕೊಳ್ಳುವರು, ಎನ್ನುವ ವಿಚಾರ ಅವರ ಬಗ್ಗೆ ಇರಬಾರದು. ಕರ್ಮದ ತತ್ತ್ವಜ್ಞಾನಕ್ಕನುಸಾರ ಕರ್ಮದಿಂದ ಮನುಷ್ಯನ ಪ್ರಾರಬ್ಧ ನಿರ್ಧಾರವಾಗುತ್ತದೆ. ವಿದ್ಯಾಲಯದ ಅನುಮತಿಯ ಹೊರತು ತಮ್ಮ ಧರ್ಮದ ಮೇಲಿನ ವಿಶ್ವಾಸದಿಂದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುವುದೆಂದರೆ ಇದು ಸ್ವರ್ಗಕ್ಕೆ ಹೋಗುವ ಪಾಸ್‌ಪೋರ್ಟ್ ಅಲ್ಲ. ‘ಧರ್ಮದ ಮಾರ್ಗದಲ್ಲಿರಿ; ಆದರೆ ಸಂದರ್ಭಕ್ಕನುಸಾರ ಹಿಂಸಾಚಾರಕ್ಕೆ ಆಶ್ರಯ ನೀಡದೆ ಕೆಟ್ಟದನ್ನು ನಾಶಗೊಳಿಸಿರಿ’, ಎಂಬುದನ್ನು ನಿರಂತರ ನಮಗೆ ಕಲಿಸುವ ಇತಿಹಾಸವನ್ನು ನೆನಪಿನಲ್ಲಿಡಬೇಕು. ಶ್ರೀಕೃಷ್ಣನೊಂದಿಗೆ ಶಿಶುಪಾಲ ಸತತ ಉದ್ಧಟತನದಿಂದ ವರ್ತಿಸಿದನು. ಶ್ರೀಕೃಷ್ಣನು ಅವನನ್ನು ೧೦೦ ಬಾರಿ ಕ್ಷಮಿಸಿದನು; ಆದರೆ ೧೦೧ ನೆ ಅಪರಾಧವಾದಾಗ ಸುದರ್ಶನ ಚಕ್ರದಿಂದ ಅವನ ರುಂಡವನ್ನು ಹಾರಿಸಿದನು, ಎಂಬುದನ್ನು ನಾವು ನೆನಪಿಡಬೇಕು.