|

ರಾಂಚಿ (ಜಾರ್ಖಂಡ್) – ಹಿಂದೂಗಳು ಎಂದಿಗೂ ಯಾರನ್ನೂ ಮತಾಂತರಿಸಿಲ್ಲ. ದಾಳಿ ಮಾಡುವುದು ಹಿಂದೂಗಳ ಸಂಸ್ಕೃತಿಯಲ್ಲ; ಆದರೆ, ಯಾರಾದರೂ ಸನಾತನ ಧರ್ಮವನ್ನು ನಾಶಪಡಿಸಲು ಪ್ರಯತ್ನಿಸಿದರೆ, ನಮ್ಮ ಸಂಸ್ಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಆದ್ಯ ಕರ್ತವ್ಯವಾಗಿದೆ. ಸನಾತನ ರಾಷ್ಟ್ರ ನಿರ್ಮಾಣಕ್ಕಾಗಿಯೇ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧರ್ಮಧ್ವಜವನ್ನು ಹಾರಿಸಿ ಸನಾತನ ಸಂಸ್ಕೃತಿಯ ರಕ್ಷಣೆಯ ಸಂದೇಶವನ್ನು ನೀಡಿದ್ದಾರೆ. ಈಗ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವದಲ್ಲಿ ಭಾಗವಹಿಸಿ ಸನಾತನ ರಾಷ್ಟ್ರದ ನಿರ್ಮಾಣಕ್ಕೆ ಸಿದ್ಧರಾಗಿ, ಎಂದು ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀ. ಸಂಜಯ ಸೇಠ್ ಅವರು ಕರೆ ನೀಡಿದರು.

ಡಿಸೆಂಬರ್ 13 ಮತ್ತು 14 ರಂದು ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಬಗ್ಗೆ ಮಾಹಿತಿ ನೀಡಲು ನವೆಂಬರ್ 28 ರಂದು ರಾಂಚಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ. ಸಂಜಯ ಸೇಠ್ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿಶ್ವ ಹಿಂದೂ ಪರಿಷತ್‌ನ ಜಾರ್ಖಂಡ್ ರಾಜ್ಯ ಅಧ್ಯಕ್ಷರಾದ ಶ್ರೀ. ಚಂದ್ರಕಾಂತ ರಾಯಪತ್, ‘ರಾಂಚಿ ಸಿಟಿಜನ್ ಫೋರಂ’ನ ಅಧ್ಯಕ್ಷರಾದ ಡಾ. ರೇಣುಕಾ ತಿವಾರಿ, ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತ ರಾಜ್ಯ ಸಮನ್ವಯಕರಾದ ಶ್ರೀ. ಶಂಭು ಗವಾರೆ, ‘ಮಾತೃಭೂಮಿ’ಯ ಜಾರ್ಖಂಡ್ ರಾಜ್ಯ ಅಧ್ಯಕ್ಷರಾದ ಶ್ರೀ. ಪ್ರೇಮ ವರ್ಮಾ ಮತ್ತು ರಾಂಚಿಯ ‘ಅಖಿಲ ಭಾರತೀಯ ಕಚ್ಛ್ ಕಡವಾ ಪಾಟಿದಾರ್ ಸಮಾಜ’ದ ಶ್ರೀ. ಪ್ರಭುಲಾಲ ಪಟೇಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ. ಸಂಜಯ ಸೇಠ್ ಅವರು ಮಾತನಾಡಿ, “ರಾಮಾಯಣ-ಮಹಾಭಾರತ ಕಾಲದಿಂದಲೂ ಸನಾತನ ಧರ್ಮದ ರಕ್ಷಣೆಗಾಗಿ ಅನೇಕರು ಕೊಡುಗೆ ನೀಡಿದ್ದಾರೆ. ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜ, ಬಿರ್ಸಾ ಮುಂಡಾ, ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲಾದವರು ಸನಾತನ ರಾಷ್ಟ್ರದ ಮೇಲಿನ ಆಕ್ರಮಣಗಳನ್ನು ನಿಗ್ರಹಿಸಿದರು. ಹಿಂದೂಗಳು ಈ ಮಹಾಪುರುಷರ ಬಲಿದಾನವನ್ನು ನೆನಪಿನಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರದ ಸಿದ್ಧತೆಗಾಗಿ ಸಿದ್ಧರಾಗಬೇಕು,” ಎಂದು ಹೇಳಿದರು.
ಧರ್ಮ ಮತ್ತು ರಾಷ್ಟ್ರ ಸೇವೆಯ ಸ್ಫೂರ್ತಿ ನೀಡುವ ಮಹೋತ್ಸವ! – ಶಂಭು ಗವಾರೆ, ಪೂರ್ವ ಮತ್ತು ಈಶಾನ್ಯ ಭಾರತ ರಾಜ್ಯ ಸಮನ್ವಯಕ, ಹಿಂದೂ ಜನಜಾಗೃತಿ ಸಮಿತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ರಾಮರಾಜ್ಯದಂತಹ ಆದರ್ಶ ‘ಸನಾತನ ರಾಷ್ಟ್ರ’ವನ್ನು ಸ್ಥಾಪಿಸುವ ಪವಿತ್ರ ಸಂಕಲ್ಪ ಮಾಡಿದ್ದಾರೆ. ಮಹಾಭಾರತ ಯುದ್ಧದ ಮೊದಲು ಭಗವಾನ್ ಶ್ರೀಕೃಷ್ಣನು ಶಂಖನಾದ ಮಾಡಿದಂತೆಯೇ, ಈ ಮಹೋತ್ಸವವು ಧರ್ಮನಿಷ್ಠ ಸಮಾಜದಲ್ಲಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಧರ್ಮ ಮತ್ತು ರಾಷ್ಟ್ರ ಸೇವೆಯ ಸ್ಫೂರ್ತಿ ನೀಡುವ ಶಂಖನಾದವಾಗಿದೆ. ಈ ಮಹೋತ್ಸವದಲ್ಲಿ ‘ಸನಾತನ ಸಂಸ್ಕೃತಿ ಸಂವಾದ’, ಸಾಂಸ್ಕೃತಿಕ-ಸಾಮಾಜಿಕ ಚಟುವಟಿಕೆಗಳು, ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ-ನಕ್ಸಲ್ವಾದದ ಹಿನ್ನೆಲೆ, ರಕ್ಷಣಾ ನೀತಿ ಮತ್ತು ರಾಷ್ಟ್ರಬಲವನ್ನು ಬಲಪಡಿಸುವ ಉಪಾಯಗಳ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ. ಈ ಪ್ರದರ್ಶನದಲ್ಲಿ ಮೊದಲ ಬಾರಿಗೆ ಛತ್ರಪತಿ ಶಿವಾಜಿ ಮಹಾರಾಜರ ‘ಭವಾನಿ ಕತ್ತಿ’ಯನ್ನು ಪ್ರತ್ಯಕ್ಷವಾಗಿ ದರ್ಶನಕ್ಕಾಗಿ ಲಭ್ಯವಾಗಲಿದೆ. ಸಾಂಪ್ರದಾಯಿಕ ಯುದ್ಧಕಲೆಗಳ ಪ್ರದರ್ಶನಗಳು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿರಲಿವೆ.
ಸಮಸ್ತ ಹಿಂದೂತ್ವನಿಷ್ಠ ಸಂಘಟನೆಗಳು ಮಹೋತ್ಸವದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು! – ಚಂದ್ರಕಾಂತ ರಾಯಪತ, ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಜಾರ್ಖಂಡ್

ಸನಾತನ ಸಮಾಜವನ್ನು ಜಾಗೃತಗೊಳಿಸುವ ಅವಶ್ಯಕತೆಯಿದೆ. ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣದ ಪ್ರತಿಜ್ಞೆ ಪೂರ್ಣಗೊಂಡಿದೆ. ಅದರ ಮೇಲೆ ಧರ್ಮಧ್ವಜ ಹಾರುತ್ತಿದೆ. ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಮಹೋತ್ಸವದಲ್ಲಿ ಭಾಗವಹಿಸಲಿವೆ. ಯಾವುದೇ ರೀತಿಯ ಭೇದಭಾವವಿಲ್ಲದೆ, ಎಲ್ಲರೂ ‘ಹಿಂದೂ’ಗಳಾಗಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸಬೇಕು. ದೇಶದ ವಿವಿಧ ಭಾಗಗಳಿಂದ ಹಿಂದೂ ಧರ್ಮಪ್ರೇಮಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಸ್ತ ಹಿಂದೂತ್ವನಿಷ್ಠ ಸಂಘಟನೆಗಳು ಈ ಮಹೋತ್ಸವದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು.
ಮಹೋತ್ಸವದ ಮೂಲಕ ಸನಾತನ ಸಂಸ್ಕೃತಿ ರಕ್ಷಣೆಯ ಸಂದೇಶ ವಿಶ್ವಕ್ಕೆ ತಲುಪುತ್ತದೆ! – ಡಾ. ರೇಣುಕಾ ತಿವಾರಿ, ಅಧ್ಯಕ್ಷರು, ‘ರಾಂಚಿ ಸಿಟಿಜನ್ ಫೋರಂ’

ಹಿಂದೂಗಳು ಒಂದಾಗದಿದ್ದರೆ, ಭವಿಷ್ಯದಲ್ಲಿ ಭಾರತ ಭೂಮಿಯ ಮತ್ತಷ್ಟು ತುಂಡುಗಳಾಗುತ್ತವೆ. ಹಿಂದೂ ಧರ್ಮದ ಮೇಲಿನ ಆಕ್ರಮಣಗಳನ್ನು ನೋಡಿದರೆ, ಹಿಂದೂಗಳು ಸಂಘಟಿತರಾಗಿದ್ದರೆ ಮಾತ್ರ ಸುರಕ್ಷಿತರಾಗಿರಲು ಸಾಧ್ಯ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಸಮಸ್ತ ಹಿಂದೂಗಳ ಒಗ್ಗಟ್ಟನ್ನು ಸಾಧಿಸುವ ಉದ್ದೇಶ ಹೊಂದಿದೆ. ಈ ಮಹೋತ್ಸವದಿಂದ ಸನಾತನ ಸಂಸ್ಕೃತಿಯ ಸಂದೇಶವು ವಿಶ್ವದಾದ್ಯಂತ ತಲುಪುತ್ತದೆ.
‘ಮಾತೃಭೂಮಿ’ಯ ಜಾರ್ಖಂಡ್ ರಾಜ್ಯದ ಅಧ್ಯಕ್ಷರಾದ ಶ್ರೀ. ಪ್ರೇಮ ವರ್ಮಾ ಅವರು ಮಾತನಾಡುತ್ತಾ, “ಸನಾತನ ರಾಷ್ಟ್ರದ ರಕ್ಷಣೆಗಾಗಿ ಹಿಂದೂಗಳು ಜಾಗೃತರಾಗುವುದು ಅವಶ್ಯಕವಾಗಿದೆ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಮೂಲಕ ಈ ಕಾರ್ಯ ನಡೆಯಲಿದೆ. ಈ ಮಹೋತ್ಸವದ ಮೂಲಕ ಹಿಂದೂಗಳ ಸಂಘಟನೆ ಆಗಲಿದೆ,” ಎಂದರು.
ಮಹೋತ್ಸವದಲ್ಲಿ ಈ ಗಣ್ಯರು ಉಪಸ್ಥಿತರಿರುತ್ತಾರೆ!

ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವಗಿರಿಜಿ ಮಹಾರಾಜ್, ಮೆಹಂದಿಪುರ ಬಾಲಾಜಿ ಮಂದಿರದ ಪ.ಪೂ. ಡಾ. ನರೇಶ್‌ಪುರಿಜಿ ಮಹಾರಾಜ್, ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಹಾಗೂ ಸನಾತನ ಸಂಸ್ಥೆಯ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದು ಸಿಂಗ್‌ಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಎಲ್ಲರಿಗೂ ಮಾರ್ಗದರ್ಶನ ನೀಡಲಿದ್ದಾರೆ.
ಇದಲ್ಲದೆ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ಕೇಂದ್ರ ರಕ್ಷಣಾ ರಾಜ್ಯ ಸಚಿವ ಸಂಜಯ ಸೇಠ್, ದೆಹಲಿಯ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ, ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಸಂಸದ ಛತ್ರಪತಿ ಉದಯನರಾಜೆ ಭೋಸಲೆ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಉದಯ ಲಳಿತ್, ಉತ್ತರ ಪ್ರದೇಶ ವಿಧಾನಸಭೆಯ ಅಧ್ಯಕ್ಷರಾದ ಶ್ರೀ. ಸತೀಶ ಮಹಾನಾ, ಭಾರತದ ರಕ್ಷಣಾ ಸಚಿವಾಲಯದ ಮಾಜಿ ಪ್ರಧಾನ ಸಲಹೆಗಾರ ಲೆಫ್ಟಿನೆಂಟ್ ಜನರಲ್ ವಿನೋದ ಖಂಡಾರೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ರೀ. ಪ್ರಿಯಾಂಕ್ ಕಾನೂನ್‌ಗೋ, ‘ಸೇವ್ ಕಲ್ಚರ್ ಸೇವ್ ಭಾರತ್’ನ ಅಧ್ಯಕ್ಷರು ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರ್ಕರ್, ‘ಪ್ರಾಚ್ಯಂ ಒಟಿಟಿ’ಯ ಸಂಸ್ಥಾಪಕ ಕ್ಯಾ. ಪ್ರವೀಣ ಚತುರ್ವೇದಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ‘ಸುದರ್ಶನ್ ಟಿವಿ’ಯ ಮುಖ್ಯ ಸಂಪಾದಕ ಶ್ರೀ. ಸುರೇಶ್ ಚವ್ಹಾಣ್ಕೆ ಅವರನ್ನು ಆಹ್ವಾನಿಸಲಾಗಿದೆ.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಹೆಸರು ನೋಂದಣಿ: ಆಸಕ್ತರು SanatanRashtraShankhnad.in ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”