
‘ಒಮ್ಮೆ ಸನಾತನದ ಆಶ್ರಮಕ್ಕೆ ಓರ್ವ ಸಂತರು ಬಂದಿದ್ದರು. ಅವರು ಪ.ಪೂ. ಡಾಕ್ಟರರೊಂದಿಗೆ ಮಾತನಾಡುವಾಗ ಸಹಜವಾಗಿ, ”ದೇಹತ್ಯಾಗ ಮಾಡಿದ ನನ್ನ ಹಿಮಾಲಯವಾಸಿ ಗುರುಗಳ ದರ್ಶನವು ಪ್ರಕಾಶರೂಪದಲ್ಲಿ ಆಗಬೇಕೆಂದು ನಮ್ಮ ಶಿಷ್ಯರು ನನ್ನಲ್ಲಿ ಹಠ ಮಾಡುತ್ತಿದ್ದಾರೆ. ಅದಕ್ಕಾಗಿ ನಾನೂ ಪ್ರಯತ್ನ ಮಾಡುತ್ತಿದ್ದೇನೆ. ಅವರ ದರ್ಶನ ಮಾಡಿಸಬೇಕಿದ್ದರೆ, ಸಾಧಕರಲ್ಲಿ ಅಷ್ಟೊಂದು ಸಾಧನೆಯ ಬಲವೂ ಇರಬೇಕು. ನಾನು ಅವರಿಗೆ ಕೆಲವು ಉಪಾಸನೆಗಳನ್ನು ಮಾಡಲು ಹೇಳಿದ್ದೇನೆ. ಏನಾಗುತ್ತದೆಯೋ ನೋಡೋಣ,’’ ಎಂದು ಹೇಳಿದರು. ನಾನು ಸಹ ಅಲ್ಲಿ ಇದ್ದುದರಿಂದ ಅವರಿಬ್ಬರಲ್ಲಿ ನಡೆದ ಸಂಭಾಷಣೆಯು ನನಗೂ ಕೇಳಲು ಸಿಕ್ಕಿತು. ಅನಂತರ ಆ ಸಂತರು ಪ.ಪೂ. ಡಾಕ್ಟರರಿಗೆ, ”ನಿಮ್ಮ ಸಾಧಕರಿಗೂ ದರ್ಶನ ಮಾಡಿಸಬಹುದೇ ?’’ ಎಂದು ಕೇಳಿದರು. ಅದಕ್ಕೆ ಗುರುದೇವರು, ”ನಿಮ್ಮ ಕೃಪೆ ಮಹತ್ವದ್ದಾಗಿದೆ. ದರ್ಶನವು ಕ್ಷಣಿಕವಾಗಿರುತ್ತದೆ; ಆದರೆ ನಿಮ್ಮ ಮತ್ತು ನಿಮ್ಮ ಸದ್ಗುರುಗಳ ಕೃಪೆಯು ಸನಾತನದ ಸಾಧಕರ ಮೇಲೆ ನಿರಂತರವಾಗಿರಲಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ,’’ ಎಂದು ಹೇಳಿದರು.
ಗುರುದೇವರು ನೀಡಿದ ಈ ಉತ್ತರದಿಂದ ನನಗೆ ಕಲಿಯಲು ಸಿಕ್ಕಿದ ಅಂಶವೆಂದರೆ, ಸಂತರ ಬಳಿ ಏನು ಕೇಳಬೇಕು ?, ಎಂಬುದು ತಿಳಿದಿರಬೇಕು. ಅದಕ್ಕಾಗಿ ಪ.ಪೂ. ಡಾಕ್ಟರರಂತಹ ಅಧಿಕಾರಿ ವ್ಯಕ್ತಿಗಳೇ ಬೇಕು. ಪ.ಪೂ. ಡಾಕ್ಟರರ ಮಾತಿನಿಂದ ಕೃಪೆಯ ಮಹತ್ವವೂ ತಿಳಿಯಿತು. ಸಂತರ/ಈಶ್ವರನ ದರ್ಶನವು ಕೇವಲ ತಾತ್ಕಾಲಿಕವಾಗಿರುತ್ತದೆ, ಅವರ ಕೃಪೆಯು ನಿರಂತರ ಕಾರ್ಯ ಮಾಡುತ್ತದೆ. ಆದ್ದರಿಂದ ಜೀವನದಲ್ಲಿ ಗುರುಕೃಪೆಯೇ ತುಂಬಾ ಮಹತ್ವದ್ದಾಗಿದೆ. ಜೀವನದಲ್ಲಿ ಗುರು ಕೃಪೆಯ ಮಹತ್ವವನ್ನು ಗಮನಕ್ಕೆ ತಂದು ಕೊಡುವ ಗುರುದೇವರ ಚರಣಗಳಲ್ಲಿ ನಾವೆಲ್ಲ ಸಾಧಕರಿಂದ ಕೋಟಿ ಕೋಟಿ ವಂದನೆಗಳು.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ತಮಿಳುನಾಡು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !