
೧. ಒಂದು ತಿರುವಿನಲ್ಲಿ ವಾಹನದ ದೊಡ್ಡ ಅಪಘಾತವಾಗುವುದು
‘೨೩.೯.೨೦೨೫ ಈ ದಿನದಂದು ನಾವು ಚತುಷ್ಚಕ್ರ ವಾಹನದಿಂದ ಮಂಗಳೂರಿನಿಂದ ರಾಮನಾಥಿ (ಗೋವಾ)ಗೆ ಹೋಗಲು ಹೊರಟೆವು. ನಾವು ಬೆಳಗ್ಗೆ ೭ ಗಂಟೆಗೆ ಶ್ರೀಕೃಷ್ಣನ ಶ್ಲೋಕವನ್ನು ಹೇಳಿ ಹೊರಟೆವು. ನನ್ನ ಮೊಮ್ಮಗ ಶ್ರೀ. ಭರತ ಪ್ರಭು ಇವನು ವಾಹನ ನಡೆಸುತ್ತಿದ್ದನು. ನಾನು ಅವನ ಪಕ್ಕದಲ್ಲಿ ಮುಂದಿನ ಆಸನದಲ್ಲಿ ಕುಳಿತಿದ್ದೆ ಮತ್ತು ಹಿಂದಿನ ಆಸನದಲ್ಲಿ ನನ್ನ ಸೊಸೆ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೬೦ ವರ್ಷಗಳು), ಮೊಮ್ಮಗನ ಹೆಂಡತಿ ಸೌ. ಭವಾನಿ ಭರತ ಪ್ರಭು ಮತ್ತು ಮರಿಮೊಮ್ಮಗ ಸನಾತನದ ಮೊದಲ ಬಾಲಸಂತ ಪೂ. ಭಾರ್ಗವರಾಮ (ವಯಸ್ಸು ೮ ವರ್ಷಗಳು), ಇವರೆಲ್ಲರೂ ಕುಳಿತಿದ್ದರು. ಪ್ರವಾಸದಲ್ಲಿ ನನಗೆ ಬಹಳ ನಿದ್ದೆ ಬರುತ್ತಿದ್ದುದರಿಂದ ನಾನು ಹಿಂದಿನ ಆಸನದಲ್ಲಿ ಕುಳಿತೆ ಮತ್ತು ಸೌ. ಭವಾನಿ ಪ್ರಭು ಇವಳು ಮುಂದಿನ ಆಸನದಲ್ಲಿ ಕುಳಿತಳು. ಮಧ್ಯಾಹ್ನ ೧೨ ಗಂಟೆಗೆ ರಸ್ತೆಯಲ್ಲಿ ದೊಡ್ಡ ‘ಯು-ಟರ್ನ್’ ಬಂದಿತು. ಶ್ರೀ. ಭರತ ಇವನು ‘ಸ್ಟೇರಿಂಗ್’ ತಿರುಗಿಸುವಾಗ ವಾಹನವು ಜಾರಿತು. ವಾಹನ ರಸ್ತೆಯಿಂದ ಪಕ್ಕದ ಇಳಿಜಾರಿಗೆ ಹೋಗಿ ವಿದ್ಯುತ್ ಕಂಬ ಮತ್ತು ಅಲ್ಲಿರುವ ೨ ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿತು ಮತ್ತು ಕೆಳಗೆ ಜಾರಿ ನಿಂತಿತು. ದೇವರ ಮತ್ತು ಗುರುಗಳ ಕೃಪೆಯಿಂದ ನಮಗೇನೂ ಆಗಲಿಲ್ಲ. ಕೇವಲ ನನ್ನ ಸೊಸೆಯ ಒಂದು ಕಣ್ಣಿನ ಹುಬ್ಬಿನ ಬಳಿ ಸ್ವಲ್ಪ ಗಾಯವಾಯಿತು.
‘ಕೆಲವು ಕ್ಷಣಗಳ ಹಿಂದೆಯೇ ದೇವರು ನನಗೆ ಹಿಂದಿನ ಆಸನದಲ್ಲಿ ಕುಳಿತುಕೊಳ್ಳುವ ಬುದ್ಧಿಯನ್ನು ಏಕೆ ನೀಡಿದನು ?’, ಎಂದು ಆಗ ನನಗೆ ತಿಳಿಯಿತು ಮತ್ತು ಅವರ ಬಗ್ಗೆ ಬಹಳ ಕೃತಜ್ಞತೆ ಅನಿಸಿತು. ಮುಂದಿನ ಆಸನದಲ್ಲಿ ಕುಳಿತ ನನ್ನ ಮೊಮ್ಮಗನ ಹೆಂಡತಿಯು ‘ಸೀಟ್‌ಬೆಲ್ಟ್’ ಹಾಕಿಕೊಂಡಿದುದರಿಂದ ಅವಳಿಗೆ ಬಹಳ ದೊಡ್ಡ ಅಪಘಾತವಾಗಲಿಲ್ಲ. ನಮ್ಮ ಪ್ರಾಣಗಳನ್ನು ರಕ್ಷಿಸಿದ ಬಗ್ಗೆ ನಾವೆಲ್ಲರೂ ಶ್ರೀಕೃಷ್ಣ ಮತ್ತು ಗುರುಗಳ ಬಗ್ಗೆ ಮನಃಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದೆವು.
೨. ಸ್ಥಳೀಯರು, ಸಾಧಕರ ಸಹಾಯ ಸಿಗುವುದು
ನಾನು ನಿದ್ದೆಯಲ್ಲಿದ್ದ ಕಾರಣ ನನಗೆ ಅಪಘಾತ ಬಗ್ಗೆ ಏನೂ ಗೊತ್ತಾಗಲಿಲ್ಲ. ಅಲ್ಲಿ ನೆರೆದ ಜನರು ನಮ್ಮ ಬಗ್ಗೆ ವಿಚಾರಿಸಿದರು. ಅವರು ಬಾಗಿಲು ತೆಗೆದು ಒಬ್ಬೊಬ್ಬರನ್ನು ಕೈಹಿಡಿದು ಹೊರಗೆ ತೆಗೆದರು ಮತ್ತು ನನ್ನ ಕೈಹಿಡಿದು ಅಲ್ಲಿ ಪಕ್ಕದಲ್ಲಿರುವ ಮನೆಯಲ್ಲಿ ಆಸನದ ಮೇಲೆ ಕುಳ್ಳಿರಿಸಿದರು. ಅಪಘಾತದ ಘಟನೆಯ ಮಾಹಿತಿ ಸಿಗುತ್ತಲೇ ತಕ್ಷಣ ಕುಮಟಾದ ೩-೪ ಸಾಧಕರೂ ಸಹಾಯಕ್ಕೆ ಘಟನಾಸ್ಥಳಕ್ಕೆ ಬಂದರು.
೩. ಪ್ರಾರ್ಥನೆ ಮತ್ತು ಕೃತಜ್ಞತೆ
‘ಹೇ ಕೃಷ್ಣಾ, ಹೇ ಸಂಕಟಮೋಚನ ಹನುಮಂತಾ, ‘ಮುಂಬರುವ ಕಾಲದಲ್ಲಿ ಬರಗಾಲ, ಯುದ್ಧ, ರೋಗಗಳು, ನೈಸರ್ಗಿಕ ಆಪತ್ತು ಇತ್ಯಾದಿ ಸಂಕಟಗಳಿಂದ ನೀನೇ ನಮ್ಮೆಲ್ಲರನ್ನು ರಕ್ಷಿಸು. ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಅನೇಕ ವರ್ಷಗಳಿಂದ ಪ್ರಯತ್ನಶೀಲರಾಗಿರುವ ನಮ್ಮ ಗುರುದೇವರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪವು ಸಾಕಾರಗೊಳ್ಳಬೇಕು ಮತ್ತು ಅವರ ಕೀರ್ತಿ ಸಂಪೂರ್ಣ ಜಗತ್ತಿನಲ್ಲಿ ಹರಡಬೇಕು’, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.
– (ಪೂ.) ಶ್ರೀಮತಿ ರಾಧಾ ಪ್ರಭು (ಸನಾತನದ ೪೪ ನೇ (ಸಮಷ್ಟಿ) ಸಂತರು, ವಯಸ್ಸು ೮೮ ವರ್ಷಗಳು), ಮಂಗಳೂರು (೧೦.೧೦.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !