ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್‌ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡಬೇಕಾದ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’,

ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರದಂದು ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

೭. ವಿಚಾರಿಸದೇ ಮಾಡುವುದರ ಹಿಂದೆ ಸಾಧಕರಲ್ಲಿರುವ ಅಯೋಗ್ಯ ಮಾನಸಿಕತೆ ಮತ್ತು ಅದಕ್ಕೆ ಯೋಗ್ಯ ದೃಷ್ಟಿಕೋನ ಮತ್ತು ಉಪಾಯಯೋಜನೆ

೭ ಕ. ‘ನಮ್ಮ ವಿಚಾರಿಸುವಿಕೆಯಿಂದ ಇತರರಿಗೆ ತೊಂದರೆಯಾಗುತ್ತದೆ ಎಂದು ಅನಿಸುವುದು : ‘ನಮ್ಮ ವಿಚಾರಿಸುವಿಕೆಯಿಂದ ಇತರರಿಗೆ ತೊಂದರೆಯಾಗುತ್ತದೆ, ಅವರ ಸಮಯ ವ್ಯರ್ಥವಾಗುತ್ತದೆ’, ಎಂದು ಅನಿಸುವುದರಿಂದಲೂ ಮನಸ್ಸು ಕೇಳುವ ಕೃತಿಯಿಂದ ವಿಮುಖವಾಗುತ್ತದೆ. ‘ಕೆಲವೊಮ್ಮೆ ಜವಾಬ್ದಾರ ಸಾಧಕರಿಗೆ ಬಿಡುವು ಇಲ್ಲದಿರಬಹುದು’ ಎಂಬ ನಿಷ್ಕರ್ಷವನ್ನು ನಾವೇ ತೆಗೆದುಕೊಂಡು ಕೇಳುವುದಿಲ್ಲ. ಇಲ್ಲಿ ಕೂಡ ಪ್ರತಿಷ್ಠೆಯನ್ನು ಕಾಪಾಡುತ್ತೇವೆ.

೭ ಕ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ನಾವೆಲ್ಲ ಸಾಧಕರು ಗುರುಸೇವಕರೇ ಇದ್ದೇವೆ. ಎಲ್ಲರೂ ಸಾಧನೆ ಮಾಡಿ ಗುರುಗಳ ಚರಣಗಳನ್ನು ತಲುಪಲು ಬಂದಿದ್ದೇವೆ, ಎಂಬುದನ್ನು ಗಮನದಲ್ಲಿಡೋಣ. ಆದ್ದರಿಂದ ನಮ್ಮ ವಿಚಾರಿಸುವಿಕೆಯಿಂದ ಇತರರಿಗೆ ತೊಂದರೆಯಾಗುತ್ತದೆ ಎಂಬ ಸಂಕೋಚವನ್ನು ಇಟ್ಟುಕೊಳ್ಳದೆ ಸಹಜವಾಗಿ ಕೇಳೋಣ.

೭ ಖ. ಜವಾಬ್ದಾರ ಸಾಧಕರು ಹೇಳಿದ ನಿರ್ಧಾರವು ಮನಸ್ಸಿಗೆ ಸ್ವೀಕಾರವಾಗದಿರುವುದು : ಕೆಲವೊಮ್ಮೆ ನಾವು ಒಂದು ವಿಷಯ ವನ್ನು ವಿಚಾರಿಸಿದ ನಂತರ, ಜವಾಬ್ದಾರ ಸಾಧಕರಿಂದ ಬರುವ ನಿರ್ಧಾರದ ಬಗ್ಗೆ ನಮ್ಮ ಮನಸ್ಸಿನಲ್ಲಿ ಬೇರೆ ಅಭಿಪ್ರಾಯ ಇರುತ್ತದೆ. ಇಂತಹ ಸಮಯದಲ್ಲಿ ‘ಸಾಧನೆಯ ದೃಷ್ಟಿಯಿಂದ ಯೋಗ್ಯ ಏನಿರಬೇಕು ?’, ಎಂಬುದನ್ನು ಕೇಳುವುದಿಲ್ಲ.

೭ ಖ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ನಾವು ಮಾಡಿದ ವಿಚಾರದಲ್ಲಿ ಏನಾದರೂ ತಪ್ಪು ಸಹ ಇರಬಹುದು ಅಥವಾ ನಮ್ಮ ಅಭಿಪ್ರಾಯ ಯೋಗ್ಯವೂ ಇರಬಹುದು. ‘ಇಂತಹ ಸಮಯದಲ್ಲಿ ಜವಾಬ್ದಾರ ಸಾಧಕರು ನೀಡಿದ ನಿರ್ಧಾರದ ಬಗ್ಗೆ ನಮ್ಮ ಮನಸ್ಸಿನಲ್ಲಿ ಬಂದ ವಿಚಾರಗಳನ್ನು ನಾನು ಅವರಿಗೆ ಹೇಗೆ ಹೇಳಲಿ ?’, ಎಂದು ಭಯಪಡದೇ ಆತ್ಮೀಯವಾಗಿ ಮತ್ತು ಮನಮುಕ್ತವಾಗಿ ಮಾತನಾಡೋಣ. ಅವರು ಏಕೆ ಅಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ? ಅದರ ಹಿಂದೆ ಅವರ ವಿಚಾರ ಏನಿದೆ ? ಎಂಬುದು ಸಹ ನಮಗೆ ತಿಳಿಯುತ್ತದೆ. ಕೆಲವೊಮ್ಮೆ ‘ಜವಾಬ್ದಾರ ಸಾಧಕರು ನೀಡಿದ ನಿರ್ಧಾರ ಮತ್ತು ನಮಗೂ ಏನಾದರೂ ಒಳ್ಳೆಯದು ಹೊಳೆದಿರುವಾಗ ನಮ್ಮ ಅಭಿಪ್ರಾಯ’, ಇವುಗಳನ್ನು ಹೊಂದಿಸಿ, ಮಧ್ಯದ ಮಾರ್ಗವನ್ನು ತೆಗೆದುಕೊಂಡು ಸರಿಯಾದ ರೀತಿಯಲ್ಲಿ ನಿರ್ಧಾರ ಪ್ರಕ್ರಿಯೆ ಆಗಬಹುದು.

೭ ಗ. ಜವಾಬ್ದಾರ ಸಾಧಕರ ಬಗ್ಗೆ ಪೂರ್ವಗ್ರಹ ಇರುವುದು : ಕೆಲವು ಸಾಧಕರ ಮನಸ್ಸಿನಲ್ಲಿ ವರದಿಸೇವಕರು ಅಥವಾ ಜವಾಬ್ದಾರ ಸಾಧಕರ ಬಗ್ಗೆ ಪೂರ್ವಾಗ್ರಹವಿರುತ್ತದೆ. ಅವರು ಹಿಂದೆ ನಮಗೆ ನೀಡಿದ ಕೆಲವು ನಿರ್ಧಾರಗಳನ್ನು ಸ್ವೀಕರಿಸಲು ಸಾಧ್ಯವಾಗಿರುವುದಿಲ್ಲ ಅಥವಾ ಇತರ ಕೆಲವು ಪ್ರಸಂಗಗಳಿಂದಲೂ ಪೂರ್ವಗ್ರಹ ಬರುತ್ತದೆ. ಆದ್ದರಿಂದ ಈಗಲೂ ಅವರು ಏನು ಹೇಳುತ್ತಾರೋ ಅದನ್ನು ಪೂರ್ವಗ್ರಹದ ವಿಚಾರದಿಂದ ನೋಡಲಾಗುತ್ತದೆ. ‘ಅವರು ಹೇಳಿದ್ದು ಶೇಕಡಾ ೧೦೦ ರಷ್ಟು ಯೋಗ್ಯವಿದೆಯೇ ?’, ಎಂಬ ವಿಚಾರಗಳು ಇರುತ್ತವೆ. ಇದರಿಂದಲೂ ಅವರಲ್ಲಿ ವಿಚಾರಿಸುವುದನ್ನು ತಪ್ಪಿಸಲಾಗುತ್ತದೆ.

೭ ಗ ೧. ಉಪಾಯಯೋಜನೆ / ಯೋಗ್ಯದೃಷ್ಟಿಕೋನ : ಇಲ್ಲಿ ನಾವು ಹೀಗೆ ಗಮನಿಸಬಹುದು, ‘ಜವಾಬ್ದಾರ ಸಾಧಕರೂ ಪರಿಪೂರ್ಣರಲ್ಲ. ಅವರೂ ಕಲಿಯುತ್ತಲೇ ಇರುತ್ತಾರೆ’. ಆದರೆ ಜವಾಬ್ದಾರ ಸಾಧಕರ ಮೂಲಕ ಗುರುತತ್ತ್ವವು ಕಾರ್ಯನಿರತವಿರುತ್ತದೆ. ಆದುದರಿಂದ ಅವರು ನೀಡಿದ ನಿರ್ಧಾರದ ಮೇಲೆ ಅಥವಾ ಸಾಧನೆಯ ದಿಶೆಯ ಮೇಲೆ ಪೂರ್ಣ ಶ್ರದ್ಧೆ ಇಡಬೇಕು. ‘ಅವರು ನೀಡಿದ ನಿರ್ಧಾರವು ಸಾಕ್ಷಾತ್‌ ಗುರುಗಳ ಆಜ್ಞೆಯಾಗಿದೆ’, ಎಂಬ ಭಾವವನ್ನು ಇಟ್ಟುಕೊಂಡರೆ, ಆ ಪ್ರಕಾರ ಕೃತಿ ಮಾಡಿದಾಗ ನಮ್ಮ ಸಾಧನೆಯೇ ಆಗುತ್ತದೆ.

೭ ಘ. ವಿಚಾರಿಸಲು ಮುಂದೂಡುವುದು : ಕೆಲವೊಮ್ಮೆ ಸಹಸಾಧಕರು ಅಥವಾ ಜವಾಬ್ದಾರ ಸಾಧಕರು ಹೇಳಿದ ಯಾವುದಾದರೂ ಅಂಶ ಸ್ಪಷ್ಟವಾಗದಿದ್ದರೆ, ಆಗ ಆ ಬಗ್ಗೆ ತಕ್ಷಣ ವಿಚಾರಿಸದೇ ಮುಂದೂಡುತ್ತೇವೆ. ಕೆಲವೊಮ್ಮೆ ಸಾಧನೆಯ ಸಂದರ್ಭದಲ್ಲಿ ಪ್ರಸಂಗದಿಂದಾಗಿ ಮನಸ್ಸಿಗೆ ನೋವಾಗಿರುತ್ತದೆ, ಆಗ ಮನಸ್ಸಿನ ವಿಚಾರ ಆಯಾ ಸಮಯದಲ್ಲಿ ಮಾತನಾಡಿ ಪರಿಹರಿಸಲು ಪ್ರಯತ್ನ ಆಗಿರುವುದಿಲ್ಲ್ಲ. ಸ್ವಲ್ಪ ಸಮಯದ ಬಳಿಕ ಆ ಪ್ರಸಂಗದಿಂದ ಮನಸ್ಸಿನ ಮೇಲಾದ ಪರಿಣಾಮ ಕಡಿಮೆಯಾದಂತೆ ಅನಿಸುತ್ತದೆ. ಆಗ ‘ಈಗ ಮನಸ್ಸು ಸರಿಯಾಗಿದೆ ಹಾಗಾಗಿ ಮಾತನಾಡುವುದು ಬೇಡ’ ಎಂದು ವಿಚಾರದಿಂದ ಮಾತನಾಡುವುದನ್ನು ತಪ್ಪಿಸುತ್ತೇವೆ.

೭ ಘ ೧ ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ನಮ್ಮ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸಿದ ತಕ್ಷಣ ವಿಚಾರಿಸುವುದು’ ಇದು ಸಾಧಕರ ಸತರ್ಕತೆಯಾಗಿದೆ. ‘ವಿಚಾರಿಸಲು ತಡವಾದಷ್ಟು ಸಾಧನೆಯ ಶಕ್ತಿಯೂ ಕಡಿಮೆ ಆಗುತ್ತದೆ’. ಇದನ್ನು ತಿಳಿದುಕೊಂಡು ನಾವು ತತ್ಪರತೆಯಿಂದ ವಿಚಾರಿಸುವ ಕೃತಿ ಮಾಡೋಣ. ಯಾವುದಾದರೂ ಪ್ರಸಂಗದ ಕುರಿತು ಮನಸ್ಸಿಗೆ ನೋವಾಗು ತ್ತದೆಯೋ, ಆಗ ಇತರ ಯಾರಿಗೂ ನಮ್ಮ ಅಂತರ್ಮನಸ್ಸಿನ ಈ ನೋವನ್ನು ಗುರುತಿಸಲು ಆಗುವುದಿಲ್ಲ. ಆದ್ದರಿಂದ ನಾವೇ ಮಾತನಾಡಿ ಅದಕ್ಕೆ ಯೋಗ್ಯ ಮಾರ್ಗದರ್ಶನ ಪಡೆಯಬೇಕು.. ಯಾವುದಾದರೂ ಪ್ರಸಂಗದಲ್ಲಿ ಮನಸ್ಸಿಗೆ ಬಂದ ಒತ್ತಡ ಸ್ವಲ್ಪ ಸಮಯದ ನಂತರ ಕಡಿಮೆಯಾದರೆ ‘ಮನಸ್ಸು ಸರಿಯಾಗಿದೆ’ ಎಂದು ಬಿಟ್ಟುಬಿಡುತ್ತೇವೆ. ಇಲ್ಲಿ ‘ನಮಗೆ ಮನಸ್ಸು ಸರಿ ಇದೆ ಎಂದು ಅನಿಸುವುದು ತಾತ್ಕಾಲಿಕವಿದೆ, ಆಗ ನಮ್ಮ ಮನಸ್ಸು ಮೋಸ ಮಾಡುತ್ತದೆ’, ಎಂಬುದನ್ನು ಗಮನದಲ್ಲಿಡಬೇಕು. ಆಯಾ ಸಮಯದಲ್ಲಿ ಮಾತನಾಡದಿದ್ದರೆ ಮನಸ್ಸಿನಲ್ಲಿರುವ ಸ್ವಭಾವದೋಷಗಳ ಸಂಸ್ಕಾರ ತೀವ್ರವಾಗಿ ಮುಂದಿನ ಪ್ರಸಂಗದಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಉಲ್ಬಣಿಸುತ್ತದೆ. ಆದ್ದರಿಂದ ಆಯಾ ಸಮಯದಲ್ಲಿ ಮಾತನಾಡುವುದರ ಮಹತ್ವ ಗಮನಿಸಿ ಆಯಾ ಸಮಯದಲ್ಲಿ ವರದಿ ಸೇವಕರಿಂದ ದಿಶೆಯನ್ನು ಪಡೆಯೋಣ.

‘ಮನಸ್ಸಿಗೆ ಬಂದಿರುವ ಸಂದೇಹ ಅಥವಾ ಪ್ರಶ್ನೆಯನ್ನು ಆಮೇಲೆ ಕೇಳೋಣ’, ಹೀಗೆ ಅನಿಸಿದರೆ, ‘ನಾನು ತಕ್ಷಣವೇ ಏಕೆ ಕೇಳುವುದಿಲ್ಲ ? ಈಗ ತಕ್ಷಣ ಕೇಳುವುದರಲ್ಲಿ ಏನು ಅಡಚಣೆ ಇದೆ ?’, ಹೀಗೆ ನಮ್ಮನ್ನು ನಾವೇ ಕೇಳೋಣ. ಆದ್ದರಿಂದ ನಮಗೆ ತಕ್ಷಣ ಕೃತಿ ಮಾಡಲು ಪ್ರೇರಣೆ ದೊರೆಯುತ್ತದೆ.

೭ ಚ ಸಂಕುಚಿತವೃತ್ತಿ – ‘ವಿಚಾರಿಸಿದರೆ ಇನ್ನಷ್ಟು ಮಾಡಲು ಹೇಳುವರು’, ಹೀಗೆ ಅನಿಸುವುದು : ಕೆಲವೊಮ್ಮೆ ಯಾವುದಾದರೂ ಸೇವೆ ಮಾಡಲು ಸಮಯ ಕಡಿಮೆ ಇರುತ್ತದೆ. ಆದರೆ ನಾವು ಅದರ ಬಗ್ಗೆ ಮುಂದೆ ವಿಚಾರಿಸಿದರೆ ಇನ್ನಷ್ಟು ಏನಾದರೂ ಮಾಡಲು ಹೇಳಿದರೆ, ಆಗ ಅದನ್ನು ಮಾಡಲು ನನ್ನ ಸಮಯ ವ್ಯರ್ಥವಾಗುವುದು, ನನ್ನ ಬಳಿ ಅಷ್ಟೊಂದು ಸಮಯ ಇಲ್ಲ’, ಎಂದು ಯೋಚಿಸಿ ವಿಚಾರಿಸುವುದನ್ನು ತಪ್ಪಿಸುತ್ತೇವೆ. ಕೆಲವೊಮ್ಮೆ ನಮಗೆ ಅನಿಸುತ್ತದೆ, ‘ಸೇವೆಯ ಬಗ್ಗೆ ವಿಚಾರಿಸಿದರೆ ಅಥವಾ ಅದರ ಬಗ್ಗೆ ಏನಾದರೂ ಸೂಚಿಸಿದರೆ, ಆಗ ಅದರ ಬಗ್ಗೆ ಸಮನ್ವಯ ಮುಂತಾದವುಗಳನ್ನು ನಾನೇ ಮಾಡಬೇಕಾಗುತ್ತದೆ. ಮುಂದೆ ಆ ಸೇವೆ ನಾನೇ ಮಾಡಬೇಕಾಗುವುದು’, ಈ ರೀತಿಯ ವಿಚಾರಗಳಿಂದ ಕೂಡ ವಿಚಾರಿಸುವುದನ್ನು ಮುಂದೂಡುತ್ತೇವೆ.

೭ ಚ ೧ ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಮೇಲಿನ ವಿಚಾರವು ಸಂಕುಚಿತವೃತ್ತಿಯ ಲಕ್ಷಣವಾಗಿದೆ. ‘ಏನು ನಮಗೆ ಹೇಳಲಾಗುತ್ತದೆಯೋ ಅದರಿಂದ ವ್ಯಾಪಕತೆ ಮತ್ತು ಪರಿಪೂರ್ಣತೆ ಬರಬೇಕು’, ಎಂಬುದು ಭಗವಂತನ ಉದ್ದೇಶವಾಗಿರುತ್ತದೆ. ಇಂತಹ ಸಮಯದಲ್ಲಿ ಸಂಕುಚಿತ ವೃತ್ತಿ ತ್ಯಜಿಸಿ ಎದುರಿನವರ ಮಾತನ್ನು ಸ್ವೀಕರಿಸಬೇಕು’. ಸ್ವೀಕರಿಸಿದರೆ ನಮ್ಮಲ್ಲಿನ ‘ಸಂಕುಚಿತ ವೃತ್ತಿ’ ಎಂಬ ಸ್ವಭಾವದೋಷವನ್ನು ತೆಗೆಯಲು ಸಾಧ್ಯವಾಗುತ್ತದೆ. ನಮ್ಮ ಕೃತಿಯಲ್ಲಿ ಮತ್ತು ವಿಚಾರಗಳಲ್ಲಿ ವ್ಯಾಪಕತೆ ಬರುತ್ತದೆ. ‘ವಿಚಾರಿಸಿದ ನಂತರ ಹೆಚ್ಚು ಮಾಡಲು ಹೇಳಿದರೆ, ಸಾಧನೆಯ ದೃಷ್ಟಿಯಿಂದ ಆ ಸೇವೆ ಅಥವಾ ಕೃತಿ ಪರಿಪೂರ್ಣವಾಗುವುದು’, ಎಂಬ ಸಕಾರಾತ್ಮಕ ವಿಚಾರ ಇಡಬೇಕು. ‘ಅದರಿಂದ ನಮ್ಮ ಪ್ರಗತಿಯೇ ಆಗುವುದು, ಇದಕ್ಕಾಗಿ ನಾವು ನೀಡುವ ಸಮಯವು ಈಶ್ವರಪ್ರಾಪ್ತಿಗಾಗಿ ಉಪಯೋಗಿಸಲ್ಪಡಲಿದೆ’ ಎಂಬ ಅರಿವು ಇಡೋಣ. ಯಾವುದಾದರೂ ಸೇವೆ ಅಥವಾ ಅದರ ಸಮನ್ವಯ ಮಾಡುವಲ್ಲಿ ಅಡಚಣೆಯಿದ್ದರೆ ಅವುಗಳನ್ನು ಮನಸ್ಸಿನಲ್ಲಿಟ್ಟು ಸಂಘರ್ಷದ ಬದಲು ಮನಮುಕ್ತವಾಗಿ ಮತ್ತು ವಸ್ತುನಿಷ್ಠವಾಗಿ ಜವಾಬ್ದಾರ ಸಾಧಕರಿಗೆ ಹೇಳಬೇಕು. ಅದರಿಂದ ನಮಗೆ ಇತರ ಪರ್ಯಾಯ ಹೊಳೆದರೆ, ಅದನ್ನು ಕೂಡ ಹೇಳೋಣ. ವಿಚಾರಿಸುವವೃತ್ತಿಯಿಂದ ಗುರುಕಾರ್ಯದ ಬಗ್ಗೆ ಸರ್ವತೋಮುಖವಾಗಿ ಯೋಚಿಸುವ ಕ್ಷಮತೆ ಮತ್ತು ವ್ಯಾಪಕತೆ ಉಂಟಾಗುತ್ತದೆ.

೭ ಛ. ಸ್ವಂತದ ಬಗ್ಗೆ ಕೀಳರಿಮೆ : ಕೆಲವೊಮ್ಮೆ ಸಾಧಕರಿಗೆ ‘ಸಾಧನೆಯ ದೃಷ್ಟಿಕೋನ ನಮಗೆ ಇಲ್ಲಿಯವರೆಗೆ ಜವಾಬ್ದಾರ ಸಾಧಕರು, ಆಢಾವಾ ಸೇವಕರು, ಸಂತರು ಇವರಿಂದ ಬಹಳ ಸಲ ದೊರಕಿದೆ. ಆದರೆ ನಮ್ಮಿಂದಲೇ ಪ್ರಯತ್ನ ಆಗುತ್ತಿಲ್ಲ. ನಾವು ಪ್ರಯತ್ನದಲ್ಲಿ ಕಡಿಮೆ ಬೀಳುತ್ತಿದ್ದೇವೆ, ಆದ್ದರಿಂದ ಮತ್ತೆ ಹೇಗೆ ವಿಚಾರಿಸುವುದು ?’ ಈ ರೀತಿ ನಮ್ಮನ್ನು ನಾವು ಕೀಳಾಗಿ ಪರಿಗಣಿಸುತ್ತೇವೆ. ಕೆಲವೊಮ್ಮೆ ಕೀಳರಿಮೆ ಬರುತ್ತದೆ ಮತ್ತು ಕೆಲವೊಮ್ಮೆ ಪ್ರತಿಷ್ಠೆ ಕೂಡ ಇರುತ್ತದೆ.

೭ ಛ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಇಲ್ಲಿ ನಮಗೆ ದೃಷ್ಟಿಕೋನ ನೀಡಿದ್ದರೂ, ಅದರ ಪ್ರಕಾರ ಪ್ರಯತ್ನ ಆಗದಿರಲು ನಿರ್ದಿಷ್ಠವಾದ ಅಡಚಣೆ ಏನೆಂದು ಹುಡುಕಬೇಕು. ಇಲ್ಲಿ ಸ್ವಂತದ ಬಗ್ಗೆ ಕೀಳರಿಮೆ ಅನಿಸುವುದರ ಬದಲು, ಪ್ರತಿಷ್ಠೆಯನ್ನು ಕಾಪಾಡದೆ ಗಮನಕ್ಕೆ ಬಂದಿರುವ ಅಡಚಣೆಗಳ ಬಗ್ಗೆ ವಿಚಾರಿಸುವುದರಿಂದ ಅದನ್ನು ತೆಗೆಯಲು ಯೋಗ್ಯ ದಿಶೆ ದೊರೆಯಲಿದೆ. ಸಾಧನೆಯಲ್ಲಿನ ಈ ಅಡಚಣೆಯಿಂದ ಹೊರಬರಲು, ‘ನಮ್ಮಲ್ಲಿ ಬದಲಾವಣೆ ತರಲು ತಳಮಳ’ ಮತ್ತು ‘ಪ್ರಾಮಾಣಿಕ ಪ್ರಯತ್ನ’, ಎರಡು ವಿಷಯಗಳು ಮಹತ್ವದ್ದಾಗಿರುತ್ತವೆ. ಆಗ ಭಗವಂತನೇ ನಮ್ಮಲ್ಲಿ ಬದಲಾವಣೆ ಮಾಡಿ ನಮ್ಮನ್ನು ಮುಂದಿನ ಹಂತಕ್ಕೆ ಕರೆದುಕೊಂಡು ಹೋಗುವನು. ಈಗಿನ ಕಾಲದಲ್ಲಿ ನಮಗೆ ಸಹಜವಾಗಿ ದೊರೆಯುತ್ತಿರುವ ಮಾರ್ಗದರ್ಶನ ಪಡೆದು ನಾವೆಲ್ಲರೂ ನಮ್ಮ ಉದ್ಧಾರ ಮಾಡಿಕೊಳ್ಳೊಣ. ‘ಸಾಧನೆಯಲ್ಲಿ ಇಷ್ಟೊಂದು ವರ್ಷಗಳಾದವು, ಆದರೂ ನಮ್ಮಿಂದ ಸಾಧನೆಯ ಪ್ರಯತ್ನಗಳಾಗಿಲ್ಲ’, ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅದರ ಬಗ್ಗೆ ಮುಂದಿನ ಹಂತದ ಮಾರ್ಗದರ್ಶನ ಪಡೆಯಲು ಪ್ರಯತ್ನಿಸೋಣ.

೭ ಜ. ಇತರರನ್ನು ಕೀಳಾಗಿ ನೋಡುವುದು – ‘ಜವಾಬ್ದಾರ ಸಾಧಕರು ನಮಗಿಂತಲು ವಯಸ್ಸಿನಲ್ಲಿ ಚಿಕ್ಕವರಾಗಿದ್ದಾರೆ ಅಥವಾ ಅವರ ಅನುಭವ ಕಡಿಮೆ ಇದೆ ಹೀಗೆ ಅನಿಸುವುದು ! : ಕೆಲವೊಮ್ಮೆ ಜವಾಬ್ದಾರ ಸಾಧಕರು ನಮಗಿಂತಲು ವಯಸ್ಸಿನಲ್ಲಿ ಚಿಕ್ಕವರಾಗಿರುತ್ತಾರೆ. ಆಗ ‘ಅವರು ನಮಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದಾರೆ ಅಥವಾ ನಮ್ಮ ನಂತರ ಸಾಧನೆಗೆ ಬಂದಿದ್ದಾರೆ ಅವರಿಗಿಂತಲೂ ನಮಗೆ ಈ ಸೇವೆಯ ಅನುಭವ ಹೆಚ್ಚಿದೆ’, ಈ ರೀತಿ ಜವಾಬ್ದಾರ ಸಾಧಕರನ್ನು ಕೀಳಾಗಿ ನೋಡಲಾಗುತ್ತದೆ. ಆದ್ದರಿಂದ ಕೂಡ ನಮಗೆ ವಿಚಾರಿಸುವುದರಲ್ಲಿ ಕಡಿಮೆತನ ಅನಿಸುತ್ತದೆ.

೭ ಜ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಸಾಧನೆ ಯಲ್ಲಿ ಅನುಭವ ಇದ್ದರೂ ವಿಚಾರಿಸುವ ವೃತ್ತಿ ಇಲ್ಲದಿದ್ದರೆ ಆ ಅನುಭವದ ಉಪಯೋಗವಾಗುವುದಿಲ್ಲ. ಯಾರಲ್ಲಿ ನಮ್ರತೆ ಇದೆ ಅವರೇ ನಿಜವಾದ ಪ್ರಗತಿ ಮಾರ್ಗದಲ್ಲಿ ಇರುತ್ತಾರೆ. ತಮಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾಗಿರುವ ಸಾಧಕನನ್ನು ಅವರಿಂದ ಏನೋ ವಿಶೇಷ ಕಲಿಸುವುದಕ್ಕಾಗಿ ಭಗವಂತನು ನಮ್ಮತ್ತ ಕಳುಹಿಸಿರುತ್ತಾನೆ. ಆದ್ದರಿಂದ ಅವರು ‘ಚಿಕ್ಕವರಲಲ್’ ‘ಭಗವಂತನ ಸಂದೇಶವಾಹಕ’ರಾಗಿರುತ್ತಾರೆ. ಭಗವಂತನ, ಗುರುಗಳ ದೂತರಾಗಿರುತ್ತಾರೆ. ಆದ್ದರಿಂದ ಅವರ ಬಗ್ಗೆ ನಾವು ಕೃತಜ್ಞರಾಗಿ ರೋಣ. ಗುರುದೇವರ ಆದರ್ಶ ಕಣ್ಣೆದುರು ಇಟ್ಟು ನಮಗಿಂತಲು ವಯಸ್ಸಿನಲ್ಲಿ ಅಥವಾ ಚಿಕ್ಕ ಸಾಧಕರಿಂದಲೂ ವಿಚಾರಿಸುವುದರಲ್ಲಿ ಯಾವುದೇ ಸಂಕೋಚ ಪಟ್ಟುಕೊಳ್ಳಬಾರದು.

೭ ಝ. ‘ಇತರ ಸಾಧಕರು ವಿಚಾರಿಸಿರಬಹುದು’, ಎಂದು ಊಹಿಸುವುದು ಅಥವಾ ‘ಅವರಾಗಿ ಕೇಳಬೇಕೆಂಬ’ ಅಪೇಕ್ಷೆ ಇರುವುದು : ಕೆಲವು ಸೇವೆಗಳನ್ನು ಇಬ್ಬರೂ ಮೂವರು ಸಾಧಕರು ಸೇರಿ ಮಾಡುತ್ತಿರುತ್ತಾರೆ. ಆಗ ಆ ಸೇವೆಯ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು, ಸಂದೇಹ ಅಥವಾ ಅಡಚಣೆಗಳು ಬಂದರೆ ಅದರ ಬಗ್ಗೆ ‘ಇತರ ಸಾಧಕರು ವಿಚಾರಿಸಬಹುದು’, ಎಂದು ಅಂದುಕೊಂಡು ನಾವು ಸ್ವತಃ ವಿಚಾರಿಸುವುದನ್ನು ತಪ್ಪಿಸುವುದು ಅಥವಾ ಕೆಲವೊಮ್ಮೆ ‘ಇತರರು ವಿಚಾರಿಸಲಿ’ ಎಂಬ ಅಪೇಕ್ಷೆ ಇರುತ್ತದೆ. ಅದರಿಂದ ಸ್ವತಃದ ವಿಚಾರಿಸುವ ವೃತ್ತಿ ಅಥವಾ ತತ್ಪರತೆ ಕಡಿಮೆ ಬೀಳುತ್ತದೆ.

೭ ಝ ೧. ಉಪಾಯಯೋಜನೆ / ಯೋಗ್ಯದೃಷ್ಟಿಕೋನ : ಇಲ್ಲಿ ‘ಇತರರು ವಿಷಯವನ್ನು ವಿಚಾರಿಸಿರಬಹುದು’ ಎಂದು ಅಂದುಕೊಳ್ಳುವುದು ಅಥವಾ ‘ಅವರು ವಿಚಾರಿಸಬೇಕು’, ಹೀಗೆ ಅಪೇಕ್ಷೆ ಮಾಡುವುದು, ಎಂದರೆ ಇತರರ ಮೇಲೆ ಆ ಅಂಶಗಳನ್ನು ಬಿಟ್ಟು ಬಿಡುವುದು. ಆಗ ‘ಈ ಸೇವೆ ಎಂದರೆ ನನ್ನ ಸಾಧನೆ ಆಗಿದೆ’ ಎಂಬ ವಿಚಾರ ನಮ್ಮಲ್ಲಿ ಇರುವುದಿಲ್ಲ. ಇಲ್ಲಿ ಭಗವಂತನು ನಮಗೆ ಸೇವೆಯ ಕುರಿತು ಆತ್ಮೀಯತೆ ಹೆಚ್ಚಿಸಲು ಕಲಿಸುತ್ತಿದ್ದಾನೆ. ಸೇವೆಯ ಕುರಿತು ಆತ್ಮೀಯತೆ ಹೆಚ್ಚಾದೊಡನೆ ‘ಸೇವೆ ಭಗವಂತನಿಗೆ, ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಆಗುತ್ತಿದೆಯೇ ?’ ಎಂಬ ವಿವೇಕ ಬುದ್ಧಿಜಾಗೃತವಾಗುತ್ತದೆ. ಆದ್ದರಿಂದ ಈ ಸೇವೆ ಒಳ್ಳೆಯ ರೀತಿ ಆಗುವ ವಿಚಾರ ಭಗವಂತ ನಮಗೆ ಸೂಚಿಸುತ್ತಾನೆ. ಭಗವಂತ ನಮಗೆ ಏನೆಲ್ಲಾ ವಿಚಾರ ನೀಡುತ್ತಾನೆ, ಅದನ್ನು ಸಹ ಸಾಧಕರಿಗೆ/ಜವಾಬ್ದಾರಿ ಸಾಧಕರ ಜೊತೆಗೆ ಮಾತನಾಡಬೇಕು. ಕೇಳಿಕೊಳ್ಳಬೇಕು. ಅದರಿಂದ ನಮ್ಮ ಸೇವೆಯಲ್ಲಿನ ಆತ್ಮೀಯತೆ ಹೆಚ್ಚಾಗುವುದರಿಂದ, ನೇತೃತ್ವ ವಹಿಸುವ ವೃತ್ತಿ ಹೆಚ್ಚಾಗುವುದರಿಂದ ಈ ಸೇವೆ ಭಗವಂತನ ಚರಣಗಳಲ್ಲಿ ಸಮರ್ಪಿತವಾಗುವಲ್ಲಿ ಸಹಾಯವಾಗುತ್ತದೆ.