ಶ್ರೀರಾಮಮಂದಿರದ ಮೊಕದ್ದಮೆಯಲ್ಲಿ ನ್ಯಾಯಮೂರ್ತಿಗಳ ಯೋಗದಾನ !

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೧. ಶ್ರೀರಾಮಜನ್ಮಭೂಮಿ ತೀರ್ಪಿನ ನಂತರ ಶಾಂತಿ ಕಾಪಾಡುವಲ್ಲಿ ಕೇಂದ್ರ ಸರಕಾರದ ಮಹತ್ವದ ಪಾತ್ರ !

ನಿವೃತ್ತ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್‌ ಅವರು ಮಾತನಾಡಿ, ತೀರ್ಪು ಘೋಷಣೆಯಾದ ನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ; ಏಕೆಂದರೆ ಈ ತೀರ್ಪನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಮತಾಂಧರು, ‘ಶ್ರೀರಾಮ ಮಂದಿರ ನಿರ್ಮಿಸಿದರೆ ರಕ್ತದ ನದಿಗಳು ಹರಿಯುವವು’ ಎಂದು ಬೆದರಿಕೆ ಹಾಕುತ್ತಿದ್ದರು. ಕೇಂದ್ರದಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರ ಇರುವುದರಿಂದ ಎಲ್ಲೆಡೆ ಶಾಂತಿ ಇತ್ತು ಎಂಬುದು ನಿಜ.

೨. ಶ್ರೀರಾಮಮಂದಿರದ ಪರ ವಾದವನ್ನು ಮಂಡಿಸಿದ ಹಿರಿಯ ನ್ಯಾಯವಾದಿ ಕೆ. ಪರಾಸರನ್‌ ಅವರ ಕುರಿತು ಮಾಜಿ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್‌ ಅವರ ಮೆಚ್ಚುಗೆಯ ಮಾತುಗಳು

ಮಾಜಿ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್‌

ನ್ಯಾಯವಾದಿ ಕೆ. ಪರಾಸರನ್‌

ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀರಾಮ ಮಂದಿರದ ಪರವಾಗಿ ವಾದ ಮಂಡಿಸಿದ ೯೭ ವರ್ಷದ ಹಿರಿಯ ನ್ಯಾಯವಾದಿ ಕೆ. ಪರಾಸರನ್‌ ಅವರ ಕೊಡುಗೆ ಶ್ರೇಷ್ಠವಾಗಿತ್ತು. ನ್ಯಾಯವಾದಿಗಳು ತಮ್ಮ ವಾದ ಮಂಡಿಸುವಾಗ ವಿರುದ್ಧ ಪಕ್ಷದವರನ್ನು ಅನಗತ್ಯ ಟೀಕಿಸಲಿಲ್ಲ ಮತ್ತು ಇದೇ ಸನಾತನ ಧರ್ಮದ ವಿಶಿಷ್ಟ ಲಕ್ಷಣವಾಗಿದೆ. ಕೆ. ಪರಾಸರನ್‌ ಒಬ್ಬ ‘ಲೆಜೆಂಡ್’ ಆಗಿದ್ದಾರೆ.

೩. ರಾಮಜನ್ಮಭೂಮಿ ತೀರ್ಪಿನ ನ್ಯಾಯಮೂರ್ತಿಗಳ ಮೇಲಿನ ಒತ್ತಡ

ನ್ಯಾಯಮೂರ್ತಿಗಳು ದಿನಕ್ಕೆ ೧೭-೧೮ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂಬ ವಾಸ್ತವವು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ನ್ಯಾಯಮೂರ್ತಿಗಳ ಮೇಲೆ ಅದರ ಮಾನಸಿಕ ಒತ್ತಡವಿತ್ತು.

೪. ಪಕ್ಷಕಾರರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನ್ಯಾಯವಾದಿಗಳ ಮಹತ್ವದ ಕೊಡುಗೆ

ನ್ಯಾಯವ್ಯವಸ್ಥೆಯು ನ್ಯಾಯಮೂರ್ತಿಗಳು ಮತ್ತು ನ್ಯಾಯವಾದಿಗಳು ಎಂಬ ಎರಡು ಚಕ್ರಗಳಾಗಿವೆ ಎಂದು ಒಪ್ಪಿಕೊಳ್ಳುವುದರಲ್ಲಿ ಯಾವುದೇ ತಪ್ಪು ಇಲ್ಲ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೦.೧೦.೨೦೨೫)