ಪ.ಪೂ. ಭಕ್ತರಾಜ ಮಹಾರಾಜರ ಗುರುಗಳಾದ ಅನಂತಾನಂದ ಸಾಯೀಶ ಇವರ ಮಹಾನಿರ್ವಾಣೋತ್ಸವ ಡಿಸೆಂಬರ್ ೧೦ ರಂದು ! ಆ ನಿಮಿತ್ತ…
|
|
|
೧. ತೀವ್ರ ಅನಾರೋಗ್ಯವಿದ್ದರೂ ಶ್ರೀ ಅನಂತಾನಂದ ಸಾಯೀಶರ ಭಂಡಾರ ಇದ್ದ ಕಾರಣ, ”ಸಾವು ಬಂದರೂ ಭಂಡಾರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ,’’ ಎಂದು ಪ.ಪೂ. ಬಾಬಾ ಇವರು ಹೇಳುವುದು
೧೯೮೮ ರಲ್ಲಿ ಪ.ಪೂ. ಅನಂತಾನಂದ ಸಾಯೀಶರ ಭಂಡಾರವು ಮೋರಟಕ್ಕಾದಲ್ಲಿತ್ತು. ಆ ಸಮಯದಲ್ಲಿ ಪ.ಪೂ. ಬಾಬಾ ಇವರು ಬಹಳ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಅವರು, ”ನನ್ನ ಗುರುಗಳ ಭಂಡಾರ (ಅನ್ನಸಂತರ್ಪಣೆ) ಇದೆ. ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ’’, ಎಂದು ಹೇಳಿದರು.
೨. ಗುರುಬಂಧುಗಳ ಅಲೌಕಿಕ ಪ್ರೀತಿ

ಪ.ಪೂ. ಭುರಾನಂದ ಬಾಬಾ ಇವರು ಪ.ಪೂ. ಬಾಬಾ ಇವರ ಕೋಣೆಗೆ ಬಂದಾಗ, ಅವರಿಗೆ ಕೆಮ್ಮು ಬಹಳ ಹೆಚ್ಚಾಗಿತ್ತು. ಪ.ಪೂ. ಭುರಾನಾನಂದ ಬಾಬಾ ಇವರು ಜೇನುತುಪ್ಪ ಮತ್ತು ಲವಂಗದ ಲೇಹವನ್ನು ಮಧ್ಯದ ಬೆರಳಿನಿಂದ ಪ.ಪೂ. ಬಾಬಾ ಅವರ ಗಂಟಲಿನಲ್ಲಿ ಹಾಕಿ, ಉಪಚಾರ ಮಾಡಿದರು. ಆ ದಿನ ನನಗೆ ಗುರುಬಂಧುಗಳ ನಡುವೆ ಇರುವ ಪ್ರೀತಿ ನೋಡಲು ಸಿಕ್ಕಿತು. ನಿಜ ಹೇಳಬೇಕೆಂದರೆ, ಆ ದಿನ ಪ.ಪೂ. ಬಾಬಾ ಇವರಿಗೆ ಹೃದಯದ ತೊಂದರೆ ಬಹಳ ಆಗುತ್ತಿತ್ತು; ಆದರೆ ಅವರು ಆ ಬಗ್ಗೆ ಯಾರಿಗೂ ತಿಳಿಯಗೊಡಲಿಲ್ಲ. ನನ್ನ ಗುರುಗಳು ನನಗೆ ಏನೂ ಆಗಲು ಬಿಡುವುದಿಲ್ಲ ಎಂಬ ದೃಢ ಶ್ರದ್ಧೆ ಅವರಲ್ಲಿತ್ತು.
– ಶ್ರೀ. ರವೀಂದ್ರ ಕಸರೆಕರ (ಪ.ಪೂ. ಭಕ್ತರಾಜ ಮಹಾರಾಜ ಇವರ ಪುತ್ರ), ನಾಸಿಕ (೬.೧.೨೦೧೯, ಸಮಯ : ೭ ಗಂಟೆ ೨ ನಿಮಿಷಗಳು)


ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !