ಪಶ್ಚಿಮ ಬಂಗಾಳದ ಬೆಲ್ಡಾಂಗಾದಲ್ಲಿ ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಅಡಿಗಲ್ಲು ಹಾಕಲು ಸಿದ್ಧತೆ!

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರ ಘೋಷಣೆ

ಕೋಲಕಾತಾ (ಪಶ್ಚಿಮ ಬಂಗಾಳ) – ಮುರ್ಷಿದಾಬಾದ್‌ನ ಬೆಲ್ಡಾಂಗಾದಲ್ಲಿ ಬರುವ ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಅಡಿಗಲ್ಲು ಹಾಕಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 12 ರಂದು ಮಸೀದಿ ನಿರ್ಮಿಸುವುದಾಗಿ ಕಬೀರ್ ಭರವಸೆ ನೀಡಿದ್ದರು.

ಕಬೀರ್ ಮಾತು ಮುಂದುವರೆಸಿ, “ಮಸೀದಿಯ ಅಡಿಗಲ್ಲು ಸಮಾರಂಭಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡರು ಸೇರಿದಂತೆ ಸುಮಾರು 2 ಲಕ್ಷ ಜನರು ಹಾಜರಾಗಲಿದ್ದಾರೆ. ಮುರ್ಷಿದಾಬಾದ್ ಜೊತೆಗೆ ಉತ್ತರ ಬಂಗಾಳ ಮತ್ತು ಬೀರ್‌ಭೂಮ್ ಜಿಲ್ಲೆಗಳಿಂದಲೂ ಅನೇಕ ಜನರು ಆಗಮಿಸಲಿದ್ದಾರೆ. ದೆಹಲಿ, ಕೋಲಕಾತಾ ಮತ್ತು ಮುಂಬಯಿ ನಿಂದಲೂ ಅನೇಕರು ಬರಲಿದ್ದಾರೆ. ಮಸೀದಿಯ ಅಡಿಗಲ್ಲಿನ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಸ್ಥಳೀಯ ಪೊಲೀಸ್ ಮತ್ತು ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಸೀದಿ ಪೂರ್ಣಗೊಳ್ಳಲು 3 ವರ್ಷಗಳು ಬೇಕಾಗಬಹುದು.”

ಮುಖ್ಯಮಂತ್ರಿಗಳ ಸಭೆಗೂ ಗೈರು!

ಅದೇ ದಿನ, ತೃಣಮೂಲ ಕಾಂಗ್ರೆಸ್‌ನ ಸರ್ವೋಚ್ಚ ನಾಯಕಿ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಕೋಲಕಾತಾದಲ್ಲಿ ಒಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೂ, ಅಡಿಗಲ್ಲು ಸಮಾರಂಭದ ಕಾರಣದಿಂದ ಪಕ್ಷದ ಈ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಬೀರ್ ಹೇಳಿದ್ದಾರೆ. (ಇದು ಮುಸಲ್ಮಾನರಿಗೆ ಅವರ ಪಕ್ಷಕ್ಕಿಂತ ಧರ್ಮವೇ ದೊಡ್ಡದು ಎಂಬುದನ್ನು ತೋರಿಸುತ್ತದೆ! – ಸಂಪಾದಕರು)

‘ಬಾಬರಿ ಮಸೀದಿ ಕೆಡವಿದ್ದು ಒಂದು ಪಿತೂರಿಯಾಗಿತ್ತು!'(ಅಂತೆ)

ಕಬೀರ್ ಅವರು ಮಾತು ಮುಂದುವರೆಸಿ,

ಬಾಬರಿ ಮಸೀದಿ ಕೆಡವಿದ್ದು ಒಂದು ಪಿತೂರಿಯಾಗಿತ್ತು. (ಶ್ರೀರಾಮ ಮಂದಿರವನ್ನು ಕೆಡವಿದ ನಂತರವೇ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದರೂ ಮುಸ್ಲಿಂ ನಾಯಕರು ಈ ಬಗ್ಗೆ ಏಕೆ ಮಾತನಾಡುವುದಿಲ್ಲ? ವಿವಾದಿತ ಬಾಬರಿ ಮಸೀದಿ ಕೆಡವಿದ್ದು ಪಿತೂರಿ ಎಂದು ಭಾವಿಸುವ ಕಬೀರ್ ಅವರು, ತಮ್ಮ ಸಹೋದರರು ಶ್ರೀರಾಮ ಮಂದಿರವನ್ನು ಕೆಡವಿದ್ದು ಸರಿ ಎಂದು ಭಾವಿಸುತ್ತಾರೆಯೇ? – ಸಂಪಾದಕರು) ನಾವು 1992 ರಿಂದ ಪ್ರತಿ ವರ್ಷ ಡಿಸೆಂಬರ್ 6 ಅನ್ನು ‘ಕರಾಳ ದಿನ’ ಎಂದು ಆಚರಿಸುತ್ತಿದ್ದೇವೆ. ಅದು ಅತ್ಯಂತ ನೋವಿನ ದಿನವಾಗಿದ್ದರಿಂದ, ಆ ದುಃಖವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಈ ಮಸೀದಿಗೆ ಅಡಿಗಲ್ಲು ಹಾಕಲಾಗುವುದು.

 

ಸಂಪಾದಕೀಯ ನಿಲುವು

  • ಶ್ರೀರಾಮ ನವಮಿ, ನವರಾತ್ರಿ ಮುಂತಾದ ಮೆರವಣಿಗೆಗಳನ್ನು ನಡೆಸಲು ಹಿಂದೂಗಳಿಗೆ ಅನುಮತಿ ನೀಡದ ಹಿಂದೂ-ವಿರೋಧಿ ಮಮತಾ ಬ್ಯಾನರ್ಜಿ, ಬಾಬರಿ ಮಸೀದಿ ನಿರ್ಮಾಣಕ್ಕೆ ತಕ್ಷಣವೇ ಅನುಮತಿ ನೀಡುತ್ತಾರೆ ಎಂಬುದನ್ನು ಗಮನಿಸಿ!
  • ‘ಕಬೀರ್ ಅವರ ನಿಲುವಿನಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ’ ಎಂದು ಈಗ ಯಾರೂ ಏಕೆ ಹೇಳುತ್ತಿಲ್ಲ?

 

ಇದನ್ನೂ ಓದಿರಿ →

ಬಾಬರಿಯ ಒಂದು ಇಟ್ಟಿಗೆಯನ್ನೂ ಇಡಲು ಬಿಡುವುದಿಲ್ಲ! – ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ಎಚ್ಚರಿಕೆ