
ಲಕ್ಷ್ಮಣಪುರಿ – ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್, ಸಮಾಜವಾದಿ ಪಕ್ಷ ಅಥವಾ ರಾಷ್ಟ್ರೀಯ ಜನತಾ ದಳ ಇವೆಲ್ಲವೂ ಭಗವಾನ್ ಶ್ರೀರಾಮ ಮತ್ತು ಹಿಂದೂ ಸಮಾಜದ ವಿರುದ್ಧ ನಿಲ್ಲುವ ಪಕ್ಷಗಳಾಗಿವೆ. ಬಾಬರ್ ಒಬ್ಬ ವಿದೇಶಿ ಆಕ್ರಮಣಕಾರನಾಗಿದ್ದ. ಆತ ಶ್ರೀರಾಮ ಜನ್ಮಭೂಮಿಯ ಮೇಲಿನ ಮಂದಿರವನ್ನು ಕೆಡವಿ ಬಾಬ್ರಿ ನಿರ್ಮಿಸಿದ್ದ, ಅದನ್ನು ೧೯೯೨ ಡಿಸೆಂಬರ್ ೬ ರಂದು ರಾಮಭಕ್ತರು ತೆರವುಗೊಳಿಸಿದರು. ಈಗ ಬಾಬರನ ಹೆಸರಿನ ಒಂದು ಇಟ್ಟಿಗೆಯನ್ನೂ ಸಹ ಭಾರತದಲ್ಲಿ ಇಡಲು ಬಿಡುವುದಿಲ್ಲ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಎಚ್ಚರಿಕೆ ನೀಡಿದರು. ಮುರ್ಷಿದಾಬಾದ್‌ನ ಬೇಲ್‌ಡಾಂಗಾದಲ್ಲಿ ಬರುವ ಡಿಸೆಂಬರ್ ೬ ರಂದು ಬಾಬರಿ ಮಸೀದಿಗೆ ಅಡಿಗಲ್ಲು ಹಾಕುವುದಾಗಿ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೌರ್ಯ ಈ ಹೇಳಿಕೆ ನೀಡಿದ್ದಾರೆ.
೨೦೨೬ ರಲ್ಲಿ ಜನರು ತೃಣಮೂಲ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುತ್ತಾರೆ! – ಮೌರ್ಯ
ಮೌರ್ಯ ಅವರು ಮಾತು ಮುಂದುವರೆಸಿ, ಇಂತಹ ವಿವಾದಗಳನ್ನು ಸೃಷ್ಟಿಸುವ ಜನರು ನುಸುಳುಕೋರರ ಬೆಂಬಲಿಗರಾಗಿದ್ದಾರೆ ಮತ್ತು ದೇಶಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಒಬ್ಬ ನುಸುಳುಕೋರನನ್ನೂ ಸಹ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ. ಈ ಕುರಿತು ಕೇಂದ್ರ ಗೃಹ ಮಂತ್ರಿಗಳು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಜನತೆ ೨೦೨೬ ರಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುತ್ತದೆ. ಜಂಗಲ್‌ರಾಜ್‌ಗೆ ಕೊನೆ ಹಾಡಿ ಸುಶಾಸನವನ್ನು ಬೆಂಬಲಿಸುತ್ತದೆ. ಇತರ ರಾಜ್ಯಗಳಂತೆ ಪಶ್ಚಿಮ ಬಂಗಾಳದಲ್ಲಿಯೂ ಸಹ ಭಾಜಪಗೆ ಅವಕಾಶ ಸಿಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಇದನ್ನು ವಿವಾದದ ವಿಷಯವನ್ನಾಗಿ ಏಕೆ ಮಾಡಲಾಗುತ್ತಿದೆ?'(ಅಂತೆ) ! – ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್

ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ ಅವರು, ಮಂದಿರಗಳಿಗೆ ಭೂಮಿಪೂಜೆ ಮಾಡಬಹುದು. ಹಾಗಾದರೆ ಮಸೀದಿಗಳಿಗೆ ಹಾಗೆ ಮಾಡಲು ಏನು ತೊಂದರೆ ಇರಬಹುದು? ಯಾರಾದರೂ ಮಸೀದಿ, ಮಂದಿರ, ಗುರುದ್ವಾರ ಅಥವಾ ಚರ್ಚ್ ನಿರ್ಮಿಸುತ್ತಿದ್ದರೆ, ಅದರಲ್ಲಿ ವಿವಾದ ಸೃಷ್ಟಿಯಾಗಲು ಕಾರಣವೇ ಇಲ್ಲ. ಇದನ್ನು ವಿವಾದದ ವಿಷಯವನ್ನಾಗಿ ಏಕೆ ಮಾಡಲಾಗುತ್ತಿದೆ? ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಪೂಜಾ ಸ್ಥಳವನ್ನು ನಿರ್ಮಿಸುವ ಹಕ್ಕಿದೆ. (ವಿರೋಧವಿರುವುದು ಮಸೀದಿಗಲ್ಲ, ಬದಲಿಗೆ ‘ಬಾಬರಿ’ ಎಂಬ ಹೆಸರಿಗೆ ಇದೆ. ಭಾರತದ ಮುಸಲ್ಮಾನರಿಗೆ ಮತ್ತು ವಿಶೇಷವಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕನಿಗೆ ಬಾಬರ್ ಯಾರು? ಬಾಬರ್ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿದ್ದ, ಈ ಇತಿಹಾಸ ತಿಳಿದಿದ್ದರೂ, ಆತನ ಹೆಸರಿನಲ್ಲಿ ಮತ್ತೆ ಮಸೀದಿಯನ್ನು ಏಕೆ ಕಟ್ಟಲಾಗುತ್ತಿದೆ? ಇದು ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ಪ್ರಯತ್ನವಾಗಿದ್ದು, ಇದನ್ನು ವಿರೋಧಿಸಲಾಗುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಬಾಬರಿ ಮತ್ತು ಅವರ ವಂಶಸ್ಥರನ್ನು ಬೆಂಬಲಿಸಿ ತಾನು ದೇಶದ್ರೋಹಿ ಮತ್ತು ಹಿಂದೂದ್ರೋಹಿ ಎಂದು ಮತ್ತೆ ಬಹಿರಂಗಪಡಿಸುತ್ತಿದೆ. ಇಂತಹ ಕಾಂಗ್ರೆಸ್ ಪಕ್ಷವನ್ನು ಹಿಂದೂಗಳು ಆದಷ್ಟು ಬೇಗ ರಾಜಕೀಯವಾಗಿ ಕೊನೆಗೊಳಿಸುವುದು ಅತ್ಯಗತ್ಯ! – ಸಂಪಾದಕರು)
‘ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ(ಯಂತೆ)!’ – ಕಾಂಗ್ರೆಸ್ ನಾಯಕ ಉದಿತ್ ರಾಜ್

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಉದಿತ್ ರಾಜ್ ಕೂಡ ಮಸೀದಿಯನ್ನು ಬೆಂಬಲಿಸಿದ್ದಾರೆ. ಅವರು, ಮಂದಿರಗಳಿಗೆ ಅಡಿಗಲ್ಲು ಹಾಕಲು ಸಾಧ್ಯವಿದ್ದರೆ, ಮಸೀದಿಗಳಿಗೆ ಅಡಿಗಲ್ಲು ಹಾಕಲು ಏನು ತೊಂದರೆ ಇದೆ? ಅನಗತ್ಯವಾಗಿ ವಿವಾದವನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದರು.
ಮಸೀದಿಗೆ ರಾಜಕೀಯ ರೂಪ ನೀಡಬೇಡಿ!
ಕಾಂಗ್ರೆಸ್‌ನ ಉತ್ತರ ಪ್ರದೇಶದ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯಿಸಿ, ಯಾವುದೇ ಕಡೆಯಿಂದ ಆದರೂ ಧಾರ್ಮಿಕ ಹೇಳಿಕೆಗಳು ಕೇವಲ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಮಸೀದಿಯ ಕಾರ್ಯವು ಪೂಜೆಗಾಗಿ, ರಾಜಕೀಯಕ್ಕಾಗಿ ಅಲ್ಲ. ಧಾರ್ಮಿಕ ಸ್ಥಳಗಳಿಗೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸಬಾರದು ಎಂದು ಹೇಳಿದರು.
ಮಸೀದಿ ಕಟ್ಟಿದರೆ, ಶ್ರೀರಾಮ ಮಂದಿರ ಕಟ್ಟುತ್ತೇವೆ! – ಭಾಜಪ ಸಂಸದ ಜ್ಯೋತಿರ್ಮಯ್ ಸಿಂಗ್ ಮಹತೋ

ಭಾಜಪ ಸಂಸದ ಜ್ಯೋತಿರ್ಮಯ್ ಸಿಂಗ್ ಮಹತೋ ಅವರು ತೀವ್ರವಾಗಿ ಪ್ರತಿಕ್ರಿಯಿಸಿ, ಬಾಬರ್ ಒಬ್ಬ ಆಕ್ರಮಣಕಾರ ಮತ್ತು ಆತನ ಹೆಸರಿನಲ್ಲಿ ಏನನ್ನೂ ನಿರ್ಮಿಸುವುದು ಸರಿಯಲ್ಲ. ತೃಣಮೂಲ ಕಾಂಗ್ರೆಸ್ ಇಂತಹ ಹೆಜ್ಜೆ ಇಟ್ಟು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಬಾಬರಿ ಹೆಸರಿನ ಮಸೀದಿಯನ್ನು ಎಲ್ಲೇ ನಿರ್ಮಿಸಿದರೂ, ಅದಕ್ಕೆ ವಿರೋಧವಾಗಿ ರಾಮಮಂದಿರವನ್ನು ನಿರ್ಮಿಸುತ್ತೇವೆ ಮತ್ತು ರಾಮಲಲ್ಲಾನನ್ನು ಮರಳಿ ತರುತ್ತೇವೆ. ತೃಣಮೂಲ ಕಾಂಗ್ರೆಸ್ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದರೂ, ಮುಸಲ್ಮಾನರಿಗಾಗಿ ಯಾವುದೇ ನಿರ್ದಿಷ್ಟ ಕೆಲಸ ಮಾಡಿಲ್ಲ ಎಂದು ಹೇಳಿದರು.
ಮುಸಲ್ಮಾನರ ಮತಗಳಿಗಾಗಿ ಹಠ! – ಭಾಜಪ ಸಂಸದ ಖಗೇನ್ ಮುರ್ಮು

ಶಾಸಕ ಕಬೀರ್ ಈ ಎಲ್ಲವನ್ನು ಮಾಡಿ ಮಮತಾ ಬ್ಯಾನರ್ಜಿಯವರ ರಾಜಕೀಯ ನೆಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾಜಪ ಸಂಸದ ಖಗೇನ್ ಮುರ್ಮು ಆರೋಪಿಸಿದರು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ತೃಣಮೂಲ ಪಕ್ಷವು ಓಲೈಕೆಯ ಪಾತ್ರವನ್ನು ಮತ್ತಷ್ಟು ಎತ್ತಿ ತೋರಿಸುತ್ತಿದೆ. ತೃಣಮೂಲ ಪಕ್ಷ ಮುಸಲ್ಮಾನರ ಮತಗಳಿಗಾಗಿ ಮಾತ್ರ ಈ ಎಲ್ಲವನ್ನು ಮಾಡುತ್ತಿದೆ. ಮುರ್ಷಿದಾಬಾದ್‌ನಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡಾ ೭೫ ರಷ್ಟಿದೆ.
ಇದನ್ನೂ ಓದಿರಿ →ಪಶ್ಚಿಮ ಬಂಗಾಳದ ಬೆಲ್ಡಾಂಗಾದಲ್ಲಿ ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಅಡಿಗಲ್ಲು ಹಾಕಲು ಸಿದ್ಧತೆ! – ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!