ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಕಾಂಚೀಪುರಂನಲ್ಲಿ ನೆಲೆಸಲು ಬಂದಿರುವುದರ ಹಿನ್ನೆಲೆ!

ಕಾಂಚೀಪುರಂನ ಶ್ರೀ ಕಾಮಾಕ್ಷಿ ಮಂದಿರ

ಸಂಪೂರ್ಣ ವಿಶ್ವದಲ್ಲಿ ಎಂದಿಗೂ ನಾಶವಾಗದ ಸಪ್ತಪುರಿಗಳಿವೆ. ಅವುಗಳಲ್ಲಿ ‘ಕಾಂಚೀಪುರಂ’, ಒಂದು ನಗರವಾಗಿದೆ. ಇದು ಮೋಕ್ಷಪುರಿಯೂ ಆಗಿದೆ. ಕಾಮಾಕ್ಷಿದೇವಿ ಈ ನಗರದ ಅಧಿದೇವತೆಯಾಗಿದ್ದಾಳೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ಕಾಂಚೀಪುರಂ’ನಲ್ಲಿ ನೆಲೆಸಲು ಬಂದ ಹಿಂದಿನ ಕಾರಣಗಳನ್ನು ಮುಂದೆ ಕೊಡಲಾಗಿದೆ.

೧. ಕಾಂಚೀಪುರಂನಲ್ಲಿರುವ ‘ಏಕಾಂಬರೇಶ್ವರ’ ಮಂದಿರಕ್ಕೆ ಹೋದಾಗ ನಡೆದ ಒಂದು ಪ್ರಸಂಗ

ಕಾಂಚೀಪುರಂನಲ್ಲಿರುವ ‘ಏಕಾಂಬರೇಶ್ವರ

೧ ಅ. ಸಪ್ತರ್ಷಿಗಳ ಆಜ್ಞೆಯ ಮೇರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಾಂಚೀಪುರಂನಲ್ಲಿರುವ ‘ಏಕಾಂಬರೇಶ್ವರ’ ಮಂದಿರಕ್ಕೆ ಹೋಗುವುದು: ೧.೭.೨೦೨೩ ರಂದು, ಅಂದರೆ ಗುರುಪೂರ್ಣಿಮೆಯ ಎರಡು ದಿನ ಮೊದಲು ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮೂಲಕ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಕಾಂಚೀಪುರಂನಲ್ಲಿರುವ ‘ಏಕಾಂಬರೇಶ್ವರ’ ಮಂದಿರಕ್ಕೆ ಹೋಗಲು ಹೇಳಿದರು. ದಕ್ಷಿಣ ಭಾರತದಲ್ಲಿ ಶಿವನ ಪಂಚಮಹಾಭೂತಗಳಿಗೆ ಸಂಬಂಧಿಸಿದ ೫ ಮಂದಿರಗಳಿವೆ. ಅವುಗಳಲ್ಲಿ ‘ಏಕಾಂಬರೇಶ್ವರ’ ವು ಶಿವನ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಮಂದಿರವಾಗಿದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರೊಂದಿಗೆ ನಾವು (ನಾನು, ಶ್ರೀ. ವಾಲ್ಮೀಕ ಭುಕನ, ಶ್ರೀ. ಸ್ನೇಹಲ ರಾವೂತ (ಆಧ್ಯಾತ್ಮಿಕ ಮಟ್ಟ ಶೇ. ೬೪, ವಯಸ್ಸು ೩೮ ವರ್ಷ) ಮತ್ತು ಶ್ರೀ. ವಿನೀತ ದೇಸಾಯಿ) ಆ ಮಂದಿರಕ್ಕೆ ಹೋದೆವು.

ಕಾಮಾಕ್ಷಿದೇವಿಯ ಶಲ್ಯ ಧರಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧ ಆ. ಮಂದಿರದಿಂದ ಹೊರಗೆ ಬಂದ ನಂತರ ಕೇವಲ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಪಾದರಕ್ಷೆಗಳು ಕಣ್ಮರೆಯಾಗುವುದು ಮತ್ತು ಹುಡುಕಿದರೂ ಸಿಗದಿರುವುದು: ಅದು ಸಂಜೆಯ ಸಮಯವಾಗಿತ್ತು. ನಾವು ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಮಂದಿರಕ್ಕೆ ಹೋದೆವು. ದೇವರ ದರ್ಶನವಾದ ನಂತರ ಹೊರಗೆ ಬಂದಾಗ ನಮ್ಮೆಲ್ಲ ಹುಡುಗರ ಪಾದರಕ್ಷೆಗಳಿದ್ದವು; ಆದರೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಪಾದರಕ್ಷೆಗಳು ಮಾತ್ರ ಕಾಣಿಸಲಿಲ್ಲ. ನಾನು ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಮಂದಿರದ ಹೊರಗೆ ನಿಂತೆವು ಮತ್ತು ಹತ್ತಿರದಲ್ಲೇ ಶ್ರೀ. ವಾಲ್ಮೀಕ ಭುಕನ, ಶ್ರೀ. ಸ್ನೇಹಲ ರಾವೂತ ಮತ್ತು ಶ್ರೀ. ವಿನೀತ ದೇಸಾಯಿ ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಪಾದರಕ್ಷೆಗಳನ್ನು ಹುಡುಕುತ್ತಿದ್ದರು.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ

೧ ಇ. ಒಬ್ಬ ಎತ್ತರದ ವ್ಯಕ್ತಿಯು ಹತ್ತಿರ ಬಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ ಕಾಂಚೀಪುರಂನಲ್ಲಿನ ಗುರುಪೂರ್ಣಿಮೆಯ ವಿಷಯವನ್ನು ಕೇಳುವುದು: ಅಷ್ಟರಲ್ಲಿ ಒಬ್ಬ ಎತ್ತರದ ವ್ಯಕ್ತಿ ನಮ್ಮ ಹತ್ತಿರ ಬಂದರು. ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಬಗ್ಗೆ ಗೌರವದಿಂದ ತಮ್ಮ ಕಾಲಿನ ಪಾದರಕ್ಷೆಗಳನ್ನು ತೆಗೆದು, ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಕಡೆ ನೋಡಿ ತಮಿಳು ಭಾಷೆಯಲ್ಲಿ, ”ನಾಳೆ ಗುರುಪೂರ್ಣಿಮೆ ಇದೆ. ‘ಕಾಂಚೀಪುರಂನಲ್ಲಿ ಗುರುಪೂರ್ಣಿಮೆಯನ್ನು ಎಲ್ಲಿ ಆಚರಿಸಲಾಗುತ್ತದೆ?’, ಇದು ನಿಮಗೆ ಗೊತ್ತಿದೆಯೇ?’’ ಎಂದು ಕೇಳಿದರು. ಅದಕ್ಕೆ ನಾನು, ”ಸ್ವಾಮಿ, ನಾವು ಕಾಂಚೀಪುರಂನ ನಿವಾಸಿಗಳಲ್ಲ. ಸದ್ಯಕ್ಕೆ ನಾವು ಚೆನ್ನೈನಲ್ಲಿ ಇರುತ್ತೇವೆ. ಕಾಂಚೀಪುರಂನ ಬಗ್ಗೆ ನಮಗೆ ಏನೂ ಗೊತ್ತಿಲ್ಲ’’ ಎಂದೆ. ಆಗ ಆ ವ್ಯಕ್ತಿಯು ಗುರುಪೂರ್ಣಿಮೆಯು ವ್ಯಾಸಋಷಿಗಳಿಗಾಗಿ ಇರುತ್ತದೆ. ಅದನ್ನು ವ್ಯಾಸಪೂರ್ಣಿಮೆ, ಎಂದೂ ಹೇಳುತ್ತಾರೆ ಎಂದರು.

೧ ಈ. ಹಣೆಯಲ್ಲಿ ವಿಭೂತಿಯ ತ್ರಿಪುಂಡ್ರ ಹೊಂದಿರುವ ಆ ವ್ಯಕ್ತಿ ಕಣ್ಮರೆಯಾಗುವುದು ಮತ್ತು ಹುಡುಕಿದರೂ ಸಿಗದಿರುವುದು: ಅಷ್ಟರಲ್ಲಿ ನಾವು ಪಾದರಕ್ಷೆಗಳನ್ನು ಹುಡುಕುತ್ತಿದ್ದ ಸಾಧಕರ ಬಳಿ ಹಿಂತಿರುಗಿ ನೋಡಿದೆವು ಮತ್ತು ಮತ್ತೆ ತಿರುಗಿ ಮುಂದೆ ನೋಡಿದೆವು, ಆಗ ಆ ವ್ಯಕ್ತಿ ಕಣ್ಮರೆಯಾಗಿದ್ದರು. ಆ ಸಮಯದಲ್ಲಿ ಮಂದಿರದಲ್ಲಿ ದರ್ಶನಕ್ಕಾಗಿ ಅನೇಕ ಭಕ್ತರು ಬಂದಿದ್ದರು. ನಾವು ಆ ವ್ಯಕ್ತಿಯನ್ನು ಹುಡುಕುತ್ತಾ ಬಹಳ ದೂರದ ವರೆಗೆ ಹೋದೆವು, ಆದರೂ ಆ ವ್ಯಕ್ತಿ ಎಲ್ಲೂ ಕಾಣಿಸಲಿಲ್ಲ. ಆ ವ್ಯಕ್ತಿಯ ಹಣೆಯ ಮೇಲೆ ವಿಭೂತಿಯ ತ್ರಿಪುಂಡ್ರ (ಟಿಪ್ಪಣಿ) ಇತ್ತು.

ಟಿಪ್ಪಣಿ: ತ್ರಿಪುಂಡ್ರ ಎಂದರೆ ವಿಭೂತಿಯ ಮೂರು ಅಡ್ಡಗೆರೆಗಳು. ಇದನ್ನು ಹಣೆಯ ಮೇಲೆ ಹಚ್ಚಲಾಗುತ್ತದೆ ಮತ್ತು ಇದು ಭಗವಾನ್‌ ಶಿವನಿಗೆ ಸಂಬಂಧಿಸಿದೆ.

೧ ಉ. ‘ಆ ವ್ಯಕ್ತಿಯು ಸಾಕ್ಷಾತ್‌ ಶಿವ ಆಗಿದ್ದರು’ ಎಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಹೇಳುವುದು: ಸ್ವಲ್ಪ ಸಮಯದ ನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ನಮಗೆ, ”ಆ ವ್ಯಕ್ತಿಯು ಬೇರೆ ಯಾರೂ ಅಲ್ಲ, ಸಾಕ್ಷಾತ್‌ ಶಿವನೇ ಆಗಿದ್ದರು’’ ಎಂದರು. ಇದೆಲ್ಲವೂ ೪-೫ ನಿಮಿಷಗಳಲ್ಲಿ ನಡೆಯಿತು. ಆ ಸಮಯದಲ್ಲಿ ನಮಗೆ ‘ಏನು ನಡೆಯುತ್ತಿದೆ?’, ಎಂದೇ ತಿಳಿಯಲಿಲ್ಲ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೨೦೧೬ ರಲ್ಲಿ ಪ.ಪೂ. ಗುರುದೇವರ ಅಮೃತಮಹೋತ್ಸವದ ಕೆಲವು ದಿನ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರು ಕಾಂಚೀಪುರಂನಲ್ಲಿರುವ ಕಾಮಾಕ್ಷಿದೇವಿಯ ಮಂದಿರಕ್ಕೆ ಬಂದಿದ್ದರು. ಆಗ ಮಂದಿರದ ಧರ್ಮದರ್ಶಿಗಳಾದ ಶ್ರೀ. ವಿಶ್ವನಾಥ ಶಾಸ್ತ್ರಿ ಅವರು ಶ್ರೀಸತ್‌ಶಕ್ತಿಯವರನ್ನು ಸನ್ಮಾನಿಸಿದರು ಮತ್ತು ಪ.ಪೂ. ಗುರುದೇವರಿಗೆ ಅಮೃತಮಹೋತ್ಸವದ ದಿನದಂದು ಉಡುಗೊರೆ ಎಂದು ಕಾಮಾಕ್ಷಿದೇವಿಯ ವಸ್ತ್ರವನ್ನು ನೀಡಿದರು. ಸಪ್ತರ್ಷಿಗಳ ಆಜ್ಞೆಯ ಮೇರೆಗೆ ಗುರುದೇವರು ತಮ್ಮ ಅಮೃತ ಮಹೋತ್ಸವದ ದಿನ ಈ ವಸ್ತ್ರವನ್ನು ಧರಿಸಿದರು.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ), ಕಾಂಚೀಪುರಂ, ತಮಿಳುನಾಡು.

ಶ್ರೀ. ವಿನಾಯಕ ಶಾನಭಾಗ

೨. ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಕಾಂಚೀಪುರಂನಲ್ಲಿ ನೆಲೆಸಲು ನಿರ್ಧರಿಸುವುದು

ಸಪ್ತರ್ಷಿಗಳ ಆಜ್ಞೆಯಂತೆ ೨೦೨೩ ರ ನವರಾತ್ರಿಯ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಆಪತ್ಕಾಲದ ದೃಷ್ಟಿಯಿಂದ ಚೆನ್ನೈಯನ್ನು ಬಿಟ್ಟು ಕಾಂಚೀಪುರಂಗೆ ನಿವಾಸಕ್ಕಾಗಿ ಹೋಗುವ ಸಿದ್ಧತೆಯನ್ನು ಪ್ರಾರಂಭಿಸಿದರು. ನಾವು ೨೦೨೩ ರಲ್ಲಿ ವಿಜಯದಶಮಿಯ ನಂತರ ೪ ದಿನಗಳಲ್ಲಿ ಕಾಂಚೀಪುರಂನಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಲು ಬಂದೆವು. ನಮ್ಮ ಪುರಾಣಗಳಲ್ಲಿ ಕಾಂಚೀಪುರಂಗೆ ‘ಭೂಕೈಲಾಸ’ ಎಂದೂ ಹೇಳಲಾಗಿದೆ. ಶಿವಪುರಾಣದಲ್ಲಿ ಶಿವನಿಗೆ ೨ ಕಣ್ಣುಗಳಿವೆ, ಅವುಗಳೆಂದರೆ ‘ಕಾಶಿ’ ಮತ್ತು ‘ಕಾಂಚಿ’ ಎಂದು ಹೇಳಲಾಗಿದೆ. ಕಾಶಿಯಲ್ಲಿ (ವಾರಣಾಸಿಯಲ್ಲಿ) ನಮ್ಮ ಸಾಧಕರಿದ್ದಾರೆ. ಈಗ ಶಿವನ ಕೃಪೆಯಿಂದ ಕಾಂಚಿಯಲ್ಲೂ ಅಂದರೆ ಕಾಂಚೀಪುರಂನಲ್ಲಿಯೂ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಆಶ್ರಮವಾಗುತ್ತಿದೆ, ಎಂದು ನಮಗೆ ಅನಿಸಿತು.

೩. ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ ಅನೇಕ ಬಾರಿ ಕಾಂಚೀಪುರಂಗೆ ಹೋಗಲು ಹೇಳುವುದು

ಜನವರಿ ೨೦೧೫ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಮೊದಲ ಬಾರಿಗೆ ಕಾಂಚೀಪುರಂಗೆ ಬಂದರು. ಏಪ್ರಿಲ್‌ ೨೦೧೫ ರಲ್ಲಿ ಅವರು ಜೀವನಾಡಿಪಟ್ಟಿಯ ಮೂಲಕ ಸಪ್ತರ್ಷಿಗಳ ಸಂಪರ್ಕಕ್ಕೆ ಬಂದರು. ೨೦೧೫ ರಿಂದ ೨೦೨೩ ರ ಈ ೮ ವರ್ಷಗಳ ಕಾಲಾವಧಿಯಲ್ಲಿ ಸಪ್ತರ್ಷಿಗಳು ೫೦ ಕ್ಕೂ ಹೆಚ್ಚು ಬಾರಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ ಕಾಂಚೀಪುರಂಗೆ ಹೋಗಲು ಹೇಳಿದರು ಮತ್ತು ಅದರಂತೆ ಅವರು ಅಷ್ಟೇ ಬಾರಿ ಹೋದರು.

೪. ಈಶ್ವರ, ಸಪ್ತರ್ಷಿಗಳು ಮತ್ತು ಗುರು ಅವರು ಸಾಧಕರಿಗೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರೊಂದಿಗೆ ಮುಂದೆ ಕಾಂಚೀಪುರಂನಲ್ಲಿ ನೆಲೆಸಲು ಬರುವ ವಿಷಯದ ದೈವೀ ಸಂಕೇತಗಳನ್ನು ನೀಡುವುದು ಮತ್ತು ನಂತರ ಅವುಗಳ ರಹಸ್ಯ ತಿಳಿದುಬರುವುದು

ಈಶ್ವರ, ಸಪ್ತರ್ಷಿಗಳು ಮತ್ತು ಗುರು ಅವರು ನಮಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ, ಮುಂದೆ ನಾವೆಲ್ಲ ಸಾಧಕರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರೊಂದಿಗೆ ಕಾಂಚೀಪುರಂನಂತಹ ತೀರ್ಥಕ್ಷೇತ್ರದಲ್ಲಿ ಹೋಗಿ ನೆಲೆಸಬೇಕಾಗುತ್ತದೆ, ಎಂದು ಸಂಕೇತಗಳನ್ನು ನೀಡುತ್ತಿದ್ದರು; ಆದರೆ ಈ ದೈವೀ ಸಂಕೇತಗಳು ಆ ಸಮಯದಲ್ಲಿ ನಮ್ಮ ಗಮನಕ್ಕೆ ಬರಲಿಲ್ಲ. ಈಗ ಮಾತ್ರ ನಿಜವಾಗಿ ನಮಗೆ ದೇವಿ ಕಾಮಾಕ್ಷಿಯ ಭೂಮಿಯಲ್ಲಿ ನೆಲೆಸುವ ಯೋಗ ಬಂದಿದೆ. ಆದ್ದರಿಂದ ‘ಇದೆಲ್ಲವೂ ಕಾಮಾಕ್ಷಿದೇವಿಯೇ ಮಾಡಿಸಿದ್ದಾಳೆ’, ಎಂದು ನಮ್ಮ ಗಮನಕ್ಕೆ ಬಂದಿತು. ಶ್ರೀ ಕಾಮಾಕ್ಷಿದೇವಿಗೆ ಮಾತ್ರ ಅವಳ ಲೀಲೆ ತಿಳಿದಿದೆ. ಆದ್ದರಿಂದ ‘ಶ್ರೀ ಕಾಮಾಕ್ಷಿದೇವ್ಯಾಃ ಚರಣಾರವಿಂದೇ ಮಮ ಶರಣಮ್‌!’ – ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ), ಕಾಂಚೀಪುರಂ, ತಮಿಳುನಾಡು.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ), ಕಾಂಚೀಪುರಂ, ತಮಿಳುನಾಡು.