
ಲಕ್ಷಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಮದರಸಾಗಳಿಗೆ ಹೊರಗಿನಿಂದ ಬರುವ ವಿದ್ಯಾರ್ಥಿಗಳು ಮತ್ತು ಮೌಲಾನಾಗಳ (ಇಸ್ಲಾಂ ಅಧ್ಯಯನಕಾರ) ಮಾಹಿತಿಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ನೀಡುವುದು ಕಡ್ಡಾಯಗೊಳಿಸುವ ನಿರ್ಧಾರವನ್ನು ರಾಜ್ಯ ಸರಕಾರವು ತೆಗೆದುಕೊಂಡಿದೆ. ದೆಹಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ಉತ್ತರ ಪ್ರದೇಶದಿಂದ ಡಾ. ಶಾಹೀನ್ ಸೇರಿದಂತೆ ಹಲವರನ್ನು ಬಂಧಿಸಿದ ನಂತರ ಸರಕಾರವು ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ರಾಜ್ಯದ ಎಲ್ಲಾ ಮಾನ್ಯತೆ ಪಡೆದ ಮತ್ತು ಅನಧಿಕೃತ ಮದರಸಾಗಳು ತಮ್ಮಲ್ಲಿಗೆ ಬರುವ ವಿದ್ಯಾರ್ಥಿಗಳು ಮತ್ತು ಮೌಲಾನಾಗಳ ಸಂಪೂರ್ಣ ಹೆಸರು, ಖಾಯಂ ವಿಳಾಸ, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ನೀಡಬೇಕಾಗುತ್ತದೆ. ಇದು ಕೇವಲ ಸಮೀಕ್ಷೆ ಅಲ್ಲ, ಬದಲಿಗೆ ಒಂದು ವ್ಯಾಪಕ ಭದ್ರತಾ ಪರಿಶೀಲನೆಯಾಗಿದೆ ಮತ್ತು ಇದರ ಮೂಲಕ ಹೊರಗಿನ ವ್ಯಕ್ತಿಗಳ ಗುರುತು ಆರಂಭಿಕ ಹಂತದಲ್ಲಿಯೇ ಪತ್ತೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
🚨Delhi Bomb Blast Probe: UP Tightens Madrasa Monitoring
Madrasas in Uttar Pradesh must now submit full details of all outside students & maulanas to the #UPATS name, address, Aadhaar, phone 📄🔍
Decision after arrests in the Red Fort bomb blast; why wasn’t this done… https://t.co/z34qO6xhUT pic.twitter.com/zeIT3YcTt0
— Sanatan Prabhat (@SanatanPrabhat) November 19, 2025
ಭದ್ರತಾ ಏಜೆನ್ಸಿಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ಅನೇಕ ಧಾರ್ಮಿಕ ಸಂಸ್ಥೆಗಳಲ್ಲಿ ಹೊರಗಿನ ರಾಜ್ಯಗಳಿಂದ ಬರುವ ಯುವಕರ ಸಂಖ್ಯೆ ಹಠಾತ್ತನೆ ಹೆಚ್ಚಾಗಿದೆ. ಇದರ ಮೇಲೆ ಭಯೋತ್ಪಾದನಾ ನಿಗ್ರಹ ದಳವು ವಿಶೇಷ ಗಮನ ಇರಿಸಿದೆ. ದೆಹಲಿ ಬಾಂಬ್ ಸ್ಫೋಟದ ತನಿಖೆಯಲ್ಲಿ ಲಕ್ಷ್ಮಣಪುರಿಯ ‘ಇಂಟಿಗ್ರಲ್’ ವಿಶ್ವವಿದ್ಯಾಲಯದ ಶಿಕ್ಷಕ ಪರ್ವೇಜ್ ಅನ್ಸಾರಿ ಎಂಬುವವರ ಹೆಸರು ಮುನ್ನೆಲೆಗೆ ಬಂದಿರುವ ಕಾರಣ ಈ ವಿಶ್ವವಿದ್ಯಾಲಯದ ಮೇಲೂ ಭದ್ರತಾ ರಕ್ಷಕರ ಸೂಕ್ಷ್ಮ ನಿಗಾ ಇದೆ.
ಸಂಪಾದಕೀಯ ನಿಲುವುಹೀಗೆ ಎಲ್ಲಾ ರಾಜ್ಯಗಳಲ್ಲಿ ಮೊದಲಿನಿಂದಲೇ ಏಕೆ ಮಾಡಲಿಲ್ಲ? ಅದಕ್ಕಾಗಿ ದೆಹಲಿ ಬಾಂಬ್ ಸ್ಫೋಟದಂತಹ ಘಟನೆ ಏಕೆ ನಡೆಯಬೇಕಾಯಿತು? ಈಗಲಾದರೂ ಇಂತಹ ನಿರ್ಧಾರವನ್ನು ದೇಶಾದ್ಯಂತ ತಕ್ಷಣವೇ ಜಾರಿಗೆ ತರಬೇಕು! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ