
ಅಮೆರಿಕಾದ ‘ಟ್ಯಾರಿಫ್’ (ಆಮದು ಸುಂಕ) ನೀತಿಯ ಅವಧಿಯಲ್ಲಿ ಇತ್ತೀಚೆಗೆ ದೇಶದಲ್ಲಿ ಸ್ವದೇಶಿ ತಂತ್ರಜ್ಞಾನದ ಕುರಿತು ವಾದ ವಿವಾದಗಳು ಹೆಚ್ಚುತ್ತಿವೆ. ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ಜನಪ್ರತಿನಿಧಿಗಳು ಈಗ ‘ಗೂಗಲ್’ ಮತ್ತು ‘ಮೈಕ್ರೋಸಾಫ್ಟ್’ನಂತಹ ಅಮೆರಿಕನ್ ಕಂಪನಿಗಳು ನೀಡುವ ಸೇವೆಗಳ ಬದಲಿಗೆ ಸ್ವದೇಶಿ ಕಂಪನಿಯಾದ ‘ಜೋಹೋ’ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ. ಈ ಸ್ವದೇಶಿ ‘ಇ-ಮೇಲ್’ ಸೇವೆಯು ವೇಗವಾಗಿ ‘ಗೂಗಲ್’ನ ‘ಜಿಮೇಲ್’ಗೆ ಪರ್ಯಾಯವಾಗುತ್ತಿದೆ. ಒಂದು ವೇಳೆ ನೀವು ‘ಮೈಕ್ರೋಸಾಫ್ಟ್’, ‘ಜಿಮೇಲ್’ ಅಥವಾ ‘ಝೂಮ್ ಮೀಟಿಂಗ್ಸ್’ ನಂತಹ ಸಾಧನಗಳಿಗೆ ಪರ್ಯಾಯವನ್ನು ಹುಡುಕುತ್ತಿದ್ದರೆ, ಸ್ವದೇಶಿ ಕಂಪನಿ ‘ಜೋಹೋ’ ಹೇಗೆ ಉತ್ತಮ ಆಯ್ಕೆಯಾಗಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
೧. ‘ಜೋಹೋ ಮೇಲ್’ ಇದು ‘ಜಿಮೇಲ್’, ‘ಔಟ್‌ಲುಕ್’ಗೆ ಪರ್ಯಾಯ
ಪ್ರಸ್ತುತ ಭಾರತದಲ್ಲಿ ಅತ್ಯಂತ ಜನಪ್ರಿಯ ಸೇವೆಗಳೆಂದರೆ ‘ಗೂಗಲ್’ನ ‘ಜಿಮೇಲ್’ ಮತ್ತು ‘ಮೈಕ್ರೋಸಾಫ್ಟ್’ನ ‘ಔಟ್‌ಲುಕ್’. ಇವುಗಳಿಗೆ ಸ್ಥಳೀಯ ಪರ್ಯಾಯವೇ ‘ಜೋಹೋ ಮೇಲ್’. ಇದು ಹೊಸ ವೈಶಿಷ್ಟ್ಯವಲ್ಲ; ಆದರೆ ‘ಜೋಹೋ ಮೇಲ್’ ಕಳೆದ ಅನೇಕ ವರ್ಷಗಳಿಂದ ಬಳಕೆಯಲ್ಲಿದೆ.
೧ ಅ. ಉಚಿತ ‘ಇ-ಮೇಲ್’ ಸಿದ್ಧಪಡಿಸುವುದು ಸುಲಭ !
‘ಮ್ಚೀಟ.ಞೊಹೊ.ಇಟಿ’ ವೆಬ್‌ಸೈಟ್‌ಗೆ ಭೇಟಿ ನೀಡಿ. ವೈಯಕ್ತಿಕ ಮತ್ತು ವೃತ್ತಿಪರ ಇ-ಮೇಲ್ ಗಾಗಿ ಆಯ್ಕೆಗಳಿವೆ. ಖಾತೆ ಸಿದ್ಧಪಡಿಸಲು ನಿಮ್ಮ ಮಾಹಿತಿಯನ್ನು ನಮೂದಿಸಿ. ನೀವು ಈ ‘ಇ-ಮೇಲ್’ ಅನ್ನು ಮೊಬೈಲ್ ಮತ್ತು ಕಂಪ್ಯೂಟರ್ ಎರಡರಲ್ಲೂ ಬಳಸಬಹುದು.
೧ ಆ. ‘ಜೋಹೋ ಮೇಲ್’ ಜನರ ಆದ್ಯತೆ ಏಕೆ ಆಗುತ್ತಿದೆ ?
೧. ಗೌಪ್ಯತೆಗೆ ಒತ್ತು :‘ಡೇಟಾ ಟ್ರ್ಯಾಕಿಂಗ್’ ಮತ್ತು ಜಾಹೀರಾತುಗಳಿಂದ ಮುಕ್ತವಾದ ಒಂದು ಸುರಕ್ಷಿತ ಅನುಭವ.
೨. ಜಾಹೀರಾತು ಮುಕ್ತ : ‘ಜಿಮೇಲ್’ನಂತೆ ಜಾಹೀರಾತುಗಳಿಲ್ಲ, ‘ಕ್ಲೀನ್ ಇಂಟರ್‌ಫೇಸ್’ (ಸಹಜ ಉಪಯೋಗಿಸಬಹುದಾದ).
೩. ‘ಕಸ್ಟಮ್ ಡೊಮೈನ್’ : ವೈಯಕ್ತಿಕಗೊಳಿಸಿದ ಇ-ಮೇಲ್ ಐಡಿ (ಉದಾಹರಣೆಗೆ : [email protected]).
೪. ವೃತ್ತಿಪರ ಸಾಧನಗಳು : ಸಂಪರ್ಕಗಳು, ಕ್ಯಾಲೆಂಡರ್ (ದಿನಚರಿ) ಮತ್ತು ‘ಜೋಹೋ ವರ್ಕ್‌ಪ್ಲೇಸ್’ನೊಂದಿಗೆ ಸುಲಭವಾದ ತಂಡದ ಕೆಲಸ (ಟೀಮ ವರ್ಕ).
೫. ಕೈಗೆಟಕುವ ದರ : ಕಡಿಮೆ ಬೆಲೆಯಲ್ಲಿ ವೃತ್ತಿಪರ ವೈಶಿಷ್ಟ್ಯಗಳು.
೬. ಪ್ರತಿಯೊಂದು ಉಪಕರಣದ ಮೇಲೆ (ಡಿವೈಸದ ಮೇಲೆ) ಲಭ್ಯ : ವೆಬ್, ಮೊಬೈಲ್ ಮತ್ತು ‘IMAP/SMTP
ಆಕ್ಸೆಸ್.’
೨. ‘ಗೂಗಲ್ ಡ್ರೈವ್’ ಬದಲಿಗೆ ‘ಜೋಹೋ ವರ್ಕ್‌ಡ್ರೈವ್’
ಇದು ಒಂದು ಕಡಿಮೆ ಬೆಲೆಯ ಪರ್ಯಾಯವಾಗಿದೆ. ‘ಜೋಹೋ ವರ್ಕ್‌ಡ್ರೈವ್’ನ ಆರಂಭಿಕ ಯೋಜನೆ (ಸ್ಟಾರ್ಟರ್ ಪ್ಲಾನ್) ರೂ. ೧೭೦/- ಗಳಿಂದ ಪ್ರಾರಂಭವಾಗುತ್ತದೆ ಮತ್ತು ೧ ಟಿಬಿ (ಟೆಟ್ರಾಬೈಟ್) ಸಂಗ್ರಹಣಾ ಸಾಮರ್ಥ್ಯವನ್ನು (ಸ್ಟೋರೇಜ್) ನೀಡುತ್ತದೆ. ನೀವು ಉಚಿತ ಬಳಕೆದಾರರಾಗಿದ್ದರೆ, ಜೋಹೋ ೫ ಜಿಬಿ (ಗೀಗಾಬೈಟ್) ಉಚಿತ ‘ಸ್ಟೋರೇಜ್’ ನೀಡುತ್ತದೆ.

‘ಜೋಹೋ’ನಲ್ಲಿ ಹಣ ನೀಡಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆಯಲು (‘ಪೇಯ್ಡ್ ಪ್ಲಾನ್’ಗಳಲ್ಲಿ) ಕಡಿಮೆ ಬೆಲೆಯ ಆಯ್ಕೆಗಳು ಲಭ್ಯವಿವೆ. ‘ ‘zoho.com/workdrive/ ’ಗೆ ಭೇಟಿ ನೀಡಿ. ನಿಮಗೆ ಹೆಚ್ಚುವರಿ ‘ಸ್ಟೋರೇಜ್’ ಅಗತ್ಯವಿದ್ದರೆ, ನಿಮಗೆ ಬೇಕಾದ ಪ್ಲಾನ್ ಅನ್ನು ಆಯ್ಕೆಮಾಡಿ. ‘ಪೇಯ್ಡ್ ಪ್ಲಾನ್’ಗಳಲ್ಲಿ ‘ಗೂಗಲ್’ಗಿಂತ ಕಡಿಮೆ ಬೆಲೆಯ ಆಯ್ಕೆಗಳು ಲಭ್ಯವಿವೆ.
೩. ‘ಅರಟ್ಟೈ’ಯ ‘ವಾಟ್ಸ ಆಪ್’ನೊಂದಿಗೆ ಸ್ಪರ್ಧೆ
ಇದರಲ್ಲಿ ‘ವಾಟ್ಸ ಆಪ್’ನ ಬಹುತೇಕ ಎಲ್ಲಾ ವೈಶಿಷ್ಟ್ಯಗಳಿವೆ. ಸಂದೇಶಗಳನ್ನು ಕಳುಹಿಸುವುದು, ವೀಡಿಯೊ ಕರೆ (ಧ್ವನಿಚಿತ್ರ ಸಂಪರ್ಕ), ಸಂಪರ್ಕಗಳಿಗಾಗಿ ವೈಶಿಷ್ಟ್ಯಗಳು ಇತ್ಯಾದಿ. ಮುಖ್ಯವಾಗಿ, ಬಳಕೆದಾರರು ತಕ್ಷಣವೇ ಸಾಧ್ಯವಾಗುವಂತಹ ಸಭೆಗಳ ವೇಳಾಪಟ್ಟಿಯನ್ನೂ ಯೋಜಿಸಬಹುದು.

ಮಹತ್ವದೆಂದರೆ ‘ಗೂಗಲ್ ಪ್ಲೇ ಸ್ಟೋರ್’ ಅಥವಾ ‘ಆಪಲ್ ಸ್ಟೋರ್’ಗಳಿಂದ ‘ಅರಟ್ಟೈ’ ‘ಡೌನ್‌ಲೋಡ್’ ಮಾಡಿ. ನೀವು ‘ವಾಟ್ಸ ಆಪ್’ನಂತೆಯೇ ಅದರಲ್ಲಿ ಖಾತೆಯನ್ನು ಸಿದ್ಧಪಡಿಸಬಹುದು. ಇದು ೧ ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ.
೪. ‘ಝೂಮ್ ಮೀಟಿಂಗ್ಸ್’ ಬದಲಿಗೆ ‘ಜೋಹೋ ಮೀಟಿಂಗ್ಸ್’
ಜೋಹೋ ಮೀಟಿಂಗ್ಸ್’ ಎಂಬುದು ಆನ್‌ಲೈನ್ ಸಭೆಗಳಿಗಾಗಿ ‘ಝೂಮ್’ ಮತ್ತು ‘ಗೂಗಲ್’ಗೆ ಪರ್ಯಾಯವಾಗಿದೆ. ‘ಝೂಮ್’ ೪೦ ನಿಮಿಷಗಳ ವರೆಗೆ ಸಭೆಗಳಿಗೆ ಉಚಿತ ಸಮಯವನ್ನು ನೀಡಿದರೆ, ‘ಜೋಹೋ’ ೬೦ ನಿಮಿಷಗಳ ವರೆಗೆ ಸಭೆಗಳಿಗೆ ಉಚಿತ ಸಮಯವನ್ನು ನೀಡುತ್ತದೆ.

‘ಝೂಮ್ ಮೀಟಿಂಗ್ಸ್’ಗಿಂತ ‘ಜೋಹೋ ಮೀಟಿಂಗ್ಸ್’ ಅಗ್ಗವಾಗಿದೆ. ‘ಞೊಹೊ.ಛಿಒಮ್/ಮೀಣೈಟಿಗ್’ಗೆ ಭೇಟಿ ನೀಡಿ ಮತ್ತು ಸಭೆಗಳನ್ನು ನಿಗದಿಪಡಿಸಲು ಪ್ರಾರಂಭಿಸಿರಿ. ಪಾವತಿಸುವ ಯೋಜನೆಗಳೂ (ಸಶುಲ್ಕ ಪ್ಲಾನ್) ಲಭ್ಯವಿದ್ದು, ಇದರ ಬೆಲೆಯು ‘ಝೂಮ್’ ನ ಅರ್ಧದಷ್ಟಿದೆ.
೫. …ಈ ‘ಜೋಹೋ ಟೂಲ್ಸ್’ಗಳನ್ನೂ ತಿಳಿದುಕೊಳ್ಳಿ…!

ಅ. ‘ಜೋಹೋ ಫಾರ್ಮ್ಸ್’ : ‘ಗೂಗಲ್ ಫಾರ್ಮ್ಸ್’ನ ಒಂದು ಭಾರತೀಯ ಪರ್ಯಾಯ. ನೀವು ಸಮೀಕ್ಷೆ ಅಥವಾ ಪ್ರತಿಕ್ರಿಯೆ ಫಾರ್ಮ್‌ಗಳನ್ನು ಸಿದ್ಧಪಡಿಸಬಹುದು.
ಆ. ‘ಜೋಹೋ ಕ್ಯಾಲೆಂಡರ್’ : ಸಭೆಗಳು ಮತ್ತು ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲು.
ಇ. ‘ಜೋಹೋ ನೋಟ್‌ಬುಕ್’ : ‘ಗೂಗಲ್ ಕೀಪ್’ ಅಥವಾ ‘ಎವರ್‌ನೋಟ್’ನಂತೆಯೇ ಒಂದು ಮೂಲ ‘ನೋಟ್-ಸೇವಿಂಗ್ ಟೂಲ್’. ನೀವು ಬರಹ, ‘ಆಡಿಯೋ’ (ಧ್ವನಿಮುದ್ರಿಕೆ), ಚಿತ್ರಗಳು(ಪ್ರತಿಮೆ) ಮತ್ತು ರೇಖಾಚಿತ್ರಗಳನ್ನೂ ಇದರಲ್ಲಿ ಸಂರಕ್ಷಿಸಿಡಬಹುದು.
ಈ. ‘ಉಲಾ ಬ್ರೌಝರ್’ : ‘ಗೂಗಲ್ ಕ್ರೋಮ್’ ಅಥವಾ ‘ಮೈಕ್ರೋಸಾಫ್ಟ್’ಗೆ ಸ್ಥಳೀಯ ಪರ್ಯಾಯ.
ಉ. ‘ಅರಟ್ಟೈ’: ಶೀಘ್ರದಲ್ಲೇ ಬಳಕೆದಾರರಿಗಾಗಿ ‘ಪೇಮೆಂಟ್ ಸಿಸ್ಟಮ್’ (ಹಣ ಪಾವತಿಸುವ ಸೌಲಭ್ಯ) ಅನ್ನು ಪರಿಚಯಿಸಲಿದೆ.
೬. ಕೆಲವು ಪ್ರಶ್ನೆಗಳಿಗೆ ಉತ್ತರಗಳು
ಅ. ಪ್ರಶ್ನೆ : ಜನರು ಸ್ವದೇಶಿ ತಂತ್ರಜ್ಞಾನದ ಮೇಲೆ ನಂಬಿಕೆ ಇಡಬಹುದೇ ?
ಉತ್ತರ : ಇಂದು ೧೦ ಲಕ್ಷಕ್ಕೂ ಹೆಚ್ಚು ಸಂಸ್ಥೆಗಳು ‘ಜೋಹೋ’ ಉತ್ಪನ್ನಗಳನ್ನು ಬಳಸುತ್ತವೆ. ಇದರ ಮಾದರಿಯು ಲಾಭದಾಯಕ ಮತ್ತು ವಿಶ್ವಾಸಾರ್ಹವಾಗಿದೆ. ‘ಕ್ಲೌಡ್ ಸ್ಟೋರೇಜ್’ನಲ್ಲಿ (ಇಂಟರ್ನೆಟ್‌ನಲ್ಲಿ ಹೆಚ್ಚಿನ ಪ್ರಮಾಣದ ಸಂಗ್ರಹಣೆಯ ಸ್ಥಳ) ‘ಗೂಗಲ್’ಗಿಂತ ಮೊದಲೇ ‘ಜೋಹೋ ವರ್ಕ್‌ಡ್ರೈವ್ ಲಾಂಚ್’ ಮಾಡಲಾಗಿತ್ತು.
ಆ. ಪ್ರಶ್ನೆ : ಜನರು ‘ವಾಟ್ಸ ಆಪ್’ನಿಂದ ‘ಅರಟ್ಟೈ’ ಕಡೆಗೆ ಏಕೆ ಹೊರಳುತ್ತಾರೆ ? ಅದರಲ್ಲಿ ಏನು ವಿಶೇಷವಿದೆ ?
ಉತ್ತರ : ‘ಅರಟ್ಟೈ’ ವು ಸಂದೇಶ ವಿನಿಮಯಕ್ಕೆ ಇತ್ತೀಚೆಗೆ ಪ್ರವೇಶಿಸಿಲ್ಲ. ೨೦೦೬ ರಲ್ಲಿ ‘ಜೋಹೋ ಕ್ಲಿಕ್’ ಎಂಬ ‘ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಲಾಂಚ್’ ಮಾಡಲಾಗಿತ್ತು. ಈ ಪ್ಲಾಟ್‌ಫಾರ್ಮ್ ಜಾಹೀರಾತುಗಳಿಲ್ಲದೆ ಇರುತ್ತದೆ. ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು.
ಇ. ಪ್ರಶ್ನೆ : ‘ಜೋಹೋ ವರ್ಕ್‌ಪ್ಲೇಸ್’ ಒಂದು ಅಗ್ಗದ ಆಯ್ಕೆಯೇ ?
ಉತ್ತರ : ‘ಜೋಹೋ ಪರಿಸರ ವ್ಯವಸ್ಥೆ’ಯನ್ನು ಬಳಸಿದರೆ, ಅದು ಇತರ ಕಂಪನಿಗಳಿಗಿಂತ ಅನೇಕ ವಿಷಯಗಳಲ್ಲಿ ಅಗ್ಗದ ಆಯ್ಕೆಯಾಗಿದೆ.
ಈ. ಪ್ರಶ್ನೆ : ಬಳಕೆದಾರರು ಗೂಗಲ್-ಮೈಕ್ರೋಸಾಫ್ಟ್‌ಗಳಿಂದ ‘ಜೋಹೋ ಪ್ಲಾಟ್‌ಫಾರ್ಮ್’ಗೆ ಏಕೆ ಹೋದರು ?
ಉತ್ತರ : ‘ಜೋಹೋ’ ಯಾವುದೇ ಪ್ಲಾಟ್‌ಫಾರ್ಮ್ ಬಿಟ್ಟು ನಮ್ಮನ್ನು ಸ್ವೀಕರಿಸಲು ಸಲಹೆ ನೀಡುವುದಿಲ್ಲ. ‘ಜೋಹೋ’ನಲ್ಲಿ ಮಾನವ ಸಂಪನ್ಮೂಲಗಳಿಂದ ಹಿಡಿದು ಬರವಣಿಗೆಯ ಸಾಧನಗಳ ವರೆಗೆ ೫೫ ಕ್ಕೂ ಹೆಚ್ಚು ಉತ್ಪನ್ನಗಳಿವೆ. ಅದು ಒಂದು ಸಂಪೂರ್ಣ ಪರಿಸರ ವ್ಯವಸ್ಥೆ ಆಗಿದೆ. ‘ಜೋಹೋ’ ಕೇವಲ ಒಂದು ಪರ್ಯಾಯವಲ್ಲ, ಆದರೆ ಹೊಸ ಆಕಾಂಕ್ಷೆಯಾಗಿದೆ.
(ಆಧಾರ: ದಿನಪತ್ರಿಕೆ ‘ದಿವ್ಯ ಮರಾಠಿ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು