ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ನೃತ್ಯದ ಶಾಸ್ತ್ರೀಯ ಮತ್ತು ಆಧ್ಯಾತ್ಮಿಕ ಪರಿಭಾಷೆ !

ಈ ಲೇಖನಮಾಲೆಯಲ್ಲಿ ಈ ವಾರ ನಾವು ‘ನೃತ್ಯ’ ಕಲೆಯ ವ್ಯಾಖ್ಯೆಯನ್ನು ನೋಡೋಣ. ‘ನೃತ್ಯವು ಸೃಷ್ಟಿಯಲ್ಲಿರುವ ಜೀವಗಳು ತಮ್ಮ ಆನಂದವನ್ನು ವ್ಯಕ್ತಪಡಿಸುವ ಒಂದು ಮಾಧ್ಯಮವಾಗಿದೆ. ನೃತ್ಯವನ್ನು ಸಾಧನೆಯೆಂದು ಮಾಡಿದರೆ, ಅದು ನಮಗೆ ಈಶ್ವರನ ಅನುಭೂತಿಯನ್ನು ನೀಡುತ್ತದೆ. ನೃತ್ಯದಿಂದ ಯೋಗವು ಸಾಧಿಸಲ್ಪಡುತ್ತದೆ. ನೃತ್ಯ ಮತ್ತು ಯೋಗ ಇವೆರಡೂ ದೇಹ ಮತ್ತು ಮನಸ್ಸಿನ ಏಕರೂಪತೆಯ ಮೇಲೆ ಒತ್ತು ನೀಡುತ್ತವೆ. ಯಾವ ರೀತಿ ಯೋಗದಲ್ಲಿ ಧ್ಯಾನದ ಸ್ಥಿತಿ ಇರುತ್ತದೆಯೋ, ಅದೇ ರೀತಿ ನರ್ತಕಿಯು ನೃತ್ಯದೊಂದಿಗೆ ಏಕರೂಪಳಾದಾಗ ಅವಳಿಗೂ ಇಂತಹ ಸ್ಥಿತಿಯು ಪ್ರಾಪ್ತವಾಗುತ್ತದೆ. ಕೂರ್ಮ ಪುರಾಣಕ್ಕನುಸಾರ, ನೃತ್ಯ ಮತ್ತು ಯೋಗದ ಸಂಕಲ್ಪನೆಯು ಆದಿನರ್ತಕನಾದ ಭಗವಾನ ಶಿವನಿಂದಲೇ ಅಸ್ತಿತ್ವದಲ್ಲಿದೆ. ಆದ್ದರಿಂದ, ನೃತ್ಯವೂ ಯೋಗದ ಅನುಭೂತಿಯನ್ನು ನೀಡುವ ಒಂದು ಉತ್ತಮ ಮಾರ್ಗವಾಗಿದೆ. ನೃತ್ಯವು ಕೇವಲ ದೈಹಿಕ ಚಲನವಲನವಾಗಿರದೇ ನಾಟ್ಯಶಾಸ್ತ್ರದಲ್ಲಿ ನೃತ್ಯವನ್ನು ಒಂದು ದೈವೀ ಕಲೆಯೆಂದು ನಂಬಲಾಗಿದೆ. (ಲೇಖನ ೪)


ಈ ಲೇಖನದಲ್ಲಿನ ಕೆಲವು ಸಂಜ್ಞೆಗಳ ಅರ್ಥ

೧. ಸ್ವರಗಳ ಪಟ್ಟಿ : ಸಪ್ತಕದಲ್ಲಿ ಯಾವ ಸ್ವರವನ್ನು ‘ಷಡ್ಜ’ (ಸಾ) ಎಂದು ಪರಿಗಣಿಸಿ ಮುಂದಿನ ಸ್ವರಗಳನ್ನು ಹಾಡಲಾಗುತ್ತದೆಯೋ ಅಥವಾ ನುಡಿಸಲಾಗುತ್ತದೆಯೋ, ಆ ‘ಸಾ’ ಸ್ವರವನ್ನು ‘ಸ್ವರಗಳ ಪಟ್ಟಿ’ ಎಂದು ಕರೆಯುತ್ತಾರೆ.

೨. ಸಪ್ತಕ : ಸಾ, ರೆ, ಗ, ಮ, ಪ, ಧ, ನೀ ಈ ಏಳು ಸ್ವರಗಳ ಸಮೂಹಕ್ಕೆ ‘ಸಪ್ತಕ’ ಎಂದು ಕರೆಯುತ್ತಾರೆ.

೩. ಮಾತ್ರಾ : ತಾಳದ ಪ್ರತಿಯೊಂದು ಭಾಗಕ್ಕೆ ‘ಮಾತ್ರಾ’ ಎಂದು ಕರೆಯುತ್ತಾರೆ.

೪. ಲಯ : ಎರಡು ಮಾತ್ರಾಗಳ ನಡುವಿನ ಸಮಾನ ವೇಗದ ಅಂತರ.

೫. ತಾಳ : ನಿಯಮಬದ್ಧವಾದ ಮಾತ್ರಾಗಳ ಸಮೂಹ.

೧. ನೃತ್ಯ

೧ ಅ. ವ್ಯುತ್ಪತ್ತಿ : ‘ನೃತ್’ ಎಂದರೆ ನೃತ್ಯ ಮಾಡುವುದು, ಅಭಿನಯಿಸುವುದು. ‘ನೃತ್’ ಎಂಬ ಧಾತುವಿನಿಂದ ನೃತ್ತ, ನೃತ್ಯ, ನರ್ತನ ಇತ್ಯಾದಿ ಶಬ್ದಗಳು ಉಂಟಾಗಿವೆ.

೧ ಆ. ವ್ಯಾಖ್ಯೆ : ಸಂಗೀತದ ಲಯದ ಮೇಲೆ ತಾಳಬದ್ಧ ಚಲನವಲನಗಳಿಂದ ವ್ಯಕ್ತವಾಗುವ ಕಲೆ, ಎಂದರೆ ನೃತ್ಯ.

೧ ಇ. ಸಮಾನಾರ್ಥಕ ಶಬ್ದ : ನಟನ (ಸಂಸ್ಕೃತ ಭಾಷೆಯ ಶಬ್ದ) ಅಂದರೆ ನರ್ತನ.

೨. ಭಾರತೀಯ ನೃತ್ಯದ ವಿಧಗಳು

‘ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ನೃತ್ಯವನ್ನು ‘ಮಾರ್ಗಿ (ಅಧಿಭೌತಿಕ)’ ಮತ್ತು ‘ದೇಶಿ (ಭೌತಿಕ)’ ಎಂಬ ಎರಡು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಅವುಗಳಲ್ಲಿ ಮಾರ್ಗಿ ಪ್ರಕಾರದಲ್ಲಿ ‘ತಾಂಡವ’ ಮತ್ತು ದೇಶಿ ಪ್ರಕಾರದಲ್ಲಿ ‘ಲಾಸ್ಯ’ ನೃತ್ಯಗಳು ಸೇರಿವೆ.’ (ಆಧಾರ : ಮರಾಠಿ ವಿಶ್ವಕೋಶ)

೩. ಭಾರತೀಯ ನೃತ್ಯ ಪ್ರಸ್ತುತಿಯ ಎರಡು ಪ್ರಮುಖ ಶೈಲಿಗಳು

೩ ಅ. ನಾಟ್ಯಧರ್ಮಿ : ಇದರಲ್ಲಿ ಶಾಸ್ತ್ರೀಯ ಮತ್ತು ನಿಯಮಬದ್ಧವಾಗಿ ಮಾಡಿದ ನೃತ್ಯಗಳು ಬರುತ್ತವೆ, ಉದಾ. ಭರತನಾಟ್ಯಮ್, ಕಥಕಲಿ, ಕಥಕ್‌ ಇತ್ಯಾದಿ.

೩ ಆ. ಲೋಕಧರ್ಮಿ : ಇದರಲ್ಲಿ ಜಾನಪದ ನೃತ್ಯ, ಪ್ರಾದೇಶಿಕ ಮತ್ತು ಸಂಪ್ರದಾಯಕ್ಕನುಸಾರ ಬದಲಾಗುವ ನೃತ್ಯಗಳು ಸೇರಿವೆ, ಉದಾ. ಗುಜರಾತಿನ ಗರಬಾ, ಅಸ್ಸಾಂನ ಬಿಹು ಇತ್ಯಾದಿ.

೪. ನೃತ್ಯದ ವಿಧಗಳು

ನರ್ತನದ ವಿಧಗಳೆಂದರೆ ‘ನಟನಭೇದ’ಗಳು. ಆಚಾರ್ಯ ನಂದಿಕೇಶ್ವರರು ರಚಿಸಿದ ‘ಅಭಿನಯದರ್ಪಣಮ್’ ಎಂಬ ಶಾಸ್ತ್ರೀಯ ನೃತ್ಯದ ಪ್ರಮಾಣಭೂತ ಆಧಾರವಾಗಿರುವ ಗ್ರಂಥಕ್ಕನುಸಾರ, ಭರತಮುನಿಗಳು ಮತ್ತು ಇತರರ ಅಭಿಪ್ರಾಯಕ್ಕನುಸಾರ ನೃತ್ಯದ ೩ ಭಾಗಗಳು (ಭೇದಗಳು) ಇವೆ – ನೃತ್ತ, ನೃತ್ಯ ಮತ್ತು ನಾಟ್ಯ. ಈ ಭೇದಗಳು ನಾಲ್ಕು ಪ್ರಕಾರದ ಅಭಿನಯಗಳೊಂದಿಗೆ ಜೋಡಿಸಲ್ಪಟ್ಟಿವೆ. ಭರತಮುನಿಗಳ ನಾಟ್ಯಶಾಸ್ತ್ರದಲ್ಲಿ ನೃತ್ಯವನ್ನು ‘ಆಂಗಿಕ (ಶರೀರದ ಚಲನವಲನ), ವಾಚಿಕ (ಸಂಭಾಷಣೆ), ಆಹಾರ್ಯ (ವೇಷಭೂಷಣ) ಮತ್ತು ಸಾತ್ತ್ವಿಕ (ಭಾವ)’ ಎಂಬ ಅಂಗಗಳಿಂದ ವ್ಯಾಖ್ಯಾನಿಸಲಾಗಿದೆ.

೪ ಅ. ನೃತ್ತ

೪ ಅ ೧. ವ್ಯಾಖ್ಯೆ

ಭಾವಾಭಿನಯಹೀನಂ ತು ನೃತ್ತಮಿತ್ಯಭಿಧೀಯತೇ | – ಆಚಾರ್ಯ ನಂದಿಕೇಶ್ವರ ರಚಿತ ಅಭಿನಯದರ್ಪಣಮ್, ಶ್ಲೋಕ ೧೫

ಅರ್ಥ : ಭಾವ ಮತ್ತು ಅಭಿನಯಗಳಿಲ್ಲದೆ, ಯಾವುದರಲ್ಲಿ ತಾಳ, ಲಯ, ಪಾದವಿನ್ಯಾಸ ಮತ್ತು ದೇಹದ ಚಲನವಲನಗಳು ಸೇರಿವೆಯೋ ಅದು ‘ನೃತ್ತ’ವಾಗಿದೆ.

೪ ಅ ೨. ಆಧ್ಯಾತ್ಮಿಕ ಮಹತ್ವ : ಆಧುನಿಕ ನೃತ್ಯಶಾಸ್ತ್ರಜ್ಞರು ಅಥವಾ ಕಲಾವಿದರು ಹೇಳುತ್ತಿರುವ ನಾಟ್ಯಶಾಸ್ತ್ರದ ತತ್ತ್ವಜ್ಞಾನದ ಮೇಲೆ ಆಧರಿಸಿದ ಮುಂದಿನ ವಾಕ್ಯಗಳಿಂದ ನೃತ್ಯದ ಮಹತ್ವವು ಗಮನಕ್ಕೆ ಬರುತ್ತದೆ.

ಅ. ನೃತ್ಯವು ಧ್ಯಾನದಂತಿದೆ. ಶರೀರವು ಸತತವಾಗಿ ಅಲುಗಾಡುತ್ತದೆ; ಆದರೆ ಮನಸ್ಸು ಒಂದು ಲಯದ ಮೇಲೆ ಅಖಂಡವಾಗಿ ಏಕಾಗ್ರವಾಗುತ್ತದೆ, ಇದರಿಂದ ಚಿತ್ತವೃತ್ತಿನಿರೋಧ (ಟಿಪ್ಪಣಿ ೧) ಸಾಧ್ಯವಾಗುತ್ತದೆ.

ಟಿಪ್ಪಣಿ ೧ – ಚಿತ್ತವೃತ್ತಿನಿರೋಧ : ಮನಸ್ಸಿನಲ್ಲಿ ಮೂಡುವ ವಿಚಾರಗಳು, ಭಾವನೆಗಳು ಅಥವಾ ತರಂಗಗಳ ಏರಿಳಿತಗಳ ಮೇಲೆ ನಿಯಂತ್ರಣ ವನ್ನು ಸಾಧಿಸಿ ಮನಸ್ಸನ್ನು ಸ್ಥಿರ ಮತ್ತು ಶಾಂತಗೊಳಿಸುವುದು.

ಆ. ನೃತ್ಯದಲ್ಲಿನ ಲಯ ಎಂದರೆ ಸಂಪೂರ್ಣ ಬ್ರಹ್ಮಾಂಡದ ಗತಿ ಮತ್ತು ಅದರಲ್ಲಿನ ಜೀವಂತ ಸ್ಪಂದನಗಳು (ಚೇತನ) ಆಗಿವೆ.

೪ ಆ. ನೃತ್ಯ

೧. ರಸಭಾವವ್ಯಞ್ಜಕಾದಿಯುಕ್ತಂ ನೃತ್ಯಮಿತೀರ್ಯತೇ | – ಆಚಾರ್ಯ

ನಂದಿಕೇಶ್ವರ ರಚಿತ ಅಭಿನಯದರ್ಪಣಮ್, ಶ್ಲೋಕ ೧೬

ಅರ್ಥ : ರಸ, ಭಾವ ಮತ್ತು ವ್ಯಂಜಕ (ಅಭಿನಯ) ಇತ್ಯಾದಿಗಳಿಂದ ಕೂಡಿದ ಕಲೆಗೆ ನೃತ್ಯ ಎಂದು ಕರೆಯುತ್ತಾರೆ.

೨. ‘ತಾಲ, ಅಭಿನಯ ಮತ್ತು ಲಾಲಿತ್ಯ (ಸೌಂದರ್ಯ) ಈ ಮೂರು ಕಲೆಗಳ ಮನೋಹರ ಸಂಗಮವೇ ನೃತ್ಯ.’ (ಆಧಾರ : ಭಾರತೀಯ ಸಂಸ್ಕೃತಿಕೋಶ, ಖಂಡ ೫, ಪುಟ ೧೭೪)

೪ ಇ. ನಾಟ್ಯ

ನಾಟ್ಯಂ ತನ್ನಾಟಕಂ ಚೈವ ಪೂಜ್ಯಂ ಪೂರ್ವಕಥಾಯುತಮ್‌ |

– ಆಚಾರ್ಯ ನಂದಿಕೇಶ್ವರ ರಚಿತ ಅಭಿನಯದರ್ಪಣಮ್, ಶ್ಲೋಕ ೧೫

ಅರ್ಥ : ನಾಟ್ಯವೆಂದರೆ ‘ನಾಟಕ’. ಇದರಲ್ಲಿ ಪ್ರಾಚೀನ ಕಥೆಗಳ ಆಧಾರವಿರುವುದರಿಂದ, ಅದನ್ನು ಅತ್ಯಂತ ಪೂಜನೀಯವೆಂದು ನಂಬಲಾಗಿದೆ.

೪ ಇ ೧. ವ್ಯುತ್ಪತ್ತಿ : ಮೂಲ ಸಂಸ್ಕೃತ ಧಾತು ‘ನಟ್’ (ಅಭಿನಯಕ್ರಿಡಾಯಾಮ್) ಇದರ ಅರ್ಥ ‘ಅಭಿನಯ ಮಾಡು ವುದು’, ‘ಆಟ ಆಡುವುದು’ ಅಥವಾ ‘ರೂಪವನ್ನು ಧಾರಣೆ ಮಾಡುವುದು’ ಎಂದಾಗುತ್ತದೆ. ನಾಟ್ಯವೆಂದರೆ ‘ನಟರು ಮಾಡಿದ ಅಭಿನಯ ಅಥವಾ ನಾಟ್ಯಕಲೆ.’

ತ್ರೇತಾಯುಗದ ಆರಂಭದ ಭರತನ ಕಾಲದಲ್ಲಿ ನಾಟ್ಯದಲ್ಲಿ ‘ನೃತ್ಯ’ ಮತ್ತು ‘ನೃತ್ತ’ ಎಂಬ ನರ್ತನದ ಎರಡೂ ಅಂಗಗಳು ಹಾಗೂ ಸಂಗೀತ ಇವುಗಳ ಸೇರ್ಪಡೆ ಆಗುತ್ತಿತ್ತು. ಭರತಮುನಿಗಳ ನಾಟ್ಯಶಾಸ್ತ್ರದಲ್ಲಿನ ನಟನ ಭೇದಗಳ ಪ್ರಕಾರ, ‘ನಾಟ್ಯ’ವು ಕೇವಲ ಆಧುನಿಕ (ಸದ್ಯ ಸಮಾಜದಲ್ಲಿ ಪ್ರಚಲಿತವಿರುವ) ನಾಟಕಗಳಿಗೆ ಮಾತ್ರ ಸೀಮಿತವಾಗಿರದೇ ಅದರಲ್ಲಿ ಗೀತೆ, ವಾದ್ಯ, ನೃತ್ಯ ಮತ್ತು ಅಭಿನಯ ಈ ಎಲ್ಲ ಕಲೆಗಳ ಸಮನ್ವಯವನ್ನು ಪರಿಗಣಿಸಲಾಗಿದೆ.

೪ ಇ ೨. ನಾಟ್ಯಶಾಸ್ತ್ರದ ತತ್ತ್ವಜ್ಞಾನದ ಆಧಾರದಲ್ಲಿ ನಾಟಕದಪರಿಭಾಷೆ : ‘ನಾಟ್ಯವು (ನಾಟಕವು) ಅನೇಕ ಪ್ರಕಾರದ ಕರ್ಮಗಳನ್ನು ದರ್ಶಿಸುತ್ತದೆ. ನಾಟ್ಯವು ತ್ರಿಲೋಕದ ‘ಭಾವಾನುಕೀರ್ತನ’ (ಟಿಪ್ಪಣಿ ೨) ಆಗಿರುತ್ತದೆ. ಅದು ವಿವಿಧ ಪ್ರಕಾರಗಳ ವೃತ್ತಿ ಮತ್ತು ಪ್ರವೃತ್ತಿಗಳ ದರ್ಶನವಾಗಿರುತ್ತದೆ. ಸಂಪೂರ್ಣ ವಿಶ್ವದ ವ್ಯವಹಾರದಲ್ಲಿನ ಎಲ್ಲ ಭಾವ-ಭಾವನೆಗಳ ವರ್ಣನೆಯ ಮೂಲಕ ನಾಟ್ಯವು ಪ್ರಕಟವಾಗುತ್ತದೆ.’

ಟಿಪ್ಪಣಿ ೨ – ಭಾವಾನುಕೀರ್ತನ : ಭಾವಾನುಕೀರ್ತನ ಎಂದರೆ ಜಗತ್ತಿನಲ್ಲಿನ ಜನರ ಆಚಾರ-ವಿಚಾರಗಳು ಮತ್ತು ಅವರ ಜೀವನದಲ್ಲಿನ ವಿವಿಧ ಭಾವ-ಭಾವನೆಗಳ ಅನುಕರಣೆ ಮಾಡಿ, ಅದನ್ನು ರಂಗಮಂಟಪದ ಮೇಲೆ ಪ್ರಸ್ತುತಪಡಿಸುವುದು.

‘ಮೇಲಿನ ಆಧ್ಯಾತ್ಮಿಕ ಪರಿಭಾಷೆಯನ್ನು ನೋಡಿದರೆ, ಕಲೆಗಳ ಪ್ರಸ್ತುತಿಗೆ ಸಾಧನೆಯನ್ನು ಜೋಡಿಸಿದರೆ, ಈ ಕಲೆಗಳ ಮೂಲಕ ಅಧ್ಯಾತ್ಮದಲ್ಲಿನ ಉಚ್ಚ ಅನುಭೂತಿಯನ್ನು ಪಡೆಯಬಹುದಾಗಿದೆ.’

ಸಂಕಲನಕಾರರು : ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೮ ವರ್ಷಗಳು), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೧೪.೮.೨೦೨೫)

‘ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ; ಆದ್ದರಿಂದ ಪೃಥ್ವಿ, ಆಪ, ತೇಜ ಮತ್ತು ವಾಯು ಈ ತತ್ತ್ವಗಳೊಂದಿಗೆ ಸಂಬಂಧಿಸಿದ ಕಲೆಗಳಿಗಿಂತ ಸಂಗೀತಕ್ಕೆ ಸಂಬಂಧಿಸಿದ ಅನುಭೂತಿಗಳು ಮೇಲಿನ ಸ್ತರದ್ದಾಗಿರುತ್ತವೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ.

೫. ಆಧ್ಯಾತ್ಮಿಕ ಪರಿಭಾಷೆಯಲ್ಲಿ ನೃತ್ಯಕಲೆ !

ಸನಾತನದ ಸೂಕ್ಷ್ಮಜ್ಞಾನಪ್ರಾಪ್ತಿಯಾಗುವ ಸಾಧಕ ಶ್ರೀ. ರಾಮ ಹೊನಪರಿಗೆÀ ದೊರೆತ ನೃತ್ಯದ ಆಧ್ಯಾತ್ಮಿಕ ಪರಿಭಾಷೆಗಳ ಜ್ಞಾನವನ್ನು ಮುಂದೆ ನೀಡಲಾಗಿದೆ.

ಶ್ರೀ. ರಾಮ ಹೊನಪ

ಅ. ‘ಆತ್ಮಸಂಗೀತದ ಜಾಗೃತಾವಸ್ಥೆ’, ಅಂದರೆ ನೃತ್ಯ.

ಆ. ಅಲ್ಪಾವಧಿಯಲ್ಲಿ ಶಿವನನ್ನು ಪ್ರಸನ್ನಗೊಳಿಸುವ ಉಪಾಸನಾ ಪದ್ಧತಿಯೇ ನೃತ್ಯ.

ಇ. ಜೀವ (ಸಾಧಕ) ಮತ್ತು ಶಿವ (ಭಗವಂತ) ಇವರನ್ನು (ಪರಸ್ಪರರೊಂದಿಗೆ) ಶರೀರದ ಮೂಲಕ ಜೋಡಿಸುವ ಮಾಧ್ಯಮವೆಂದರೆ ನೃತ್ಯ.

ಈ. ಮನಸ್ಸು, ಬುದ್ಧಿ ಮತ್ತು ಶರೀರದ ಅರಿವನ್ನು ಕಳೆದುಕೊಂಡು ದೇವರಿಗೆ ಸಮರ್ಪಿತವಾಗುವ ಮಾಧ್ಯಮವೆಂದರೆ ನೃತ್ಯ. (ಟಿಪ್ಪಣಿ ೩)

ಉ. ಭಗವಂತನ ಕಲಾತ್ಮಕ ಸ್ವರೂಪದ ವ್ಯಕ್ತ ಆವಿಷ್ಕಾರವೆಂದರೆ ನೃತ್ಯ.

ಊ. ಭಗವಂತನ ಮಿಲನಕ್ಕಾಗಿ ದೇಹದ ಮಾಧ್ಯಮದಿಂದ ಭಕ್ತನು ವ್ಯಕ್ತಪಡಿಸಿದ ವ್ಯಾಕುಲತೆ, ಎಂದರೆ ನೃತ್ಯ.

ಎ. ಭಗವಂತನಿಗಾಗಿ ದೇಹಾಭಿಮಾನವನ್ನು ಬಿಡುವ ಉತ್ತಮ ಸಾಧನವೇ ನೃತ್ಯ.

ಏ. ಭಾವಾವಸ್ಥೆಯ ದೇಹದ ರೂಪದಲ್ಲಿ ಪ್ರಕಟೀಕರಣವೇ ಈಶ್ವರೀಯ ನೃತ್ಯ.

ಟಿಪ್ಪಣಿ ೩ – ಸಂಗೀತದಲ್ಲಿ ವ್ಯಕ್ತಿಯ ವಿಶಿಷ್ಟ ಅಂಗಗಳ ಪಾಲ್ಗೊಳ್ಳುವಿಕೆ ಇರುತ್ತದೆ, ಆದರೆ ನೃತ್ಯದಲ್ಲಿ ಸರ್ವಾಂಗಗಳ ಪಾಲ್ಗೊಳ್ಳುವಿಕೆ ಇರುತ್ತದೆ. ಆದ್ದರಿಂದ ಸಂಗೀತದ ಮಾಧ್ಯಮದಿಂದ ಪರಮೇಶ್ವರನ ಆರಾಧನೆ ಮಾಡುವಾಗ ಸಾಧಕನು ಹಂತ ಹಂತವಾಗಿ ಸಮರ್ಪಿತನಾಗುವ ಪ್ರಕ್ರಿಯೆ ನಡೆಯುತ್ತದೆ. ಆದರೆ ನೃತ್ಯದ ಮಾಧ್ಯಮದಿಂದ ಭಗವಂತನಿಗೆ ಸಮರ್ಪಿತರಾಗುವ ಕ್ರಿಯೆಯು ಸಂಗೀತಕ್ಕೆ ಹೋಲಿಸಿದರೆ ವೇಗವಾಗಿ ಆಗುತ್ತದೆ.’

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ

ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಸನಾತನ ಪ್ರಭಾತ’ದಲ್ಲಿ ಪ್ರತಿವಾರ ‘ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಈ ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆಯ ಪ್ರಾಸ್ತಾವಿಕ ವಿವೇಚನೆ !’ ಎಂಬ ಲೇಖನಮಾಲೆಯನ್ನು ನೀಡುತ್ತಿದ್ದೇವೆ. ಈ ಲೇಖನಮಾಲೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ‘ಕಲೆಗಳನ್ನು ಸಾಧನೆಯ ದೃಷ್ಟಿಯಿಂದ ಹೇಗೆ ನೋಡಬೇಕು ?’ ಎಂಬ ದೃಷ್ಟಿಕೋನದಿಂದ ಮಾರ್ಗದರ್ಶನ ನೀಡಿದ ಲೇಖನಗಳು ಇರಲಿವೆ. ನಿಮ್ಮ ಸಂಪರ್ಕದಲ್ಲಿರುವ ಕಲಾಪ್ರೇಮಿಗಳು, ಕಲಾವಿದರು ಮತ್ತು ಕಲಾ ಆಸಕ್ತರ ವರೆಗೆ ಈ ಲೇಖನಗಳನ್ನು ತಲುಪಿಸಲು ಪ್ರಯತ್ನಿಸಿ.

ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಿ.

– ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸಂಪರ್ಕಕ್ಕಾಗಿ ವಿಳಾಸ

ಶ್ರೀ. ಅಭಿಜಿತ ಸಾವಂತ

ಸಂಪರ್ಕ ಸಂಖ್ಯೆ : 8793678178

ವಿ-ಅಂಚೆ : [email protected]