
ಅಝರಬೈಜಾನ್‌ನಲ್ಲಿ ನಡೆದ (೧೧ ರಿಂದ ೨೨ ನವೆಂಬರ್ ೨೦೨೪ ಈ ಅವಧಿಯಲ್ಲಿ) ಜಾಗತಿಕ ಹವಾಮಾನ ಪರಿಷತ್ತಿಗೆ (ಸಿಓಪಿ ೨೯ ಪರಿಷತ್ತಿಗೆ)’ ಸಂಬಂಧಿಸಿದ ಒಂದು ವಾರ್ತೆ ಓದಿದೆ. ನಿಜ ನೋಡಿದರೆ, ‘ಪೃಥ್ವಿಯ ತಾಪಮಾನ ಹೆಚ್ಚಳ’ ಈ ವಿಷಯ ಜಗತ್ತಿನಾದ್ಯಂತದ ಎಲ್ಲ ರಾಷ್ಟ್ರಗಳಿಗೆ ಆದ್ಯತೆಯ ಹಾಗೂ ನಾಗರಿಕರ ಪ್ರಮುಖ ವಿಷಯ ಆಗಿರಬೇಕು; ಆದರೆ ಈ ವಿಷಯದಲ್ಲಿಯೂ ಜಗತ್ತು ಶ್ರೀಮಂತ ಜಗತ್ತಿನ ವಿರುದ್ಧ ಬಡವರ ಜಗತ್ತು, ಹೀಗೆ ವಿಭಜಿಸಿರುವುದು ಕಾಣಿಸುತ್ತದೆ. ನಾಳೆ ಪೃಥ್ವಿಯ ತಾಪಮಾನ ಹೆಚ್ಚಳದಿಂದ ಅಥವಾ ಹವಾಮಾನದಿಂದ ಸಂಪೂರ್ಣ ಜಗತ್ತಿನಲ್ಲಿ ಏನೆಲ್ಲ ನೈಸರ್ಗಿಕ ಆಪತ್ತುಗಳು ಬರುವವೊ, ಅದರಲ್ಲಿ ನಿಸರ್ಗ ಉತ್ತರ ಅಥವಾ ದಕ್ಷಿಣ ಜಗತ್ತು ಎಂದು ವಿಭಜಿಸುವುದಿಲ್ಲ ಅಥವಾ ಅದರ ಬೆಲೆಯನ್ನು ಕೇವಲ ವಿಕಸಿತ ಹಾಗೂ ಅವಿಕಸಿತ ದೇಶಗಳಷ್ಟೇ ತೆರಬೇಕಾಗಿರುವುದಲ್ಲ. ಇಂದು ಯುರೋಪ್, ಅಮೇರಿಕಾ ಹಾಗೂ ಮಧ್ಯ ಏಶಿಯಾ ಇವು ಹವಾಮಾನ ಬದಲಾವಣೆಯಿಂದ ವರ್ಷವಿಡೀ ಆಗುವ ನೈಸರ್ಗಿಕ ಆಪತ್ತುಗಳನ್ನು ಎದುರಿಸುತ್ತಿವೆ.

೧. ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಬಗ್ಗೆ ಅಮೇರಿಕಾ ಸಹಿತ ಯುರೋಪಿಯನ್ ರಾಷ್ಟ್ರಗಳ ಉದಾಸೀನತೆ
ಕೆಲವೇ ತಿಂಗಳ ಹಿಂದೆ ಫ್ರಾನ್ಸ್, ಇಟಲಿ ಈ ದೇಶಗಳಲ್ಲಿ ಉದ್ಭವಿಸಿರುವ ನೆರೆಹಾವಳಿ ಸಹಿತ ಕೆಲವು ತಿಂಗಳ ಹಿಂದೆ ಸ್ಪೇನ್‌ನಲ್ಲಿ ಟೂರಿಯಾ ನದಿಗೆ ಬಂದಿರುವ ಮಹಾಪ್ರವಾಹದಿಂದ ನೂರಾರು ಜನರು ಜೀವ ಕಳೆದುಕೊಂಡಿದ್ದಾರೆ ಹಾಗೂ ಕೋಟಿ ಗಟ್ಟಲೆ ಡಾಲರ್ಸ್‌ಗಳಷ್ಟು ಹಾನಿಯಾಗಿದೆ. ಅನಂತರವೂ ಪರಿಸರ ಮತ್ತು ತಾಪಮಾನ ಹೆಚ್ಚಳದ ವಿಷಯದಲ್ಲಿ ಈ ರಾಷ್ಟ್ರಗಳು ಗಂಭೀರವಾಗಿ ವಿಚಾರ ಮಾಡುವುದು ಕಾಣಿಸುವುದಿಲ್ಲ. ಅಮೇರಿಕಾದಲ್ಲಿ ಆರಿಸಿ ಬಂದಿರುವ ಹೊಸ ರಾಷ್ಟ್ರಾಧ್ಯಕ್ಷರಂತೂ ‘ಗ್ಲೋಬಲ್ ವಾರ್ಮಿಂಗ್’ (ಜಾಗತಿಕ ತಾಪಮಾನ ಹೆಚ್ಚಳ) ಎನ್ನುವ ವಿಷಯವನ್ನೇ ಒಪ್ಪುವುದಿಲ್ಲ. ಆದ್ದರಿಂದ ಇನ್ನು ಮುಂದೆ ಅಮೇರಿಕಾದ ‘ಗ್ಲೋಬಲ್ ವಾರ್ಮಿಂಗ್’ನ ವಿಷಯದಲ್ಲಿ ಮತ್ತು ಅಮೇರಿಕಾವನ್ನು ಹಿಂಬಾಲಿಸುವ ಇನ್ನಿತರ ಯುರೋಪಿಯನ್ ರಾಷ್ಟ್ರಗಳ ದೃಷ್ಟಿಕೋನ ಹೇಗಿರಬಹುದು, ಎಂಬುದು ತಿಳಿಯುತ್ತದೆ. ಅಝರ್‌ಬೈಜಾನ್‌ನ ಪರಿಷತ್ತಿನಲ್ಲಿ ವಾಯುಮಾಲಿನ್ಯಗೊಳಿಸುವ ೧೩ ಪ್ರಮುಖ ದೇಶಗಳ ಉಪಸ್ಥಿತಿಯೇ ಇರಲಿಲ್ಲವೆಂದರೆ ಈ ಪರಿಷತ್ತನ್ನು ಧೂಳೀಪಟ ಮಾಡಿದಂತೆಯೆ ಆಗಿದೆ. ಕಳೆದ ಪರಿಷತ್ತಿನಲ್ಲಿ ೨೦೩೦ ರ ವರೆಗೆ ಪಾರಂಪರಿಕವಲ್ಲದ ಊರ್ಜೆ ನಿರ್ಮಾಣವನ್ನು ೧೧ ಟೆರಾವ್ಯಾಟ್‌ನ ವರೆಗೆ ಒಯ್ಯುವುದು ಎಂದು ನಿರ್ಧರಿಸಲಾಗಿತ್ತು; ಆದರೆ ಕಳೆದ ವರ್ಷಗಳಲ್ಲಿ ಈ ವಿಷಯದಲ್ಲಿ ಯಾವುದೇ ದೇಶ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂದರೆ ಇದು ಈ ಪರಿಷತ್ತಿನ ಉದ್ದೇಶಕ್ಕೆ ತಣ್ಣೀರೆರಚಿದಂತೆಯೆ ಆಗಿದೆ.
೨. ಪರಿಸರ ಜಾಗೃತಿ ಇಲ್ಲದಿರುವುದು ಆಶ್ಚರ್ಯಕರ !
ಜಗತ್ತಿನಾದ್ಯಂತದ ನಾಗರಿಕರಲ್ಲಿಯೂ ಜಾಗತಿಕ ಹವಾಮಾನ ಬದಲಾವಣೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇರುವುದು ಕಾಣಿಸುವುದಿಲ್ಲ. ಯುರೋಪ್‌ನಲ್ಲಿನ ಕೆಲವು ದೇಶಗಳನ್ನು ಬಿಟ್ಟರೆ ಉಳಿದ ಎಲ್ಲ ರಾಷ್ಟ್ರಗಳಲ್ಲಿ ಆನಂದವೇ ಆನಂದವಿದೆ. ಭಾರತದಲ್ಲಿ ನೋಡಿದರೆ, ಮುಂಬಯಿಯಂತಹ ಜಾಗತಿಕ ಮಟ್ಟದ ನಗರವಾಗಿರುವ ಮಹಾರಾಷ್ಟ್ರದಂತಹ ಪ್ರಗತಿ ಹೊಂದಿದ ರಾಜ್ಯಗಳಲ್ಲಿ ಇಂದಿನ ಚುನಾವಣೆಯ ಸಂದರ್ಭದಲ್ಲಿ ಪರಿಸರದ ಗೋಚರವೇ ಇಲ್ಲ. ತದ್ವಿರುದ್ಧ ಯಾವ ಪಕ್ಷ ಎಷ್ಟು ಹಾಗೂ ಏನನ್ನು ಉಚಿತ ಕೊಡಲಿದೆ, ಎಂಬುದರ ಚರ್ಚೆ ನಡೆಯತ್ತದೆ ಹಾಗೂ ಮತದಾರರು ಕೂಡ ಇಂತಹ ಪುಕ್ಕಟೆ ವಿಷಯದ ಕಡೆಗೆ ನೋಡುತ್ತಾ ಕುಳಿತಿದ್ದಾರೆ, ಎಂಬುದು ದೊಡ್ಡ ಆಶ್ಚರ್ಯದ ಸಂಗತಿಯಾಗಿದೆ !

೩. ಪರಿಸರ ರಕ್ಷಣೆ ಮತ್ತು ಹವಾಮಾನ ಬದಲಾವಣೆಯ ವಿಷಯದಲ್ಲಿ ನಾಗರಿಕರು ತಾವಾಗಿ ಮುಂದಾಳತ್ವ ವಹಿಸುವುದು ಮಹತ್ವದ್ದಾಗಿದೆ !
ಜಾಗತಿಕ ಹವಾಮಾನ ಪರಿಷತ್ತಿನಲ್ಲಿ ಪರಿಸರವಾದಿಗಳನ್ನು ಮತ್ತು ಕಾರ್ಯಕರ್ತರನ್ನು ಎಷ್ಟು ಪ್ರಮಾಣದಲ್ಲಿ ಸೇರಿಸಿಕೊಳ್ಳಲಾಗುವುದು ಹಾಗೂ ಅವರ ಮಾತನ್ನು ಎಷ್ಟು ಕೇಳಿಸಿಕೊಳ್ಳಲಾಗುವುದು, ಎಂಬ ವಿಷಯವೂ ಒಂದು ದೊಡ್ಡ ಪ್ರಶ್ನೆಯೇ ಆಗಿದೆ. ಈ ಪರಿಷತ್ತಿನಲ್ಲಿ ಪೃಥ್ವಿಯ ತಾಪಮಾನ ಕಡಿಮೆಗೊಳಿಸುವ ಸಲುವಾಗಿ ಏನೆಲ್ಲ ನಿರ್ಣಯ ತೆಗೆದುಕೊಳ್ಳಲಾಗುವುದೋ, ಈ ವಿಷಯದಲ್ಲಿ ಜಗತ್ತನ್ನು ಮಾಲಿನ್ಯಗೊಳಿಸುವ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಉತ್ಸರ್ಜನೆ ಮಾಡುವ ದೊಡ್ಡ ದೇಶಗಳಿಗೆ ಮತ್ತು ಕಂಪನಿಗಳಿಗೆ ಕಾನೂನುಪ್ರಕಾರ ಯಾವುದೇ ಬಾಧ್ಯತೆಯನ್ನು ಹೇರಲಾಗುವುದಿಲ್ಲ. ಅವರು ಸ್ವಪ್ರೇರಣೆಯಿಂದ ಏನಾದರೂ ಹಣ ಕೊಟ್ಟರೆ, ಅದರಿಂದ ಅವಿಕಸಿತ ದೇಶಗಳಿಗೆ ಸ್ವಲ್ಪ ಆಸರೆಯಾಗಿ ಅವರ ಮುಂದಿನ ಕಾರ್ಯ ನಡೆಯುವುದು. ಆದ್ದರಿಂದ ಪರಿಸರ ರಕ್ಷಣೆ ಹಾಗೂ ಹವಾಮಾನ ಬದಲಾವಣೆಯನ್ನು ಜಗತ್ತಿನಾದ್ಯಂತದ ನಾಗರಿಕರು ತಮ್ಮ ಜೀವನದ ಅಂಗವೆಂದು ಪರಿಗಣಿಸಿ ಹಾಗೂ ಜೀವನಶೈಲಿಯನ್ನಾಗಿ ಮಾಡಿಕೊಂಡರೆ ಮಾತ್ರ ಮುಂದೆ ಸೃಷ್ಟಿಯ ರಕ್ಷಣೆಯಾಗಬಹುದು. – ಶ್ರೀ. ಅನೀಲ ದತ್ತಾತ್ರೇಯ ಸಾಖರೆ, ಕೋಪರೀ. ಠಾಣೆ (ಪೂ) (೧೭.೧೧.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು