ಫಲಕ ಪ್ರಸಿದ್ಧಿಗಾಗಿ


೧. ಬೀದಿ ನಾಯಿಗಳ ವಿಷಯದಲ್ಲಿ ಆಡಳಿತದ ನಿಷ್ಕ್ರಿಯತೆ ತಿಳಿಯಿರಿ !

ಬೀದಿ ನಾಯಿಗಳ ಪ್ರಕರಣಗಳು ವಿಶ್ವದಲ್ಲಿ ಭಾರತದ ಘನತೆಯನ್ನು ಕುಗ್ಗಿಸುತ್ತಿವೆ. ಆದರೂ ರಾಜ್ಯಗಳಿಂದ ಆ ಬಗ್ಗೆ ಪ್ರಮಾಣಪತ್ರಗಳನ್ನು ಸಲ್ಲಿಸಲಾಗಿಲ್ಲ. ‘ನಿಮ್ಮ ಅಧಿಕಾರಿಗಳು ದಿನಪತ್ರಿಕೆಗಳನ್ನು ಓದುವುದಿಲ್ಲವೇನು ಅಥವಾ ಸಾಮಾಜಿಕ ಮಾಧ್ಯಮ ವೀಕ್ಷಿಸುವುದಿಲ್ಲವೇ ?’, ಎಂಬ ಮಾತುಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿತು.

೨. ನಿರಪರಾಧಿಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಗೂಂಡಾ ಪೊಲೀಸರು !

ಅಮಲು ಪದಾರ್ಥ ವಿರೋಧಿ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸಿದ್ಧಪಡಿಸಿ, ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ ಮದ್ರಾಸ್‌ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯಪೀಠವು ೩ ಪೊಲೀಸ್‌ ಅಧಿಕಾರಿಗಳಿಗೆ ೧೦ ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

೩. ಭಾರತದ ಪಾಕ್‌ಪ್ರೇಮಿಗಳು ಇದನ್ನು ಗಮನಿಸಬೇಕು !

‘ಹಿಂದೂಗಳು ನಮ್ಮೊಂದಿಗೆ ಎಂದಿಗೂ ಅಮಾನವೀಯವಾಗಿ ವರ್ತಿಸಲಿಲ್ಲ; ಆದರೆ ಪಾಕಿಸ್ತಾನದ ಸೈನ್ಯವು ನಮ್ಮ ಮೇಲೆ ದೌರ್ಜನ್ಯ ಎಸಗಿತು. ಹಾಗಾಗಿ ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ’, ಎಂದು ಹೇಳಿಕೆ ನೀಡಿದ ನಂತರ ಪಾಕಿಸ್ತಾನದ ಮೌಲ್ವಿ ಗುಲ್ಜಾರ್‌ ಅವರನ್ನು ಪಾಕಿಸ್ತಾನವು ಬಂಧಿಸಿದೆ.

೪. ಅಬೂ ಆಜ್ಮೀ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ !

‘ವಂದೇ ಮಾತರಂ’ಅನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ‘ವಂದೇ ಮಾತರಂ’ನಂತಹ ಪ್ರಶ್ನೆಗಳನ್ನು ತಂದು ಮುಸಲ್ಮಾನ ಧರ್ಮೀಯರಿಗೆ ತೊಂದರೆ ನೀಡಲು ಸರಕಾರ ಪ್ರಯತ್ನಿಸುತ್ತಿದೆ, ಎಂದು ಸಮಾಜವಾದಿ ಪಕ್ಷದ ಪ್ರದೇಶಾಧ್ಯಕ್ಷರಾಗಿರುವ ಶಾಸಕ ಅಬೂ ಆಜ್ಮೀ ಅವರು ಅಸಂಬದ್ಧ ಹೇಳಿಕೆ ನೀಡಿದರು.

೫. ಇಂತಹವರ ಮೇಲೆ ಈಗ ಯಾರಾದರೂ ಆರ್ಥಿಕ ಬಹಿಷ್ಕಾರ ಹಾಕಿದರೆ ಆಶ್ಚರ್ಯವಿಲ್ಲ !

ಮಹಾರಾಷ್ಟ್ರದ ಡೊಂಬಿವಲಿಯಲ್ಲಿರುವ ಎಮ್ಸ್ ಆಸ್ಪತ್ರೆ ಎದುರು, ಸಲೀಮ್‌ ಎಂಬ ಹೆಸರಿನ ತೆಂಗಿನಕಾಯಿ ವ್ಯಾಪಾರಿಯು ದಯಾನಂದ ಜತನ್‌ (೫೮ವರ್ಷ) ಎಂಬ ಗ್ರಾಹಕನ ಮೇಲೆ ಚಾಕುವಿನಿಂದ ಆಕ್ರಮಣ ಮಾಡಿದ್ದಾನೆ. ಈ ಘಟನೆಯಲ್ಲಿ ಅವರ ಕೈಯ ಕಿರುಬೆರಳು ಸಂಪೂರ್ಣವಾಗಿ ತುಂಡಾಗಿದೆ.

೬. ಇಂತಹ ಪಾಕಿಸ್ತಾನಪ್ರೇಮಿಗಳ ವಿರುದ್ಧ ಸರಕಾರ ಏನು ಕ್ರಮಕೈಗೊಳ್ಳಲಿದೆ ?

ಅಕ್ಟೋಬರ್‌ ೨೯ ರಂದು ಜಿಗಣಿ ಪೊಲೀಸ್‌ ಠಾಣೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಹೆಸರಿನ ವೈ-ಫೈ ಬಳಕೆದಾರರ ವಿರುದ್ಧ ಬಜರಂಗ ದಳವು ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

೭. ಮೂಲತಃ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರವು ದೇಶಾದ್ಯಂತ ಹಲಾಲ್‌ ಪ್ರಮಾಣಪತ್ರಗಳನ್ನು ನಿಷೇಧಿಸಬೇಕಿತ್ತು !

ರಾಜ್ಯದಲ್ಲಿ ‘ಹಲಾಲ್‌ ಪ್ರಮಾಣಪತ್ರ’ವನ್ನು ನಿಷೇಧಿಸಬೇಕು ಎಂದು ಭಾಜಪದಿಂದ ಅಮಾನತುಗೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.