ಮುಂಬಯಿ ಉಚ್ಚ ನ್ಯಾಯಾಲಯದಿಂದ ಮಹಾರಾಷ್ಷ್ರ ರಾಜ್ಯ ಸರಕಾರಕ್ಕೆ ಆದೇಶ !
ಅಕ್ರಮ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ! - ಮುಂಬಯಿ ಉಚ್ಚ ನ್ಯಾಯಾಲಯ

ಮುಂಬಯಿ – ಮಸೀದಿಗಳ ಮೇಲಿನ ಧ್ವನಿವರ್ಧಕಗಳು ಹಾಗೂ ಇತರ ಪ್ರಾರ್ಥನಾ ಮಂದಿರಗಳ ಮೇಲಿನ ಮೈಕ್‌ಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ಕುರಿತು ದೂರುಗಳು ಬಂದಾಗ ಪೊಲೀಸರು ಇದುವರೆಗೆ ಕೈಗೊಂಡ ಕ್ರಮಗಳೇನು?, ಎಂಬ ಸವಿಸ್ತಾರವಾದ ವರದಿಯನ್ನು ೨ ವಾರಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ವಿರುದ್ಧ ನಾಗರಿಕರು ಪದೇ ಪದೇ ದೂರು ನೀಡಿದ್ದರೂ ಮುಂಬಯಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
೧. ಕಾಂದಿವಲಿಯ ನ್ಯಾಯವಾದಿ ರೀನಾ ರಿಚರ್ಡ್ ಅವರು ಪ್ರತಿದಿನ ಮುಂಜಾನೆ ಮಸೀದಿಯಿಂದ ಉಂಟಾಗುವ ಭೀಕರ ಶಬ್ದ ಮಾಲಿನ್ಯದ ಕುರಿತು ಸಮತಾನಗರ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ದೂರುಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಅಜಯ್ ಗಡ್ಕರಿ ಮತ್ತು ನ್ಯಾಯಮೂರ್ತಿ ಕಮಲ್ ಖಾತಾ ಅವರಿದ್ದ ಪೀಠದ ಮುಂದೆ ನಡೆಯಿತು.
೨. ಪ್ರತಿವಾದಿಗಳು, “ಧ್ವನಿವರ್ಧಕಗಳನ್ನು ಮಸೀದಿಯ ಒಳಗಿನ ಕಡೆಗೆ ಮುಖ ಮಾಡಿ ಅಳವಡಿಸಲಾಗಿದೆ ಮತ್ತು ಶಬ್ದವು ಕಡಿಮೆ ಡೆಸಿಬಲ್‌ನಲ್ಲಿದೆ”; ಎಂದು ವಾದಿಸಿದರು. ಆದರೆ, ಅರ್ಜಿದಾರರು ಈ ವಾದವನ್ನು ತಳ್ಳಿಹಾಕಿ, “ಈ ಧ್ವನಿವರ್ಧಕಗಳನ್ನು ‘ಶಾಂತ ವಲಯ’ದಲ್ಲಿ (ಸೈಲೆನ್ಸ್ ಝೋನ್) ಅತಿ ಹೆಚ್ಚು ಶಬ್ದದೊಂದಿಗೆ ಬಳಸಲಾಗುತ್ತಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ತದನಂತರ ನ್ಯಾಯಾಲಯವು ಮೇಲಿನ ನಿರ್ದೇಶನಗಳನ್ನು ನೀಡಿತು.
ಕಾನೂನಿನ ಚೌಕಟ್ಟು ಎಲ್ಲರಿಗೂ ಕಡ್ಡಾಯ! – ಮುಂಬಯಿ ಉಚ್ಚ ನ್ಯಾಯಾಲಯ
ಅಕ್ರಮವಾಗಿ ಧ್ವನಿವರ್ಧಕಗಳನ್ನು ಅಳವಡಿಸುವುದು ಯಾರದೂ ಮೂಲಭೂತ ಹಕ್ಕಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಎಲ್ಲಾ ಪ್ರಾರ್ಥನಾ ಮಂದಿರಗಳು ಶಬ್ದದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ‘ಪ್ರಾರ್ಥನಾ ಮಂದಿರಗಳೂ ಸಹ ಶಾಂತ ವಲಯದ ಭಾಗವೇ ಆಗಿವೆ’ ಎಂಬುದನ್ನು ಪೊಲೀಸರು ಮರೆಯಬಾರದು. ಕಾನೂನಿನ ಪ್ರಕಾರ, ವಾಸಸ್ಥಳದ ಪ್ರದೇಶಕ್ಕೆ (ರೆಸಿಡೆನ್ಶಿಯಲ್ ಏರಿಯಾ) ೬೫ ಡೆಸಿಬಲ್ ಮತ್ತು ಶಾಂತ ವಲಯಕ್ಕೆ (ಸೈಲೆನ್ಸ್ ಝೋನ್) ೫೫ ಡೆಸಿಬಲ್ ಶಬ್ದದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಇದು ಎಲ್ಲಾ ರೀತಿಯ ಧ್ವನಿವರ್ಧಕಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ಕಾನೂನಿನ ಈ ಚೌಕಟ್ಟು ಎಲ್ಲರಿಗೂ ಕಡ್ಡಾಯವಾಗಿರುತ್ತದೆ. |

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ