
ನವ ದೆಹಲಿ – ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ‘ಪ್ರಧಾನಮಂತ್ರಿ ವಿಕಾಸ ಯೋಜನೆ’ಯ ಅಡಿಯಲ್ಲಿ ‘ಭಾರತ ಸಂಚಾರ ನಿಗಮ ನಿಯಮಿತ’ (ಬಿ.ಎಸ್.ಎನ್.ಎಲ್.) ಕೌಶಲ್ಯ ಅಭಿವೃದ್ಧಿ ಉಪಕ್ರಮವನ್ನು ಪ್ರಾರಂಭಿಸಿದೆ. ಇದರಲ್ಲಿ ಅಲ್ಪಸಂಖ್ಯಾತ ಸಮಾಜದ ಯುವಕ-ಯುವತಿಯರಿಗೆ ಉಚಿತ ದೂರಸಂಪರ್ಕ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ೩೦ ವಿದ್ಯಾರ್ಥಿಗಳ ತಂಡದಲ್ಲಿ ನೀಡಲಾಗುವುದು. ಇದರಲ್ಲಿ ಪ್ರತ್ಯಕ್ಷ ಬೋಧನಾ ಅಧಿವೇಶನಗಳ ಜೊತೆಗೆ ಅನುಭವ ಆಧಾರಿತ ಶಿಕ್ಷಣವೂ ಸೇರಿದೆ. ಈ ತರಬೇತಿಯ ಅವಧಿಯು ೬೦೦ ಗಂಟೆಗಳಿಗಿಂತ ಹೆಚ್ಚಾಗಿದ್ದು, ಅದರಲ್ಲಿ ೩ ತಿಂಗಳ ತರಬೇತಿ ಮತ್ತು ೧ ತಿಂಗಳ ಪ್ರತ್ಯಕ್ಷ ಕೆಲಸದ ಅನುಭವವನ್ನು ಒಳಗೊಂಡಿದೆ. ಮುಸಲ್ಮಾನ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮಾಜದ ೧೮ ರಿಂದ ೪೫ ವರ್ಷ ವಯಸ್ಸಿನ ಯುವಕರು ಈ ಯೋಜನೆಯಲ್ಲಿ ಅರ್ಹರಾಗಿದ್ದಾರೆ. ಹನ್ನೆರಡನೇ ತರಗತಿ ತೇರ್ಗಡೆಯಾದ ಯುವಕರು, ಹಾಗೂ ಪದವೀಧರರು, ಸ್ನಾತಕೋತ್ತರರು, ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.
ಈ ತರಬೇತಿಯಲ್ಲಿ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಟೆಕ್ನಿಷಿಯನ್ ಮತ್ತು ವೈರ್ ಲೆಸ್ ನೆಟ್ ವರ್ಕ್ ಟೆಕ್ನಿಷಿಯನ್ ಕೋರ್ಸ್‌ಗಳ ತರಬೇತಿಯನ್ನು ನೀಡಲಾಗುವುದು. ಅರ್ಹ ತರಬೇತಿದಾರರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಇವರಿಗೆ ವಸತಿಗೃಹ ಮತ್ತು ಭೋಜನದ ವ್ಯವಸ್ಥೆಗೆ ಹಣ ಪಾವತಿಸಬೇಕಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ‘ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್’ನ ಪ್ರಮಾಣಪತ್ರವನ್ನು ನೀಡಲಾಗುವುದು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ