‘ಜೈ ಶ್ರೀ ರಾಮ್’ಗೆ ಯಾವುದೇ ಪ್ರತಿಕ್ರಿಯೆ ನೀಡದ ‘ಆಪಲ್’ನ ‘ಸಿರಿ’; ಆದರೆ ‘ಸಲಾಮ್ ಅಲೈಕುಮ್’ಗೆ ಪ್ರತಿಕ್ರಿಯೆ

  • ಉಜ್ಜಯಿನಿಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹ

  • 'ಐಫೋನ್' ಬಹಿಷ್ಕರಿಸುವುದಾಗಿ ಎಚ್ಚರಿಕೆ

(‘ಸಿರಿ’ ಎಂದರೆ ‘ಆಪಲ್’ ಮೊಬೈಲ್‌ನಲ್ಲಿರುವ ಒಂದು ಧ್ವನಿ ಸೌಲಭ್ಯವಾಗಿದ್ದು, ಇದರ ಮೂಲಕ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಬಹುದು)

ಉಜ್ಜಯಿನಿ (ಮಧ್ಯಪ್ರದೇಶ) – ‘ಆಪಲ್’ ಸಂಸ್ಥೆಯ ‘ಸಿರಿ’ (Siri) ಗೆ ‘ಜೈ ಶ್ರೀರಾಮ್’ ಅಥವಾ ‘ಜೈ ಮಾತಾ ದಿ’ ಎಂದು ಹೇಳಿದಾಗ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ; ಆದರೆ ‘ಸಲಾಮ್ ಅಲೈಕುಮ್’ ಎಂದು ಹೇಳಿದ ತಕ್ಷಣವೇ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದರ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜ್ಯೋತಿಷಿಗಳು, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಇದನ್ನು ಧಾರ್ಮಿಕ ತಾರತಮ್ಯ ಎಂದು ಕರೆದಿದ್ದು, ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಿಗೆ ಪತ್ರ ಬರೆದಿವೆ. ‘ಆಪಲ್’ ತನ್ನ ಸೌಲಭ್ಯವನ್ನು ಸುಧಾರಿಸಬೇಕು, ಇಲ್ಲದಿದ್ದರೆ ‘ಐಫೋನ್’ ಅನ್ನು ಬಹಿಷ್ಕರಿಸಲಾಗುವುದು ಎಂದು ಒತ್ತಾಯಿಸಲಾಗಿದೆ. ಪ್ರಸ್ತುತ ಈ ಬಗ್ಗೆ ಆಪಲ್ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

೧. ಜ್ಯೋತಿಷಿ ಪಂಡಿತ್ ಪವನ್ ಪಾಠಕ್ ಅವರ ವಾದ, ನಾನು ೧೦ ರಿಂದ ೧೫ ಐಫೋನ್‌ಗಳಲ್ಲಿ ಸ್ವತಃ ಇದನ್ನು ಪರಿಶೀಲಿಸಿರುವುದಾಗಿ ಹೇಳಿದ್ದಾರೆ. ‘ಜೈ ಶ್ರೀರಾಮ್’ ಅಥವಾ ‘ಜೈ ಮಾತಾ ದಿ’ ಎಂದು ಹೇಳಿದಾಗ ಸಿರಿ ಯಾವುದೇ ಸ್ಪಷ್ಟ ಉತ್ತರ ನೀಡುವುದಿಲ್ಲ ಅಥವಾ ಸುಮ್ಮನಿರುತ್ತದೆ, ಆದರೆ ‘ಸಲಾಮ್ ಅಲೈಕುಮ್’ ಎಂದಾಗ ತಕ್ಷಣವೇ ಪ್ರತಿಕ್ರಿಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಭಾರತವು ಆಪಲ್ ಸಂಸ್ಥೆಗೆ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಕೋಟ್ಯಂತರ ಬಳಕೆದಾರರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು. ಇದರಲ್ಲಿ ಸುಧಾರಣೆಯಾಗದಿದ್ದರೆ ಗ್ರಾಹಕರಿಗೆ ‘ಐಫೋನ್’ ಬಹಿಷ್ಕರಿಸುವಂತೆ ಕರೆ ನೀಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

೨. ವಿಹಿಂಪ ಜಿಲ್ಲಾಧ್ಯಕ್ಷ ರಾಜೇಶ್ ಅಂಜನಾ ಅವರು, ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಿಗೆ ಬರೆದ ಪತ್ರದಲ್ಲಿ, ಇದನ್ನು ನೀಯೋಜಿತ ಜಿಹಾದ್’ ಎಂದು ಕರೆದಿದ್ದಾರೆ. ಅಲ್ಲದೆ ‘ಇದು ಹಿಂದೂಗಳ ನಂಬಿಕೆಯ ಮೇಲಿನ ಆಘಾತವಾಗಿದೆ’ ಎಂದು ಹೇಳಿದ್ದಾರೆ. ಆಪಲ್ ಈ ತಾಂತ್ರಿಕ ದೋಷವನ್ನು ಸರಿಪಡಿಸುವವರೆಗೆ ರಾಜ್ಯದಲ್ಲಿನ ಆಪಲ್‌ನ ಎಲ್ಲಾ ಸ್ಟೋರ್‌ಗಳನ್ನು ಮುಚ್ಚಬೇಕೆಂದು ವಿಹಿಂಪ ಒತ್ತಾಯಿಸಿದೆ.

೩. ಉಜ್ಜಯಿನಿಯಿಂದ ಪ್ರಾರಂಭವಾದ ಈ ವಿರೋಧ ಈಗ ಸಾಮಾಜಿಕ ಜಾಲತಾಣಗಳಲ್ಲೂ ಹರಡುತ್ತಿದ್ದು, ದೊಡ್ಡ ಮಟ್ಟದ ಹೋರಾಟವಾಗಿ ರೂಪಗೊಳ್ಳುವ ಸಾಧ್ಯತೆಯಿದೆ. ತಂತ್ರಜ್ಞಾನದಲ್ಲಿ ಯಾವುದೇ ರೀತಿಯ ಧಾರ್ಮಿಕ ತಾರತಮ್ಯವನ್ನು ಸಹಿಸುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ಸಿರಿ (Siri) ಎಂದರೇನು?

ಆಪಲ್‌ನ ‘ಸಿರಿ’ ಧ್ವನಿ ಆಧಾರಿತ ವರ್ಚುವಲ್ ಅಸಿಸ್ಟೆಂಟ್ (ಸಹಾಯಕ) ಆಗಿದೆ. ಇದು ಬಳಕೆದಾರರ ಧ್ವನಿ ಆದೇಶಗಳನ್ನು ಅರ್ಥಮಾಡಿಕೊಂಡು ವಿವಿಧ ಕೆಲಸಗಳನ್ನು ಮಾಡುತ್ತದೆ. ಉದಾಹರಣೆಗೆ: ಹವಾಮಾನ, ಸುದ್ದಿ, ಷೇರು ಮಾರುಕಟ್ಟೆ, ಕ್ರೀಡಾ ಫಲಿತಾಂಶಗಳ ಮಾಹಿತಿ ಪಡೆಯಬಹುದು. ಹಾಡುಗಳು ಕೇಳಬಹುದು, ಹಾಗೂ ನಕ್ಷೆಯಲ್ಲಿ ಮಾರ್ಗದರ್ಶನ ಪಡೆಯಬಹುದು. ಈ ಸಹಾಯಕದಿಂದ ಮಾರ್ಟ್ ಹೋಂ ಉಪಕರಣಗಳನ್ನು ಕೂಡ ನಿಯಂತ್ರಿಸಬಹುದು.

ಸಂಪಾದಕೀಯ ನಿಲುವು

'ಆಪಲ್'ನ ಮೊಬೈಲ್ ಫೋನ್‌ಗಳು ಭಾರತದಲ್ಲೇ ತಯಾರಾಗುತ್ತವೆ. ಆದ್ದರಿಂದ ಭಾರತ ಸರಕಾರವೇ ಆಪಲ್‌ಗೆ ಈ ಬಗ್ಗೆ ಆದೇಶ ನೀಡಬೇಕೆಂದು ಹಿಂದೂಗಳು ಬಯಸುತ್ತಾರೆ!