|

ದಿಂಡಿಗಲ್ (ತಮಿಳುನಾಡು) – ಇಲ್ಲಿನ ಪಂಚಮಪಟ್ಟಿ ಗ್ರಾಮದಲ್ಲಿ ದೇವಸ್ಥಾನದ ಕುಂಭಾಭಿಷೇಕದ ನಿಮಿತ್ತ ಸರಕಾರಿ ಜಮೀನಿನಲ್ಲಿ ಹಿಂದೂಗಳು ಅನ್ನದಾನ ಆಯೋಜಿಸಿದ್ದರು. ಇದನ್ನು ಸ್ಥಳೀಯ ಕ್ರೈಸ್ತರು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಹಿಂದೂಗಳು ಮದ್ರಾಸ್ ಉಚ್ಚ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವು ಆ ಜಮೀನಿನಲ್ಲಿ ಅನ್ನದಾನ ಮಾಡಲು ಅನುಮತಿ ನೀಡಿತು.
ನವೆಂಬರ್ 2 ರಂದು ಸುಮಾರು 500 ಕ್ರೈಸ್ತರು ಇಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಿದ್ದರು. ಬೆಳಗಿನಿಂದಲೇ ಕ್ರೈಸ್ತ ಪುರುಷರು ಮತ್ತು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದರು. ಅವರು ಆಧಾರ್ ಮತ್ತು ಮತದಾರರ ಚೀಟಿಯನ್ನು ಹಿಂದಿರುಗಿಸುವ ಘೋಷಣೆ ಕೂಗಿದರು. ಅವರು ಮುಖ್ಯ ರಸ್ತೆಯನ್ನು ತಡೆದು ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ, ಪೊಲೀಸರು 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದರು. ಜಿಲ್ಲಾಧಿಕಾರಿ ಎಸ್. ಶರವಣನ್ ಮತ್ತು ಪೊಲೀಸ್ ಅಧೀಕ್ಷಕ ಎ. ಪ್ರದೀಪ್ ಅವರು ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಚರ್ಚೆಯ ನಂತರ ಜನಸಮೂಹ ಶಾಂತವಾಯಿತು ಮತ್ತು ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
🍛 In Dindigul, Tamil Nadu, Christians opposed Hindus’ Annadan on Government land during temple Kumbhabhishekam.
🚫 Police and administration denied permission, claiming law & order issues.
⚖️ Madras High Court allowed Hindus to perform Annadan saying, Govt land belongs to all… pic.twitter.com/QE1w3k6kyV
— Sanatan Prabhat (@SanatanPrabhat) November 6, 2025
ಧರ್ಮದ ಆಧಾರದ ಮೇಲೆ ಒಂದು ಸಮುದಾಯವನ್ನು ಸರಕಾರಿ ಜಮೀನಿನಿಂದ ದೂರವಿಡುವುದು ಸಂವಿಧಾನ ವಿರೋಧಿ! – ಮದ್ರಾಸ್ ಉಚ್ಚ ನ್ಯಾಯಾಲಯ
ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಮೊದಲು, “ಆ ಜಮೀನಿನ ಮಾಲೀಕರು ಯಾರು?” ಎಂದು ಪ್ರಶ್ನಿಸಿದರು. ಜಮೀನು ಸರಕಾರದ ಒಡೆತನಕ್ಕೆ ಸೇರಿದೆ ಎಂದು ತಿಳಿದ ನಂತರ, ನ್ಯಾಯಮೂರ್ತಿಗಳು, ಜಮೀನು ಸರಕಾರಕ್ಕೆ ಸೇರಿದ್ದರೆ, ಅದನ್ನು ಎಲ್ಲಾ ಧರ್ಮದ ಜನರು ಬಳಸಬಹುದು. ಸಾರ್ವಜನಿಕ ಜಮೀನು ಎಲ್ಲರಿಗೂ ಲಭ್ಯವಿರಬೇಕು ಅಥವಾ ಯಾರಿಗೂ ಲಭ್ಯವಿರಬಾರದು. ಕೇವಲ ಧರ್ಮದ ಆಧಾರದ ಮೇಲೆ ಒಂದು ಸಮುದಾಯವನ್ನು ಸರಕಾರಿ ಜಮೀನಿನಿಂದ ದೂರವಿಡುವುದು, ಸಂವಿಧಾನದ ಕಲಂ 15 ರ ಉಲ್ಲಂಘನೆಯಾಗಿದೆ. ಕಲಂ 25 ರ ಅಡಿಯಲ್ಲಿ ನಾಗರಿಕರಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಹಕ್ಕಿದೆ, ಎಂದು ಸ್ಪಷ್ಟ ಆದೇಶ ನೀಡಿದರು.
ಜನರ ಹಕ್ಕುಗಳನ್ನು ರಕ್ಷಿಸುವುದೇ ಪೊಲೀಸರ ಕರ್ತವ್ಯ!

‘ಕಾನೂನು ಸುವ್ಯವಸ್ಥೆ ಹದಗೆಡಬಹುದು’ ಎಂಬ ಪೊಲೀಸರ ವಾದವನ್ನು ನ್ಯಾಯಮೂರ್ತಿಗಳು ತಳ್ಳಿಹಾಕಿ, ಜನರ ಹಕ್ಕುಗಳನ್ನು ರಕ್ಷಿಸುವುದೇ ಪೊಲೀಸರ ಕರ್ತವ್ಯ ಎಂದು ಸ್ಪಷ್ಟಪಡಿಸಿದರು. ಗ್ರಾಮದಲ್ಲಿ ಸುಮಾರು 2 ಸಾವಿರದ 500 ಕ್ರೈಸ್ತ ಮತ್ತು 400 ಹಿಂದೂ ಕುಟುಂಬಗಳಿವೆ. ಕೇವಲ ಒಂದು ಸಮುದಾಯದ ವಿರೋಧದಿಂದಾಗಿ ಕಾನೂನು ಸುವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ ಎಂಬ ಪೊಲೀಸರ ಹೇಳಿಕೆ ಅತ್ಯಂತ ವಿಷಾದನೀಯವಾಗಿದೆ.
ಕ್ರೈಸ್ತ ಸಮುದಾಯದ ವಾದ
ಕ್ರೈಸ್ತ ಸಮುದಾಯವು ನ್ಯಾಯಾಲಯದಲ್ಲಿ, ‘ಕಳೆದ 100 ವರ್ಷಗಳಿಂದ ಈ ಮೈದಾನದಲ್ಲಿ ತಮ್ಮ ಈಸ್ಟರ್ ಹಬ್ಬವನ್ನು ಆಯೋಜಿಸಲಾಗುತ್ತದೆ ಮತ್ತು ಅಲ್ಲಿನ ವೇದಿಕೆ ಅದಕ್ಕಾಗಿಯೇ ನಿರ್ಮಿಸಲಾಗಿದೆ. ಆದ್ದರಿಂದ ಈ ಸ್ಥಳವು ಸಾಂಪ್ರದಾಯಿಕವಾಗಿ ಅವರ ಬಳಕೆಯಲ್ಲಿದೆ’ ಎಂದು ಹೇಳಿತು. ಈ ಮೈದಾನದಲ್ಲಿ ಹೊಸ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ ಎಂದು ನಿರ್ಧರಿಸಿದ 2017 ರ ಶಾಂತಿ ಸಮಿತಿಯ ಸಭೆಯ ಉಲ್ಲೇಖವನ್ನು ಅವರು ನೀಡಿದರು. ಈ ಮೈದಾನಕ್ಕೆ ‘ಪಾಶ್ಕಾ ಗ್ರೌಂಡ್’ ಎಂದು ಹೆಸರಿಸಬೇಕು ಎಂದು ಅವರು ಬೇಡಿಕೆ ಇಟ್ಟರು.
ನ್ಯಾಯಮೂರ್ತಿ ಸ್ವಾಮಿನಾಥನ್ ಈ ವಾದವನ್ನು ಒಪ್ಪಲಿಲ್ಲ. ಅವರು, ಈಸ್ಟರ್ ಹಬ್ಬದ ಸಮಯದಲ್ಲಿ ಮೈದಾನವನ್ನು ಕ್ರೈಸ್ತ ಸಮುದಾಯ ಬಳಸಬಹುದಾದರೆ, ಇತರ ದಿನಗಳಲ್ಲಿ ಹಿಂದೂಗಳಿಗೆ ಅನ್ನದಾನಕ್ಕಾಗಿ ಅದನ್ನು ತಡೆಯಬಾರದು; ಆದರೆ ಈಸ್ಟರ್ ದಿನದಂದು ಮೈದಾನವನ್ನು ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರ ಬಳಸಲು ಅನುಮತಿ ಇರುತ್ತದೆ, ಎಂದು ಸ್ಪಷ್ಟ ಹೇಳಿದರು.
ಏನಿದು ವಿವಾದ?
ಪಂಚಮಪಟ್ಟಿ ಗ್ರಾಮದ ಹಿಂದೂ ಸಮುದಾಯವು ದೇವಸ್ಥಾನದ ಕುಂಭಾಭಿಷೇಕದ ನಂತರ ಸರಕಾರಿ ಜಮೀನಿನಲ್ಲಿ ಅನ್ನದಾನ ಮಾಡಲು ಬಯಸಿತ್ತು. ಆ ಜಮೀನು ದೇವಸ್ಥಾನ ಮತ್ತು ಸ್ಥಳೀಯ ಚರ್ಚ್ ನಡುವೆ ಇದೆ.
ಹಿಂದೂಗಳು ಅನ್ನದಾನಕ್ಕೆ ಅನುಮತಿ ಕೋರಿದಾಗ, ಆಡಳಿತ ಮತ್ತು ಪೊಲೀಸರು ನಿರಾಕರಿಸಿದರು. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗುತ್ತದೆ ಎಂಬುದು ಅವರ ವಾದವಾಗಿತ್ತು.
ಗ್ರಾಮದ ಒಬ್ಬ ವ್ಯಕ್ತಿ ಈ ನಿರಾಕರಣೆ ಅನ್ಯಾಯ ಎಂದು ಹೇಳಿ ಉಚ್ಚ ನ್ಯಾಯಾಲಯದ ಮೊರೆ ಹೋದರು. ನಂತರ ಈ ಪ್ರಕರಣ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠಕ್ಕೆ ಹೋಯಿತು. ಅಲ್ಲಿ ಪೊಲೀಸರು, ಸಂಭಾವ್ಯ ಉದ್ವಿಗ್ನತೆಯನ್ನು ತಪ್ಪಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ವಾದಿಸಿದರು.
ಸಂಪಾದಕೀಯ ನಿಲುವು
|
ಶಾಲೆಯ ಜಾಗದಲ್ಲಿ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಬ್ರಹ್ಮಗಾಂವ (ಬೀಡ್ ಜಿಲ್ಲೆ) ಇಲ್ಲಿ ಮಾಂಸದ ತುಂಡುಗಳನ್ನಿಟ್ಟು ಶ್ರೀ ಮಾರುತಿ ದೇವಸ್ಥಾನದ ವಿಡಂಬನೆ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಕಾವಿ ಬಟ್ಟೆ ಮತ್ತು ರುದ್ರಾಕ್ಷಿ ಮಾಲೆ ಧರಿಸಿರುವ ತಮಿಳುನಾಡಿನ ಕವಿ ತಿರುವಳ್ಳುವರ್ ಅವರ ಚಿತ್ರದ ಕುರಿತು ವಿವಾದ!
ಶ್ರೀಭೂಮಿ (ಆಸಾಮ) ಯಲ್ಲಿನ ದೇವಸ್ಥಾನದ ಹುಂಡಿಯ ಮೇಲೆ ಕತ್ತರಿಸಿದ ಹಸುವಿನ ತಲೆ ಪತ್ತೆ !
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !