
ಭಾರತೀಯ ಚಿತ್ರೋದ್ಯಮದಲ್ಲಿ ಸದ್ಯ ಹಿಂದೂ ಧರ್ಮಕ್ಕೆ ಸುಗ್ಗಿಯ ಕಾಲ ಬಂದಿದೆ ಎಂದು ಹೇಳಬೇಕಾಗಿದೆ. ಹಿಂದೂ ಧರ್ಮವನ್ನು ಆಧರಿಸಿದ ಅನೇಕ ಚಲನಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಈ ಚಿತ್ರಗಳ ಮೂಲಕ ಹಿಂದೂಗಳ ಶ್ರದ್ಧಾಸ್ಥಾನಗಳ ಮಹತ್ವವನ್ನು ಬಿಂಬಿಸಲು ನಿರ್ದೇಶಕರು ಉತ್ತಮವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರಗಳಲ್ಲಿ ಕೆಲವು ದಿನಗಳ ಹಿಂದೆ ತೆರೆ ಕಂಡ ‘ಕಾಂತಾರ ಭಾಗ ೧’ (ಕಾಂತಾರ ಚಾಪ್ಟರ್ ೧) ಎಂಬ ಚಲನಚಿತ್ರವೂ ಒಂದಾಗಿದೆ. ಈ ಮೊದಲು ೨೦೨೨ ರಲ್ಲಿ ‘ಕಾಂತಾರ ಎ ಲೆಜೆಂಡ್’ ಎಂಬ ಸರಣಿಯ ಮೊದಲ ಚಿತ್ರವು ಬಿಡುಗಡೆಯಾಗಿ ಅತ್ಯಂತ ಜನಪ್ರಿಯವಾಗಿತ್ತು. ಇದು ಕರ್ನಾಟಕದಲ್ಲಿ ಇಲ್ಲಿಯವರೆಗೆ ಅತ್ಯಧಿಕ ಗಳಿಕೆ ಮಾಡಿದ ಚಲನಚಿತ್ರವಾಗಿದೆ.
‘ಭೂತ ಕೋಲ’ದ ಮೇಲೆ ಬೆಳಕು ಚೆಲ್ಲುವುದು !
ಉತ್ಸವದ ಭಾಗವಾಗಿರುವ ‘ಭೂತಕೋಲ’ ಎಂಬ ಆಚರಣೆಯಲ್ಲಿ ದೇವತೆಯ ಆವೇಶ, ಅದರ ವಿಶಿಷ್ಟ ರೀತಿಯ ಕೂಗು, ಭವಿಷ್ಯ ನುಡಿಯುವುದು, ಆಕ್ರಮಣಕಾರಿ ರೂಪ ತೋರಿಸುವುದು, ಆವೇಶವಾಗು ವಾಗ ಸಂಬಂಧಪಟ್ಟ ನಾಯಕ ಭಕ್ತನ ಬದಲಾಗುತ್ತಿರುವ ಶಾರೀರಿಕ ಸ್ಥಿತಿ, ನಿರ್ಮಾಣವಾಗುವ ಸ್ವಭಾವದಲ್ಲಿನ ತಾತ್ಕಾಲಿಕ ಉಗ್ರತೆ, ಆಕ್ರಮಣಶೀಲತೆಗಳನ್ನು ಉತ್ತಮ ರೀತಿಯಲ್ಲಿ ತೋರಿಸಲಾಗಿದೆ. ದೇವತೆಯ ಭಕ್ತನ ಮೇಲೆ ಅಂದರೆ ಚಿತ್ರದಲ್ಲಿ ಆದಿವಾಸಿ, ಗ್ರಾಮೀಣರ ಮೇಲೆ ಆಕ್ರಮಣ ಮಾಡಿದರೆ ದೇವತೆಯು ಆವೇಶ ಬಂದ ಭಕ್ತನಲ್ಲಿ ತಕ್ಷಣವೇ ಸಂಚಾರವಾಗಿ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ನೀಡುತ್ತದೆ ಎಂದು ಚಿತ್ರಿಸಲಾಗಿದೆ. ಅತ್ಯಂತ ಸುಂದರವಾದ ಹಿನ್ನೆಲೆ ಸಂಗೀತ, ಭಕ್ತಿಮಯ ಹಾಡುಗಳಿಂದ ಚಿತ್ರಕ್ಕೆ ಶೋಭೆ ಬಂದಿದೆ. ಶ್ರೀ. ರಿಷಭ ಶೆಟ್ಟಿಯವರು ಎರಡೂ ಚಿತ್ರಗಳಲ್ಲಿ ದೇವತೆಯು ಆವೇಶ ಬರುವುದು ಮತ್ತು ಆ ಸ್ಥಿತಿಯಲ್ಲಿ ದೇವತೆಯು ಸಂಹಾರದ ಕಾರ್ಯವನ್ನು ಮಾಡುವ ಅಭಿನಯವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಸಾಕಾರಗೊಳಿಸಿದ್ದಾರೆ.

೧. ಸಂಸ್ಕೃತಿಯ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ದಕ್ಷಿಣ ಭಾರತದ ಚಲನಚಿತ್ರಗಳು !
ಇಲ್ಲಿಯವರೆಗೆ ಯಾವೆಲ್ಲಾ ದಕ್ಷಿಣದ ಚಲನಚಿತ್ರಗಳು ಪ್ರಸಿದ್ಧವಾಗಿವೆಯೋ, ಅವುಗಳಲ್ಲಿ ಬಹುಪಾಲು ದೇವತೆಗಳಿಗೆ ಸಂಬಂಧಿಸಿದ ಮತ್ತು ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹವುಗಳಾಗಿವೆ. ಧರ್ಮಾಚರಣೆಯ ಅಂಶವನ್ನು ದಕ್ಷಿಣದ ಚಲನಚಿತ್ರಗಳಲ್ಲಿ ಅತ್ಯಂತ ಸ್ಪಷ್ಟವಾಗಿ ತೋರಿಸಲಾಗುತ್ತದೆ. ಭವ್ಯವಾದ ಸೆಟ್‌ಗಳು ಮತ್ತು ಆಕರ್ಷಕ ದೃಶ್ಯ ವಿನ್ಯಾಸವು ಇದ್ದರೂ, ಅದಕ್ಕಿಂತಲೂ ಹೆಚ್ಚು ಮನಸ್ಸಿಗೆ ಮುಟ್ಟುವುದು ಹಿಂದಿ ಚಿತ್ರರಂಗದ (ಬಾಲಿವುಡ್‌ನ) ಚಿತ್ರಗಳಲ್ಲಿ ಕಾಣದ ದೇವಭಕ್ತಿ, ಹಿಂದೂ ಪರಂಪರೆ, ಸಂಪ್ರದಾಯಗಳನ್ನು ಮೂಲವಾಗಿ ಇಟ್ಟುಕೊಂಡು ಮಾಡಿದ ಕಥಾ ನಿರೂಪಣೆ, ಹಿಂದೂ ರೂಢಿ-ಪರಂಪರೆಯನ್ನು ಗೌರವಿಸಿ ಮತ್ತು ಪಾಲಿಸಿದಾಗ ಸಿಗುವ ಯಶಸ್ಸು, ಪೂಜಾವಿಧಿ, ಯಜ್ಞಗಳಿಗೆ ಹೆಚ್ಚಿನ ಮಹತ್ವ ನೀಡುವ ದೃಶ್ಯಗಳು, ಸ್ಥಳೀಯ ಆಚರಣೆಗಳನ್ನು ಮುಂದಿಟ್ಟುಕೊಂಡು ಮಾಡಿದ ಚಲನಚಿತ್ರಗಳ ನಿರ್ಮಾಣ ಇತ್ಯಾದಿ ಅನೇಕ ವಿಷಯಗಳನ್ನು ಹೇಳಬಹುದು. ಆದ್ದರಿಂದ ಚಲನಚಿತ್ರವನ್ನು ನೋಡುತ್ತಿರುವಾಗ ಧರ್ಮಾಚರಣೆ ಮತ್ತು ಧರ್ಮಪಾಲನೆಯ ಅನೇಕ ಕೃತಿಗಳು ಜನರ ಮನಸ್ಸಿನಲ್ಲಿ ಸಹಜವಾಗಿ ಬಿಂಬಿತವಾಗುತ್ತವೆ. ದೈವಭಕ್ತಿಯು ಹಿಂದೂಗಳ ಮೂಲ ಸ್ವಭಾವವಾಗಿದ್ದರಿಂದ, ಅದಕ್ಕೆ ಇದರಿಂದ ಬಲ ಸಿಗುತ್ತದೆ. ಹಿಂದೂ ಸಂಪ್ರದಾಯ, ಹಬ್ಬಗಳ ಬಗ್ಗೆ ಹೆಮ್ಮೆ ಹೆಚ್ಚಾಗುತ್ತದೆ, ಅಂದರೆ ಇದರಲ್ಲಿ ದಕ್ಷಿಣದ ಚಿತ್ರಗಳಲ್ಲಿ ಯಾವುದೇ ಹೊಂದಾಣಿಕೆ ಮಾಡಿಲ್ಲ ಎಂದು ಸಾಮಾನ್ಯವಾಗಿ ಹೇಳಬಹುದು. ಆದ್ದರಿಂದ ಸಹಜವಾಗಿಯೇ ಹಿಂದೂ ಸಂಸ್ಕೃತಿಯ ಬೇರುಗಳನ್ನು ಗಟ್ಟಿ ಆಗಿ ಹಿಡಿದುಕೊಳ್ಳಲು ಈ ಚಿತ್ರಗಳು ಯಶಸ್ವಿಯಾಗುತ್ತವೆ. ಒಂದು ಉತ್ತಮ ಸಂದೇಶವು ಜನಸಾಮಾನ್ಯರಿಗೆ ದೊರೆಯುತ್ತದೆ. ಪ್ರೇಮಕಥೆ, ರಹಸ್ಯಕಥೆ, ‘ಆಕ್ಷನ್’ ಆಧಾರಿತ ಕಥೆಗಳಿಗಿಂತಲೂ ಹೆಚ್ಚಾಗಿ ಚಿತ್ರಗಳ ಮೂಲಕ ಬಹಳಷ್ಟು ವಿಷಯಗಳನ್ನು ತೋರಿಸಬಹುದು ಎಂಬುದು ಈ ಚಿತ್ರಗಳಿಂದ ತಿಳಿದುಬರುತ್ತದೆ.
೨. ‘ಕಾಂತಾರ ಎ ಲೆಜೆಂಡ್’ ಚಲನಚಿತ್ರ
‘ಕಾಂತಾರ’ ಎಂಬ ಕಾಲ್ಪನಿಕ ಗ್ರಾಮದ ಈ ಚಿತ್ರದಲ್ಲಿ ಪಂಜುರ್ಲಿ ದೇವತೆ, ಗುಳಿಗ ದೇವತೆ ಇವರು ಅರಣ್ಯ ಮತ್ತು ಸ್ಥಾನ ದೇವತೆಗಳಾಗಿದ್ದಾರೆ. (ಈ ದೇವತೆಗಳನ್ನು ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೂಜಿಸಲಾಗುತ್ತದೆ.) ಈ ದೇವತೆಗಳ ಕೃಪೆಯಿಂದ ಸ್ಥಳೀಯರ ರಕ್ಷಣೆ ಮತ್ತು ಪಾಲನೆ-ಪೋಷಣೆಯಾಗಿದೆ ಎಂಬುದು ಸ್ಥಳೀಯರು, ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿಗಳಲ್ಲಿ ನಂಬಿಕೆ ಇರುವುದರಿಂದ, ಅವರು ದೇವತೆಗಾಗಿ ಭೂಮಿಯನ್ನು ದಾನ ಮಾಡುತ್ತಾರೆ. ದುರಾಸೆಯಿಂದ ಈ ಭೂಮಿಯನ್ನು ಪಡೆಯಲು ಅಂದಿನ ರಾಜನು ಪ್ರಯತ್ನಿಸುತ್ತಾನೆ. ಈ ದೇವತೆಯ ಉತ್ಸವವಾದ ‘ಭೂತಕೋಲ’ದಲ್ಲಿ, ದೇವತೆಯ ವಿವಿಧ ಮುಖವಾಡಗಳನ್ನು, ಆಭರಣಗಳನ್ನು ಮತ್ತು ವಿಶೇಷ ವಸ್ತ್ರಗಳನ್ನು ಧರಿಸಿ, ದೇವತೆಯ ಆವೇಶ ಬಂದ ಭಾವಿಕನು ನೃತ್ಯ ಮಾಡುತ್ತಾನೆ, ಜನರಿಗೆ ಆಶೀರ್ವಾದ ನೀಡುತ್ತಾನೆ, ಆ ಉತ್ಸವದಲ್ಲಿ ಈ ರಾಜನ ಉತ್ತರಾಧಿಕಾರಿಯನ್ನು ದೇವತೆಯು ಸುಟ್ಟು ಭಸ್ಮವಾಗಿಸುತ್ತದೆ. ನಂತರದ ಕೆಲವು ವರ್ಷಗಳಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಆಡಳಿತವು ಪ್ರಯತ್ನಿಸುತ್ತದೆ; ಆದರೆ ಆಡಳಿತಕ್ಕೆ ವಿರೋಧವಾಗುತ್ತದೆ. ರಾಜನ ಮುಂದಿನ ಅನೇಕ ಪೀಳಿಗೆಯ ವಂಶಸ್ಥರಲ್ಲಿ, ಪ್ರಸ್ತುತ ಕಾಲದ ಒಬ್ಬ ಜಮೀನ್ದಾರನಿಗೆ ಈ ಭೂಮಿ ಬೇಕಾಗಿರುತ್ತದೆ. ಅದಕ್ಕಾಗಿ ಅವರು ಅನೇಕ ಕುತಂತ್ರಗಳನ್ನು ಮಾಡುತ್ತಾರೆ, ಒಬ್ಬ ಆವೇಶ ಬಂದ ಭಕ್ತನನ್ನು ಕೊಲೆ ಮಾಡುತ್ತಾರೆ ಮತ್ತು ಕೊನೆಯಲ್ಲಿ ನೂರಾರು ಗೂಂಡಾಗಳ ಮೂಲಕ ಆವೇಶ ಬರುವ ಚಲನಚಿತ್ರದ ನಾಯಕನ ಗ್ರಾಮದ ಮೇಲೆ ಆಕ್ರಮಣ ಮಾಡಿದಾಗ ಆ ನಾಯಕನು ಸಾಯುತ್ತಾನೆ. ಆದರೂ ಗುಳಿಗ ದೇವತೆಯು ಈ ನಾಯಕನಲ್ಲಿ ಆವೇಶವಾಗಿ, ಅದರ ಮೂಲಕ ಜಮೀನ್ದಾರನ ಸಹಿತ ಅವನ ಗೂಂಡಾಗಳನ್ನು ಸಂಹಾರ ಮಾಡುತ್ತದೆ. ಪುನಃ ಕೋಲ ಉತ್ಸವವಾಗುತ್ತದೆ ಮತ್ತು ಪಂಜುರ್ಲಿ ದೇವತೆಯು ಅರಣ್ಯ ಅಧಿಕಾರಿಯೊಂದಿಗೆ ಗ್ರಾಮಸ್ಥರ ಸಮನ್ವಯಗೊಳಿಸಿ ತಾನು ಕಣ್ಮರೆಯಾಗುತ್ತದೆ, ಇದು ಚಿತ್ರದ ಸಾಮಾನ್ಯ ಕಥೆಯಾಗಿದೆ. ಈ ಚಿತ್ರದಲ್ಲಿ ಅನೇಕ ದೈವೀಕ ವಿಷಯಗಳ ನಿರೂಪಣೆ ಇದೆ. ಮುಖ್ಯವಾಗಿ ದೈವಿ ಶಕ್ತಿಯು ಆವೇಶವಾಗಿ ಬರುವುದು ಅಥವಾ ಅದರ ಭಕ್ತನಲ್ಲಿ ಸಂಚಾರವಾಗುವುದು, ಈ ವಿಷಯವನ್ನು ತೋರಿಸಿದ್ದು ಅದೇ ದೇವತೆಯು ಗ್ರಾಮದ ಮುಖ್ಯ ನಿಯಂತ್ರಕ ಮತ್ತು ರಕ್ಷಕ ದೇವತೆಯಾಗಿ ಕಾರ್ಯನಿರ್ವಹಿಸುತ್ತದೆ. ದೈವಿ ಆಕಾಶವಾಣಿ, ದೇವತೆಯ ಸಂಚಾರವಾದಾಗ ಅದು ಸಂಬಂಧಪಟ್ಟ ಭಕ್ತನ ಬಾಯಿಯಿಂದ ಮಹತ್ವದ ವಿಷಯಗಳನ್ನು ನುಡಿಯುವುದು, ಭೂತಕೋಲ ಉತ್ಸವದ ಪರಂಪರೆಯನ್ನು ಸುಂದರವಾಗಿ ತೋರಿಸಿದ್ದು, ಪ್ರೇಕ್ಷಕರು ಮೊದಲಿನಿಂದ ಕೊನೆಯವರೆಗೂ ಚಿತ್ರದಲ್ಲಿ ಮಗ್ನರಾಗಿರುತ್ತಾರೆ. ಅತ್ಯಂತ ನಿಗೂಢ ಕಥೆ ಮತ್ತು ದೇವತೆಯ ಮುಂದೆ ರಾಜನಿಗೂ ಏನೂ ಮಾಡಲಾಗುವುದಿಲ್ಲ, ನೂರಾರು ಗೂಂಡಾಗಳು ಆಕ್ರಮಣ ಮಾಡಿ ಅವರಿಗೂ ಏನೂ ಮಾಡಲು ಆಗುವುದಿಲ್ಲ, ಎಂಬುದರ ಸುಂದರ ನಿರೂಪಣೆ ಇದೆ. ದೈವವು ಶಕ್ತಿಶಾಲಿಯಾಗಿರುತ್ತದೆ ಮತ್ತು ಅದರ ಇಚ್ಛೆಗೆ ವಿರುದ್ಧವಾಗಿ ಯಾರೂ ಏನೂ ಮಾಡಲು ಆಗುವುದಿಲ್ಲ, ಈ ಎಲ್ಲಾ ವಿಷಯಗಳನ್ನು ಚಿತ್ರದಲ್ಲಿ ಉತ್ತಮ ರೀತಿಯಲ್ಲಿ ಚಿತ್ರಿಸಲಾಗಿದೆ. ಶ್ರೀ. ರಿಷಭ ಶೆಟ್ಟಿ ಈ ನವನಿರ್ದೇಶಕ, ಲೇಖಕ ಮತ್ತು ನಿರ್ಮಾಪಕರು ಅತ್ಯಂತ ಶ್ರಮದಿಂದ ಈ ಚಿತ್ರವನ್ನು ಸಾಕಾರಗೊಳಿಸಿದ್ದಾರೆ.

೩. ಹೊಸ ಚಿತ್ರದಲ್ಲಿ ಕಾಂತಾರ ಭೂಮಿಯನ್ನು ಪಡೆಯಲು ಪ್ರಯತ್ನ
ಹೊಸ ಚಿತ್ರ ‘ಕಾಂತಾರ ಚಾಪ್ಟರ್ ೧’ ನಲ್ಲಿಯೂ ರಾಜನ ಮಗ, ಅವನು ಕಾಂತಾರದ ಭೂಮಿಯನ್ನು ಮೋಸದಿಂದ ಬಲವಂತವಾಗಿ ಪಡೆಯಲು ಮಾಡಿದ ಹೋರಾಟ, ಅದರಲ್ಲಿ ಅವನಿಗೆ ಪಂಜುರ್ಲಿ ಮತ್ತು ಗುಳಿಗ ದೇವರ ಆವೇಶದ ಮೂಲಕ ಆದ ಸಾವು, ಅದರ ನಂತರ ಇದೇ ಭೂಮಿಯನ್ನು ಪುನಃ ಪಡೆಯಲು ರಾಜನ ಮಗಳು ವಿಶಿಷ್ಟ ಪೂಜೆ ಮತ್ತು ಸಾಧನೆ ಮಾಡಿ ಮತ್ತೆ ಮಾಡಿದ ಹೋರಾಟ ಹಾಗೆಯೇ ಅವರಿಗೆ ದೇವತೆ ನೀಡಿದ ಶಿಕ್ಷೆ ಇದರ ಮೇಲೆ ಆಧಾರಿತವಾಗಿದೆ. ಇದಕ್ಕಾಗಿ ಇತರ ಅನಿಷ್ಟ ಶಕ್ತಿಗಳು ಸಹ ರಾಜನ ಪರವಾಗಿ ಹೋರಾಟದಲ್ಲಿ ಇಳಿಯುವುದನ್ನು ತೋರಿಸಲಾಗಿದೆ.
ದೇವತೆಗೆ ದಾನ ಮಾಡಿದ ಭೂಮಿಯನ್ನು ಯಾರಾದರೂ ಬಲವಂತವಾಗಿ ಪಡೆಯಲು ಬಯಸಿದರೆ, ಅವನಿಗೆ ಕಷ್ಟವಾಗುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಹೊಸ ಚಿತ್ರದಲ್ಲಿ ರಾಜನು ಕಾಂತಾರ ಎಂಬ ಕಾಲ್ಪನಿಕ ಭೂಪ್ರದೇಶದ ಮೇಲೆ ನಿಯಂತ್ರಣ ಪಡೆಯುವ ಪ್ರಯತ್ನದಲ್ಲಿ ಬೃಹತ್ ರಕ್ತಪಾತವಾಗುತ್ತದೆ ಮತ್ತು ನಂತರ ದೈವವು ಪುನಃ ಭೂಮಿಯ ಮಾಲಿಕತ್ವವನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತದೆ ಎಂದು ತೋರಿಸಲಾಗಿದೆ. ಈ ಚಿತ್ರದಲ್ಲಿ ಪಂಜುರ್ಲಿ ದೈವವನ್ನು ವರಾಹದ ರೂಪದಲ್ಲಿ, ಅಂದರೆ ಶ್ರೀವಿಷ್ಣುವಿಗೆ ಸಂಬಂಧಿಸಿದಂತೆ ತೋರಿಸಲಾಗಿದೆ, ಹಾಗೆಯೇ ಗುಳಿಗ ದೇವತೆಯನ್ನು ಶಿವನಿಗೆ ಸಂಬಂಧಿಸಿದಂತೆ ತೋರಿಸಲಾಗಿದೆ. ಅಂದರೆ ಪುನಃ ಶ್ರೀವಿಷ್ಣು ಮತ್ತು ಶಿವ ಇವರೇ ಉಪಾಸನೆಗೆ ಪಾತ್ರರಾಗಿದ್ದು, ಅವರೇ ನಾಯಕ ಭಕ್ತನಲ್ಲಿ ಆವೇಶವಾಗಿ ಅವನು ರಾಜನ ಸೈನ್ಯ, ಹಾಗೆಯೇ ರಾಜ್ಯವನ್ನು ಸೋಲಿಸಿ, ಕಾಂತಾರದ ಆದಿವಾಸಿ ಭೂಮಿಯನ್ನು ರಕ್ಷಿಸಿ ತಾನೇ ತನ್ನ ಸಾಮರ್ಥ್ಯವನ್ನು ಪುನಃ ಒಮ್ಮೆ ನೆನಪಿಸುತ್ತಾನೆ. ಈ ಚಿತ್ರದಲ್ಲಿ ನಿಗೂಢ ಸಂವಾದ, ದೃಶ್ಯಗಳ ಸಹಿತ ಕಾಂತಾರದ ಕಾಡು ಹಾಗೆಯೇ ಅರಮನೆ, ಸಂತೆಗಳ ಭವ್ಯ ಸೆಟ್ ಕಾಣಿಸುತ್ತದೆ. ‘ದೇವತೆ ಅಂದರೆ ಚಿಕ್ಕ ದೈವೀಕ ಕಲ್ಲುಗಳಾಗಿದ್ದು ಈ ಕಲ್ಲುಗಳೇ ಪೂಜೆಯ ಕೇಂದ್ರಬಿಂದುವನ್ನು ತೋರಿಸಿ ಅವುಗಳೇ ಸಂಕಟಗಳನ್ನು ನಿವಾರಿಸುತ್ತವೆ’ ಎಂದು ಚಿತ್ರಿಸಲಾಗಿದೆ. ‘ಕಾಂತಾರ’ ಚಿತ್ರದಿಂದಂತೂ ‘ರಾಜನು ದೇವಭೂಮಿಯನ್ನು ಕೈವಶ ಮಾಡಿಕೊಳ್ಳುವುದು ದೂರವಿರಲಿ, ಅಂತಹ ಕಲ್ಪನೆಯನ್ನು ಮಾಡಿದರೂ, ಅವನಿಗೆ ಕೆಟ್ಟದ್ದಾಗುತ್ತದೆ’ ಎಂಬ ಸಂದೇಶವು ದೊರೆಯುತ್ತದೆ.
೪. ಬುದ್ಧಿಜೀವಿಗಳ ಸಿಟ್ಟು ನೆತ್ತಿಗೇರುವುದು !
‘ಕಾಂತಾರ’ದ ಎರಡೂ ಚಿತ್ರಗಳು ಕೆಲವು ಭಾರತೀಯ ಭಾಷೆಗಳಲ್ಲಿ ಲಭ್ಯವಾದ ನಂತರ, ಅದರಲ್ಲಿ ದೇವತೆಯ ಬಗ್ಗೆ ಚಿತ್ರಿಸಿರುವ ದೃಶ್ಯಗಳು, ಆವೇಶ ಬರುವುದನ್ನು ಕೆಲವರು ಆಕ್ಷೇಪಿಸಿದರು ಹಾಗೆಯೇ ‘ಇದು ಮೂಢನಂಬಿಕೆಯ ಅಂಶವನ್ನು ಪ್ರೇಕ್ಷಕರಿಗೆ ಹೇರುವ ಪ್ರಯತ್ನ’ ಎಂದು ಹೇಳಿ ತಿಳಿಸಿದರು; ಆದರೆ ದಕ್ಷಿಣದ ಚಿತ್ರ ನಿರ್ಮಾಪಕರು, ನಿರ್ದೇಶಕರು ಇಂತಹ ವಿಮರ್ಶೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಯಾವ ಧಾರ್ಮಿಕ ವಿಷಯಗಳು, ಸಂಪ್ರದಾಯಗಳನ್ನು ಚಿತ್ರದ ಮೂಲಕ ತೋರಿಸಬೇಕಾಗಿದೆಯೋ, ಅವುಗಳನ್ನು ಯಾವುದೇ ತೊಡಕಿಲ್ಲದೆ ತೋರಿಸುತ್ತಾರೆ, ಇದು ಸಕಾರಾತ್ಮಕ ವಿಷಯವಾಗಿದೆ; ಏಕೆಂದರೆ ಅದು ಅವರ ರಕ್ತದಲ್ಲಿಯೇ ಕರಗತವಾಗಿರುತ್ತದೆ. ಇದರ ಬದಲಿಗೆ ಹಿಂದಿ ಚಿತ್ರರಂಗದಲ್ಲಿ ಕೆಲವು ಚಿತ್ರಕಥೆ ಲೇಖಕರು, ಸಂಭಾಷಣೆ ಲೇಖಕರು ಮುಸಲ್ಮಾನ ಸಮಾಜದವರಾಗಿರುವುದರಿಂದ ಅಲ್ಲಿ ಹಿಂದೂ ಧರ್ಮದಲ್ಲಿನ ನಂಬಿಕೆಗಳನ್ನು ಕೀಳಾಗಿ ಕಾಣಲು, ಅವುಗಳನ್ನು ಅವಮಾನಿಸುವ ಪ್ರಯತ್ನವಾಗುತ್ತದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡುವುದು ಎಂದರೆ ಅದು ಇನ್ನೂ ಬಹಳ ದೂರದ ಮಾತಾಗಿದೆ, ಹಾಗೆಯೇ ಅವರಿಗೆ ದೇವತೆಯನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಅಥವಾ ಯಾವುದಾದರೂ ಹಿಂದೂ ಧರ್ಮದಲ್ಲಿನ ಸ್ಥಳೀಯ ಸಮಾಜದ ಸಂಪ್ರದಾಯ, ಉತ್ಸವಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಚಿತ್ರದ ನಿರೂಪಣೆ ಮಾಡುವುದು ಯಾವಾಗಲಾದರೂ ಸಾಧ್ಯವಾಗುತ್ತದೆಯೇ ? ಎಂಬ ಪ್ರಶ್ನೆಯು ಮೂಡುತ್ತದೆ. ಕೊನೆಯಲ್ಲಿ ಚಿತ್ರದಲ್ಲಿ ಅದು ಬರಲು ಸ್ವತಃದ ರಕ್ತದಲ್ಲಿಯೇ ಅದು ಇರಬೇಕಾಗುತ್ತದೆ. ಇಸ್ಲಾಮಿ ಶಬ್ದ, ಖುದಾ, ಅಲ್ಲಾ ಅಂತಹ ಪದಗಳನ್ನು ಹಿಂದಿ ಚಿತ್ರರಂಗದ ಚಿತ್ರಗಳಲ್ಲಿ ಬಳಸಲು ನಿರ್ದೇಶಕರು, ನಿರ್ಮಾಪಕರು ಮರೆಯುವುದಿಲ್ಲ, ಅಂದರೆ ಹಿಂದಿ ಚಿತ್ರರಂಗವು ನಿಜವಾಗಿಯೂ ದಕ್ಷಿಣದ ಚಲನಚಿತ್ರಗಳಿಂದ ಕಲಿಯುವ ಅವಶ್ಯಕತೆ ಇದೆ. ಅನೇಕ ಅದ್ಭುತ ಕಲ್ಪನೆಗಳನ್ನು ತೆಗೆದುಕೊಂಡು ಹಾಗೆಯೇ ವೈಶಿಷ್ಟ್ಯಪೂರ್ಣ ಚಿತ್ರೀಕರಣ ಮಾಡಿ ಈ ಚಿತ್ರಗಳನ್ನು ಆಕರ್ಷಕವಾಗಿ ಮಾಡಲಾಗಿರು ತ್ತದೆ. ಅವುಗಳಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯು ಲಭಿಸುತ್ತದೆ. ಅಲ್ಲಿಯವರೆಗೆ ಬಾಲಿವುಡ್ ಹೋಗಲು ಸಾಧ್ಯವಾಗುತ್ತದೆಯೇ ? ಇಲ್ಲದಿದ್ದರೆ ಸಪ್ಪೆ ಪ್ರೇಮ ಅಥವಾ ಪ್ರಣಯಕಥೆಗಳಿರುವ ಚಿತ್ರಗಳ ಹಳೆಯದಾದ ಭರಾಟೆಯನ್ನು ಮಾಡಲಾಗುತ್ತದೆ, ಇದು ಸಹಜವಾಗಿಯೇ ತಿಳಿದು ಬರುತ್ತದೆ.
ಶ್ರೀಗುರುಚರಣಾರ್ಪಣಮಸ್ತು
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೨೨.೧೦.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !