ಎಲ್ಲೆಡೆಯ ನಿವೃತ್ತಿ ವೇತನದಾರರಿಗೆ ಮಹತ್ವದ ಮಾಹಿತಿ

‘ಸರಕಾರಿ ಅಥವಾ ಸರಕಾರೇತರ ನೌಕರರಿಗೆ ನಿವೃತ್ತಿಯ ನಂತರ ಪ್ರತಿ ತಿಂಗಳಿಗೆ ‘ನಿವೃತ್ತಿ ವೇತನ’ (ಪೆನ್ಶನ್)ವನ್ನು ಕೊಡಲಾಗುತ್ತದೆ. ಅದಕ್ಕಾಗಿ ಅವರಿಗೆ ಯಾವ ಬ್ಯಾಂಕ್‌ನಿಂದ ನಾವು ನಿವೃತ್ತಿ ವೇತನವನ್ನು ಪಡೆಯುತ್ತೇವೆಯೋ, ಆ ಬ್ಯಾಂಕ್‌ಗೆ ಪ್ರತಿವರ್ಷ ನವೆಂಬರ್‌ನಲ್ಲಿ ‘ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸಬೇಕಾಗುತ್ತದೆ. ಆಗ ಮುಂದಿನ ವರ್ಷವಿಡಿ ನಿವೃತ್ತಿ ವೇತನವು ಮುಂದುವರಿಯುತ್ತದೆ. ಈ ಪ್ರಮಾಣಪತ್ರವನ್ನು ಸಲ್ಲಿಸುವ ಪ್ರಕ್ರಿಯೆಯ ಕುರಿತಾದ ಮಾಹಿತಿ ಕೊಟ್ಟಿದ್ದೇವೆ (೮೦ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರು ಅಕ್ಟೋಬರ್ ತಿಂಗಳಿನಲ್ಲಿಯೂ ‘ಜೀವನ ಪ್ರಮಾಣಪತ್ರ’ವನ್ನು ಬ್ಯಾಂಕಿಗೆ ನೀಡಬಹುದು)
೧. ಜೀವನ ಪ್ರಮಾಣಪತ್ರ ಎಲ್ಲಿ ಸಲ್ಲಿಸಬೇಕು ?
೧ ಅ. ಸಂಬಂಧಿತ ಬ್ಯಾಂಕಿನ ಯಾವುದೇ ಶಾಖೆಯಿಂದ ‘ಡಿಜಿಟಲ್ ಜೀವನ ಪ್ರಮಾಣಪತ್ರ’ ನೀಡಬಹುದು : ಪ್ರಮಾಣಪತ್ರವನ್ನು ಕೊಡಲು ಬ್ಯಾಂಕಿನ ಯಾವ ಶಾಖೆಯಲ್ಲಿ ಖಾತೆಯಿದೆಯೋ,ಪ್ರತ್ಯಕ್ಷ ಆ ಶಾಖೆಗೆ ಹೋಗುವ ಅವಶ್ಯಕತೆ ಇಲ್ಲ. ನಾವಿರುವ ಸ್ಥಳದಲ್ಲಿ ಆ ಬ್ಯಾಂಕಿನ ಶಾಖೆ ಇದ್ದಲ್ಲಿ, ಅಲ್ಲಿ ಕಾಗದಪತ್ರಗಳನ್ನು ತೋರಿಸಿ ಡಿಜಿಟಲ್ ‘ಜೀವನ ಪ್ರಮಾಣಪತ್ರ’ವನ್ನು ಕೊಡಬಹುದು. ಉದಾ. ಒಬ್ಬರು ನಿವೃತ್ತಿ ವೇತನಕ್ಕಾಗಿ ಶಿವಮೊಗ್ಗದಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ ಮತ್ತು ಸದ್ಯ ಅವರು ದೆಹಲಿಯಲ್ಲಿ ಇದ್ದರೆ ದೆಹಲಿಯ ಆ ಬ್ಯಾಂಕಿನ ಶಾಖೆಯಿಂದಲೂ ಆ ಪ್ರಮಾಣಪತ್ರವನ್ನು ನೀಡಬಹುದು.
೧ ಆ. ಕೆಲವೆಡೆ ಸರಕಾರಿ ಮತ್ತು ಸರಕಾರೇತರ ಸೌಲಭ್ಯಗಳನ್ನು ಒದಗಿಸಲು ‘ಕಾಮನ್ ಸರ್ವಿಸ್ ಸೆಂಟರ್’ ಆರಂಭಗೊಂಡಿವೆ. ಅಲ್ಲಿ ಹಾಗೂ ಅಂಚೆ ಮೂಲಕವೂ ಜೀವನ ಪ್ರಮಾಣಪತ್ರವನ್ನು ನೀಡಬಹುದು. ತಮ್ಮ ಪರಿಸರದಲ್ಲಿರುವ ‘ಕಾಮನ್ ಸರ್ವಿಸ್ ಸೆಂಟರ್ಸ’ ಮಾಹಿತಿಯು https://locator.csccloud.in ಈ ಜಾಲತಾಣದಲ್ಲಿ ದೊರೆಯುವುದು

೨. ಆವಶ್ಯಕ ಕಾಗದಪತ್ರಗಳು
ಅ. ಆಧಾರ ಕಾರ್ಡ್‌ನ ಮೂಲ ಮತ್ತು ಝೆರಾಕ್ಸ್ ಪ್ರತಿ
ಆ. ನಿವೃತ್ತಿ ವೇತನ ಜಮೆಯಾಗುವ ಖಾತೆಯ ಪಾಸ್‌ಬುಕ್
ಇ. ಪೆನ್ಶನ್ ಪೆಮೆಂಟ್ ಆರ್ಡರ್ (ಪಿ.ಪಿ.ಓ.) ಕ್ರಮಾಂಕ ಅದರ ನಂತರ ಬ್ಯಾಂಕಿನ ಅಧಿಕಾರಿಯು ನಿವೃತ್ತಿ ವೇತನದಾರರಿಗೆ ಪ್ರಮಾಣಪತ್ರವನ್ನು ನೀಡುವ ಪ್ರಕ್ರಿಯೆ ಮಾಡುವರು.
ಈ. ಬ್ಯಾಂಕಿಗೆ ಅಥವಾ ‘ಕಾಮನ್ ಸರ್ವಿಸ್ ಸೆಂಟರ್’ಗೆ ಆಧಾರ ಕಾರ್ಡ ಜೊತೆ ರಿಜಿಸ್ಟರ್ ಮಾಡಿದ ನಮ್ಮ ಸಂಚಾರವಾಣಿ ಯನ್ನು ತೆಗೆದುಕೊಂಡು ಹೋಗಬೇಕು. ಇದರಿಂದ ಅದಕ್ಕೆ ‘ಓ.ಟಿ.ಪಿ.’ (ಒನ್ ಟೈಮ್ ಪಾಸವರ್ಡ್) ಬಂದಾಗ ಅದನ್ನು ತಕ್ಷಣ ಬ್ಯಾಂಕಿಗೆ ಕೊಡಬಹುದು.ಅನಂತರ ಗಣಕಯಂತ್ರದಲ್ಲಿ ಡಿಜಿಟಲ್ ‘ಜೀವನ ಪ್ರಮಾಣಪತ್ರ’ ಸಿದ್ಧವಾಗುತ್ತದೆ ಮತ್ತು ನಿವೃತ್ತಿ ವೇತನವನ್ನು ನೀಡುವ ಸಂಬಂಧಿತ ಸಂಸ್ಥೆಯ ಬಳಿ ಅದು ಜಮೆಯಾಗುತ್ತದೆ. ಇದರ ಮುದ್ರಿತ ಪ್ರತಿಯು ನಿವೃತ್ತಿ ವೇತನದಾರರಿಗೂ ಸಿಗುತ್ತದೆ. ಈ ಪ್ರತಿಯನ್ನು ನಿವೃತ್ತಿ ವೇತನದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಥವಾ ಸಂದೇಹಗಳಿದ್ದರೆ https://jeevanpramaan.gov.in ಈ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಂಬಂಧಿತ ಬ್ಯಾಂಕ್/ಅಂಚೆ ಕಛೇರಿಯನ್ನು ಸಂಪರ್ಕಿಸಿ !
೩. ತಾವಿರುವ ಪ್ರದೇಶದಿಂದಲೇ ‘ಡಿಜಿಟಲ್ ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸುವ ಸೌಲಭ್ಯ ಲಭ್ಯ !
ಕೆಲವು ರಾಷ್ಟ್ರೀಕೃತ ಬ್ಯಾಂಕ್ (ನ್ಯಾಶನಲ್ ಬ್ಯಾಂಕ್) ಅಂಚೆ ಕಚೇರಿಯ ಮೂಲಕ ನಮ್ಮ ವಾಸ್ತವ್ಯದ ಸ್ಥಳಕ್ಕೆ ಬಂದು ಅವರ ಮಾಧ್ಯಮದಿಂದ ‘ಡಿಜಿಟಲ್ ಜೀವನ ಪ್ರಮಾಣಪತ್ರ’ವನ್ನು ಸಿದ್ಧಗೊಳಿಸಿ ಕೊಡುವ ಸೌಲಭ್ಯವು ಲಭ್ಯವಾಗುತ್ತಿದೆ. ‘ಡಿಜಿಟಲ್ ಜೀವನ ಪ್ರಮಾಣಪತ್ರ’ವನ್ನು ಸಿದ್ಧಗೊಳಿಸಲು ಅಗತ್ಯವಿರುವ ಕಾಗದಪತ್ರಗಳು ಮತ್ತು ಸಂಪರ್ಕದ ಸಂಚಾರವಾಣಿ ಜೊತೆಯಲ್ಲಿರುವುದು ಆವಶ್ಯಕವಾಗಿದೆ. ಇದರ ಹೆಚ್ಚಿನ ಮಾಹಿತಿ ಗಾಗಿ ತಮ್ಮ ಸಂಬಂಧಿತ ಬ್ಯಾಂಕ್ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು.
೪. ಸಂಚಾರವಾಣಿಯಿಂದ ‘ಡಿಜಿಟಲ್ ಜೀವನ ಪ್ರಮಾಣಪತ್ರ’ವನ್ನು ನೀಡುವ ಸೌಲಭ್ಯ ಲಭ್ಯ !
‘AadhaarFaceRd’ ಮತ್ತು ‘JeevanPramaan’ ಈ ಎರಡು ‘ಆಪ್’ ಸಂಚಾರವಾಣಿಯಲ್ಲಿ ‘ಇನ್ಸ್ಟಾಲ್’ ಮಾಡಿ ನಾವು ಸ್ವತಃ ನಮ್ಮ ಅಥವಾ ಇತರ ವ್ಯಕ್ತಿಯ ಜೀವನ ಪ್ರಮಾಣಪತ್ರವನ್ನು ಜಮೆ ಮಾಡಬಹುದು. ಎರಡೂ ‘ಆಪ್’ ಸಂಚಾರವಾಣಿಯಲ್ಲಿ ‘ಇನ್ಸ್ಟಾಲ್’ ಮಾಡಿದ ನಂತರ ‘ ‘JeevanPramaan ‘ಆಪ್’ನ್ನು ತೆರೆಯಬೇಕು ಮತ್ತು ಅದರಲ್ಲಿ ನೀಡಿದ ಸೂಚನೆಗಳಂತೆ ಮಾಹಿತಿಯನ್ನು ತುಂಬಬೇಕು. ಸಂಚಾರವಾಣಿಯಲ್ಲಿ ಈ ಮಾಹಿತಿಯನ್ನು ತುಂಬಲು ಕಠಿಣವೆನಿಸಿದರೆ ತಿಳುವಳಿಕೆಯುಳ್ಳ ವ್ಯಕ್ತಿಯ ಸಹಾಯವನ್ನು ಪಡೆಯಬಹುದು; ಒಟ್ಟಿನಲ್ಲಿ ನಾವು ಮನೆಯಿಂದಲೇ ಪ್ರಮಾಣಪತ್ರವನ್ನು ಜಮೆ ಮಾಡಬಹುದು.
೫. ಈ ‘ಜೀವನ ಪ್ರಮಾಣಪತ್ರ’ಕ್ಕೆ ವ್ಯಾಲಿಡಿಟಿ ೧ ವರ್ಷ
ಕೆಲವು ಸರಕಾರಿ ನೌಕರರಿಗೆ ಸಂಬಂಧಿಸಿದ ನಿವೃತ್ತಿ ವೇತನವನ್ನು ನೀಡುವ ಸಂಸ್ಥೆಗಳಲ್ಲಿ ಡಿಜಿಟಲ್ ‘ಜೀವನ ಪ್ರಮಾಣಪತ್ರ’ವನ್ನು ಸ್ವೀಕರಿಸುವ ಸೌಲಭ್ಯವು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಆದ್ದರಿಂದ ಆ ವೇತನದಾರರಿಗೆ ಮೊದಲಿನಂತೆ ಬ್ಯಾಂಕಿನ ಅಧಿಕಾರಿಗಳ ಸಹಿಯಿರುವ ಪ್ರಮಾಣಪತ್ರವನ್ನು ನೀಡ ಬೇಕಾಗುತ್ತದೆ. ಇದಕ್ಕಾಗಿ ಸಂಬಂಧಿತ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ತಮ್ಮ ಈ ಕಾಗದಪತ್ರಗಳನ್ನು ತೋರಿಸಿ ಮುಂದಿನ ಪ್ರಕ್ರಿಯೆ ಮಾಡಬೇಕು. (೧೮.೧೦.೨೦೨೫)
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !